Actor Upendra: ಹೊಸ ಉದ್ಯಮ ಶುರು ಮಾಡಿದ ನಟ ಉಪೇಂದ್ರ; ಫಾರ್ಮ್ ಹೌಸ್ ನ್ನ ಬಾಡಿಗೆಗೆ ನೀಡಲು ಮುಂದಾದ ನಟ..

Actor Upendra: ರಿಯಲ್ ಸ್ಟಾರ್ ಉಪೇಂದ್ರ ಅಂದ ತಕ್ಷಣ ನಮಿಗೆ ನೆನಪಿಗೆ ಬರೋದು ಅವ್ರ ವಿಭಿನ್ನ ಶೈಲಿಯ ನಿರ್ದೇಶನ, ಅವ್ರ ವಿಶೇಷ ನಟನೆ, ರಾಜಕೀಯದಲ್ಲಿ ಅವ್ರಿಗಿರುವ ವಿಭಿನ್ನ ಹಾಗೂ ವಿಚಿತ್ರ ಅನ್ನಿಸಿದರು ಒಪ್ಪಿಕೊಳ್ಳುವಂತಹ ಅವ್ರ ವಿಶೇಷ ಆಲೋಚನೆಗಳು. ಹೌದು ಉಪ್ಪಿ ಅಂದ್ರೆ ವಿಭಿನ್ನ ಉಪ್ಪಿ ಅಂದ್ರೆ ವಿಶೇಷ ಅಂತ ಅವ್ರ ಅಭಿಮಾನಿಗಳು ಹೇಳ್ತಾಳೆ ಇರ್ತಾರೆ. ಇದೀಗ ಅಂತದ್ದೇ ವಿಭಿನ್ನ ಪ್ರಯತ್ನಕ್ಕೆ ರಿಯಲ್ ಸ್ಟಾರ್ ಕೈ ಹಾಕಿದ್ದು ಅಭಿಮಾನಿಗಳು ವಾವ್ ಅಂತಿದ್ದಾರೆ. ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೋಟೆಲ್ ಉದ್ಯಮ, ಇಲ್ವೇ ಕೃಷಿ, ಹೈನುಗಾರಿಕೆ, ಪ್ರಾಣಿ ಪಕ್ಷಿ ಸಾಕಾಣಿಕೆ ಈ ತರನಾದ ಉದ್ಯಮಕ್ಕೆ ಕೈ ಹಾಕ್ತಾರೆ ಆದ್ರೆ ಉಪ್ಪಿ ನಿಜಕ್ಕೂ ವಿಶೇಷ ಕಾರಣ ಉಪೇಂದ್ರ ಅವ್ರ ಆಲೋಚನೆ ಅಷ್ಟೆ ವಿಶೇಷವಾಗಿರುತ್ತೆ. ಹೌದು ನಟ ಉಪೇಂದ್ರ ಹೊಸ ವ್ಯವಹಾರ ಅಥವಾ ಉದ್ಯಮಕ್ಕೆ ಕೈ ಹಾಕಿದ್ದಾರೆ. ಅದು ಕೂಡ ತಮ್ಮ 4ಎಕರೆ ವಿಸ್ತೀರ್ಣದಲ್ಲಿರುವ ಫಾರ್ಮ್ ಹೌಸ್ ನ್ನ ಬಳಸಿಕೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು ನಮ್ಮ ಸ್ಯಾಂಡಲ್​ವುಡ್​​ ಸ್ಟಾರ್ ಹೀರೋ ಬುದ್ದಿವಂತ ಉಪೇಂದ್ರ ಅವರು ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಕೂಡ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇದೀಗ ನಟನೆ ಹೊರತಾಗಿಯೂ ಉಪೇಂದ್ರ ಹೊಸದನ್ನು ಯೋಚಿಸಿ ಉದ್ಯಮ ಆರಂಭಿಸಿದ್ದಾರೆ.

WhatsApp Group Join Now
Telegram Group Join Now

ಹೌದು ಸೆಲೆಬ್ರಿಟಿಗಳು ನಟನೆಯ ಜೊತೆ ಜೊತೆಗೆ ವಿವಿಧ ವ್ಯವಹಾರಗಳನ್ನು ಮಾಡುತ್ತಾರೆ ಇದು ಈಗೀಗ ಕಾಮನ್ ಆಗಿದೆ. ಆದ್ರೆ ಉಪೇಂದ್ರ ಅವರು ಹೊಸದನ್ನ ಯೋಚಿಸಿ ತಮ್ಮ ಫಾರ್ಮ ಹೌಸ್ ಬಳಸಿಕೊಂಡು ಬೆಳೆಯಲು ನಿರ್ಧಾರಿಸಿರುವಂತಿದ್ದು, ಐಡಿಯಾ ಸಕ್ಕತ್ತಾಗಿಯೇ ಇದೆ. ಹೌದು ನಟ ಉಪೇಂದ್ರ ಬೆಂಗಳೂರಿನಲ್ಲಿ ಉತ್ತಮವಾದ ದೊಡ್ಡ ಫಾರ್ಮ್ ಹೌಸ್ ಹೊಂದಿದ್ದಾರೆ. ಆದ್ರೆ ಆಗೊಮ್ಮೆ ಈಗೊಮ್ಮೆ ಮಾತ್ರ ಉಪೇಂದ್ರ ಈ ಫಾರ್ಮ್ ಹೌಸ್ ಬಳಸುತ್ತಾರೆ. ಉಳಿದ ಸಮಯದಲ್ಲಿ ಅದು ಖಾಲಿಯಾಗಿರುತ್ತದೆ. ಹೀಗಾಗಿ ಉಪೇಂದ್ರ ಅವರು ಈ ಫಾರ್ಮ್ ಹೌಸ್ ಅನ್ನು ಖಾಲಿ ಇಡುವ ಬದಲು ಬಾಡಿಗೆಗೆ ನೀಡಲು ಯೋಚಿಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಫಾರ್ಮ್ ಹೌಸ್ ಕುರಿತ ವಿಡಿಯೋವನ್ನು ಹಂಚಿಕೊಂಡು ಈ ಬಗ್ಗೆ ಮಾಹಿತಿ ನೀಡಿದ್ದರು.

ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಫಾರ್ಮ್ ಹೌಸ್ ಬಾಡಿಗೆಗೆ ನೀಡಲು ನಿರ್ಧರಿಸಿ ಜಾಹೀರಾತೊಂದನ್ನ ರೆಡಿ ಮಾಡಿಸಿದ್ದಾರೆ. ಹೌದು ತಮ್ಮ ಫಾರ್ಮ್ ಹೌಸ್ ವಿಡಿಯೋವನ್ನು ಶೇರ್ ಮಾಡುತ್ತಾ, ನಮ್ಮ ಫಾರ್ಮ್ ಹೌಸ್ ಈಗ ಎಲ್ಲರಿಗೂ ಲಭ್ಯವಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ದೊಡ್ಡ ಆಲದ ಮರದ ಬಳಿ ಈ ಫಾರ್ಮ್ ಹೌಸ್ ಇದೆ. ಇದರ ಸುತ್ತಲೂ ನಾಲ್ಕು ಎಕರೆಯಷ್ಟು ಹಸಿರಿನಿಂದ ಆವೃತವಾಗಿದೆ. ವಿವಾಹಗಳು, ನಿಶ್ಚಿತಾರ್ಥಗಳು, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಂತಹ ವಿಶೇಷ ಆಚರಣೆಗಳಿಗೆ ನನ್ನ ಫಾರ್ಮ್ ಹೌಸ್ ಪರಿಪೂರ್ಣವಾಗಿದೆ. ಅಗತ್ಯವಿರುವವರು ಈ ಸಂಖ್ಯೆಗೆ ಕರೆ ಮಾಡಿ ಅಂತ ಉಪೇಂದ್ರ ಅವರು ನಂಬರ್ ಒಂದನ್ನ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ; ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ

ಉಪ್ಪಿ ಫಾರ್ಮ್ ಹೌಸ್ ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ

ಅಲ್ದೇ ಫಾರ್ಮ್ ಹೌಸ್ ಮಾಹಿತಿಯನ್ನ ಹಂಚಿಕೊಂಡಿರುವ ಉಪ್ಪಿ ಈ ತೋಟದ ಮನೆ ಸುಮಾರು ನಾಲ್ಕು ಎಕರೆಗಳಷ್ಟಿದೆ. ಅದರಲ್ಲಿ ಫಾರ್ಮ್ ಹೌಸ್ ಇದ್ದು, ಹತ್ತು ಸಾವಿರ ಚದರ ಅಡಿ ದೊಡ್ಡ ಹಾಲ್, 6 ಐಷಾರಾಮಿ ಮಲಗುವ ಕೋಣೆಗಳು, ದೊಡ್ಡ ಟೆರೇಸ್, ಕುಡಿಯೋರಿಗೆ ಅಂದ್ರೆ ಸಾಫ್ಟ್ ಡ್ರಿಂಕ್ ಮತ್ತೆ ಹಾಟ್ ಡ್ರಿಂಕ್ಸ್ ತೆಗೆದುಕೊಳ್ಳೋರಿಗೆ ವಿಭಿನ್ನವದ ಕೌಂಟರ್ ಇದೆ. ಇದೆಲ್ಲವೂ ಕೂಡ ಫುಲ್ಲಿ ಫರ್ನಿಶೆಡ್ ಆಗಿದ್ದು, ಎಲ್ಲವು ಕೂಡ ಸಂಪೂರ್ಣವಾಗಿ ರೆಡಿ ಮಾಡಿದ್ದಾರೆ. ಇದರ ಜೊತೆಗೆ ಹತ್ತು ಸಾವಿರ ಚದರ ಅಡಿ ಉಚಿತ ಸ್ಥಳ, ನಾಲ್ಕು ಕೊಠಡಿಗಳು ಕೂಡ ಇದ್ದು ಇದು ಫಾರ್ಮ್ ಹೌಸ್ ನಿರ್ವಹಣೆ ಮತ್ತು ಅಡುಗೆ ಮಾಡೋರು ಇತ್ಯಾದಿ ಕೆಲಸಗಳ ಜನರಿಗೆ ಅಂತ ಮಾಡಲಾಗಿದೆ. ಅಲ್ಲಿ ಕೆಲ್ಸಗಾರರು ಇರ್ತಾರೆ. ಹೀಗಾಗಿ ಎಲವೂ ಸಂಪೂರ್ಣವಾಗಿರೋದ್ರಿಂದ ಉಪೇಂದ್ರ ಅವ್ರು ಹೊಸದನ್ನ ಆಲೋಚಿಸಿ ಈ ನಿರ್ಧಾರ ಮಾಡಿ ಜಾಹೀರಾತಿನ ಮೂಲಕ ತಮ್ಮ ಉದ್ಯಮವನ್ನ ಶುರು ಮಾಡಿದ್ದಾರೆ ಅಲ್ದೇ ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಷಯವನ್ನ ಹಂಚಿಕೊಂಡಿದ್ದಾರೆ.

ಇನ್ನು ಇದನ್ನ ನೋಡಿದ ಕೆಲವ್ರು, ವೆಡ್ಡಿಂಗ್, ಪಾರ್ಟಿಗಳಿಗೆ ಡಿಮ್ಯಾಂಡ್ ಇರುವುದರಿಂದ ವ್ಯಾಪಾರ ಚೆನ್ನಾಗಿರಲಿದೆ ಅಂತ ಕಾಮೆಂಟ್ ಮಾಡುತ್ತಿದ್ರೆ, ಮತ್ತೂ ಕೆಲವರು ತೋಟದ ಮನೆಯನ್ನು ಏಕೆ ಬಾಡಿಗೆಗೆ ನೀಡುತ್ತಿದ್ದಾರೆ? ಇದು ವಾಣಿಜ್ಯ ಆಗಿದೆಯೇ? ಅಥವಾ ಉಪೇಂದ್ರ ಅವ್ರಿಗೆ ಹಣದ ಸಮಸ್ಯೆ ನಾ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ ಅದೇನೇ ಇರಲಿ ಉಪೇಂದ್ರ ಅವ್ರು ಯಾವಾಗಲು ವಿಭಿನ್ನ ಅನ್ನೋದಕ್ಕೆ ಅವ್ರು ಶುರು ಮಾಡಿರುವ ಈ ಉದ್ಯಮವೇ ಸಾಕ್ಷಿ. ಉಪ್ಪಿ ಐಡಿಯಾ ಅಂತೂ ಬಹಳ ಚೆನ್ನಾಗಿದೆ. ಖಾಲಿ ಇರುವ ಫಾರ್ಮ್ ಹೌಸ್ ಬಾಡಿಗೆಗೆ ನೀಡುವುದು ಒಳ್ಳೆಯ ಕೆಲ್ಸವೇ ಅಲ್ವಾ?

ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9972245888) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ಶ್ರೀನಿವಾಸನ್” (ತಂತ್ರಿ) 9972245888

ಇದನ್ನೂ ಓದಿ: ಎರಡನೇ ಮಗುವಿನ ತಂದೆಯಾದ ನಟ ವಿಜಯ್ ಸೂರ್ಯ; ಮಗು ಹುಟ್ಟಿದ್ದು ಅಯ್ತು.. ನಮಕಾರಣವೂ ಮುಗಿತು!ಹೆಸರೇನು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram