Chitral Rangaswamy: ಬಿಗ್ ಬಾಸ್ ವೇದಿಕೆ ಮೇಲೆ ಬಂದು ರಿಜೆಕ್ಟ್ ಆದ ಬಗ್ಗೆ ನಟಿ ಚಿತ್ರಲ್ ಹೇಳಿದ್ದೇನು?

Chitral Rangaswamy: ಬಿಗ್ ಬಾಸ್ ಮನೆಯ ಪ್ರವೇಶದಲ್ಲಿಯೇ ಈ ನಟಿ ರಿಜೆಕ್ಟ್ ಆದ್ರು. ನಿರೀಕ್ಷಿತ ಮಟ್ಟದ ಓಟ್ ಬರಲೇ ಇಲ್ಲ. ಆದರೂ ಈ ನಟಿಯ ನೇಮ್ ಆ್ಯಂಡ್ ಫೇಮ್ ಕುಗ್ಗಿಲ್ಲ. ಹೌದು ಕನ್ನಡದ ನಟಿ ಚಿತ್ರಲ್ ರಂಗಸ್ವಾಮಿ ಹೆಚ್ಚು ವೈರಲ್ ಆಗಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ರೆ ಏನ್ ಕಮಾಲ್ ಮಾಡ್ತಿದ್ರೋ ಏನೋ? ಆದರೆ ಬಿಗ್ ಮನೆ ಪ್ರವೇಶದಲ್ಲಿಯೇ ರಿಜೆಕ್ಟ್ ಆದ ಚಿತ್ರಲ್ ರಂಗಸ್ವಾಮಿ ಸೂಪರ್ ಬಿಡಿ. ಇವರ ಲೈಫ್ ಸ್ಟೋರಿ ಕೇಳಿದರೆ ಎಲ್ಲ ಹೆಣ್ಣುಮಕ್ಕಳಿಗೂ ಒಂದು ಸ್ಪೂರ್ತಿ ಸಿಗುತ್ತದೆ. ಅವ್ರೇ ಹೇಳಿಕೊಂಡಿರುವಂತೆ ಚಿತ್ರಲ್ ರಂಗಸ್ವಾಮಿ ದಪ್ಪ ಆಗಿದ್ದರು. ದೇಹದ ತೂಕ ಇಳಿಸಬೇಕು ಅನ್ನುವ ಉದ್ದೇಶ ಇತ್ತು. ಅದಕ್ಕೇನೆ ಜಿಮ್ ಸೇರಿದ್ರು. ಆದರೂ ಅಷ್ಟು ಸುಲಭ ಏನು ಇರಲಿಲ್ಲ ಬಿಡಿ. ಸ್ಪೋರ್ಟ್ಸ್ ಬ್ರಾ ಹಾಕಿಕೊಂಡು ವರ್ಕೌಟ್ ಮಾಡೋದು ಕಷ್ಟವೇ ಸರಿ. ಅದೇನೋ ಆದರೂ ಚಿತ್ರಲ್ ರಂಗಸ್ವಾಮಿ ಹೆದರಲಿಲ್ಲ ನೋಡಿ. ಅಂದುಕೊಂಡಂತೆ ದೇಹದ ತೂಕ ಇಳಿಸಿಕೊಳ್ತಾ ಹೋದ್ರು. ಆದರೆ ಚಿತ್ರಲ್ ದಿನ ಕಳೆದಂತೆ ಮಸಲ್ ಬೆಳೆಸಿಕೊಂಡ್ರು. ಅದರಿಂದ ಬಾಡಿ ಬಿಲ್ಡಿಂಗ್ ಆಸಕ್ತಿ ಕೂಡ ಮೂಡಿಸಿತ್ತು. ಅದನ್ನೆ ಮುಂದುವರೆಸಿಕೊಂಡು ಬಂದ ಚಿತ್ರಲ್ ರಂಗಸ್ವಾಮಿ ಇದೀಗ ಬಾಡಿ ಬಿಲ್ಡರ್ ಕಮ್ ನಟಿ ಆಗಿರೋದೇ ವಿಶೇಷ ಅನಿಸುತ್ತದೆ. ಚಿತ್ರಲ್ ರಂಗಸ್ವಾಮಿ 2017 ರಲ್ಲಿ ಬಾಡಿ ಬಿಲ್ಡಿಂಗ್ ಆರಂಭಿಸಿದ್ದರು. ರಾಜ್ಯಮಟ್ಟದಲ್ಲಿ ಗೆದ್ದು ಪ್ರಶಸ್ತಿಯನ್ನ ಪಡೆದು ಬೀಗಿದ್ದಾರೆ. ಜೊತೆಗೆ ಚಿತ್ರಲ್ ರಂಗಸ್ವಾಮಿ ಸಿನಿಮಾ ಮತ್ತು ಸೀರಿಯಲ್‌ನಲ್ಲೂ ನಟಿಸಿದ್ದಾರೆ.

WhatsApp Group Join Now
Telegram Group Join Now

ಚಿತ್ರಲ್ ರಂಗಸ್ವಾಮಿ(Chitral Rangaswamy) ಬಾಡಿ ಬಿಲ್ಡಿಂಗ್ ಆರಂಭಿಸೋ ಮೊದಲು, ಡಿಪ್ರೆಶನ್‌ಗೂ ಒಳಗಾಗಿದ್ದರು. ಸಿನಿಮಾಗಳ ಅವಕಾಶ ಇಲ್ದೇ ಸೀರಿಯಲ್ ಕೂಡ ಇಲ್ಲದೇ ಬೇಸರದಲ್ಲಿಯೇ ಖಿನ್ನತೆಗೆ ಒಳಗಾಗಿದ್ದರು. ಆದರೆ ಇದೀಗ ಆ ಸಮಸ್ಯೆ ಏನೂ ಇಲ್ಲ. ಮನಸ್ಸು ಮತ್ತು ದೇಹ ಎರಡನ್ನೂ ಗಟ್ಟಿಯಾಗಿಸಿಕೊಂಡಿದ್ದಾರೆ. ಇನ್ನು ಚಿತ್ರಲ್ ರಂಗಸ್ವಾಮಿ ದೊಡ್ಮನೆಗೆ ಹೋಗುವ ಪ್ರಯತ್ನ ಮಾಡಿದ್ದರು. ದೊಡ್ಮನೆ ಬಾಗಿಲಿಗೂ ಹೋಗಿದ್ದರು. ಆದರೆ ಬಿಗ್ ಮನೆಗೆ ಹೋಗಲು ಬೇಕಿರೋ ಸ್ಕೋರ್ ಸಿಗದ ಕಾರಣ ಹೇಗೆ ಹೋಗಿದ್ದರು ಹಾಗೇನೆ ವಾಪಾಸ್ ಬಂದ್ರು. ಚಿತ್ರಲ್ ರಂಗಸ್ವಾಮಿ ರಂಗಭೂಮಿಯಿಂದಲೇ ಸೀರಿಯಲ್, ಸೀರಿಯಲ್‌ನಿಂದ ಸಿನಿಮಾ, ಸಿನಿಮಾದಿಂದ ಇದೀಗ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದಾರೆ. ಇಂತವರು ರಿಜೆಕ್ಟ್ ಯಾಕಾದ್ರೂ ಅನ್ನೋದು ಎಲ್ಲರಲ್ಲೂ ಇರುವ ಪ್ರಶ್ನೆ.. ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು ಚಿತ್ರಲ್ ಏನ್ ಹೇಳಿದ್ದಾರೆ ಮಾಡೋಣ ಬನ್ನಿ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ರಿಜೆಕ್ಷನ್ ಬಗ್ಗೆ ಲೇಡಿ ಬಾಡಿ ಬಿಲ್ಡರ್ ಚಿತ್ರಲ್ ಹೇಳಿದ್ದೇನು ನೋಡಿ?

ಹೌದು ಬಿಗ್ ಬಾಸ್ ಎಲ್ಲ ಸಿದ್ಧತೆ ಮಾಡಿಕೊಂಡು ಇನ್ನೇನು ಬಿಗ್ ಬಿ ಮನೆ ಪ್ರವೇಶ ಮಾಡಬೇಕು ಅನ್ನೋ ಅಷ್ಟರಲ್ಲಿ ವೋಟಿಂಗ್ ಪೋಲ್ ನಲ್ಲಿ ಕಡಿಮೆ ಅಂಕ ಬಂದಿದ್ರಿಂದ ವೇದಿಕೆಯಿಂದ ಅಗೆಯೇ ವಾಪಸ್ ಬರುತ್ತಾರೆ ಚಿತ್ರಲ್. ಈ ಬಗ್ಗೆ ವೇದಿಕೆಯಲ್ಲಿ ಚಿತ್ರಲ್ ಏನನ್ನು ಮಾತನಾಡಿಲ್ಲ. ವೇದಿಕೆಯಿಂದ ನೇರವಾಗಿ ಹೊರಟಂತಹ ಚಿತ್ರಲ್ ಅವರು ಅನುಭವಿಸಿದಂತಹ ಕಷ್ಟ ಅಷ್ಟಿಷ್ಟಲ್ಲ. ಹೌದು ಕೆಲವೊಂದು ಇಷ್ಟು ಜನರು ಫೋನ್ ಮಾಡಿ ಇಲ್ಲ ನೀವು ಹೋಗಬೇಕಾಗಿತ್ತು ಯಾಕೆ ಇತರ ಆಯ್ತು ನಿಜಕ್ಕೂ ನಮಗೆಲ್ಲ ಬೇಜಾರಾಯ್ತು ಗೊತ್ತಾ ಅಂತೆಲ್ಲ ಕೆಲವೊಂದು ಜನ ಮಾತನಾಡಿದ್ದಾರೆ. ಏನೋ ಒಂದಷ್ಟು ಜನ ನಿಮಗೆ ಅವಕಾಶ ಕೊಡಲಿಲ್ಲ ಅಂತ ನೀವ್ಯಾಕೆ ಬೇಜಾರು ಮಾಡ್ಕೋತೀರಾ ನಿಮ್ಮಂತ ಹೆಣ್ಣುಮಕ್ಕಳನ್ನ ಆ ಮನೆನಲ್ಲಿ ಉಳಿಸಿಕೊಳ್ಳುವ ಯೋಗ್ಯತೆ ಅವರಿಗಿಲ್ಲ ಇದೆಲ್ಲ ಫಿಕ್ಸೆಡ್ ಮ್ಯಾಚ್ ಅಂತ ಹೇಳಿ ಸಮಾಧಾನ ಪಡಸಿದ್ದಾರೆ. ಆದ್ರೆ ಸಂಪೂರ್ಣವಾಗಿ ಎಲ್ಲವನ ಸಿದ್ಧಪಡಿಸಿಕೊಂಡು ಬಿಗ್ ಬಾಸ್ ಮನೆಗೆ ಹೋಗಲು ಚಿತ್ರಲ್ ರೆಡಿಯಾಗಿ ಬಂದಿದ್ದರು. ಆದರೆ ವೇದಿಕೆಯ ಮೇಲೆ ಹತ್ತಿದ ಚಿತ್ರಲ್ ವೇದಿಕೆಯಿಂದ ಮನೆಗೆ ವಾಪಸ್ ಆಗಿದ್ದು ಒಂದು ರೀತಿಯ ದೊಡ್ಡ ನೋವು ಮತ್ತು ಅವಮಾನ ಅಂತಲೇ ಹೇಳಬಹುದು. ರಿಜೆಕ್ಟ್ ಆಗಿದ್ದು ಬೇಜಾರಾಗಿಲ್ಲ ಆದ್ರೆ ದೊಡ್ಡ ವೇದಿಕೆಯಲ್ಲಿ ಈ ರೀತಿಯಾಗಿದ್ದು ನೋವಾಯ್ತು. ಆದ್ರೆ ಜನರಿಗೆ ನನ್ನ ಮೇಲಿರುವ ಪ್ರೀತಿ ನೋಡಿ ಇವಾಗ ಖುಷಿ ಆಗ್ತಿದೆ.

ಅಲ್ದೆ ವಿಟಿ ನೋಡಿದಾಗಂತೂ ನನಗಂತೂ ತುಂಬಾನೇ ಬೇಜಾರ್ ಆಯ್ತು, ಯಾಕಂತ ಅಂದ್ರೆ ನನ್ನ ಸಾಧನೆ ಅದರಲ್ಲಿ ಏನು ಇರಲಿಲ್ಲ ಯಾವುದೋ ಒಂದೆರಡು ಇನ್ಸ್ಟಾಗ್ರಾಮ್ ಪಿಕ್ಸ್ ನ್ನು(Photos) ತೆಗೆದುಕೊಂಡು ಅದನ್ನು ಎಡಿಟ್ ಮಾಡಿ ಹಾಕಿದ್ರು. ನಾನು ಅವರಿಗೆ ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ಕೊಟ್ಟಿದ್ದೆ ಅದನ್ನು ಅವರು ಯಾಕೆ ಬಳಸಿಕೊಂಡಿಲ್ಲ ಅನ್ನೋದು ಕೂಡ ನನಗೆ ಗೊತ್ತಿಲ್ಲ. ಇನ್ನು ರಿಜೆಕ್ಟ್ ಆದೆ ಅಂತ ಬೇಜಾರಿಲ್ಲ ಯಾಕಂದ್ರೆ ಅಲ್ಲಿ ಒಂದು 30 ಜನ ಇದ್ರೂ, ಆ 30 ಜನ ವೋಟಿಂಗ್ ಮಾಡಿ ಅದರಲ್ಲಿ ನಾನು ರಿಜೆಕ್ಟ್ ಆಗಿರೋದು ಅದೇ ಆಪರ್ಚುನಿಟಿ ನ ಇಡೀ ಕರ್ನಾಟಕದ ಜನರಿಗೆ ಕೊಟ್ಟು ಆಗ ನಾನು ರಿಜೆಕ್ಟ್ ಆಗಿದ್ರೆ ಖಂಡಿತ ಬೇಜಾರ್ ಆಗ್ತಾ ಇತ್ತು ಆದ್ರೆ ಸದ್ಯಕ್ಕೆ ಅದ ಆಗಿಲ್ಲ.

ಇನ್ನು ನಾನ್ ರಿಜೆಕ್ಟ್ ಆಗಿರೊ ಆ ಒಂದು ಪ್ರೋಸೆಸ್ ಏನಿದೆ ಅದನ್ನ ಆಯೋಜಕರು ಟೆಲಿಕಾಸ್ಟ್ ಮಾಡ್ತಾರೆ ಅನ್ನೋದು ಕೂಡ ನನಗೆ ಗೊತ್ತಿರಲಿಲ್ಲ ಅವರಿಗೆ ನನ್ ಮೆಸೇಜ್ ಕೂಡ ಹಾಕಿದ್ದೆ ಮಾಡಬೇಡಿ ಅಂತ ಆದರೂ ಕೂಡ ಮಾಡಿದ್ರು ಯಾಕೆ ಅಂತ ಗೊತ್ತಿಲ್ಲ ಒಟ್ಟಿನಲ್ಲಿ ಈಗ ಆಗಿರೋದಕ್ಕೆ ಯಾವುದಕ್ಕೂ ನಾನು ತಲೆಕೆಡಿಸಿಕೊಂಡಿಲ್ಲ ನಾನು ಆರಾಮಾಗಿದ್ದೀನಿ ನನಗೆ ಯಾವುದಕ್ಕೂ ಕೂಡ ಬೇಸರ ಆಗಿಲ್ಲ. ಯಾಕಂದ್ರೆ ಮತ್ತೊಂದು ದೊಡ್ಡ ವೇದಿಕೆ ನಂಗೆ ಸಿಗಬೋದು ಬಟ್ ಈಗ ಐಯಾಮ್ ಓಕೆ ಅಂದಿದ್ದಾರೆ. ಆದ್ರೆ ನನ್ ಥರ ಸ್ಪರ್ಧೆನ ನೀವು ಮಿಸ್ ಮಾಡಿಕೊಂದ್ರಿ ಬಿಗ್ ಬಾಸ್ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಕಿಚ್ಚನ ಜೊತೆ ಮೊದಲ ವಾರದ ಪಂಚಾಯಿತಿ; ತುಕಾಲಿ ಸಂತುಗೆ ಬಿಸಿ ಮುಟ್ಟಿಸಿದ ಕಿಚ್ಚ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram