2024ರ ಹೊಸ ವರ್ಷದ ಮೊದಲ ದಿನ ನಟಿ ಅದಿತಿ ಪ್ರಭುದೇವ ಅವರು ಅಮ್ಮನಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ವರ್ಷದ ಮೊದಲ ದಿನವೇ ತಮ್ಮ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ತಿಳಿಸಿದ್ದಾರೆ. ಹೌದು ಕನ್ನಡ ಕಿರುತೆರೆ, ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿರುವ ನಟಿ ಅದಿತಿ ಪ್ರಭುದೇವ ಅವರು ಹೊಸ ವರ್ಷವನ್ನು ತುಂಬ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 2024ಕ್ಕೆ ಅವರು ಹೊಸ ಹುದ್ದೆಗೆ ಬಡ್ತಿ ಕೂಡ ಪಡೆಯಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಖುಷಿಯಾದ ವಿಷಯವನ್ನು ಕೂಡ ಹಂಚಿಕೊಂಡಿದ್ದಾರೆ. ಇನ್ನು ಕನ್ನಡ ನಟಿ ಅದಿತಿ ಪ್ರಭುದೇವ ಅವರು ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಅವರು ಫೋಟೋ ಹಂಚಿಕೊಂಡು 2024ಕ್ಕೆ ನಾನು ಅಮ್ಮ ಆಗ್ತಿದೀನಿ ಅಂತ ಹೇಳಿದ್ದಾರೆ. ಅದಿತಿ ಅವರು ಕೊಟ್ಟ ಗುಡ್ ನ್ಯೂಸ್ ಕೇಳಿ ಅನೇಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಅದಿತಿ ಪ್ರಭುದೇವಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಲ್ದೇ ತಮ್ಮ ನೆಚ್ಚಿನ ನಟಿ ಸಂತಸದ ವಿಚಾರವನ್ನು ಹಂಚಿಕೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್‌ಗೆ ಫ್ಯಾನ್ಸ್ ಖುಷಿ ವ್ಯಕ್ತಪಡಿಸಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ಅಮ್ಮನಾಗುತ್ತಿರುವ ಖುಷಿಯಲ್ಲಿ ನಟಿ ಅದಿತಿ ಪ್ರಭುದೇವ
2022 ನವೆಂಬರ್ 28ರಂದು ಅದಿತಿ ಪ್ರಭುದೇವ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆಯಾಗಿದ್ದರು. ಹಳದಿ, ಸಂಗೀತ, ಮೆಹೆಂದಿ, ಆರತಕ್ಷತೆ, ಮದುವೆ ಎಲ್ಲ ಕಾರ್ಯಕ್ರಮಗಳು ಅದ್ದೂರಿಯಾಗಿ, ಸಾಂಪ್ರದಾಯಿಕವಾಗಿ ನಡೆದಿತ್ತು. ಮದುವೆಗೂ ಮುನ್ನ ಅವರು ಸೋಶಿಯಲ್ ಮೀಡಿಯಾದಲ್ಲಿ ತಾವು ಪ್ರೀತಿ ಮಾಡುತ್ತಿರುವ ವಿಷಯವನ್ನು ರಿವೀಲ್ ಮಾಡಿದ್ದರು. ಹೌದು ಅದಾದ ಬಳಿಕ ಕೊಡಗಿನ ಕಾಫಿ ಬೆಳೆಗಾರ ಯಶಸ್ ಪಟ್ಲ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಅದ್ಧೂರಿಯಾಗಿ ಹಸೆಮಣೆ ಏರಿದ್ರು. ಮದುವೆಯಾದ 1 ವರ್ಷಗಳ ಬಳಿಕ ಈ ಜೋಡಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಯಶಸ್ ಪಟ್ಲ ಅವರು ಉದ್ಯಮಿ ಆಗಿದ್ದು, ಚಿಕ್ಕಮಗಳೂರಿನಲ್ಲಿ ಅವರಿಗೆ ಸೇರಿರುವ ಕಾಫಿ ತೋಟ ಇದೆ.ಆಗಾಗ ಪತಿ ಬಗ್ಗೆ ಮನ ಬಿಚ್ಚಿ ಮಾತಾಡುವ ಅದಿತಿ ಪತಿ ಬಗ್ಗೆ ಬಹಳ ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಹೌದು ನಾನು ಎಲ್ಲೇ ಹೋದರೂ ಅಲ್ಲಿ ಜನರು ಸೆಲ್ಫಿಗೆ ಮುಗಿಬೀಳ್ತಾರೆ. ಆ ಟೈಮ್‌ನಲ್ಲಿ ಯಶಸ್ ನನ್ನ ಕಾಪಾಡ್ತಾರೆ. ಎಷ್ಟೋ ಜನರಿಗೆ ನನ್ನ ಜೊತೆ ಅವರೇ ಫೋಟೋ ತೆಗೆದುಕೊಟ್ಟಿದ್ದಾರೆ. ಇದು ಪ್ರಾಕ್ಟಿಕಲ್ ಅಂತ ಅವರೇ ಹೇಳೋದುಂಟು, ನಾನು ನಟಿಸಲು ಕೂಡ ಅವರಿಗೆ ಸಮಸ್ಯೆ ಇಲ್ಲ. ಈ ರೀತಿ ಗುಣ ಇರುವ ಹುಡುಗನನ್ನು ಮದುವೆ ಆಗಲು ನಾನು ಪುಣ್ಯ ಮಾಡಿದ್ದೆ. ನನ್ನ ಸಿನಿಮಾವೊಂದನ್ನು ಅವರೇ ನಿರ್ಮಾಣ ಮಾಡಬಹುದು ಅಂತಲೂ ಹೇಳಿಕೊಂಡಿದ್ದಾರೆ. ಇಗೆ ಒಬ್ಬರಿಗೊಬ್ಬರು ಖುಷಿಯಿಂದ ನೆಮ್ಮದಿಯಾಗಿ ಜೀವನ ಸಾಗಿಸುಟ್ಟಿರೋ ಇಬ್ಬರು ಮೂವರಾಗುತ್ತಿದ್ದೂ ಬಹಳ ಹರ್ಷ ವ್ಯಕ್ತಪಡಿಸುವ ಮೂಲಕ ಈ ವಿಚಾರವನ್ನ ಅದಿತಿ ಹಂಚಿಕೊಂಡಿದ್ದಾರೆ.
ಇನ್ನು ಸದ್ಯ ಈಗ ಅದಿತಿ ಪ್ರಭುದೇವ ಅವರು ಪತಿ ಯಶಸ್ ಪಟ್ಲ ಜೊತೆಗೆ ವಿಶೇಷವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಪತಿಯೊಂದಿಗೆ ಹ್ಯಾಪಿಯಾಗಿರುವ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಸಂಭ್ರಮವನ್ನು ರಿವೀಲ್ ಮಾಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ ‘ಅಮ್ಮ’, ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ‘ಅಮ್ಮ’, ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ‘ಅಮ್ಮ’, 2024 ಕ್ಕೆ ನಾನು ‘ಅಮ್ಮ’ ಅಂತ ಅದಿತಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಅದಿತಿ ಫೋಟೋಶೂಟ್ ಸಂದರ್ಭ ವೈಟ್ ಡ್ರೆಸ್ ಧರಿಸಿಕೊಂಡಿದ್ದು, ಅವರ ಪತಿ ಬ್ಲೂ ಜೀನ್ಸ್ ಹಾಗೂ ವೈಟ್ ಟೀ ಶರ್ಟ್ ಧರಿಸಿದ್ದಾರೆ. ಅವರ ಪತಿಯ ತೋಳನ್ನು ಹಿಡಿದುಕೊಂಡು ನಸು ನಗುತ್ತಾ ನಟಿ ಹೆಜ್ಜೆ ಹಾಕುವುದು ಫೋಟೋದಲ್ಲಿ ಸೆರೆಯಾಗಿದೆ. ಅಲ್ದೇ ಈ ಜೋಡಿ ತಮ್ಮ ಮುದ್ದಾದ ನಾಯಿ ಮರಿಯನ್ನು ಜೊತೆಗೆ ಕೂರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಎಲ್ಲ ಫೋಟೋಗಳು ವೈರಲ್ ಆಗ್ತಿದ್ದು ಪ್ರತಿಯೊಬ್ಬರೂ ಕೂಡ ಶುಭಾಶಯಗಳು ಆರೈಸುತ್ತಿದ್ದಾರೆ.
View this post on Instagram
ಇದನ್ನೂ ಓದಿ: ಕಾಟೇರ 3ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್; ಮೂರು ದಿನಕ್ಕೆ ಗಳಿಸಿದ್ದೆಷ್ಟು ಕಾಟೇರ