Vijay Suriya: ಕಿರುತೆರೆಯ ಚಾಕ್‌ಲೇಟ್ ಹೀರೋ ವಿಜಯ್ ಸೂರ್ಯ ಅವರ ಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಕ್ರೇಜಿ ಲೋಕ, ಇಷ್ಟಕಾಮ್ಯ, ಸಾ, ಕದ್ದುಮುಚ್ಚಿ, ಗಾಳಿಪಟ 2 ಸಿನಿಮಾಗಳಲ್ಲಿ ಹೀರೋ ಆಗಿ ವಿಜಯ್ ನಟಿಸಿದ್ದಾರೆ. ಜೊತೆಗೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಜಯ್ ಸೂರ್ಯ ಇದೀಗ ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಹೌದು ಅಗ್ನಿಸಾಕ್ಷಿ ಹಾಗೂ ನಮ್ಮ ಲಚ್ಚಿ ಸೀರಿಯಲ್ ಹೀರೋ ವಿಜಯ್ ಸೂರ್ಯ ಅವರು ಮತ್ತೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಇನ್ನು ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ವಿಜಯ್ ಸೂರ್ಯ ಸದ್ಯ ನಮ್ಮ ಲಚ್ಚಿ ಮತ್ತು ತೆಲುಗಿನ ಕೃಷ್ಣಮ್ಮ ಕಲ್ಪಿಂಡಿ ಸೀರಿಯಲ್‌ನಲ್ಲಿ ಹೀರೋ ಆಗಿ ಮಿಂಚ್ತಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಅಂತಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ವಿಜಯ್ ಸೂರ್ಯ ಅವರು ಕನ್ನಡ ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆಯ ಸೀರಿಯಲ್‌ನಲ್ಲೂ ಆಕ್ಟೀವ್ ಆಗಿದ್ದಾರೆ.
ಇನ್ನು ಈಗಾಗಲೇ ಸೋಹನ್ ಎಂಬ ಮಗನಿರುವ ವಿಜಯ್ ಸೂರ್ಯ ಹಾಗೂ ಚೈತ್ರಾ ಶ್ರೀನಿವಾಸ್ ದಂಪತಿ ಈಗ ಎರಡನೇ ಬಾರಿಗೆ ಗಂಡು ಮಗುವಿಗೆ ತಂದೆ – ತಾಯಿಗಳಾಗಿದ್ದಾರೆ. ಹೌದು ವಿಜಯ್ ಸೂರ್ಯ ಪತ್ನಿ ಚೈತ್ರಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಟಿವಿ ವೀಕ್ಷಕರ ಮನೆ, ಮನಗಳನ್ನು ತಲುಪಿದ ನಟ ವಿಜಯ್ ಸೂರ್ಯ ಸದ್ಯ ಮತ್ತೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ನಮ್ಮ ಲಚ್ಚಿ ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ವಿಜಯ್ ಸೂರ್ಯ ಇದೇ ಸಮಯಕ್ಕೆ ತೆಲುಗು ಕಿರುತೆರೆಯಲ್ಲಿಯೂ ಸಹ ನಿರತರಾಗಿದ್ದಾರೆ. ಹೀಗೆ ಶೂಟಿಂಗ್ ನಲ್ಲಿ ನಟ ಬ್ಯುಸಿ ಇರುವಾಗಲೇ 2ನೇ ಮಗುವಿನ ಜನನವಾಗಿದ್ದು, ಇದೀಗ ಶೂಟಿಂಗ್ ಇಂದ ಬ್ರೇಕ್ ತೆಗೆದುಕೊಂಡಿರುವ ವಿಜಯ್ ಸೂರ್ಯ ಮುದ್ದು ಮಕ್ಕಳ ಮುಖ ನೋಡ್ತಾ ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ, ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ..
ವಿಜಯ್ ಸೂರ್ಯ ಅವರ ಎರಡನೇ ಮಗನ ಹೆಸರೇನು
ಇನ್ನು ವಿಜಯ್ ಸೂರ್ಯ(Vijay Suriya) ಹಾಗೂ ಚೈತ್ರಾ ಶೀನಿವಾಸ್ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಅಮ್ಮ ತೋರಿಸಿದ ಹುಡುಗಿಯನ್ನೇ ವಿಜಯ್ ವರಿಸಿದ್ರು. ಹೌದು 2019ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತನ್ನ ಅಮ್ಮನ ಆಸೆಯಂತೆ ಸಾಫ್ಟ್‌ವೇರ್ ಇಂಜಿನಿಯರ್ ಚೈತ್ರಾ ಅವರನ್ನ ವಿಜಯ್ ಮದುವೆಯಾದರು. ನಂತರ 2020ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡರು. ಈಗ ಜೂನ್ 2ರಂದು ಎರಡನೇ ಗಂಡು ಮಗುವನ್ನ ಬರಮಾಡಿಕೊಂಡಿದ್ದಾರೆ. ಹೌದು ಕಳೆದ ತಿಂಗಳು ಜೂನ್‌ನಲ್ಲಿ ಎರಡನೇ ಮಗುವಿನ ಆಗಮನವಾಗಿದೆ. ಇನ್ನು 2020ರ ಫೆಬ್ರವರಿ 14ರಂದು ವಿಜಯ್ ಸೂರ್ಯ, ಚೈತ್ರಾ ಶ್ರೀನಿವಾಸ್ ಅವರು ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. ಆ ಮಗುವಿಗೆ ಸೋಹನ್ ಎಂದು ಹೆಸರು ಇಟ್ಟಿದ್ದರು. ಹೌದು ಮೊದಲ ಮಗನಿಗೆ ಸೋಹನ್ ಎಂದು ಹೆಸರಿತ್ತಿರುವ ಈ ಜೋಡಿ ಎರಡನೇ ಪುತ್ರನಿಗೆ ಕಾರ್ತಿಕೇಯ ಸೂರ್ಯ ಅಂತ ನಾಮಕರಣ ಮಾಡಿದ್ದಾರೆ. ಒಟ್ನಲ್ಲಿ ವಿಜಯ್ ಸೂರ್ಯ ಅವ್ರ ಮನೆಯಲ್ಲಿ 2ನೇ ಮುದ್ದು ಮಗನ ಆಗಮನದಿಂದ ಸಂಭ್ರಮ ಮನೆ ಮಾಡಿದೆ. ಇನ್ನು ಎರಡನೇ ಮಗು ಹುಟ್ಟಿದ ಸಂದರ್ಭದಲ್ಲಿ ವಿಜಯ್, ಹೈದರಾಬಾದ್ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದರು. ಸದ್ಯ ಈಗ ಬೆಂಗಳೂರಿಗೆ ವಾಪಾಸ್ ಆಗಿದ್ದು, ಮೊದಲ ಮಗನ ಜೊತೆಗಿದ್ದಾರೆ. ಇನ್ನು ವಿಜಯ್ ಸೂರ್ಯ ಪತ್ನಿ ಚೈತ್ರಾ ಎರಡನೇ ಮಗು ಕಾರ್ತಿಕೇಯ ಜೊತೆಗೆ ತವರು ಮನೆಯಲ್ಲಿ ಬಾಣಂತಿ ಆರೈಕೆಯಲ್ಲಿದ್ದಾರೆ.
ಮಗ ಹುಟ್ಟಿದಾಗ ಚೈತ್ರ ಜೊತೆ ಇರೋಕಾಗಿಲ್ಲ.
ಹೌದು ತಾವು 2ನೇ ಬಾರಿಗೆ ತಂದೆಯಾಗಿರುವ ಖುಷಿಯ ವಿಚಾರವನ್ನ ಸ್ವತಃ ವಿಜಯ್ ಸೂರ್ಯ ಅವ್ರೆ ಮಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈಗಲೇ 2ನೇ ಮಗುವಿನ ಆಗಮನದ ಬಗ್ಗೆ ಹೇಳೋದು ಬೇಡ ಯಾವುದಾದ್ರೂ ಒಂದು ದಿನಾಂಕವನ್ನ ನಿಗಧಿಪಡಿಸಿ ಅಧಿಕೃತವಾಗಿ ಹೇಳೋಣ ಅಂದುಕೊಂಡಿದ್ವಿ ಆದ್ರೆ ವಿಷಯ ಬೇಗ ರಿವಿಲ್ ಅಗೋಯ್ತು. ಹೌದು ನಾನು 2ನೇ ಮಗುವಿನ ತಂದೆಯಾಗಿದ್ದೀನಿ, ನಮಗೆ ಗಂಡು ಮಗು ಜನಿಸಿದೆ, ಅವನಿಗೆ ಕಾರ್ತಿಕೆಯ ಸೂರ್ಯ ಅಂತ ಹೆಸರಿಟ್ಟಿದ್ದಿವಿ, ಇನ್ನು ನನ್ನ ಎರಡನೇ ಮಗ ಜನಿಸಿದ ಸಂದರ್ಭದಲ್ಲಿ ನಾನು ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ಇದ್ದೆ, ಆ ಸಮಯದಲ್ಲಿ ನನ್ನ ಸಹೋದರ ನನಗೆ ಕರೆ ಮಾಡಿ ಚೈತ್ರಾಗೆ ಸಣ್ಣ ಚೆಕಪ್ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದ, ಬಳಿಕ ಹದಿನೈದು ನಿಮಿಷಗಳ ನಂತರ ಮತ್ತೊಂದು ಕರೆ ಬಂತು.
ಆಗ ಚೈತ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಅಂತ ತಿಳಿಸಿದ್ರು. ಆ ಸಂದರ್ಭದಲ್ಲಿ ನಾನು ಆಕೆಯ ಜತೆ ಇರಬೇಕಿತ್ತು ಅನಿಸಿತು, ಆದರೆ ಅನಿರೀಕ್ಷಿತವಾಗಿ ನಡೆದದ್ದರಿಂದ ನಾನು ಅಲ್ಲಿ ಇರಲಾಗಲಿಲ್ಲವಲ್ಲ ಎಂಬ ಬೇಸರವಿದೆ ಅಂತ ವಿಜಯ್ ಸೂರ್ಯ ಹೇಳಿಕೊಂಡಿದ್ದು, ಇನ್ನು ಜೂನ್ 2ರಂದೇ ನಮಗೆ ಮಗ ಹುಟ್ಟಿದ್ದಾನೆ ಅಂತ ಹೇಳೋಳಿಕೊಂಡಿದ್ದಾರೆ. ಹೌದು ಎರಡನೇ ಮಗುವಿನ ಬಗ್ಗೆ ವಿಜಯ್ ಸೂರ್ಯ ತಿಂಗಳ ಬಳಿಕ ಮಾಹಿತಿ ನೀಡಿದ್ದು, ಕೆಲ ಸಮಯ ಕಳೆದ ಬಳಿಕ ಆತನ ಜನನದ ವಿಷಯವನ್ನು ಅಧಿಕೃತವಾಗಿ ಘೋಷಿಸೋಣ ಅಂತ ತೀರ್ಮಾನಿಸಿದ್ದೆವು ಅಂತಲೂ ವಿಜಯ್ ಸೂರ್ಯ ಮಾತನಾಡಿದ್ದಾರೆ. ಒಟ್ಟಿನಲ್ಲಿ ಈ ಸಂಸಾರಕ್ಕೆ ಒಳ್ಳೆಯದಾಗ್ಲಿ, ಎರಡು ಕಂದಮ್ಮಗಳ ಜೊತೆ ವಿಜಯ್ ಮತ್ತು ಚೈತ್ರ ಜೀವನ ಹಸನಾಗಲಿ ಅಂತ ಶುಭಾ ಆರೈಸೋಣ.
ಇದನ್ನೂ ಓದಿ: ಮುರಿದುಬಿತ್ತು ಜಗ್ಗಪ್ಪ ಸುಶ್ಮಿತಾ ಸಂಬಂಧ!? ರಚಿತಾ ರಾಮ್ ಅವ್ರು ನಮ್ಮನ್ನ ಒಂದು ಮಾಡಲು ಪ್ರಯತ್ನಿಸಿದ್ರೂ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram