ರೈತರಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ ಸೌತ್ ಇಂಡಸ್ಟ್ರಿಯ ಖ್ಯಾತ ನಟ. ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

Raghava Lawrence Tractors

ಸಿನಿಮಾಗಳಲ್ಲಿ ನಟನಾಗಿ ಜನಪ್ರಿಯ ಆಗುವುದು ಒಂದು ಕಡೆ ಆದರೆ ಜೊತೆಗೆ ಜನರ ಕಷ್ಟಕ್ಕೆ ಸ್ಪಂದಿಸುವ ನಟರು ತೀರಾ ಕಡಿಮೆ ಆಗಿರುತ್ತಾರೆ. ಕರ್ನಾಟಕದಲ್ಲಿ ಜನಸೇವೆ ಮಾಡುವ ಮೂಲಕ ಇಡೀ ಭಾರತೀಯರ ಪ್ರೀತಿ ಗಳಿಸಿದ ಪುನೀತ್ ರಾಜಕುಮಾರ್ ಅವರಂತೆಯೇ ರೈತರಿಗೆ ಟ್ರ್ಯಾಕ್ಟರ್ ನೀಡಿದ ತಮಿಳಿನ ಖ್ಯಾತ ನಟ, ನಿರ್ದೇಶಕ, ಕೊರಿಯೋಗ್ರಫರ್ ಅಗಿರುವ ರಾಘವ್ ಲಾರೆನ್ಸ್.

WhatsApp Group Join Now
Telegram Group Join Now

ಕಾರ್ಮಿಕ ದಿನಾಚರಣೆಯ ಅಂಗವಾಗಿ ಗಿಫ್ಟ್ ನೀಡಿದ ನಟ :- ಮೇ ಒಂದರಂದು ಕಾರ್ಮಿಕ ದಿನಾಚರಣೆಯ ಅಂಗವಾಗಿ ದೇಶದ ಬೆನ್ನೆಲುಬು ಆಗಿರುವ 10 ರೈತರಿಗೆ ಟ್ರ್ಯಾಕ್ಟರ್ ನೀಡುವ ಮೂಲಕ ರೈತರಿಗೆ ಸಹಾಯ ಮಾಡಿದ್ದಾರೆ. ಅಭಿಮಾನಿಗಳು ಸಹ ಇವರ ನಡೆಯನ್ನು ಮೆಚ್ಚಿಕೊಂಡಿದ್ದಾರೆ.

ಚಾರಿಟೇಬಲ್ ಟ್ರಸ್ಟ್ ಇಂದ ಗಿಫ್ಟ್ ವಿತರಣೆ :- ರಾಘವ್ ಲಾರೆನ್ಸ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ನಮ್ಮ ಚಾರಿಟಬಲ್ ಟ್ರಸ್ಟ್ ಇಂದ ರೈತರಿಗೆ ಸಹಾಯ ಮಾಡಿದ್ದು ನನಗೆ ಸಂತೋಷವಾಗಿದೆ. ಸಧ್ಯದಲ್ಲಿ ನಾವು ಆರಂಭದ ಹಂತವಾಗಿ ರೈತರಿಗೆ ನನ್ನ ಸ್ವಂತ ಹಣದಲ್ಲಿ 10 ಟ್ರ್ಯಾಕ್ಟರ್ ವಿತರಣೆ ಮಾಡುತ್ತಿದ್ದೇನೆ. ಮುಂದಿನ ಹಂತದಲ್ಲಿ ಇನ್ನಷ್ಟು ಸಹಾಯ ಮಾಡಲು ಹಗುಬ್ ನನ್ನ ಕನಸುಗಳಿಗೆ ನನಗೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬೇಕು ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

ಈಗಾಗಲೇ 150 ಮಕ್ಕಳ ದತ್ತು ಪಡೆದ ರಾಘವ್ ಲಾರೆನ್ಸ್ :- ರಾಘವನ್ ಲಾರೆನ್ಸ್ ಅವರು ಸಿನಿಮಾಗಳ ಮೂಲಕ ಫೇಮಸ್ ಆಗುವುದಕ್ಕಿಂತ ಹೆಚ್ಚಾಗಿ ತಮ್ಮ ಸಮಾಜಮುಖಿ ಕಾರ್ಯಗಳಿಗೆ ಗುರುತಿಸಿಕೊಂಡಿದ್ದಾರೆ. ಈಗಾಗ್ಲೇ ರಾಘವ ಅವರು ಇತ್ತೀಚೆಗೆ 150 ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಲಾರೆನ್ಸ್ ಅವರ ಬಗ್ಗೆ ಎಲ್ಲಾರನ್ನು ರೋಲ್ ಮಾಡೆಲ್ ಆಗಿದ್ದರು. ಅವರಿಗೆ ಶಿಕ್ಷಣವನ್ನು ಒದಗಿಸುವ ಭರವಸೆಯನ್ನು ಕೊಟ್ಟಿದ್ದರು. ರಾಘವನ್ ಲಾರೆನ್ಸ್ ಅವರ ಈ ಕಾರ್ಯವನ್ನು ಅಲ್ಲು ಅರ್ಜುನ್ ಕಮೆಂಟ್ ಮಾಡಿ ರೆಸ್ಪೆಕ್ಟ್ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಆಂಪಿಯರ್ ನೆಕ್ಸಸ್ EV ಸ್ಕೂಟರ್, ಅತ್ಯುತ್ತಮ ಮೈಲೇಜ್ ನೊಂದಿಗೆ ಶಕ್ತಿಯುತ ಸವಾರಿ!

ಲಾರೆನ್ಸ್ ಅವರ ಸಿನಿಮಾ ಜರ್ನಿ ಬಗ್ಗೆ ಒಂದಿಷ್ಟು ಮಾಹಿತಿ:-

1993 ರಲ್ಲಿ ನೃತ್ಯ ಸಂಯೋಜಕರಾಗಿ ಚಿತ್ರರಂಗ ಪ್ರವೇಶಿಸಿದ ಲಾರೆನ್ಸ್, ನಂತರ ನಟನಾ ಅವಕಾಶಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು. 1998 ರಲ್ಲಿ ತೆಲುಗು ಚಿತ್ರರಂಗದಲ್ಲಿ ನಟನಾಗಿ ಪಾದಾರ್ಪಣೆ ಮಾಡಿದರು. 2001 ರಲ್ಲಿ “ರಾಘವ” ಎಂಬ ಹೆಸರನ್ನು ಸ್ವೀಕರಿಸಿದ ಲಾರೆನ್ಸ್, ತಮ್ಮ ವೃತ್ತಿಜೀವನದಲ್ಲಿ ತಮಿಳು ಚಿತ್ರರಂಗದ ಅನೇಕ ಪ್ರಮುಖ ನಟರು ಮತ್ತು ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಪಡೆದರು. “ತೆಲುಗು ಚಿತ್ರ ಸ್ಟೈಲ್” ಮತ್ತು “ಮುನಿ” ಚಿತ್ರಗಳ ಮೂಲಕ ಅವರು ತಮ್ಮ ಪ್ರಖ್ಯಾತಿಯನ್ನು ಮತ್ತಷ್ಟು ಏರಿಸಿಕೊಂಡರು.ಲಾರೆನ್ಸ್ ಅವರಿಗೆ ಪಾಶ್ಚಿಮಾತ್ಯ ನೃತ್ಯ ಚಲನೆಗಳಿಗೆ ವಿಶೇಷ ಗಮನ ಸಿಕ್ಕಿತು. ಅವರು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಮೂರು ನಂದಿ ಪ್ರಶಸ್ತಿಗಳು ಮತ್ತು ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಫಿಲ್ಮ್ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿರುವ ಇವರಿಗೆ ಅಪಾರ ಸಂಖ್ಯೆ ಯ ಅಭಿಮಾನಿ ಬಳಗ ಇದೆ.

ಲಾರೆನ್ಸ್ ಅವರ ಈ ಸಮಾಜ ಸೇವೆ ಹಲವಾರು ಯುವಕರಿಗೆ ಮಾದರಿ ಆಗಿದ್ದರೆ. ಲಾರೆನ್ಸ್ ಅವರ ಸಮಾಜ ಸೇವೆಯಲ್ಲಿ ಇನ್ನಷ್ಟು ಹೆಚ್ಚಿನ ಸೇವೆ ಮಾಡಲು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ