ಕರ್ನಾಟಕದಲ್ಲಿ ನೀನು ತಮಿಳಿನವನು ಗೆಟ್ ಔಟ್ ಅಂದ್ರು; ನನ್ನ ಸಿನಿಮಾ ಬಗ್ಗೆ ನಂಗೆ ಮಾತನಾಡಲು ಬಿಡಲಿಲ್ಲ ಅಂತ ಕಣ್ಣೀರಿಟ್ಟ ನಟ

ತಮಿಳು ನಟ ಸಿದ್ದಾರ್ಥ್‌ ಅಭಿನಯದ ‘ಚಿತ್ತಾ’ ಸಿನಿಮಾ ಸೆಪ್ಟೆಂಬರ್‌ 28 ರಂದು ತೆರೆ ಕಂಡಿದೆ. ಈ ಸಿನಿಮಾ ಕನ್ನಡಕ್ಕೆ ಚಿಕ್ಕು ಹೆಸರಿನಲ್ಲಿ ಡಬ್‌ ಆಗಿದೆ. ಈ ಸಿನಿಮಾ ಪ್ರಮೋಷನ್‌ಗೆಂದು ಸಿದ್ದಾರ್ಥ್‌ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಸಿದ್ದಾರ್ಥ್‌ ಸುದ್ದಿಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಕನ್ನಡಪರ ಸಂಘಟನೆ ಸದಸ್ಯರು, ನಾವಿಲ್ಲಿ ತಮಿಳುನಾಡಿಗೆ ನೀರು ಹೋಗುತ್ತಿದೆ ಎಂಬ ಬೇಸರದಲ್ಲಿದ್ದರೆ ಇಲ್ಲಿ ತಮಿಳು ಸಿನಿಮಾ ಸುದ್ದಿಗೋಷ್ಠಿ ಮಾಡಬೇಕಾ ಎಂದು ಪ್ರಶ್ನಿಸಿ, ಸಿದ್ದಾರ್ಥ್‌ ಅವರನ್ನು ಬಲವಂತವಾಗಿ ಅಲ್ಲಿಂದ ಕಳಿಸಿದ್ದರು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ರಾಷ್ಟ್ರೀಯ ಮಾಧ್ಯಮಗಳು ಕೂಡಾ ಈ ಸುದ್ದಿಯನ್ನು ಪ್ರಕಟಿಸಿದ್ದವು.

WhatsApp Group Join Now
Telegram Group Join Now

ಸಿದ್ದಾರ್ಥ್‌ ತಮಿಳು ನಟ ಆಗಿದ್ದರೂ ಆತ ನಮ್ಮ ರಾಜ್ಯಕ್ಕೆ ಬಂದ ಅತಿಥಿ. ಅವರಿಗೆ ಈ ರೀತಿ ಅವಮಾನ ಮಾಡಬಾರದಿತ್ತು ಎಂದು ಕೆಲವರು ಬೇಸರ ವ್ಯಕ್ತಪಡಿಸಿದರೆ, ಇನ್ನೂ ಕೆಲವರು, ಕಾವೇರಿ ಗಲಾಟೆ ಸಮಯದಲ್ಲಿ ಅವರು ಈ ರೀತಿ ಬಂದು ಪ್ರಚಾರ ಮಾಡುತ್ತಿರುವುದು ಎಷ್ಟು ಸರಿ ಎಂದಿದ್ರು. ಇನ್ನು ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್‌ ಕೂಡಾ ಕರ್ನಾಟಕ ಬಂದ್‌ ಸಮಯದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಸಿದ್ದಾರ್ಥ್‌ಗೆ ಕ್ಷಮೆ ಕೇಳಿದ್ದರು. ಅಲ್ದೇ ಖ್ಯಾತ ಪತ್ರಕರ್ತ ಡಾ. ಶರಣು ಹುಲ್ಲೂರ್‌ ಕೂಡಾ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ಸ್ವತಃ ಸಿದ್ದಾರ್ಥ ಅವ್ರೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ದೇ ಕಣ್ಣೀರಿಡುತ್ತ ಅವತ್ತು ತುಂಬಾ ನೋವಾಯಿತು ಅಂತ ಹೇಳಿಕೊಂಡಿದ್ದಾರೆ.

ಹೌದು ಬೆಂಗಳೂರಿನಲ್ಲಿ ತಮ್ಮಗದ ಅವಮಾನದಿಂದ ನಟ ಸಿದ್ದಾರ್ಥ್ ಬಹಳಷ್ಟು ನೊಂದಿರುವಂತೆ ಕಾಣುತ್ತಿದ್ದಾರೆ. ಹೀಗಾಗಿಯೇ ಬೆಂಗಳೂರಿನಲ್ಲಿ ಆದ ಘಟನೆ ಜೊತೆಗೆ ಕೆಲವೊಂದು ವಿಚಾರಗಳನ್ನ ನೆನೆಸಿಕೊಂಡು ಕಣ್ಣೀರಿಟ್ಟಿದ್ದಾರೆ. ಹೌದು ನಟ ಸಿದ್ಧಾರ್ಥ್ ನಟನೆಯ ಚಿಕ್ಕು ಇತ್ತೀಚೆಗಷ್ಟೆ ಬಿಡುಗಡೆ ಆಗಿ ಉತ್ತಮ ವಿಮರ್ಶೆ ಗಳಿಸಿದೆ. ಆದರೆ ಸಿನಿಮಾದ ಪ್ರಚಾರಕ್ಕಾಗಿ ಸಿದ್ಧಾರ್ಥ್ ಬೆಂಗಳೂರಿಗೆ ಬಂದಾಗ ಅವರ ಸುದ್ದಿಗೋಷ್ಠಿಯನ್ನು ಕನ್ನಡಪರ ಸಂಘಟನೆಯ ಕೆಲವು ಸದಸ್ಯರು ತಡೆದು ಕಾರ್ಯಕ್ರಮ ರದ್ದುಗೊಳಿಸಿದರು. ಬಳಿಕ ನಟ ಪ್ರಕಾಶ್ ರೈ, ಶಿವರಾಜ್ ಕುಮಾರ್ ಅವರುಗಳು ಸಿದ್ಧಾರ್ಥ್​ಗೆ ಬಹಿರಂಗವಾಗಿ ಕ್ಷಮೆಯನ್ನೂ ಕೇಳಿದರು.

ಇದೀಗ ತೆಲುಗಿನಲ್ಲಿ ಚಿತ್ತ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದಾರ್ಥ್ ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಬೆಂಗಳೂರಿನಲ್ಲಿ ನನ್ನ ಸಿನಿಮಾದ ಪ್ರಚಾರ ಮಾಡುವ ಸಂದರ್ಭದಲ್ಲಿ ನೀನು ತಮಿಳಿನವನು ಗೆಟೌಟ್ ಎಂದರು” ಎಂದು ನಟ ಸಿದ್ಧಾರ್ಥ್ ಹೇಳಿಕೊಂಡಿದ್ದಾರೆ. ಘಟನೆ ಬಳಿಕ ಕೆಲವರು ಸಾರಿ ಕೇಳಿದರು, ಇನ್ನು ಕೆಲವ್ರು ಥ್ಯಾಂಕ್ಸ್ ಕೂಡ ಹೇಳಿದರು. ಅದ್ರೆ ಯಾಕೆ ಹೇಳಿದರು ಗೊತ್ತಿಲ್ಲ. ಒಬ್ಬ ನಿರ್ಮಾಪಕನಾಗಿ, ಸಿನಿಮಾದ ನಟನಾಗಿ ಸಿನಿಮಾದ ಬಗ್ಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ ಅಂತ ಬಹಳ ಬೇಸರದಿಂದ ಮಾತನಾಡಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಭಾವುಕರಾದ ತೆಲುಗು ನಟ ಸಿದ್ದಾರ್ಥ್

ಹೌದು ನಟ ಸಿದ್ದಾರ್ಥ್ ಅವ್ರಿಗೆ ಬೆಂಗಳೂರಿನಲ್ಲಿ ನಡೆದ ಘಟನೆ ಒಂದರಿಂದಲ್ಲೇ ಅಷ್ಟೆಲ್ಲ ನೋವಾಗಿಲ್ಲ.. ಸಿನಿಮಾ ವಿಚಾರವಾಗಿ ಕೆಲವೊಂದು ಸ್ಥಳಗಳಲ್ಲಿ ಆದ ಅವಮಾನ ಅವ್ರನ್ನ ಬಹಳಷ್ಟು ಭಾಢಿಸಿತ್ತು. ಈ ಬಗ್ಗೆ ಸ್ವತಃ ಅವ್ರೆ ಮಾತಾನಾಡಿದ್ದಾರೆ ಹೌದು ಸೆಪ್ಟೆಂಬರ್ 28ರಂದು ಈ ಸಿನಿಮಾ ತೆಲುಗಿನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸಿದ್ಧಾರ್ಥ್ ಸಿನಿಮಾ ಯಾರು ನೋಡ್ತಾರೆ ಎಂದು ಕೆಲವರು ಹೇಳಿದ್ರು, ಅದರಿಂದ ನನಗೆ ಚಿತ್ರಮಂದಿರಗಳು ಸರಿಯಾಗಿ ಸಿಗಲಿಲ್ಲ. ಆಗ ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿ ನನ್ನೊಂದಿಗೆ ನಿಂತಿದ್ದು ಏಷಿಯನ್ ಸಿನಿಮಾದ ಸುನಿಲ್ ಅಂತ ಹೇಳಿಕೊಂಡಿದ್ದಾರೆ ಸಿದ್ಧಾರ್ಥ್. ಅಲ್ದೇ ಪ್ರೇಕ್ಷಕ ಪ್ರಭು, ನೀವು ಸ್ಟಾರ್ ಮಾಡಿದ ಹುಡುಗ ನಾನು, ಬೊಮ್ಮರಿಲ್ಲು, ನುವಸ್ತಾನಂಟೆ ನೇನೊದ್ದಂಟಾನಾ ಮಾಡಿದ್ದೇನೆ, ನನ್ನ ಸಿನಿಮಾದಲ್ಲಿ ಅದಿದೆ, ಇದಿದೆ ಎಂದೆಲ್ಲ ಇಲ್ಲದ ಕತೆ ನಾನು ಹೇಳುವುದಿಲ್ಲ. ನಿಮಗೆ ಸಿನಿಮಾ ಮೇಲೆ ಪ್ರೀತಿ ಇದ್ದರೆ, ಒಳ್ಳೆಯ ಸಿನಿಮಾ ನೋಡುವ ಇಷ್ಟವಿದ್ದರೆ ಈ ಸಿನಿಮಾ ನೋಡಿ, ತೆಲುಗಿನಲ್ಲಿ ಸಿದ್ಧಾರ್ಥ್ ಸಿನಿಮಾ ಏಕೆ ನೋಡಬೇಕು ಎಂದುಕೊಂಡರೆ ಸಿನಿಮಾ ನೋಡಬೇಡಿ, ನಾನು ಸಹ ಇನ್ನು ಮುಂದೆ ಸಿನಿಮಾ ತೆಗೆದುಕೊಂಡು ಬರುವುದಿಲ್ಲ ಅಂತ ಬಹಳ ಭಾವುಕವಾಗಿಯೇ ಮಾತನಾಡಿದ್ದಾರೆ.

ಇನ್ನು ತಮಿಳಿನಲ್ಲಿ ರೆಡ್ ಜಾಯಿಂಟ್​ನವರು ನಮ್ಮ ಸಿನಿಮಾ ನೋಡಿ ಇಂಥಹಾ ಸಿನಿಮಾ ನೋಡಿಲ್ಲ ಅಂತ ಹಕ್ಕು ಖರೀದಿ ಮಾಡಿದರು. ಮಲಯಾಳಂನಲ್ಲಿ ಸಹ ಗೋಕುಲಂ ಗೋಪಾಲನ್ ಅವರು ನನ್ನ 55 ವರ್ಷದ ಕರಿಯರ್​ನಲ್ಲಿ ಇಂಥಹಾ ಸಿನಿಮಾ ನೋಡಿಲ್ಲ ಅಂತ ನನ್ನ ಸಿನಿಮಾ ಖರೀದಿ ಮಾಡಿದರು. ತೆಲುಗಿನಲ್ಲಿ ಕೆಜಿಎಫ್ ನಿರ್ಮಾಣ ಮಾಡಿದ್ದ ತಂಡದವರು ನನ್ನ ಸಿನಿಮಾ ಖರೀದಿ ಮಾಡಿದರು. ಆದರೆ ತೆಲುಗಿನಲ್ಲಿ ಸಿದ್ಧಾರ್ಥ್ ಸಿನಿಮಾ ಯಾರು ನೋಡ್ತಾರೆ ಎಂದಿದ್ದು ಬಹಳ ನೋವಾಯ್ತು ಅಂತ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಕಾಮಿಡಿ ಕಿಲಾಡಿ ಖ್ಯಾತಿಯ ನಯನ ಗರಂ; ಮಗು ಆಗಿದೆ ಅಂತ ಸುಳ್ಳು ಸುದ್ದಿ ಹಾಕಿದವರಿಗೆ ಕೊಟ್ರು ಟಾಂಗ್

ಇದನ್ನೂ ಓದಿ: ನೀನೇ ಮೊದಲು ಎರಡನೆಯವನಲ್ಲ ಅಂದ್ರು ಅಭಿಷೇಕ್ ಪತ್ನಿ; ಫೋಟೋಗಳನ್ನ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಎಂದ ಅವಿವಾ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram