256 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಗೆ ಪ್ರಸ್ತಾವನೆ.

Action for filling 256 PDO posts

ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಈ ಸುದ್ದಿಯನ್ನು ಓದಲೇಬೇಕು. ರಾಜ್ಯ ಸರ್ಕಾರವು ಹೊಸದಾಗಿ 256 ಪಿಡಿಒ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ. ಈ ಹುದ್ದೆಗಳ ನೇಮಕಾತಿಯು ರಾಜ್ಯದ ಗ್ರಾಮೀಣಾಭಿವೃದ್ಧಿಗೆ ಉತ್ತೇಜನ ನೀಡಲು ಸಹಾಯ ಮಾಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಪಿಡಿಒ ನೌಕರರ ವರ್ಗಾವಣೆ ಪಾರದರ್ಶಕವಾಗಿ ನಡೆಯಲಿದೆ:- ರಾಜ್ಯ ಸಭೆಯ ಸದನದಲ್ಲಿ ಪಿಡಿಒ ನೌಕರರ ವರ್ಗಾವಣೆ ಬಗ್ಗೆ ಪ್ರಶ್ನೆ ಎತ್ತಿದ ಕುಣಿಗಲ್ ಶಾಸಕ ಡಾ.ರಂಗನಾಥ ಅವರಿಗೇ ಪ್ರಿಯಾಂಕ್ ಖರ್ಗೆ ಅವರು ಪಿಡಿಒ ಹುದ್ದೆಗಳ ನೇಮಕಾತಿ ಮಾಡುವುದರ ಮೂಲಕ ಸಮಸ್ಯೆ ನಿವಾರಿಸಲು ಸರ್ಕಾರ ಪ್ರಯತ್ನ ಮಾಡುತ್ತದೆ. ಪಿಡಿಒ ನೌಕರರ ಕೊರತೆ ಇರುವುದರಿಂದ ಪಿಡಿಒಗಳನ್ನು ಬೇರೆಡೆ ನಿಯೋಜಿಸುವುದನ್ನು ಸ್ಥಗಿತ ಮಾಡಲಾಗಿದೆ. ಪಿಡಿಒ ಗಳ ವರ್ಗಾವಣೆ ಬಗ್ಗೆ ಮಾತನಾಡಿ ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ವರ್ಗಾವಣೆ ಮಾಡುವ ವ್ಯವಸ್ತೆಯನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಯುವನಿಧಿ ಹಣ ಬರಬೇಕು ಎಂದರೆ ಪ್ರತಿ ತಿಂಗಳು ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರ ನೀಡಲೇಬೇಕು .

ಸ್ವಂತ ಉದ್ದಿಮೆ ಸ್ಥಾಪನೆಗೆ ಮಾಡುವವರು ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು:-

ಸದನದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು ರಾಜ್ಯ ಸರಕಾರದಿಂದ ರಿಯಾಯಿತಿ ಬಡ್ಡಿದರ ಹಾಗೂ ಪ್ರೊತ್ಸಾಹಧನ ಸೇರಿದಂತೆ ಹಲವು ಯೋಜನೆಗಳ ಉಪಯೋಗ ಪಡೆದು ಸ್ವಂತ ಉದ್ದಿಮೆ ಆರಂಭ ಮಾಡಿ ನಂತರದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಇದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಹಾಗೆ ಈ ಬಗ್ಗೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರು ಉದ್ಯಮಗಳನ್ನು ಸ್ಥಾಪಿಸುವ ಸಮಯದಲ್ಲಿ ಭೂಮಿ ಕಳೆದುಕೊಂಡಂತ ವರಿಗೆ ಅವರ ಅರ್ಹತೆಗೆ ಮೇಲೆ ಉದ್ಯೋಗ ನೀಡಬೇಕು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಲ್ಲಿ ಇನ್ಪೋಸಿಸ್ ಕಂಪನಿ ತನ್ನ ಘಟಕ ಸ್ಥಾಪಿಸುತ್ತದೆ ಎಂದು ಹಲವರು ಜನರ ಜಮೀನು ಪಡೆದುಕೊಂದಡಿತು. ಆದರೆ ಈಗ ಅದೇ ಜಾಗದಲ್ಲಿ ಗಿಡಗಳನ್ನು ನೆಟ್ಟು ತೋಟ ಬೆಳೆಸಿದ್ದಾರೆ. ಒಬ್ಬ ಸ್ಥಳೀಯ ಕಾರ್ಮಿಕನಿಗೂ ಸಹ ಅವರು ಉದ್ಯೋಗ ನೀಡಿಲ್ಲ. ಜಮೀನು ಒದಗಿಸುವ ಸಂದರ್ಭದಲ್ಲಿ ನಾನು ಅಲ್ಲಿ ಮುಖ್ಯ ಪಾತ್ರ ವಹಿಸಿದೆ. ಆದರೆ ಈಗ ನಾನು ಇಂದು ಅಲ್ಲಿನ ರೈತರ ಎದುರುಗಡೆ ನಿಂತು ಮಾತನಾಡಲು ಅವಕಾಶ ಇಲ್ಲದಂತೆ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.

ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಕಲಬುರಗಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಗೆ 90 ಕೋಟಿಗೂ ಹೆಚ್ಚು ಖರ್ಚು ಆಗಿದೆ. ಆದರೆ, ಯಾವುದೇ ಒಂದು ಮನೆಗೆ ಸಹ ನೀರು ಬರುತ್ತಿಲ್ಲ ಹಾಗೂ ಅಳವಡಿಸಲಾದ ಪೈಪ್‌ಗಳು ಕಳಪೆ ಗುಣಮಟ್ಟದವಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಭೈರತಿ ಸುರೇಶ್ ಅವರು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು 837.43 ಕೋಟಿ ವೆಚ್ಚದಲ್ಲಿ L&T ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಒಪ್ಪಂದದ ಪ್ರಕಾರ ಗುತ್ತಿಗೆದಾರರು ಜೂನ್ 2025 ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು.

ಬೆಣ್ಣೆತೋರ ಜಲಾಶಯದಿಂದ 1.624 ಟಿಎಂಸಿ ನೀರನ್ನು ಜುಲೈ 2022 ರಲ್ಲಿ ಕಲಬುರಗಿ ನಗರಕ್ಕೆ ನೀರಿನ ಹಂಚಿಕೆ ಮಾಡಲಾಗಿದೆ. . ಈಗ ಇರುವ ಕೊಳವೆಯ ಗುಣಮಟ್ಟ ಸರಿ ಇಲ್ಲದ ಕಾರಣದಿಂದ L&_T ರವರು ಸರಬರಾಜು ಮಾಡಿರುವ ಎಲ್ಲಾ ಕೊಳವೆಗಳು ತಿರಸ್ಕಾರ ಆಗಿದೆ. ಹೊಸ ಗುಣಮಟ್ಟದ ಕೊಳವೆಗಳನ್ನು ಸರಬರಾಜು ಮಾಡಲು ಸೂಚನೆ ನೀಡಲಾಗಿದೆ. ಹಾಗಾಗಿ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಸ್ವಲ್ಪ ತಡವಾಗುತ್ತಿದೆ..ಒಪ್ಪಂದದ ಪ್ರಕಾರ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣ ಆಗದೆ ಇರುವ ಕಾರಣಕ್ಕೆ ಇದುವರೆಗೆ ಕಂಪನಿಗೆ 25.92 ಕೋಟಿ ರೂ ದಂಡ ವಿಧಿಸಲಾಗಿರದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.

ಇದನ್ನೂ ಓದಿ: ಕರ್ನಾಟಕ ಸರ್ಕಾರಿ ನೌಕರರಿಗೆ ಫೆಬ್ರವರಿ ತಿಂಗಳ ಕೊನೆಯಲ್ಲಿ ಎರಡು ದಿನ ವಿಶೇಷ ರಜೆ