ಸ್ನೇಹಿತರೆ 80ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡ ನಟಿ ಮಹಾಲಕ್ಷ್ಮಿ ಸುಂದರ ಪ್ರತಿಭೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಲ್ಲಿಯೇ ಈ ನಟಿ ಬಣ್ಣದ ಲೋಕದಿಂದ ದೂರ ಉಳಿದುಬಿಟ್ಟರು. ಹೌದು ಬರೋಬ್ಬರಿ 30ವರ್ಷಗಳ ನಂತರ ಇದೀಗ ಇದೇ ಮೊದಲ ಬಾರಿಗೆ ಕನ್ನಡದ ಧಾರಾವಾಹಿಯೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅತೀ ಶೀಘ್ರದಲ್ಲಿಯೇ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹೌದು ಈ ಹಿಂದೆ ನಟಿ ಮಹಾಲಕ್ಷ್ಮಿ ಬಗ್ಗೆ ನೂರೆಂಟು ಕಥೆಗಳು ಹುಟ್ಟಿಕೊಂಡಿದ್ದವು. ಆಧ್ಯಾತ್ಮದ ಕಡೆಗೆ ವಾಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಇಂತಹದ್ದೇ ಒಂದಿಷ್ಟು ಸುದ್ದಿ ಹರಿದಾಡಿತ್ತು. ಅದಕ್ಕೆ ಕಾರಣನು ಇಟ್ಟು ಮಹಾಲಕ್ಷ್ಮಿ ಕೂಡ ಸುಮಾರು 30 ವರ್ಷಗಳ ಕಾಲ ಬಣ್ಣದ ಪ್ರಪಂಚದಿಂದಲೇ ದೂರ ಉಳಿದಿದ್ದರು. ಹೀಗಾಗಿ ನೂರೆಂಟು ಪ್ರಶ್ನೆಗಳು ಹುಟ್ಟಿಕೊಂಡಿದ್ವು. ಆದ್ರೆ ಎರಡು ವರ್ಷಗಳ ಹಿಂದಷ್ಟೇ ಬಣ್ಣದ ಲೋಕಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಧಾರಾವಾಹಿಯೇ ಕಾವೇರಿ ಕನ್ನಡ ಮೀಡಿಯಂ.
ಇನ್ನು 80 ದಶಕದ ಟಾಪ್ ನಟಿಯರ ಪೈಕಿ ಮಹಾಲಕ್ಷ್ಮಿ ಕೂಡ ಒಬ್ಬರು. ಅಂಬಿಕಾ, ಗೀತಾ, ಮಾಧವಿ ಇವರ ಕಾಲಘಟ್ಟದಲ್ಲಿ ಬಂದು ಜನಪ್ರಿಯರಾದ ಇವ್ರು ಸಕತ್ ಫೇಮಸ್ ಆದ್ರೂ ಅಷ್ಟೇ ಮುದ್ದಾಗಿಯೂ ಇದ್ರು. ಇನ್ನು ಇವ್ರ ‘ಬಡ್ಡಿ ಬಂಗಾರಮ್ಮ’, ‘ಸ್ವಾಭಿಮಾನ’, ‘ಮದುವೆ ಮಾಡು ತಮಾಷೆ ನೋಡು’ ಈ ಎಲ್ಲ ಸಿನಿಮಾಗಳು ಸೂಪರ್‌ಹಿಟ್ ಆಗಿದ್ವು. ಇನ್ನು ನಟಿ ಮಹಾಲಕ್ಷ್ಮಿ ಮೂಲತಹ ತಮಿಳುನಾಡಿನವರಾಗಿದ್ದರೂ, ಕನ್ನಡದಲ್ಲಿಯೇ ಹೆಚ್ಚು ಅವಕಾಶ ಸಿಕ್ಕಿತ್ತು. ಅದಕ್ಕೆ ಇಂದಿಗೂ ಕನ್ನಡ ಚಿತ್ರರಂಗ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ.
ಕನ್ನಡ ಚಿತ್ರರಂಗದ ಅಂದಿನ ಬಹುತೇಕ ಎಲ್ಲಾ ದಿಗ್ಗಜರೊಂದಿಗೆ ಮಹಾಲಕ್ಷ್ಮಿ ನಟಿಸಿ ಗೆದ್ದಿದ್ದಾರೆ. ಆದರೆ, ಸಿನಿಮಾದಿಂದ ದಿಢೀರನೇ ಯಾಕೆ ದೂರ ಆದರು ಅನ್ನೋದೇ ಯಕ್ಷ ಪ್ರಶ್ನೆಯಾಗಿ ಉಳಿದ್ರು ಕೂಡ ಮತ್ತೆ 2ವರ್ಷಗಳ ಹಿಂದೆ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಹೌದು 30 ವರ್ಷಗಳ ಕಾಲ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಮಹಾಲಕ್ಷ್ಮೀ 2021 ರಲ್ಲಿ ‘ಟಿಆರ್‌ಪಿ ರಾಮಾ’ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದರು. ಆ ಮೂಲಕ ಚಿತ್ರರಂಗದಲ್ಲಿ ಮಹಾಲಕ್ಷ್ಮೀ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಇದೀಗ ಕಿರುತೆರೆಯಲ್ಲಿ ಮಿನುಗಲು ಮಹಾಲಕ್ಷ್ಮೀ ಸಜ್ಜಾಗಿದ್ದಾರೆ.
ಇದನ್ನೂ ಓದಿ: ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಮಗಳಿಗೆ ನಾಮಕರಣ ಮಾಡಿದ ಕಿರುತೆರೆ ನಟಿ ದಿವ್ಯ ಶ್ರೀಧರ್
ಕಾವೇರಿ ಕನ್ನಡ ಮೀಡಿಯಂ ಧಾರವಾಹಿ ಮೂಲಕ ಬಣ್ಣ ಹಚ್ಚಿದ ನಟಿ
ಹೌದು ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಮಹಾಲಕ್ಷ್ಮೀ. ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ ಪ್ರಸಾರ ಆಗುತ್ತಿದೆ. ಅದ್ರಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಕಂಪು ಸೂಸುವ ಹೊಸ ಧಾರವಾಹಿ ಕಾವೇರಿ ಕನ್ನಡ ಮೀಡಿಯಂನಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಇಡೀ ಮನೆಯ ಮುಖ್ಯಸ್ಥೆ ಅಜ್ಜಿಯ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಇವರದ್ದು ಮೋಸ್ಟ್ ಪವರ್‌ಫುಲ್ ಪಾತ್ರ. ಎಲ್ಲರನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಪಾತ್ರ. ಹಾಗಂತ ಕೆಟ್ಟ ಅಜ್ಜಿಯಲ್ಲ. ಒಳ್ಳೆಯವರೇ, ಆದರೆ, ಶಿಸ್ತಿನ ಅಜ್ಜಿ. ಇನ್ನು ಧಾರವಾಹಿ ನಾಯಕಿ ಕಾವೇರಿಗೆ ಸದಾ ಬೆಂಬಲವಾಗಿ ನಿಲ್ಲುವ ಅಜ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಕಾವೇರಿ ಕನ್ನಡ ಮೀಡಿಯಂ’ ಹೆಸರೇ ಹೇಳೋ ಹಾಗೇ ಇದು ಕನ್ನಡದ ಕಂಪು ತುಂಬಿರೋ ಸೀರಿಯಲ್. ಕನ್ನಡ ಬರೀ ಭಾಷೆ ಅಲ್ಲ ಬದುಕು ಅಂತ ನಂಬಿರೋ ಊರಿನಲ್ಲಿ ಹುಟ್ಟಿರೋ ಕಾವೇರಿ ಅನ್ನೋ ಹೆಣ್ಣು ಮಗಳ ಕಹಾನಿ. ವೃತ್ತಿಯಲ್ಲಿ ಶಿಕ್ಷಕಿಯಾಗಿರೋ ಕಾವೇರಿ, ಅಪ್ಪ ಕಟ್ಟಿರೋ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವುದಕ್ಕೆ, ಅದರ ಅಭಿವೃದ್ದಿಗೆ ಹೊರಡುವ ಕಾವೇರಿ ಕಥೆಯಿದು. ಇನ್ನು ಕಾವೇರಿ ಪಾತ್ರದಲ್ಲಿ ಪ್ರಿಯ ಜೆ ಆಚಾರ್ ನಟಿಸುತ್ತಿದ್ದಾರೆ. ನಾಯಕನಾಗಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ. 30 ವರ್ಷಗಳ ಬಳಿಕ ನಟನೆಯ ಮೂಲಕ ಮಹಾಲಕ್ಷ್ಮಿಯವರನ್ನು ಕನ್ನಡ ಕಿರುತೆರೆಗೆ ಸ್ಟಾರ್ ಸುವರ್ಣ ವಾಹಿನಿ ಪರಿಚಯಿಸುತ್ತಿದೆ. ಇನ್ನು ಧಾರವಾಹಿಯೂ ಇದೆ ಆಗಸ್ಟ್ 28ರಿಂದ ರಾತ್ರಿ 7.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣಲಿದೆ. ಇಷ್ಟು ದಿನ ಮಹಾಲಕ್ಷ್ಮೀ ಅವರನ್ನ ಮಿಸ್ ಮಾಡಿಕೊಂಡಿದ್ದವರು ಇನ್ಮುಂದೆ ಅವ್ರನ್ನ ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ: ವರಮಹಾಲಕ್ಷ್ಮಿ ಕೂರಿಸುವ ಅದೃಷ್ಟದ ಸಮಯ; ಕಳಶ ಪ್ರತಿಷ್ಠಾಪನೆ ಮಾಡೋದು ಹೇಗೆ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram