ಸ್ಯಾಂಡಲ್ವುಡ್ ನಟಿ ಅನು ಪ್ರಭಾಕರ್ 2016ರಲ್ಲಿ ನಟ ರಘು ಮುಖರ್ಜಿ ಜೊತೆ ಎರಡನೇ ಮದುವೆಯಾದ ವಿಷಯ ಸದ್ಯ ಎಲ್ಲರಿಗೂ ಗೊತ್ತಿರೋ ವಿಚಾರ. ಇದಕ್ಕೂ ಮೊದಲು ಅನುಪ್ರಭಾಕರ್ ಹಿರಿಯ ನಟಿ ಜಯಂತಿ ಪುತ್ರ ಕೃಷ್ಣಕುಮಾರ್ ಅವ್ರನ್ನ ಮದುವೆಯಾಗಿದ್ದರು. ಬಳಿಕ ಇಬ್ಬರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದು ದೂರ ದೂರ ಆಗಿದ್ದರು. ಇಬ್ಬರಿಗೂ ಸರಿ ಹೊಂದದ ಕಾರಣ ಇಬ್ಬರು ಕೂತು ಮಾತನಾಡಿ ನಂತರ ದೂರವಾದ್ರೂ ನಂತರ ಅನು ಪ್ರಭಾಕರ್ ನಟ ರಘು ಮುಖರ್ಜಿಯನ್ನು ಪ್ರೀತಿಸಿ ವಿವಾಹ ಆದರು. ಇವ್ರಿಗೆ ನಂದನ ಅನ್ನೋ ಮುದ್ದಾದ ಹೆಣ್ಣು ಮಗಳಿದ್ದಾಳೆ. ಹೌದು ಸ್ಯಾಂಡಲ್ ವುಡ್ ನಟಿ ಅನು ಪ್ರಭಾಕರ್ ಸದ್ಯ ಸಿನಿಮಾ ಜೊತೆಗೆ ಮಗಳ ಜೊತೆಯೂ ಕಾಲಕಳೆಯುತ್ತಿರುತ್ತಾರೆ.
ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಮಗಳು ನಂದನಾ ಎಷ್ಟು ಮುದ್ದಾಗಿದ್ದು, ಅಷ್ಟೇ ಕ್ಯೂಟ್ ಕ್ಯೂಟ್ ಆಗಿ ಮಾತನಾಡುತ್ತಾಳೆ. ಇನ್ನು ಅನು ಪ್ರಭಾಕರ್ ಆಗಾಗ ಮಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಸ್ಯಾಂಡಲ್ವುಡ್ ಸ್ಟಾರ್ ಕಿಡ್ಸ್ ಐರಾ ಯಶ್, ಯಥರ್ವ್, ಜೂ. ಚಿರು ಹೇಗೋ ಹಾಗೆ ನಂದನಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್. ಹೌದು ಆಗಾಗ ನಂದನಾಳ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇಂದು ಈ ಪೋರಿಗೆ ಹುಟ್ಟಿದ ದಿನದ ಸಂಭ್ರಮ.
ಹೌದು ಅನು ಪ್ರಭಾಕರ್ ಪುತ್ರಿ ನಂದಳಾಗೆ 5 ವರ್ಷ ತುಂಬಿದೆ. ಇನ್ನು ಮುದ್ದು ಮಗಳ ಹುಟ್ಟುಹಬ್ಬವನ್ನು ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಅದ್ದೂರಿಯಾಗಿ ಕುಟುಂಬದ ಸದಸ್ಯರು ಮತ್ತು ನಂದನ ಸ್ನೇಹಿತರ ಜೊತೆ ಆಚರಣೆ ಮಾಡಿದ್ದಾರೆ. ಇನ್ನು ಮಗಳ ಹುಟ್ಟುಹಬ್ಬದ ಫೋಟೋವನ್ನು ಅನು ಪ್ರಭಾಕರ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಮಗಳಿಗೆ ವಿಶ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇನ್ನು ಸುಂದರವಾದ ಕೇಕ್ ಕತ್ತರಿಸುವ ಮೂಲಕ ನಂದನಾ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ.
ಕೇಕ್ ಕತ್ತರಿಸಿ ನಂದನಾ ಕೂಡ ಸಂತಸ ಪಟ್ಟಿದ್ದಾಳೆ. ಇನ್ನು ಮಗಳ ಹುಟ್ಟುಹಬ್ಬದ ಒಂದಿಷ್ಟು ಫೋಟೋಗಳನ್ನು ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಅನು ಪ್ರಭಾಕರ್ ಕುಟುಂಬ, ರಘು ಮುಖರ್ಜಿ ಭಾಗಿಯಾಗಿದೆ. ಅಲ್ದೆ ನಂದನ ಛೋಟಾ ಮೋಟಾ ಫ್ರೆಂಡ್ಸ್ ಕೂಡ ಬಂದು ಸೆಲೆಬ್ರೇಷನ್ ಜೋರಾಗಿ ಮಾಡಿದ್ದಾರೆ. ಹೀಗಾಗಿ ನಂದನ್ ಫುಲ್ ಖುಷಿಯಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಮಗಳ ಪ್ರೆಂಡ್ಸ್ ಜೊತೆಗೆ ಬರ್ತಡೇ ಸೆಲೆಬ್ರೇಷನ್
ಫೋಟೋ ಶೇರ್ ಮಾಡಿಕೊಂಡಿರುವ ಅನುಪ್ರಭಾಕರ್ ‘ನಂದನಾಗೆ 5 ವರ್ಷ, ನಮ್ಮ ಗೊಂಬೆ ಆಲ್ರೆಡಿ ಇನ್ ಫೈವ್, ಅವಳಿಗೆ ಶುಭಾಶಯ ತಿಳಿಸಿ ಆಶೀರ್ವಾದ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅಂತ ಬರೆದು ಕೆಲವೊಂದು ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಬಾರ್ಬಿ ಥೀಮ್ ನಲ್ಲಿ ಬರ್ತಡೇ ಮಾಡಿದ್ದು ಸುಂದರವಾದ ಕೇಕ್ ಮತ್ತು ವಿಶೇಷವಾಗಿ ಬಟ್ಟೆ ಡಿಸೈನ್ ಮಾಡಿಸಿ ಮಗಳನ್ನ ಚೆನ್ನಾಗಿ ಅಲಂಕಾರ ಮಾಡಿ ಅನು ಪ್ರಭಾಕರ್ ಖುಷಿ ಪಟ್ಟಿದ್ದಾರೆ. ಅನು ಪ್ರಭಾಕರ್ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿ ವಿಶ್ ಮಾಡಿದ್ದಾರೆ.
ಮುದ್ದು ನಂದನಾಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇನ್ನು 2018ರಲ್ಲಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಮೊದಲ ಮಗುವಿನ ಪೋಷಕರಾದರು. ಸದ್ಯ ಇಬ್ಬರೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದರು ಮಧ್ಯೆ ಮಧ್ಯೆ ಕುಟುಂಬ ಹಾಗೂ ಮಗಳಿಗೂ ಸಮಯ ಕೊಟ್ಟು ಈ ರೀತಿಯಲ್ಲಿ ಸೆಲೆಬ್ರೇಷನ್ ಮಾಡ್ತಿರುತ್ತಾರೆ. ಅಲ್ದೆ ಸಮಯ ಸಿಕ್ಕಾಗಲೆಲ್ಲ ಮಗಳೋಟ್ಟಿಗೆ ಕಾಲ ಕಳೆಯುತ್ತಾರೆ ಆಗಾಗ ಕೆಲವೊಂದು ಫೋಟೋಗಳನ್ನು ಕೂಡ ಅನು ಪ್ರಭಾಕರ್ ಶೇರ್ ಮಾಡಿಕೊಂಡು ಮಗಳ ಕುರಿತಾಡ ಇಂಟರೆಸ್ಟಿಂಗ್ ವಿಚಾರವನ್ನ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ: ಸ್ಪಂದನಾ ಡೈರಿಯಲ್ಲಿ ಇದ್ದ ಬಹು ದೊಡ್ಡ ಆಸೆ ಏನ್ ಗೊತ್ತಾ? ಸ್ಪಂದನಾ ಡೈರಿಯಲ್ಲಿ ಏನಿತ್ತು ಸಂಬಂಧಿಕರು ಹೇಳಿದ್ದೇನು?
ಇದನ್ನೂ ಓದಿ: ಸ್ಯಾಂಡಲ್ವುಡ್ ಗೆ ಭರ್ಜರಿ ಎಂಟ್ರಿ ಕೊಡ್ತಿದ್ದಾರೆ ಸಾನ್ಯಾ; ಇಂದ್ರಜಿತ್ ಲಂಕೇಶ್ ಪುತ್ರನೊಂದಿಗೆ ಸಾನ್ಯಾ ಪಾದಾರ್ಪಣೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram