ಸ್ನೇಹಿತರೆ ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿರುವ ಧಾರಾವಾಹಿಗಳಲ್ಲಿ ಒಂದು ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿ. ಈ ಧಾರಾವಾಹಿ ಧೈರ್ಯಶಾಲಿ ಹುಡುಗಿಯ ಕಥೆಯಾಗಿದೆ. ಸತ್ಯ ಎಂದರೆ ಹುಡುಗ ಅಲ್ಲ, ಮಾಸ್ ಹುಡುಗಿ ಎಂದು ತೋರಿಸಲಾಗಿದೆ. ಪ್ರತಿದಿನ ಟ್ವಿಸ್ಟ್ ಗಳ ಜೊತೆ ಅದ್ಭುತವಾಗಿ ಮೂಡಿ ಬರುತ್ತಾ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ ಸತ್ಯ ಧಾರಾವಾಹಿ. ಇನ್ನು ಈ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವುದು ಸತ್ಯ ಪಾತ್ರದಲ್ಲಿ ನಟಿಸುತ್ತಿರುವ ನಟಿ ಗೌತಮಿ ಜಾಧವ್. ಹೌದು ನಟಿ ಗೌತಮಿ ಜಾಧವ್ ಸತ್ಯ ಧಾರಾವಾಹಿಯಲ್ಲಿ ನಟಿಸುವ ಮೊದಲು ನಾಗಪಂಚಮಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಹಾಗು ಕೆಲವು ಕನ್ನಡ ಮತ್ತು ಒಂದೆರಡು ತುಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಗೌತಮಿ ಜಾಧವ್ ಅವರಿಗೆ 62 ಸಾವಿರ ಫಾಲೋವರ್ಸ್ ಗಳಿದ್ದಾರೆ. ಚಿತ್ರೀಕರಣ ಸಂದರ್ಭದ ಫೋಟೋ ಮತ್ತು ವಿಡಿಯೋಗಳು, ನಿಜ ಜೀವನದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ ಗೌತಮಿ.
ಸದ್ಯ ಸೀರಿಯಲ್ ನಲ್ಲಿ ಯಾವುದೇ ಹುಡುಗನಿಗೆ ಕಮ್ಮಿ ಇಲ್ಲ ಎನ್ನುವ ಹಾಗೆ ರಫ್ ಅಂಡ್ ಟಫ್ ಆಗಿರುವ ಸತ್ಯ ನಿಜ ಜೀವನದಲ್ಲಿ ಅದಕ್ಕೆ ಆಪೋಸಿಟ್ ಆಗಿದ್ದಾರೆ. ನಿಜ ಜೀವನದಲ್ಲಿ ಸಾಂಪ್ರದಾಯಿಕವಾಗಿಯೂ ಇರುತ್ತಾರೆ. ಸತ್ಯ ಸೀರಿಯಲ್ ನಲ್ಲಿ ಬಾಯ್ ಕಟ್ ನಲ್ಲಿ ಕಾಣಿಸಿಕೊಳ್ಳುವ ಗೌತಮಿ ಅವರನ್ನು ನೋಡಿ, ನಿಜ ಜೀವನದಲ್ಲಿ ಹಾಗೆ ಇರುತ್ತಾರೆ ಅನ್ಕೊಂಡ್ರೆ ಖಂಡಿತ ಅದು ಸುಳ್ಳು ನಿಜ ಜೀವನದಲ್ಲಿ ನಟಿ ಗೌತಮಿ(Actress Gouthami Jadav) ಬೇರೆಯದೇ ರೀತಿ ಇದ್ದಾರೆ. ಉದ್ದ ಕೂದಲು, ಸೀರೆ ಧರಿಸಿ ಬಹಳ ಸುಂದರವಾಗಿ ಕಾಣಿಸುತ್ತಿರುತ್ತಾರೆ. ಸದ್ಯ ಅವ್ರ ಉದ್ದ ಕೂದಲಿಗೆ ಸಂಬಂಧಪಟ್ಟಂತೆ ಇದೀಗ ಹೊಸದೊಂದು ಹೆಜ್ಜೆ ಹಾಕಿದ್ದಾರೆ. ಹೌದು ಟಿವಿಯಲ್ಲಿ ‘ಸತ್ಯ’ ಸೀರಿಯಲ್ ಮೂಲಕ ವೀಕ್ಷಕರಿಗೆ ಮೋಡಿ ಮಾಡುತ್ತಿರುವ ಗೌತಮಿ, ತಮ್ಮದಲ್ಲದ ಕ್ಷೇತ್ರಕ್ಕೆ ಕಾಲಿಟ್ಟು ಸತ್ವಪರೀಕ್ಷೆಗೆ ಮುಂದಾಗಿದ್ದಾರೆ. ಅದು ಕೂಡ ಕೂದಲಿಗೆ ಸಂಬಂಧ ಪಟ್ಟ ಹೊಸ ಬಿಸಿನೆಸ್.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಗೌತಮಿ ಜಾಧವ್ ಅವರು ಲಾಂಚ್ ಮಾಡಿದ ಹೊಸ ಪ್ರಾಡಕ್ಟ್ ಯಾವುದು?
ಹೌದು, ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಹಲವು ನಟಿಯರಲ್ಲಿ ಒಬ್ಬರಾದ ಗೌತಮಿ ಜಾಧವ್(Actress Gouthami Jadav), ಆರ್ಗ್ಯಾನಿಕ್(Organic) ಇನ್‌ಗ್ರೀಡಿಯಂಟ್ಸ್ ಬಳಕೆಗೆ ಒತ್ತುಕೊಟ್ಟಿದ್ದು, ತಮ್ಮದೇ ಹೊಸ ಹೇರ್ ಆಯಿಲ್ ಒಂದನ್ನು ತಯಾರಿಸಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದೀಗ ಸ್ವಂತ ಹೇರ್ ಆಯಿಲ್ ತಯಾರಿಸಿ ಮಾರುಕಟ್ಟೆ ಪ್ರವೇಶಿಸುವ ಮೂಲಕ ಇನ್ನೊಂದು ದಾರಿಯಲ್ಲೂ ಸದ್ದು ಮಾಡತೊಡಗಿದ್ದಾರೆ. ಭವಿಷ್ಯದಲ್ಲಿ ಗೌತಮಿ ಬ್ರಾಂಡ್ ಹೇರ್ ಆಯಿಲ್ ಅದೆಷ್ಟು ಸಂಚಲನ ಸೃಷ್ಟಿ ಮಾಡಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯುವ ನಂಬಿಕೆಯಿಂದ ಹೊಸ ಕೆಲ್ಸಕ್ಕೆ ಕೈ ಹಾಕಿದ್ದಾರೆ. ಹೌದು ಸತ್ಯ ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ಗೌತಮಿ ಜಾಧವ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಹೀಗಾಗಿ ಅವರು ತಮ್ಮ ಹೊಸ ಹೇರ್ ಆಯಿಲ್ ಬ್ರಾಂಡ್ ‘ವನ ತೈಲಂ’ದ ಪರಿಚಯವನ್ನು ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕವೇ ಮಾಡಿದ್ದಾರೆ. ಪರಿಸರ ಪ್ರೇಮಿಯಾಗಿರುವ ಗೌತಮಿ ತಮ್ಮ ಕೂದಲೆಣ್ಣೆ ಬಗ್ಗೆ ‘ಇದು ಯಾವುದೇ ರಾಸಾಯನಿಕಗಳು ಹಾಗೂ ಕೃತಕ ಬಣ್ಣಗಳನ್ನು ಒಳಗೊಂಡಿಲ್ಲ. ಸೊಂಪಾದ, ದಟ್ಟವಾದ ಮತ್ತು ಕಪ್ಪಾದ ಕೂದಲನ್ನು ಪಡೆಯಲು ನಾನು ಮಾಡಿರುವ ಈ ಹೇರ್ ಆಯಿಲ್ ಬಳಸಿ’ ಎಂದು ಕರೆ ಕೊಟ್ಟಿದ್ದಾರೆ.
View this post on Instagram
ಹೌದು ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಹಲವು ನಟಿಯರಲ್ಲಿ ಒಬ್ಬರಾದ ಗೌತಮಿ ಜಾಧವ್, ಇದೀಗ ಹೊಸದೊಂದು ಹೆಜ್ಜೆ ಹಾಕಿದ್ದಾರೆ. ಇದೀಗ ಅವರು ತಯಾರಿಸುತ್ತಿರುವ ಎಣ್ಣೆಯ ಬಗ್ಗೆ ಅವರೇ ಮಾತಾಡಿದ್ದು ಎಣ್ಣೆ ತಯಾರಿಕೆ ಶುರುವಾದ ರೀತಿ ಬಗ್ಗೆ ಸ್ವತಃ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಸಂಬಂಧಿಕರೋಬ್ಬರಿಗೆ ತಾವು ತಯಾರಿಸಿದ ಎಣ್ಣೆಯನ್ನ ಕೊಟ್ಟು ಅವ್ರಿಗೆ ಒಳ್ಳೆ ರಿಸಲ್ಟ್ ಬಂದಮೇಲೆ ಅದನ್ನ ವೃತ್ತಿಯಾಗಿ ಬಳಸಿಕೊಳ್ಳುವ ಆಲೋಚನೆ ಬಂದ ಗೌತಮಿ ಅವ್ರು ಹೊಸ ಕೆಲ್ಸಕ್ಕೆ ಕೈ ಹಾಕಿದ್ದಾರೆ. ಅಲ್ದೇ ಎಣ್ಣೆಯನ್ನ ಯಾವ ರೀತಿಯಾಗಿ ತಯಾರಿಸುತ್ತಾರೆ ಅದರಿಂದ ಆಗುವ ಉಪಯೋಗಗಳ ಬಗ್ಗೆ ಗೌತಮಿ ಅವ್ರು ಹೇಳಿಕೊಂಡಿದ್ದಾರೆ. ಅಲ್ದೇ 20ನಂಬರ್ ಸೆಲ್ ಆಗಿರುವ ಬಗ್ಗೆಯೂ ಕೂಡ ಮಾತನಾಡಿದ್ದು 20 ಎಣ್ಣೆ ಬಾಟಲ್ ಸೇಲ್ ಆಗಿದ್ದು ನಂಗ್ ಖುಷಿ ಕೊಟ್ಟಿದೆ. ಅಷ್ಟು ಮಾರಾಟ ಆಗೋದು ಆರಂಭಕ್ಕೆ ತುಂಬಾ ಖುಷಿ ಕೊಡುತ್ತೆ.
ಇದು ಇದೆ ರೀತಿ ಮುಂದುವರೆಯುತ್ತೆ ಅನ್ನೋ ನಂಬಿಕೆ ಇದೆ ಅಂತ ಗೌತಮಿ ಹೇಳಿಕೊಂಡಿದ್ದಾರೆ. ಅದ್ರೆ ಸತ್ಯ ಸೀರಿಯಲ್ ಬಿಡುವ ಬಗ್ಗೆಯಾಗಲಿ ಅಥವಾ ಸೀರಿಯಲ್ ನಲ್ಲಿ ಮುಂದುವರೆಯುವ ಬಗ್ಗೆಯಾಗಲಿ ಯಾವುದೇ ವಿಚಾರವನ್ನ ಮಾತಾಡಿಲ್ಲ. ಹೀಗಾಗಿ ಸತ್ಯ ಅಲಿಯಾಸ್ ಗೌತಮಿ ಸೀರಿಯಲ್ ಜೊತೆಗೆ ಉದ್ಯಮದಲ್ಲೂ ಮುಂದುವರೆಯುತ್ತಾರೆ, ಒಳ್ಳೆ ಉದ್ಯಮಿ ಆಗ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ನಾನು ಇಲ್ಲಿಗೆ ಆಟ ಆಡಲು ಬಂದವನು ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ; ಕಾವೇರಿ ವಿಚಾರವಾಗಿ ಧೋನಿ ಹೇಳಿದ್ದೇನು ಗೊತ್ತಾ?
ಇದನ್ನೂ ಓದಿ: ಇಂದು ರಾಜ್ಯದಲ್ಲಿ ತರಕಾರಿ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಹಸಿರು ಮೆಣಸಿನಕಾಯಿ ದರ ಎಷ್ಟಿದೆ ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram