Sarath Babu: ಖ್ಯಾತ ಬಹುಭಾಷಾ ಹಿರಿಯ ನಟ ಶರತ್ ಬಾಬು ಹೈದರಾಬಾದ್ನಲ್ಲಿ ನಿಧನ ಹೊಂದಿದ್ದು ನಿಮ್ಮೆಲ್ಲರಿಗೂ ಗೊತ್ತಿದೆ. ತಮ್ಮ 71 ವಯಸ್ಸಿನಲ್ಲಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು ಹೌದು ಕಳೆದ ಕೆಲ ತಿಂಗಳುಗಳಿಂದಲೂ ಅನಾರೋಗ್ಯದಿಂದ ಬಳಲಿದ್ದ ಶರತ್ ಬಾಬು ಅವ್ರಿಗೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಶರತ್ ಬಾಬು ಮೇ 22 ರಂದು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇನ್ನು ಶರತ್ ಬಾಬು ಅವ್ರು ಕೊನೆಯ ದಿನಗಳನ್ನ ಬಹಳ ಕಷ್ಟದಿಂದಲೇ ಕಳೆದ್ರು, ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯ ಬೆಡ್ ಮೇಲೆ ಐಸಿಯುವಿನ ಉಪಕರಣಗಳ ನಡುವೆಯೇ ಕಳೆದ, ಶರತ್ ಬಾಬು ಅವರನ್ನು ಉಳಿಸಿಕೊಳ್ಳಲು ಅವರ ಕುಟುಂಬ ಸದಸ್ಯರು ಬಹಳ ಪ್ರಯತ್ನಪಟ್ಟರಾದರೂ ಅದು ಸಾಧ್ಯವಾಗಿಲ್ಲ. ಇನ್ನು ಶರತ್ ಬಾಬು ಅನಾರೋಗ್ಯಕ್ಕಿಡಾದ ನಂತರ ಸಿನಿಮಾದಿಂದ ತುಸು ಅಂತರ ಕಾಯ್ದುಕೊಂಡು, ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಿದ್ದರು. ಬರೋಬ್ಬರಿ ಐವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದ ಶರತ್ ಬಾಬು ಸಿನಿಮಾ ಮುಖೇನ ಒಳ್ಳೆಯ ಹಣ, ಆಸ್ತಿ ಗಳಿಸಿದ್ದರು. ಈ ಹಣ ಆಸ್ತಿ ವಿಚಾರವಾಗಿ ಇವ್ರ ಸಾವಿನ ನಂತರವೂ ಬಹಳಷ್ಟು ಚರ್ಚೆಗಳು ಆಗ್ತಿವೆ. ಹೌದು ಶರತ್ ಬಾಬು ಅವ್ರು ಕೋಟಿಗಳ ಒಡೆಯ ಆದರೆ ಹೆಂಡತಿಯರಿಲ್ಲ, ಮಕ್ಕಳಿಲ್ಲ ಹಾಗಾದ್ರೆ ಈ ಕೋಟಿ ಆಸ್ತಿಗಾಗಿ ಭಿನ್ನಾಭಿಪ್ರಾಯ ಶುರುವಾಗಿರೋದು ಯಾರಿಗೆ ಯಾಕೆ ಗೊತ್ತಾ.. ನೋಡೋಣ ಬನ್ನಿ.
ಶರತ್ ಬಾಬು ಅವ್ರು ಸಿನಿಮಾರಂಗಕ್ಕೆ ತಂದೆಯ ವಿರೋಧದ ನಡುವೆಯೇ ಬರುತ್ತಾರೆ. ಹೌದು ತಮ್ಮ 21ನೇ ವಯಸ್ಸಿನಲ್ಲಿಯೇ ಸಿನಿಮಾದಲ್ಲಿ ನಟಿಸಲು ಆರಂಭಿಸಿದ ಶರತ್ ಅವ್ರಿಗೆ ಈ ವಿಚಾರವಾಗಿ ತಂದೆಯ ವಿರೋಧ ಇರುತ್ತೆ. ಇದೆಲ್ಲದರ ನಡುವೆಯೂ, ಸ್ನೇಹಿತರ ಹಾಗೂ ತಾಯಿಯ ಬೆಂಬಲದಿಂದ ಸಿನಿಮಾದಲ್ಲಿ ನಟಿಸಲು ಆರಂಭಿಸಿದ ಶರತ್ ಮೊದಲ ಸಿನಿಮಾ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಒಂದು ಕಾಲದಲ್ಲಿ ತಮಿಳು-ತೆಲುಗಿನಲ್ಲಿ ದೊಡ್ಡ ಸ್ಟಾರ್ ಆಗಿ ಶರತ್ ಬಾಬು ಮೆರೆದರು. ಕನ್ನಡದಲ್ಲಿ ಅಮೃತವರ್ಷಿಣಿ, ನೀಲಾ, ತುಳಸಿದಳ, ಉಷಾ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ ಹೃದಯ, ಓ ಪ್ರಿಯತಮ, ನಮ್ಮೆಜಮಾನ್ರು, ಬೃಂದಾವನ, ಆರ್ಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇದ್ರಿಂದ ಶರತ್ ತುಂಬಾನೆ ದುಡ್ಡು ಮಾಡ್ತಾರೆ. ಮೊದಲೇ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದ ಶರತ್ ಅವ್ರಿಗೆ ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ, ತಂದೆಯ ಕಡೆಯಿಂದ ಕೋಟಿ ಕೋಟಿ ಆಸ್ತಿ ತಾವು ಸಂಪಾದಿಸಿದ ಆಸ್ತಿ ಎಲ್ಲವು ಇತ್ತು ಆದರೆ ವೈವಾಹಿಕ ಜೀವನ ಹೇಳಿಕೊಳ್ಳುವಷ್ಟು ಉತ್ತಮವಾಗೇನು ಇರಲಿಲ್ಲ, 3ಬಾರಿ ಮದುವೆಯಾದ್ರೂ, ಯಾರೊಟ್ಟಿಗೂ ಸಂಪೂರ್ಣ ಜೀವನ ನಡೆಸಿಲ್ಲ, ಸಾಲದಕ್ಕೆ ಮಕ್ಕಳಾಗಿಲ್ಲ ಅನ್ನೋ ಕೊರಗು. ಇದೆಲ್ಲದರ ನಡುವೆಯೇ ಶರತ್ ಬದುಕು ಸಾಗಿಸಿದ್ರು.
ಇದನ್ನೂ ಓದಿ: ನಿರ್ಮಾಪಕ ರವೀಂದರ್ ಮತ್ತು ನಟಿ ಮಹಾಲಕ್ಷ್ಮೀ ಡೈವೋರ್ಸ್ ನಿಜಾನಾ!ಎಲ್ಲದಕ್ಕೂ ಫೋಟೋ ಮೂಲಕವೇ ಕ್ಲಾರಿಟಿ ಕೊಟ್ಟ ಮಹಾಲಕ್ಷ್ಮೀ
ಕೋಟಿ ಒಡೆಯ ಶರತ್ ಬಾಬು ಕುಟುಂಬದಲ್ಲಿ ಬಿರುಕು
ಶರತ್ ಬಾಬು(Sarath Babu) ವೃತ್ತಿ ಬದುಕಿನಲ್ಲಿ ದೊಡ್ಡ ಯಶಸ್ಸು ಕಂಡವರು ಆದರೆ, ವೈಯಕ್ತಿಕ ಜೀವನ ಅಷ್ಟೊಂದು ಚೆನ್ನಾಗಿರಲಿಲ್ಲ. ವಯಸ್ಸಿನಲ್ಲಿ ತನಗಿಂತ 6 ವರ್ಷ ದೊಡ್ಡವರಾಗಿದ್ದ ನಟಿ ರಮಾಪ್ರಭಾ ಅವರೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಬಳಿಕ ಅವರನ್ನೇ ವಿವಾಹವಾದರು,14 ವರ್ಷಗಳ ಬಳಿಕ ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದ ಬೇರೆಯಾಗುತ್ತಾರೆ. ನಂತರ ಶರತ್ ಬಾಬು ತಮಿಳು ನಟ ನಂಬಿಯಾರ್ ಪುತ್ರಿ ಸ್ನೇಹಲತಾರನ್ನು ವಿವಾಹವಾದರು. ಆದರೆ, ಅವರಿಗೆ ಮಕ್ಕಳಾಗಲಿಲ್ಲ. ಅವರಿಂದಲೂ ಕೂಡ ದೂರವಾಗಿ ಪತ್ರಕರ್ತೆಯೊಬ್ಬರ ಜೊತೆ ಮದುವೆಯಾಗಿದ್ರು ಅನ್ನುವಂತಹ ಸುದ್ದಿಗಳು ಕೂಡ ಹರಿದಾಡಿದ್ವು. ಆದರೆ ಈಗ ಶರತ್ ಬಾಬು ಅಗಲಿದ ಬಳಿಕ ಅವರ ಆಸ್ತಿಗೆ ವಾರಸುದಾರರು ಯಾರು ಎಂಬ ಚರ್ಚೆ ಶುರುವಾಗಿದೆ.
ಇದೇ ವಿಚಾರಕ್ಕೆ ಕುಟುಂಬದ ನಡುವೆ ಕಿತ್ತಾಟ ಶುರುವಾಗಿದೆ ಎಂದೂ ಹೇಳಲಾಗುತ್ತಿದೆ. ಇನ್ನು ಶರತ್ ಬಾಬು ಸಹೋದರಿಯ ಮಕ್ಕಳನ್ನು ತನ್ನ ಮಕ್ಕಳೆಂದೇ ಭಾವಿಸಿದ್ದರು. ಅಲ್ಲದೆ ಅವರೇ ಮುಂದೆ ನಿಂತು ಅವರ ಮಕ್ಕಳ ಮದುವೆ ಕೂಡ ಮಾಡಿದ್ದರಂತೆ. ಎಲ್ಲರ ಮಕ್ಕಳನ್ನು ತನ್ನ ಮಕ್ಕಳು ಎಂದೇ ಭಾವಿಸಿದ್ದರಂತೆ. ಹೀಗಾಗಿ ಶರತ್ ಬಾಬು ತಮ್ಮ ಪಾಲಿನ ಆಸ್ತಿಯನ್ನು 13 ಭಾಗಗಳಾಗಿ ಸಹೋದರರ ಮಕ್ಕಳಿಗೆ ಹಂಚಿಕೆ ಮಾಡಿದ್ರು ಅಂತ ಹೇಳಾಲಾಗಿದ್ರು, ಶರತ್ ಅವರ ಹೆಸರಿನಲ್ಲಿ ಇನ್ನೂ ಹಲವು ಪ್ರಾಪರ್ಟಿಗಳು ಇದ್ದು ಹೈದರಾಬಾದ್, ಚೆನ್ನೈ, ಬೆಂಗಳೂರುನಲ್ಲಿ ಆಸ್ತಿ ಹೊಂದಿದ್ದಾರೆ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಿತ್ತಾಟ ಶುರುವಾಗಿದೆ ಅಂತ ಮೂಲಗಳು ಹೇಳ್ತಿವೆ. ಅಲ್ಲದೇ ತಮ್ಮ ವಿಶ್ರಾಂತ ಜೀವನಕ್ಕಾಗಿ ಒಂದು ಐಶಾರಾಮಿ ಮನೆಯನ್ನು ಕಟ್ಟಿಕೊಳ್ಳುವ ಆಸೆಯಿಲ್ಲಿದ್ದ ಶರತ್ ಹೈದರಾಬಾದ್ನ ಹಾರ್ಸ್ಲೆ ಹಿಲ್ನಲ್ಲಿಯೇ ಮನೆ ನಿರ್ಮಾಣ ಕಾರ್ಯ ಮಾಡಿಸಿತ್ತಿದ್ರು ಆದರೆ ಆ ಮನೆ ನಿರ್ಮಾಣ ಕಾರ್ಯಕ್ರಮ ಸಂಪೂರ್ಣವಾಗುವ ಮೊದಲೇ ಶರತ್ ಬಾಬು ಇನ್ನಿಲ್ಲವಾಗಿದ್ದು ಒಂದು ಕಡೆಯಾದ್ರೆ, ಅವ್ರು ಮಾಡಿಟ್ಟಿರೋ ಆಸ್ತಿ ವಿವಾದ ಮತ್ತೊಂದು ಕಡೆ ಒಟ್ಟಿನಲ್ಲಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೋ ಕಾದುನೋಡಬೇಕು.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಹಿಂದಕ್ಕಿ ನಂ1 ಸ್ಥಾನಕ್ಕೆ ಏರಿದ ಗಟ್ಟಿಮೇಳ; ಟಾಪ್ 10 ಧಾರಾವಾಹಿಗಳು
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram