Abhishek-Aviva Marriage: ನಟ ದಿವಂಗತ ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅವರ ಏಕೈಕ ಪತ್ರ ಅಭಿಷೇಕ್ ಅಂಬರೀಶ್ ಅವರ ಮದುವೆ ಇಂದು ಅದ್ದೂರಿಯಾಗಿ ನಡೆದಿದೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಮದುವೆ ನಡೆದಿದ್ದು ಮದುವೆಗೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ನಟಿಯರು ಆಗಮಿಸಿ ನವದಂಪತಿಗಳಿಗೆ ಶುಭ ಕೋರಿದ್ದಾರೆ ಮದುವೆಯಲ್ಲಿ ಅಭಿಷೇಕ್ ಮತ್ತು ಅವಿವಾ ಜೋಡಿ ಕಲರ್ ಫುಲ್ ಆಗಿ ಮಿಂಚಿದು. ಅಭಿಷೇಕ್ ಮೈಸೂರು ಪೇಟ, ಗೋಲ್ಡನ್ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ ಅವಿವಾ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ಅಂಬರೀಶ್ ಹಾಗೂ ಸುಮಲತಾ ಅವರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರಿಂದ ರಾಜಕೀಯದ ನಾಯಕರು ಕೂಡ ಮದುವೆಗೆ ಆಗಮಿಸಿದ್ದರು ಮುಂಜಾನೆ ಮದುವೆ ಮಂಟಪಕ್ಕೆ ಐಶಾರಾಮಿ ಕಾರಿನಲ್ಲಿ ಗ್ರಾಂಡ್ ಆಗಿ ಎಂಟ್ರಿ ಕೊಟ್ಟ ಅಭಿಷೇಕ್ ಗೌಡರ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗಿದೆ.
ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಫಿನಾಲೆ ವೇದಿಕೆ ಮೇಲೆ ಎಂಗೇಜ್ಮೆಂಟ್ ಮಾಡಿಕೊಂಡ ಜಗಪ್ಪ ಹಾಗೂ ಸುಶ್ಮಿತಾ
ಅಭಿಷೇಕ್ ಮತ್ತು ಅವಿವಾ ಅವರ ಮದುವೆಗೆ ಯಾರೆಲ್ಲ ಬಂದಿದ್ರು
ಅಂಬರೀಶ್ ಅವರ ಇಡೀ ಕುಟುಂಬ ಸಿನಿಮಾ ಮತ್ತು ರಾಜಕೀಯದಲ್ಲಿ ಇದ್ದಿದ್ದರಿಂದ ಅನೇಕ ಗಣ್ಯರು ಅಭಿಷೇಕ್ ಮದುವೆಗೆ ಬಂದಿದ್ದರು. ಅಂಬರೀಶ್ ಅವರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಸುದೀಪ್ ಅವರು ತಮ್ಮ ಕುಟುಂಬದ ಸಮೇತ ಮದುವೆಗೆ ಬಂದಿದ್ದರು ಅಂಬರೀಶ್ ಹಾಗೂ ವಿಷ್ಣುದಾದಾ ಅವರ ಗೆಳೆತನ ಇಡೀ ಕರ್ನಾಟಕ ಗೊತ್ತಿದ್ದು ಅಭಿಷೇಕ್ ಮದುವೆಗೆ ವಿಷ್ಣುವರ್ಧನ್ ಅವರ ಪತ್ನಿ ನಟಿ ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ್ ಕುಟುಂಬದ ಜೊತೆ ಆಗಮಿಸಿದ್ದರು. ಯಶ್ ದಂಪತಿಯು ಮದುವೆಗೆ ಆಗಮಿಸಿ ನವದಂಪತಿಗಳಿಗೆ ಶುಭ ಕೋರಿದರು, ಇನ್ನು ಅಂಬಿಯ ಆಪ್ತ ಸ್ನೇಹಿತರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ವಿವಾಹಕ್ಕೆ ಬಂದಿದ್ದರು, ಅನೇಕ ರಾಜಕೀಯ ಮುಖಂಡರು ಮದುವೆಗೆ ಸಾಕ್ಷಿಯಾಗಿದ್ದರು ಅಶ್ವಥ್ ನಾರಾಯಣ್, ಮುನಿರತ್ನ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವರು ಭಾಗಿಯಾಗಿದ್ದರು..
ಇದನ್ನೂ ಓದಿ: ಉಚಿತ ಪ್ರಯಾಣಕ್ಕೂ ಟಿಕೆಟ್ ತಗೊಳ್ಳೆಬೇಕು! ಉಚಿತ ಬಸ್ ಪ್ರಯಾಣದ ಟಿಕೆಟ್ ಹೀಗಿರುತ್ತೆ ನೋಡಿ
ಇದನ್ನೂ ಓದಿ: ಮುರಿದು ಬಿದ್ದ ಮದುವೆ ಬಗ್ಗೆ ನಟಿ ವೈಷ್ಣವಿ ಹೇಳಿದ್ದೇನು ಗೊತ್ತಾ? ಹಿಂದೆ ನಡೆದ ಘಟನೆ ನೆನೆದು ಪಾಸಿಟಿವ್ ರಿಯಾಕ್ಷನ್ ಕೊಟ್ಟ ನಟಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram