ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಶಿತಾ ಚಂದ್ರಪ್ಪ ಅವರು ಬಣ್ಣದ ಲೋಕದಿಂದ ಬಹಳ ದೂರಾನೇ ಉಳಿದಿದ್ದಾರೆ. ಆದ್ರೆ ಕಲಾವಿದರ ಜೊತೆಗಿನ ನಂಟನ್ನ ಮಾತ್ರ ಅಗೆಯೇ ಉಳಿಸಿಕೊಂಡಿದಾರೆ. ಇನ್ನು ನೋಡಲು ರಗಡ್ ಅನ್ಸಿದ್ರು ತುಂಬಾ ಭಾವುಕ ವ್ಯಕ್ತಿ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಹಲವು ವರ್ಷಗಳ ಹಿಂದೆ ಪ್ರಸಾರವಾದ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಿದ್ದ ಇವ್ರು, ಮೊದಲ ಬಾರಿಗೆ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಶಾಲಿನಿ ಹೆಸರಿನ ಪಾತ್ರವನ್ನ ನಿರ್ವಹಿಸಿದ್ದರು. ಈ ಧಾರವಾಹಿ ಆಗ ಎಲ್ಲರ ಹಾಟ್ ಫೇವರೆಟ್. ಎಷ್ಟೋ ಹುಡುಗರನಿದ್ದೆ ಕದಿದ್ದ ನಟಿ.
ಇನ್ನು ಇದಲ್ಲದೇ ನೀಲಿ, ಸುಂದರಿ ಎಂಬ ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದರು. ಆ ನಂತರದಲ್ಲಿ ‘ರಾಧಾ ರಮಣ’ ಧಾರಾವಾಹಿಯಲ್ಲಿ ಅವನಿ ಮತ್ತು ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ‘ಸ್ವಯಂವರ’ ಎಂಬ ಚಿತ್ರದಲ್ಲಿ ಆಶಿತಾ ಅವರು ನಟಿಸಿದ್ದರು. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಆಶಿತಾ ಚಂದ್ರಪ್ಪ ಅವರು ಸೋಶಿಯಲ್ ಮೀಡಿಯಾಗೆ ಮಾತ್ರ ಸೀಮಿತವಾದರು. ಸದ್ಯ ನಟನೆಯಿಂದ ದೂರ ಉಳಿದಿರುವ ಇವ್ರು ಕೌಟುಂಬಿಕ ಜೀವನದಲ್ಲಿ ನೆಮ್ಮದಿಯಾಗಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ.
ಇನ್ನು ಕನ್ನಡ ಕಿರುತೆರೆ ಲೋಕದಲ್ಲಿ ಒಂದು ಕಾಲದಲ್ಲಿ ಖ್ಯಾತ ನಟಿಯಾಗಿದ್ದ ಆಶಿತಾ ಚಂದ್ರಪ್ಪ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಬಣ್ಣದ ಲೋಕದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಕೆಲವೇ ಕೆಲವು ಧಾರಾವಾಹಿಗಳಲ್ಲಿ ಆಶಿತಾ ಚಂದ್ರಪ್ಪ ನಟಿಸಿದ್ದರು. ಆದರೂ ಕೂಡ ತಮ್ಮ ನಟನೆಯ ಮೂಲಕವೇ ಅಭಿಮಾನಿಗಳನ್ನು ಗಳಿಸಿದ್ದರು. ಇನ್ನು ಕನ್ನಡದ ಜೊತೆಗೆ ಪರಭಾಷೆಯ ಧಾರಾವಾಹಿಗಳಲ್ಲಿಯೂ ಆಶಿತಾ ನಟಿಸಿ ಮೋಡಿ ಮಾಡಿದ್ದರು. ಆದ್ರೆ ಕಾರಣಾಂತರಗಳಿಂದ ಕಿರುತೆರೆಯಿಂದ ದೂರಾದರು, ಆದರೆ ಸೆಲಬ್ರಿಟಿಗಳೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಆಗಾಗ್ಗೆ ತಮ್ಮ ಕುರಿತಾದ ಕೆಲವೊಂದಷ್ಟು ಇಂಟರ್ಸ್ಟ್ಟಿಂಗ್ ವಿಚಾರಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಈಗಲೂ ಕೂಡ ತಾವು ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ಸರ್ ಭೇಟಿ ಮಾಡಿಸಿ ಎಂದು ವಿಡಿಯೋ ಮಾಡಿದ ಅಭಿಮಾನಿ; ಆಸೆ ಈಡೇರಿಸಿದ ದರ್ಶನ್
ಸಂಭ್ರಮದಿಂದ ಫೋಟೋ ಹಂಚಿಕೊಂಡು ಖುಷಿ ಪಟ್ಟ ಆಶಿತಾ
ಹೌದು ಕಳೆದ ವರ್ಷ ಮಾರ್ಚ್‌ನಲ್ಲಿ ಆಶಿತಾ ಚಂದ್ರಪ್ಪ ಅವರು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ರೋಹನ್ ರಾಘವೇಂದ್ರ ಜೊತೆ ವೈವಾಹಿಕ ಬದುಕು ಆರಂಭಿಸಿದ್ದ ಆಶಿತಾ ಕಿರುತೆರೆ ಲೋಕದಿಂದ ಸಂಪೂರ್ಣ ದೂರವಾದ್ರು. ಇನ್ನು ರೋಹನ್ ಅವರು ಮೂಲತಃ ಚಿಕ್ಕಮಗಳೂರಿನವರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಉದ್ಯಮಿಯಾಗಿದ್ದು, ಸದ್ಯ ದಂಪತಿ ಇಬ್ಬರೂ ಚಿಕ್ಕ ಮಗಳೂರಿನಲ್ಲೇ ನೆಲೆಸಿದ್ದಾರೆ ಎನ್ನಲಾಗ್ತಿದೆ. ಇನ್ನು ರಾಧಾ ರಮಣ’ ಧಾರಾವಾಹಿಯಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಧಾರಾವಾಹಿಯಲ್ಲಿ ನಟಿಸುವಾಗಲೇ ಸ್ವಲ್ಪ ಕಿರಿಕಿರಿ ಮಾಡಿಕೊಂಡು ಆಶಿತಾ ಅವರು ಹೊರ ನಡೆದರು.ಅಲ್ದೇ ನಮ್ಮಂಥವರಿಗೆ ಈ ಇಂಡಸ್ಟ್ರಿ ಅಲ್ಲ ಎಂದು ಆಶಿತಾ ಬಣ್ಣದ ಲೋಕದಿಂದ ದೂರಾದರು. ಅಂದಿನಿಂದ ಇಂದಿನವರೆಗೂ ಮತ್ತೆ ನಟಿಸುವ ಬಗ್ಗೆ ಆಶಿತಾ ಚಂದ್ರಪ್ಪ ಅವರು ಆಸಕ್ತಿ ತೋರಿಸಿಲ್ಲ.
ಹೀಗಾಗಿ ವೈವಾಹಿಕ ಜೀವನದತ್ತ ಗಮನ ಹರಿಸಿರುವ ಆಶಿತಾ ನೆಮ್ಮದಿಯುತವಾಗಿ ಜೀವನ ಸಾಗಿಸುತ್ತಿದ್ದೂ, ಈಗ ಆಶಿತಾ ಮೊದಲ ನಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಕುರಿತು ಕೆಲವೊಂದು ಫೋಟೋಗಳನ್ನ ಹಂಚಿಕೊಂಡು ತಮ್ಮ ಅಭಿಮಾನಿಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ. ಹೌದು ತುಂಬು ಗರ್ಭಿಣಿ ಆಗಿರೋ ಆಶಿತಾ ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನ ಹಂಚಿಕೊಂಡು ಖುಷಿ ಪಟ್ಟಿದ್ದಾರೆ. ಹೌದು ಸೀಮಂತ ಶಾಸ್ತ್ರದಲ್ಲಿ ತೆಗೆದ ಫೋಟೋ ಹಂಚಿಕೊಂಡಿರುವ ನಟಿ ತಂಗಿ ಹಾಗೂ ಅಪ್ಪನಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ತಾಳಿ ಕಟ್ಟುವಾಗ ಮದುವೆ ಇಷ್ಟ ಇಲ್ಲ ಎಂದ ಯುವತಿ! ಕೊನೆಗೆ ಪ್ರೀತಿಸಿದ ಹುಡುಗನ ಜೊತೆ ಹೋದ ಯುವತಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram