ಅಭಿಷೇಕ್ ಮನೆಯಲ್ಲಿ ಮೆಹಂದಿ ಶಾಸ್ತ್ರದ ಸಂಭ್ರಮ. ಮೆಹಂದಿ ಕಾರ್ಯಕ್ರಮದಲ್ಲಿ ಪ್ರಜ್ವಲ್, ರಾಗಿಣಿ ಹಾಗೂ ಮೇಘನಾ ಭಾಗಿ

Abhishek Ambareesh: ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಮಾಜಿ ಸಂಸದೆ ಮತ್ತು ನಟಿ ಸುಮಲತಾ ಅವ್ರ ಮುದ್ದು ಮಗ ನಟ ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಇಬ್ಬರೂ ಪ್ರೀತಿಸಿ ಮದುವೆ ಆಗ್ತಿದ್ದು, ಕಳೆದ ವರ್ಷ ಇಬ್ಬರ ನಿಶ್ಚಿತಾರ್ಥ ಕಾರ್ಯಕೂಡ ಅದ್ಧೂರಿಯಾಗಿ ನಡೆದಿತ್ತು. ಇನ್ನು ಇದೀಗ ಕ್ಷಣಗಣನೆ ಆರಂಭವಾಗಿದ್ದು ಮದುವೆಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಅಂಬಿ ನಿವಾಸದಲ್ಲಿ ಅರಿಶಿನ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಹೌದು ಜೂನ್ 5 ರಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಅಭಿಷೇಕ್ ಹಾಗೂ ಅವಿವಾ ಮನೆಯಲ್ಲಿ ಅರಿಶಿನ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರ ನಡೆದಿದ್ದು, ಇನ್ನು ಅಭಿಷೇಕ ಮೆಹಂದಿ ಶಾಸ್ತ್ರಕ್ಕೆ ಸ್ಯಾಂಡಲ್​ವುಡ್ ಅನೇಕರು ಭಾಗಿಯಾಗಿದ್ದಾರೆ. ಇದೀಗ ಸಿನಿತಾರೆಯರು ಅಭಿಷೇಕ್ ಅಂಬರೀಷ್ ಜೊತೆ ಕ್ಲಿಕ್ಕಿಸಿಕೊಂಡಿರುವ ಕೆಲವೊಂದಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿವೆ.

WhatsApp Group Join Now
Telegram Group Join Now

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ವೇದಿಕೆಯಲ್ಲಿ ಮತ್ತೊಮ್ಮೆ ಮದುವೆಯಾದ ಚಂದ್ರಪ್ರಭಾ ಹಾಗೂ ಭಾರತಿ ಪ್ರಿಯಾ – ಕಣ್ಣೀರೀಟ್ಟ ಜೋಡಿ

ಹೇಗಿತ್ತು ಗೊತ್ತಾ ರೆಬಲ್ ಮನೆಯಲ್ಲಿ ಮೆಹಂದಿ ಸಡಗರ

ಹೌದು ನಟ ಅಭಿಷೇಕ್ ಅಂಬರೀಷ್(Abhishek Ambareesh) ಹಾಗೂ ಅವಿವಾ ಮದುವೆ ಜೂನ್ 5ರಂದು ಬೆಂಗಳೂರಿನ ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ ನಡೆಯಲಿದೆ. ಹೀಗಾಗಿ ಮದುವೆಗೆ ಎಲ್ಲಾ ತಯಾರಿ ಮಾಡಲಾಗಿದೆ. ಜೂನ್ 2ರಂದು ಅಂದ್ರೆ ನಿನ್ನೆ ಬೆಳಿಗ್ಗೆ ಅಭಿಷೇಕ್ ಅಂಬರೀಷ್ ಅವರ ನಿವಾಸದಲ್ಲಿ ಅರಿಶಿಣ ಶಾಸ್ತ್ರ ನಡೆದಿದೆ. ಬಳಿಕ ಇಂದು ಮೆಹೆಂದಿ ಶಾಸ್ತ್ರಗಳು ನಡೆದಿವೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಜೂನ್ 4ರಂದು ಅಂದ್ರೆ ನಾಳೆ ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದ್ದು, ಜೂನ್ 5ರಂದು ಮದುವೆ ಸಮಾರಂಭ ನಡೆಯಲಿದೆ. ಅಲ್ಲದೇ ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಸುಮಲತಾ ಅವ್ರ ಮನೆಯಲ್ಲಿ ಮದುವೆಯ ವಾತಾವರಣ ಕಳೆ ಗಟ್ಟಿದ್ದು, ಇಂದು ನಡೆದಿರುವ ಅರಿಶಿಣ ಶಾಸ್ತ್ರದ ಕಾರ್ಯಕ್ರಮದಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿ, ನಟಿ ಮೇಘನಾ ರಾಜ್, ನಟಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕ ಆತ್ಮೀಯರು ಕಾರ್ಯಕ್ರಮಕ್ಕೆ ಆಗಮಿಸಿ ಅಭಿಷೇಕ್ ಅವ್ರ ಜೊತೆಗೆ ಕಾರ್ಯಕ್ರಮವನ್ನ ಎಂಜಾಯ್ ಮಾಡಿದ್ದಾರೆ. ಇದೀಗ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಇನ್ನು ಮೆಹಂದಿ ಕಾರ್ಯಕ್ರಮದಲ್ಲಿ ಅಭಿಷೇಕ್ ವಿಶೇಷವಾಗಿ ಮೆಹಂದಿ ಹಾಕಿಸಿಕೊಂಡಿದ್ದು ಅಭಿಮಾನಿಗಳು ಮಾತ್ರವಲ್ಲ ಮಂಡ್ಯದ ಜನ ಫುಲ್ ಖುಷ್ ಆಗಿದ್ದಾರೆ. ಹೌದು ಅಭಿಷೇಕ್ ಅಂಬರೀಷ್ ಕೂಡ ಕೈಗೆ ಮೆಹಂದಿ ಹಾಕಿಸಿಕೊಂಡಿದ್ದಾರೆ. ಕೈ ಮೇಲೆ ರೆಬೆಲ್, ಹಾಗೂ ಮಂಡ್ಯ ಅಂತ ದೊಡ್ಡದಾಗಿ ಮೆಹಂದಿ ಹಾಕಿಸಿಕೊಂಡಿದ್ದಾರೆ. ಇದಾರ ಜೊತೆಗೆ ಸುಮ, ಮತ್ತು ಅವಿವಾ ಅಂತಲೂ ಬರೆಸಿಕೊಂಡಿದ್ದಾರೆ. ಇದೀಗ ಅಭಿ ಕೈಯಲ್ಲಿ ಮಂಡ್ಯ ಹೆಸರು ನೋಡಿ ಸಕ್ಕರೆ ನಾಡಿನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಪ್ಪನಂತೆ ಮಗನು ಕೂಡ ಮಂಡ್ಯದ ಗಂಡು ಅಂತ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.

ಇದನ್ನೂ ಓದಿ: ಚಂದನವನಕ್ಕೆ ಗುಡ್ ಬೈ ಹೇಳಿದ್ರ ಜೆ.ಕೆ, ಇಂಡಸ್ಟ್ರಿ ಸಹವಾಸ ಸಾಕು ಅಂತ ಹೇಳಿದ್ದೇಕೆ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram