ನಿಮಗೆ ದರ್ಶನ್, ಶಿವಣ್ಣ, ಯಶ್ ಮಾತ್ರನ ಕಾಣಿಸೋದಾ? ದರ್ಶನ್ ಖಡಕ್ ಮಾತು; ಕನ್ನಡ ನಾಡಲ್ಲಿ ತಮಿಳನ್ನ ಬೆಳೆಸ್ತಾ ಇರೋರು ಯಾರು?

ಕರ್ನಾಟಕದಲ್ಲಿ ಕಾವೇರಿ ಹೊರಟ ಭುಗಿಲೆದ್ದಿದೆ. ಅದರಲ್ಲೂ ಕಾವೇರಿ ಹೋರಾಟಕ್ಕೆ ಕನ್ನಡ ನಟರು ಸಕ್ರಿಯರಾಗಿ ಬರುತ್ತಿಲ್ಲ ಎಂಬ ಕೂಗಿಗೆ ನಟ ದರ್ಶನ್ ಸದ್ಯ ಗರಂ ಆಗಿದ್ದಾರೆ. ಹೌದು ಈ ಹಿಂದೆಯೇ ಕಾವೇರಿ ವಿಚಾರವಾಗಿ ನಟ ದರ್ಶನ್(Darshan) ಟ್ವೀಟ್ ಮಾಡಿದ್ರು. ಅದ್ರೆ ಕೆಲವ್ರು ಕನ್ನಡ ಚಿತ್ರರಂಗದವರು ಕಾವೇರಿ ಹೋರಾಟಕ್ಕೆ ಬೆಂಬಲ ನೀಡ್ತೀಲ್ಲ ಅಂತ ಸಾಕಷ್ಟು ಟ್ರೋಲ್ ಮಾಡಿದ್ರು ಅದು ಈಗ ದರ್ಶನ್ ಅವ್ರ ಕೋಪಕ್ಕೆ ಕಾರಣವಾಗಿದೆ. ಅಂದ ಆಗೇ ಕಾವೇರಿ ವಿಚಾರವಾಗಿ ಸ್ಯಾಂಡಲ್​ವುಡ್​ನಲ್ಲಿ ಮೊದಲು ಧ್ವನಿಯೆತ್ತಿದ್ದೇ ನಟ ದರ್ಶನ್​. ಸೆಪ್ಟೆಂಬರ್ 20ರಂದು ಟ್ವೀಟ್​ ಮಾಡಿದ ದರ್ಶನ್​, ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದಿದ್ದರು ಆದ್ರೂ ಕೆಲವರು ಸ್ಯಾಂಡಲ್ವುಡ್ ನಟರ ಬಗ್ಗೆ ಟ್ರೋಲ್ ಮಾಡ್ತಾಳೆ ಬಂದಿದ್ರು.

WhatsApp Group Join Now
Telegram Group Join Now

ಹೀಗಾಗಿ ಕಾವೇರಿ ವಿಚಾರವಾಗಿ ನೇರವಾಗಿಯೇ ಜನರನ್ನ ದರ್ಶನ್ ಪ್ರಶ್ನೆ ಮಾಡಿದ್ದಾರೆ. ಹೌದು ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಈ ಬಗ್ಗೆ ಮಾತನಾಡಿರೋ ನಟ ದರ್ಶನ್, ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದಿದ್ದು, ನಟರು ಹೋರಾಟಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ ಅಂತ ಪ್ರಶ್ನಿಸಿದ್ದಾರೆ. ಅಲ್ದೇ ಮೊನ್ನೆ ಬಂದ ತಮಿಳು ಚಿತ್ರಕ್ಕೆ ಕರ್ನಾಟಕದಲ್ಲೇ ಕೋಟಿ ಕೋಟಿ ಮಾಡಿದವನು ನಿಮಗೆ ಕಾಣ್ತಿಲ್ವ? ಕರ್ನಾಟಕದಲ್ಲೇ ಒಬ್ಬ ವಿತರಕ ತಮಿಳು ಚಿತ್ರದಿಂದ ಕರ್ನಾಟಕದದಲ್ಲೇ 36 ಕೋಟಿ ರೂ. ಮಾಡಿದ. 6 ಕೋಟಿ ಹಾಕಿ 36 ಕೋಟಿ ಮಾಡಿದ. ಅವನಿಗೆ ಯಾಕೆ ನೀವು ಕೇಳಲ್ಲ? ನಾವು ಮಾತ್ರ ನಿಮಗೆ ಕಾಣೋದಾ? ನಿಮಗೆ ಪ್ರಶ್ನೆ ಕೇಳ್ತಾ ಇದ್ದೀನಿ ಹೇಳಿ ಎಂದು ಜನರನ್ನು ದರ್ಶನ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ಗೊತ್ತಾ? ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ದರ ಎಷ್ಟಿದೆ ನೋಡಿ

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ವೇದಿಕೆ ಮೇಲೆ ದರ್ಶನ್ ಹೇಳಿದ್ದೇನು?

ಹೌದು ಬನ್ನೂರಿನಲ್ಲಿ ಗಂಗಾ ಸೇನಾ ಮತ್ತು ಕರ್ನಾಟಕ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ 100 ಹಳ್ಳಿಕಾರ್ ಹಸುಗಳ ಗೋದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಟ ದರ್ಶನ್(Darshan) ಮಾತನಾಡಿ ಕಲಾವಿದರ ಬಗ್ಗೆ ಮಾತನಾಡಿದವರಿಗೆ ವಿವಾದತ್ಮಕವಾಗಿಯೇ ಬಿಸಿ ಮುಟ್ಟುಸಿದ್ದಾರೆ. ಕಾವೇರಿ ಹೋರಾಟದ ಬಗ್ಗೆ‌ ಮೌನ ಮುರಿದ ನಟ ದರ್ಶನ್, ಕಳೆದ ಕೆಲವು ದಿನಗಳಿಂದ ಕಲಾವಿದರು ಹೋರಾಟಕ್ಕೆ ಬರಲಿಲ್ಲ ಅಂತಿದ್ದಾರೆ. ಆದರೆ, ಮೊನ್ನೆ ಮೊನ್ನೆ ತಮಿಳು ಸಿನಿಮಾವೊಂದು ಬಿಡುಗಡೆ ಆಯ್ತು. ವಿತರಕರೊಬ್ಬರು‌ 6 ಕೋಟಿ ರೂಪಾಯಿಗೆ ಸಿನಿಮಾ ತೆಗೆದುಕೊಂಡರು. ಕರ್ನಾಟಕದಿಂದ 36 ಕೋಟಿ ರೂ. ದುಡ್ಡು ತಮಿಳುನಾಡಿಗೆ ಹೋಯ್ತಲ್ಲ ಅದರ ಬಗ್ಗೆ ಯಾರೊಬ್ಬರು ಕೇಳಲಿಲ್ಲ ಎಂದು ವಿವಿಧ ಸಂಘಟನೆಗಳನ್ನು ದರ್ಶನ್​ ಪ್ರಶ್ನೆ ಮಾಡಿದರು. ಮುಂದುವರಿದು ಮಾತನಾಡಿದ ದರ್ಶನ್, ನಿಮ್ಮ ಕಣ್ಣಿಗೆ ನಾನು, ಸುದೀಪ್, ಶಿವಣ್ಣ, ಯಶ್ ಹಾಗೂ ಅಭಿ ಮಾತ್ರ ಕಾಣೋದಾ? ಯಾಕೆ ಅವರ್ಯಾರು ನಿಮಗೆ ಕಾಣಲಿಲ್ವಾ? 36 ಕೋಟಿ ರೂಪಾಯಿಯನ್ನು ನಮ್ಮ ಕನ್ನಡದಿಂದ ತೆಗೆದುಕೊಂಡು ಹೋಗಿದ್ದಾರೆ ಸ್ವಾಮಿ, ಇವತ್ತು ನಾವು ಗುದ್ದಾಡ್ತಿರುವುದು ಯಾವುದಕ್ಕೆ? ಇದನೆಲ್ಲ ನೋಡಿ ಎಲ್ಲ ಸೈಲೆಂಟ್ ಆದ್ರಿ. ಆದರೆ, ನಾನು ಮಾತನಾಡಿದ್ರೆ ಜೋರಾಗಿರುತ್ತೆ ಮತ್ತು ಕೆಟ್ಟದಾಗಿರುತ್ತೆ ಅಲ್ವಾ? ಎನ್ನವ ಮೂಲಕ ದರ್ಶನ್​ ಅಸಮಾಧಾನ ಹೊರಹಾಕಿದರು. ಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರು ಕಾವುದಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ನಟ ದರ್ಶನ್(Darshan)​, ಕಲಾವಿದರ ಪರ ಬ್ಯಾಟ್​ ಬೀಸಿದ್ದಾರೆ.

ಹೌದು ಕಾವೇರಿ ವಿವಾದ ಆರಂಭ ಆಗುತ್ತಿದ್ದಂತೆ ಸ್ಯಾಂಡಲ್‌ವುಡ್ ತಾರೆಯರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಕಾವೇರಿ ವಿವಾದದ ಬಗ್ಗೆ ಸೂಪರ್‌ಸ್ಟಾರ್‌ಗಳು ಯಾಕೆ ಧ್ವನಿ ಎತ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಹೋರಾಟದಲ್ಲಿ ಭಾಗಿಯಾಗಿದ್ದ ದರ್ಶನ್ ಕಲಾವಿದರ ಬಗ್ಗೆ ಮಾತಾಡಿದವರಿಗೆ ತಿರುಗೇಟು ನೀಡಿದ್ದಾರೆ. ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ, ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಕನ್ನಡ ಕಲಾವಿದರಿಗೆ ಕೊಟ್ಟರೆ ಮಾತ್ರ ಕನ್ನಡ ಕಲಾವಿದರು ಬರ್ತಾರೆ. ಅವರು ದೊಡ್ಡ ಕಲಾವಿದರು, ನಾನು ಇಲ್ಲ ಅಂತ ಹೇಳುವುದಿಲ್ಲ. ನಾನು ಅವರ ಬಗ್ಗೆ ಮಾತಾಡುತ್ತಿಲ್ಲ.

ಕರ್ನಾಟಕದಿಂದ 36 ಕೋಟಿ ಹೋಯ್ತು ಸ್ವಾಮಿ, ಯಾಕೆ ಅವರ ಬಾಯ್ ಬಂದ್ ಮಾಡಿಲ್ಲ ಎಂದು ದರ್ಶನ್ ಸವಾಲೆಸೆದಿದ್ದಾರೆ. ಅಲ್ದೇ ಕರ್ನಾಟಕದಲ್ಲಿದ್ದು ಮೊದಲು ಕನ್ನಡ ಕನ್ನಡವರನ್ನ ಬೆಳೆಸಿ ಉಳಿಸಿ ಆಗ ಎಲ್ಲರು ಬರ್ತಾರೆ ಒಗ್ಗಟಾಗುತ್ತಾರೆ. ಅದು ಬಿಟ್ಟು ನೀರು ಕೇಳೋಕೆ ಅವ್ರು ಬರಲಿಲ್ಲ ಇವ್ರು ಬರಲಿಲ್ಲ ಅಂದ್ರೆ ಯಾರು ಬರಲ್ಲ ಸ್ವಾಮಿ. ಮೊದಲು ನೀವು ಏನ್ ಮಾಡ್ತಿದ್ದೀರಾ ಅನ್ನೋದನ್ನ ನೆನಪು ಮಾಡಿಕೊಳ್ಳಿ ಅಂತ ಜನರಿಗೆ ನೇರವಾಗಿಯೇ ಪ್ರಶ್ನೆ ಮತ್ತೊಂದು ವಿವಾದ ಸೃಷ್ಟಿ ಮಾಡಿದ್ದಾರೆ ನಟ ದರ್ಶನ್ ಅದ್ರೆ ಇದು ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ.

ಇದನ್ನೂ ಓದಿ: ಕಳೆದು ಹೋಗಿದ್ದ ಮಗ ಪತ್ತೆಯಾಗಿದ್ದು ಹೇಗೆ? ಮಗನನ್ನ ಹುಡುಕಲು ಸಹಾಯ ಮಾಡಿದ ಶ್ವಾನ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram