ತಮಿಳು ನಟನಿಗೆ ಕ್ಷಮೆಯಾಚಿಸಿದ ಪ್ರಕಾಶ್ ರಾಜ್; ಕನ್ನಡಿಗರ ಪರವಾಗಿ ಕ್ಷಮೆ ಕೇಳುತ್ತೀನಿ ಅಂದ ಪ್ರಕಾಶ್ ರಾಜ್

ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್​ ಆಚರಣೆ ನಡೆಯುತ್ತಿದೆ. ಅದ್ರೆ ಅದಕ್ಕೂ ಮೊದಲೇ ಸಿನಿಮಾ ಪ್ರಚಾರಕ್ಕೆ ಅಂತ ಬಂದಿದ್ದ ತಮಿಳು ನಟನ ಮೇಲೆ ಒಂದು ರೀತಿಯಲ್ಲಿ ದೌರ್ಜನ್ಯ ನಡೆದಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. ಇದೀಗ ಅದಕ್ಕೆ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದು, ಕನ್ನಡ ಪರ ಸಂಘಟನೆಗಳ ವಿರುದ್ಧ ನಟ ಪ್ರಕಾಶ್ ರಾಜ್ ಹರಿಹಾಯ್ದಿದ್ದಾರೆ. ಹೌದು ಬೆಂಗಳೂರಿನಲ್ಲಿ ತಮಿಳು ನಟ ಸಿದ್ದಾರ್ಥ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದುದನ್ನು ತಡೆದ ಕನ್ನಡಪರ ಸಂಘಟನೆಗಳ ನಡೆಯನ್ನು ಬಹುಭಾಷಾ ನಟ ಪ್ರಕಾಶ್​ ರಾಜ್​(Prakash Raj )ಇದೀಗ ಖಂಡಿಸಿದ್ದಲ್ಲದೇ, ಇದೇ ಸಂದರ್ಭದಲ್ಲಿ ಕನ್ನಡಿಗರ ಪರವಾಗಿ ಸಿದ್ದಾರ್ಥ್ ಕ್ಷಮೆ ಕೋರಿದ್ದಾರೆ.

WhatsApp Group Join Now
Telegram Group Join Now

ತಮ್ಮ ಅಭಿನಯದ ಚಿಕ್ಕು ಚಿತ್ರದ ಕನ್ನಡ ಡಬ್ಬಿಂಗ್ ಮಾಡಿರುವ ಹಿನ್ನೆಲೆಯಲ್ಲಿ ಅದರ ಪ್ರಚಾರಕ್ಕೆಂದು ನಟ ಸಿದ್ಧಾರ್ಥ್ ಬೆಂಗಳೂರಿಗೆ ಬಂದಿದ್ದರು. ನಗರದ ಖಾಸಗಿ ಪ್ರದೇಶವೊಂದರಲ್ಲಿ ಸಿನಿಮಾ ಪ್ರಚಾರದ ನಿಮಿತ್ತ ಸುದ್ದಿಗೋಷ್ಠಿ ನಡೆಸುವಾಗ ಅಲ್ಲಿಗೆ ಮಧ್ಯ ಪ್ರವೇಶ ಮಾಡಿದ್ದ ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು, ನಟ ಸಿದ್ಧಾರ್ಥ್​ ಅವರನ್ನು ಬಲವಂತವಾಗಿ ಸುದ್ದಿಗೋಷ್ಠಿಯನ್ನು ನಿಲ್ಲಿಸುವಂತೆ ಸೂಚಿಸಿ, ಹೊರಗಡೆ ಕಳುಹಿಸಿದ್ದ ಘಟನೆ ನಡೆದಿತ್ತು. ಬಗ್ಗೆ ಟ್ವೀಟ್ ಮಾಡಿ ನಟ ಪ್ರಕಾಶ್ ರಾಜ್ ಕ್ಷಮೆ ಕೇಳಿದ್ದು ಎಲ್ಲೆಡೆ ಸದ್ದು ಮಾಡ್ತಿದೆ.

ಹೌದು ತಮ್ಮ ಹೊಸ ಚಿತ್ರ ಚಿಕ್ಕು ಪ್ರಚಾರಕ್ಕಾಗಿ ಸಿದ್ದಾರ್ಥ್ ಬೆಂಗಳೂರಿಗೆ ಬಂದಿದ್ದರು. ನಂತರ ಖಾಸಗಿ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತು ಆರಂಭಿಸುತ್ತಿದ್ದಂತೆಯೇ ಕನ್ನಡ ಪರ ಸಂಘಟನೆಯ ಸದಸ್ಯರು ವಾಗ್ದಾಳಿ ನಡೆಸಿ ಕಾರ್ಯಕಾರ್ಯಕ್ರಮ ನಿಲ್ಲಿಸುವಂತೆ ಒತ್ತಾಯಿಸಿದರು. ಅದಾಗ್ಯೂ, ಸಿದ್ದಾರ್ಥ್ ಮಾಧ್ಯಮಗಳನ್ನು ಉದ್ದೇಶಿಸಿ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಿದರು. ಆದರೆ, ಕಾವೇರಿ ಚಳವಳಿಗೆ ಬೆಂಬಲ ವ್ಯಕ್ತಪಡಿಸಲು ಸಿದ್ಧಾರ್ಥ್ ಅವರನ್ನು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದು, ಪರಿಸ್ಥಿತಿ ಉಲ್ಬಣಗೊಂಡಿತು. ಕೊನೆಗೆ, ಸಿದ್ದಾರ್ಥ್ ಅವರು ಕೈ ಜೋಡಿಸಿ, ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿ ಕಾರ್ಯಕ್ರಮದಿಂದ ನಿರ್ಗಮಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಗೆ ಶುರುವಾಯ್ತು ಕ್ಷಣಗಣನೆ ಹತ್ತನೇ ಸೀಸನ್ ಗೆ ಸಮಯ ನಿಗಧಿಯಾಯ್ತು? ಹಾಗಾದ್ರೆ ಮುಗಿದು ಹೋಗಲಿರೋ ಪ್ರಮುಖ ಧಾರವಾಹಿ ಯಾವುದು?

ಸಿನಿಮಾ ಪ್ರಚಾರಕ್ಕೆ ಅಡ್ಡಿಪಡಿಸಿದಕ್ಕೆ ಕ್ಷಮೆಯಾಚನೆ

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್(Prakash Raj), “ಹೌದು. ಕಾವೇರಿ ನಮ್ಮದು. ಆದರೆ, ದಶಕಗಳಿಂದ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದ ಎಲ್ಲ ಅಸಮರ್ಥ ರಾಜಕೀಯ ಪಕ್ಷಗಳು, ನಾಯಕರನ್ನು ಪ್ರಶ್ನಿಸದೆ ತರಾಟೆಗೆ ತೆಗೆದುಕೊಳ್ಳದೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರದ ಸಂಸದರುನ್ನು ಬಿಟ್ಟು ಅಸಹಾಯಕರಾದ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುತ್ತಿರುವುದು ತಪ್ಪು. ಕನ್ನಡಿಗನಾಗಿ, ಸಹೃದಯ ಕನ್ನಡಿಗರ ಪರವಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ ಸಿದ್ದಾರ್ಥ್‌” ಎಂದು ಟ್ವೀಟ್‌ ಮಾಡಿದ್ದಾರೆ.

ಹೌದು ನಟ ತಮ್ಮ ಸಿನಿಮಾ ಕನ್ನಡದಲ್ಲಿ ಡಬ್ಬಿಂಗ್ ಆಗಿ ರಿಲೀಸ್ ಆಗಿರುವ ಕಾರಣ ಸಿನಿಮಾ ಪ್ರಚಾರದ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದು ಸಿನಿಮಾ ಕುರಿತು ಪತ್ರಕರ್ತರನ್ನ ಉದ್ದೇಶಿಸಿ ಮಾತು ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಪ್ರತಿಭಟನಾಕಾರಾರು ಏನ್ರಿ ಇದು ನ್ಯಾಯಾನಾ ನಾವು ನೀರಿಲ್ಲದ ಅಂತ ಬೀದಿಗಿಳಿದಿದೀವಿ ಚಿತ್ರರಂಗದವರೇ ಬೆಂಬಲ ಸೂಚಿಸಿರೋವಾಗ ನೀವು ಇಲ್ಲಿ ಮಾಡ್ತಿರೋ ಕೆಲಸ ಸರಿನಾ ಕ್ಲೋಸ್ ಮಾಡ್ರಿ ಬ್ಯಾನರ್ ತಗಿರಿ ಅಂತ ಒತ್ತಾಯಪೂರ್ವಕವಾಗಿ ಬ್ಯಾನರ್ ತಗಿಸಿ ಕಾರ್ಯಕ್ರಮವನ್ನ ಅಲ್ಲಿಗೆ ಮೊಟಕುಗೊಳಿಸಿದ್ದಾರೆ. ಇದರಿಂದ ತಮಿಳು ನಟ ಸಿದ್ದಾರ್ಥ್ ಗೆ ಇರಿಸು ಮುರಿಸು ಉಂಟು ಮಾಡಿದೆ. ಆದರೂ ವಿಧಿಯಿಲ್ಲ ಎಂಬಂತೆ ಎಲ್ಲರಿಗೂ ಕೈ ಮುಗಿದು ವೇದಿಕೆಯಿಂದ ಹೊರ ನಡೆದಿದ್ದಾರೆ. ಸದ್ಯ ಈ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದ್ದಂತೆ ಪ್ರಕಾಶ್ ರಾಜ್ ತಮಿಳು ನಟನ ಪರ ಬ್ಯಾಟಿಂಗ್ ಮಾಡಿದ್ದು, ಒಂದು ಕಡೆ ಒಳ್ಳೆ ಕೆಲಸ ಅಂತ ಕೆಲವರು ಹೇಳುದ್ರೆ ಮಾತು ಕೆಲವರು ಪ್ರಕಾಶ್ ರಾಜ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೂ ಜನಸಾಮಾನ್ಯರು ಮತ್ತು ಕಲಾವಿದರನ್ನ ಈ ರೀತಿ ಹಿಂಸಿದ್ದು ಸರಿಯಲ್ಲ ಅನ್ನೋದು ಮತ್ತು ಕೆಲವರ ವಾದ.

ಇದನ್ನೂ ಓದಿ: ನಟನೆ ಜೊತೆ ಹೊಸ ಉದ್ಯಮ ಆರಂಭಿಸಿದ ಸತ್ಯ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾದವ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram