Abhishek-aviva Reception: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ಸ್ವರ್ಗವೇ ಧರೆಗಿಳಿದು ಬಂತಂತಹ ಒಂದು ವೇದಿಕೆ ಸಜ್ಜಾಗಿತ್ತು ಅದಕ್ಕೆ ಕಾರಣ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಜೋಡಿಯ ಆರತಕ್ಷತೆ ಸಮಾರಂಭ. ಹೌದು ವೈವಾಹಿಕ ಜೀವನಕ್ಕೆ ಕಾಲಿಟ್ಟಂತಹ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿ ನಿನ್ನೆ ಬಹಳ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿದ್ದಾರೆ ಈ ಒಂದು ಆರತಕ್ಷತೆ ಕಾರ್ಯಕ್ರಮಕ್ಕೆ ಬಹಳ ಅದ್ದೂರಿಯಾಗಿ ವೇದಿಕೆ ನಿರ್ಮಾಣಗೊಂಡಿದ್ದು, ಈ ಅದ್ದೂರಿ ಮಂಟಪಕ್ಕೆ ಬಳಸಿದಂತಹ ಎಲ್ಲಾ ಸಾಮಗ್ರಿಗಳು ಕೂಡ ವಿಭಿನ್ನ ಅಂತ ಹೇಳಲಾಗುತ್ತಿದ್ದು ಭಾರತದಲ್ಲಿ ಇದು ಮೊಟ್ಟ ಮೊದಲ ಬಾರಿಗೆ ಸಜ್ಜಾಗಿರತಕ್ಕಂತಹ ವೇದಿಕೆ ಅನೋ ಹೆಗ್ಗಳಿಕೆಗೂ ಕೂಡ ಇದೀಗ ಈ ಆರತಕ್ಷತಾ ಮಂಟಪ ಕಾರಣವಾಗಿದೆ.
ಹೌದು ಈ ವೇದಿಕೆ ಅಥವಾ ಈ ಮಂಟಪ ನಿರ್ಮಾಣಕ್ಕೆ ದೆಹಲಿಯ ಸಮೋರದ ಬಾದ್ ನಿಂದ ಎಲ್ಲವನ್ನು ಕೂಡ ತರಿಸಲಾಗಿತ್ತು. ಇನ್ನು ವೆಡ್ಡಿಂಗ್ ಬೈ ಧ್ರುವ ಅನ್ನುವ ವೆಡ್ಡಿಂಗ್ ಸಂಸ್ಥೆಯು ಈ ಒಂದು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮಾಡಿಕೊಟ್ಟಿದೆ ಅನ್ನುವಂತಹ ಮಾಹಿತಿ ಕೂಡ ಇದೀಗ ಲಭ್ಯವಾಗಿದೆ. ಹೌದು ಈ ಒಂದು ವೆಡ್ಡಿಂಗ್ ಕಂಪನಿ ಯಶ್ ಮದುವೆ ಶಿವರಾಜ್ ಕುಮಾರ್ ಅವರ ಮಗಳ ಮದುವೆ ಜನಾರ್ಧನ ರೆಡ್ಡಿ ಅವರ ಮಕ್ಕಳ ಮದುವೆ ಯದುವಿರ ಮಹಾರಾಜರ ಮದುವೆಯನ್ನು ಆಯೋಜನೆ ಮಾಡಿತ್ತು ಅನ್ನುವಂತಹ ಮಾಹಿತಿ ಕೂಡ ಸಿಕ್ತಾ ಇದ್ದು ಇದೀಗ ಅಭಿ ಮತ್ತು ಅವಿವಾ ಆರತಕ್ಷತೆ ಸಮಾರಂಭವನ್ನ ಬಹಳ ಬ್ಯೂಟಿಫುಲ್ ಆಗಿ ಮಾಡಿಕೊಟ್ಟಿದ್ದಾರೆ.
ಯಾರೆಲ್ಲ ಬಂದಿದ್ರು? ಅಭಿ-ಅವಿವಾ ಜೋಡಿಗೆ ಶುಭಾಶಯ ತಿಳಿಸಿದ್ರು
ಈ ಒಂದು ಸುಂದರ ವೇದಿಕೆಯಲ್ಲಿ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರ ಆರತಕ್ಷತೆ ಕಾರ್ಯಕ್ರಮ ನಿನ್ನೆ ಅದ್ದೂರಿಯಾಗಿ ನೆರವೇರಿದೆ. ಹೌದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ತ್ರಿಪುರಾ ವಾಸಿನಿಯಲ್ಲಿ ಈ ಸಮಾರಂಭ ನೆರವೇರಿದೆ. ಮದುವೆಗೆ 1000 ಮಂದಿಗಷ್ಟೇ ಅಹ್ವಾನ ನೀಡಿದ್ರು ಹೀಗಾಗಿ ಅರತಕ್ಷತೆಗೆ ಹೆಚ್ಚಿಗೆ ಜನ ಸೇರುವ ನಿರೀಕ್ಷೆ ಇತ್ತು ಹೀಗಾಗಿಯೇ ಬಹಳ ಅದ್ದೂರಿ ವೇದಿಕೆಯೇ ನಿರ್ಮಾಣವಾಗಿತ್ತು. ಇನ್ನು ದಿವಗಂತ ಅಂಬರೀಶ್ ಅವ್ರಿಗೆ ಚಿತ್ರರಂಗ ಹಾಗೂ ಸಿನಿಮಾ ರಂಗ ಎರಡರಲ್ಲೂ ಕೂಡ ಹೆಚ್ಚಿನ ನಂಟಿತ್ತು ಅಲ್ಲದೇ ಸುಮಲತಾ ಅಂಬರೀಶ್ ಹಾಗೂ ಮಗ ಅಭಿ ಇವ್ರು ಕೂಡ ರಾಜಕೀಯ ಹಾಗೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅಲ್ದೇ ಆಗಲೇ ಹೇಳಿದ ಆಗೇ ದಿವಂಗತ ಅಂಬರೀಷ್ ಅವ್ರಿಗೆ ಅನೇಕರ ಜೊತೆ ಒಡನಾಟವಿತ್ತು. ಹೀಗಾಗಿ, ಚಿತ್ರರಂಗದವರು ಹಾಗೂ ರಾಜಕಾರಣಿಗಳು ಆರತಕ್ಷತೆಗೆ ಆಗಮಿಸಿ, ನವ ಜೋಡಿಗೆ ಹಾರೈಸಿದ್ದಾರೆ.
ಆರತಕ್ಷತೆಗೆ ಸಿದ್ಧಗೊಂಡ ವೇದಿಕೆ ಎಲ್ಲರ ಕಣ್ಣು ಕುಕ್ಕುವಂತೆ ಕಂಗೊಳಿಸುತ್ತಿತ್ತು. ಇನ್ನು ಅಭಿಷೇಕ್ ಅವಿವಾ ಮದುವೆ ಜೂನ್ 5ರಂದು ಅದ್ದೂರಿಯಾಗಿ ಆಪ್ತರು, ಕುಟುಂಬದವರಿಗೆ ಮಾತ್ರ ಆಹ್ವಾನ ಇದ್ದರಿಂದ ಇವ್ರ ಸಮ್ಮುಖದಲ್ಲಿ ನೆರವೇರಿತ್ತು. ಈಗ ಮದುವೆಗಿಂತಲೂ ಅದ್ದೂರಿಯಾಗಿ ರಿಸೆಪ್ಷನ್ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ಕಲಾವಿದರು ರಾಜಕೀಯ ಘಟಾನುಘಟಿಗಳು ಆಗಮಿಸಿ ಎಲ್ಲರೂ ನವ ಜೋಡಿಗೆ ಶುಭಕೋರೀ ಆಶೀರ್ವಾದ ಮಾಡಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಸ್ಎಂ ಕೃಷ್ಣ, ಸೇರಿದಂತೆ ಇನ್ನು ಹಲವರು ರಾಜಕೀಯ ಗಣ್ಯರು ಅರತಕ್ಷತೆಗೆ ಆಗಮಿಸಿದ್ರು. ಇನ್ನು ಚಿತ್ರರಂಗದಿಂದ ತಮಿಳು ನಟ ಪ್ರಭು, ನಟಿ ಖುಷ್ಬೂ, ಶತ್ರುಘ್ನ ಸಿನ್ಹಾ, ಜಾಕಿ ಶ್ರಾಫ್, ಚಿರಂಜೀವಿ, ಸ್ಯಾಂಡಲ್ವುಡ್ನ ಶಿವರಾಜ್ ಕುಮಾರ್, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ದಂಪತಿ, ರಿಷಬ್ ಶೆಟ್ಟಿ ದಂಪತಿ, ದರ್ಶನ್ , ವಸಿಷ್ಠ ಹರಿಪ್ರಿಯಾ ಜೋಡಿ, ಹೀಗೆ ಇನ್ನು ಅನೇಕರು ಆಗಮಿಸಿ ನವ ವಧು ವರನಿಗೆ ಶುಭಾಶಯ ತಿಳಿಸಿದ್ದಾರೆ.
ಅಭಿ ಹಾಗೂ ಅವಿವಾ ಅರತಕ್ಷತೆಗೆ ವೇದಿಕೆ ಎಷ್ಟು ಅದ್ಭುತ ಹಾಗೂ ಸುಂದರವಾಗಿ ನಿರ್ಮಾಣವಾಗಿತ್ತೋ ಅಷ್ಟೇ ಸುಂದರವಾಗಿ ಥೇಟ್ ರಾಜಮಾತೆಯಂತೆಯೇ ಸುಮಲತಾ ಅಂಬರೀಷ್ ಬಹಳ ಅದ್ಭುತವಾಗಿ ಕಂಗೊಳಿಸುತ್ತಿದ್ರು, ಅಷ್ಟು ಮುದ್ದಾಗಿ ಕಾಣಿಸುತ್ತಿದ್ರು. ಬಂದವರೆಲ್ಲರೂ ಸುಮಲತಾ ಅವ್ರ ಉಡುಗೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ರು. ಒಟ್ಟಿನಲ್ಲಿ ಮದುವೆಯ ಎಲ್ಲ ಕಾರ್ಯಗಳು ಅಂಬಿ ಆಸೆಯಂತೆಯೇ ನಡೆದಿದ್ದು ಅಂಬಿ ಇಲ್ಲ ಅನ್ನುವ ಕೊರತೆ ನೋವು ಬಿಟ್ರೆ ಅಭಿ ಅವಿವಾ ಮದುವೆಗೆ ಸಣ್ಣ ಸಾಸಿವೆಯಷ್ಟು ಕೊರತೆಯಿರಲಿಲ್ಲ ಅನ್ನೋದು ಮದುವೆ ಹಾಗೂ ಅರತಕ್ಷತೆಗೆ ಬಂದವರ ಮಾತು.
ಇದನ್ನೂ ಓದಿ: ಅಮ್ಮ ಅಪ್ಪನಿಗೆ ಇನ್ನೂ ಹೂ ಹಾಕ್ಬೇಕು ಮೇಘನಾ ರಾಜ್ ಮತ್ತು ಮಗನ ಭಾವುಕ ಕ್ಷಣ..
ಇದನ್ನೂ ಓದಿ: ಅಭಿ ಹಾಗೂ ಅವಿವಾ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಮಾವನಿಂದ ಅಭಿಷೇಕ್ ಗೆ ಸಿಕ್ತು ಭರ್ಜರಿ ಗಿಫ್ಟ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram