Namratha Gowda: ಕಿರುತೆರೆ ನಟಿ ನಮ್ರತಾ ಗೌಡ ಹೊಸ ಮನೆ ಗೃಹ ಪ್ರವೇಶ; ಪೂಜೆಯಲ್ಲಿ ಭಾಗಿಯಾದ ಸಹ ಕಲಾವಿದರು

Namratha Gowda: ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಹೌದು ಕಿರುತೆರೆಯ ಉದಯೋನ್ಮುಖ ನಟಿ ನಮ್ರತಾ ಗೌಡ ಕಿರುತೆರೆಯಲ್ಲಿ ಅಭಿನಯಿಸುತ್ತಾ ಅನೇಕ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ್ರು. ಹೌದು ತಮ್ಮ ಉತ್ತಮ ನಟನೆಯಿಂದ ಮನೆ ಮಾತಾಗಿದ್ದಾರೆ ನಟಿ ನಮ್ರತಾ. ಇನ್ನು ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರದ ಮೂಲಕ ನಮ್ರತಾ ಎಲ್ಲರ ಗಮನ ಸೆಳೆದಿದ್ದರು.

WhatsApp Group Join Now
Telegram Group Join Now

ಹೌದು ನಾಗಣಿ 2 ಜನಪ್ರಿಯ ಸೀರಿಯಲ್ ಆಗಿದ್ದು ಮಾತ್ರವಲ್ಲದೆ ನಟಿ ನಮ್ರತಾಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇನ್ನು ಮೊಟ್ಟ ಮೊದಲಿಗೆ, 2011 ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ನಮ್ರತಾ ಗೌಡ ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಈ ಧಾರವಾಹಿಯಲ್ಲಿ ಹಿಮಾ ಪಾತ್ರದಲ್ಲಿ ಸಖತ್ ಫೇಮಸ್ ಆದ್ರು. ನಂತರ ರಿಯಾಲಿಟಿ ಶೋ ಕಡೆ ಮುಖ ಮಾಡಿ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ಜಿ ಕನ್ನಡ ವಾಹಿನಿಯಲ್ಲಿ ಆರಂಭವಾದ ನಾಗಿಣಿ 2 ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡ್ರು.

ಇನ್ನು ಇದಕ್ಕೂ ಮೊದಲು ಗಟ್ಟಿಮೇಳ ನಟ ರಕ್ಷ್ ಜೊತೆ ‘ಪುಟ್ಟಗೌರಿ ಮದುವೆ’ಯಲ್ಲಿ ನಮ್ರತಾ ಗೌಡ ನಟಿಸಿದ್ದಾರೆ. ಇನ್ನು ಬಹಳ ಜನಮನ್ನಣೆ ಗಳಿಸಿದ ನಾಗಿಣಿ 2ನಲ್ಲಿ ನಟಿ ಐಶ್ವರ್ಯಾ ಸಿಂಧೋಗಿ ಜೊತೆ ಕಾಣಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ನಮ್ರತಾ ಗೌಡ ಆಗಾಗ ಫೋಟೋಶೂಟ್​ಗಳನ್ನು ಹಂಚಿಕೊಳ್ತಾರೆ.ಇದೀಗ ನಟಿಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಒಂದು ಬಂದಿದ್ದು ಏನದು ಸಿಹಿ ಸುದ್ದಿ ನೋಡೋಣ ಬನ್ನಿ.

ಇದನ್ನೂ ಓದಿ: ಅಣ್ಣನ ಸಮಾಧಿ ಮುಂದೆ ಪ್ರೇರಣಾ ಸೀಮಂತ ಮಾಡಿದ ಧ್ರುವ ಸರ್ಜಾ; ಚಿರು ಫೋಟೋ ನೋಡಿ ದೊಡ್ಡಪ್ಪ ಎಂದ ಧ್ರುವ ಮಗಳು

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಟ್ರಡಿಷನಲ್ ಲುಕ್ ನಲ್ಲಿ ಮಿಂಚಿದ ನಾಗಿಣಿ ಚೆಲುವೆ

ಹೌದು ನಾಗಿಣಿ 2, ಪುಟ್ಟಗೌರಿ ಮದುವೆ, ಧಾರಾವಾಹಿ ನಟಿ ನಮ್ರತಾ ಗೌಡ(Namratha Gowda) ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ನಮ್ರತಾ ಅವ್ರ ನೂತನ ಮನೆಯ ಗೃಹ ಪ್ರವೇಶ ಬಹಳ ಅದ್ದೂರಿಯಾಗಿ ನಡೆದಿದೆ. ಇನ್ನು ಅನೇಕ ಕಿರುತೆರೆ ತಾರೆಯರು ಈ ಸಮಾರಂಭಕ್ಕೆ ಹಾಜರಿ ಹಾಕಿ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ನಮ್ರತಾಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ನಮ್ರತಾ ಅವ್ರ ನೂತನ ಗೃಹ ಪ್ರವೇಶಕ್ಕೆ ನಟಿ ನೇಹಾ ಗೌಡ, ಅನುಪಮಾ ಗೌಡ, ಕವಿತಾ ಗೌಡ, ಕಿಶನ್ ಬಿಳಗಲಿ, ಯಶಸ್ವಿನಿ ಕೆ ಸ್ವಾಮಿ ಸೇರಿದಂತೆ ಇನ್ನು ಸಾಕಷ್ಟು ಕಿರುತಾರೆ ಕಲಾವಿದರು ಸೇರಿದಂತೆ ಮುಂತಾದವರು ಆಗಮಿಸಿ, ನಮ್ರತಾ ಜೊತೆಗೆ ನಿಂತು ಫೋಟೋ ಕ್ಲಿಕಿಸಿಕೊಂಡಿದ್ದು, ನಮ್ರತಾಗೆ ವಿಶ್ ಮಾಡಿ, ಶುಭಾಶಯಗಳನ್ನ ತಿಳಿಸಿದ್ದಾರೆ. ಅಲ್ದೇ ನಮ್ರತಾ ಅವರ ಮೇಲೆ ತುಂಬ ಹೆಮ್ಮೆಯಿದೆ ಎಂದು ಅನುಪಮಾ ಗೌಡ ಹೇಳಿಕೊಂಡಿದ್ದು, ಅವ್ರು ಕೂಡ ಸಾಕಷ್ಟು ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಅನೇಕರು ನಮ್ರತಾ ಅವರಿಗೆ ಶೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದು, ನಮ್ರತಾ ಅವ್ರ ಹೊಸ ಆರಂಭಕ್ಕೆ ಅವ್ರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಮ್ರತಾ ನಾಗಿಣಿ 2 ಸೀರಿಯಲ್ ನಂತರ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಹೌದು ನಮ್ರತಾ ಗೌಡ ಅವರು ಸದ್ಯ ಯಾವುದೇ ಧಾರಾವಾಹಿ ಅಥವಾ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದ್ರೂ ಕೂಡಾ ಕಿರುತೆರೆ ಕಲಾವಿದರ ಜೊತೆಗಿನ ನಂಟನ್ನ ಆಗೇ ಉಳಿಸಿಕೊಂಡಿದ್ದಾರೆ. ಹೌದು ಕೆಲ ದಿನಗಳ ಹಿಂದೆ ನಾಗಿಣಿ 2ಸೀರಿಯಲ್ ನಲ್ಲಿ ನಟಿಸಿದ್ದ ನಟಿ ಐಶ್ವರ್ಯಾ ಸಿಂಧೋಗಿ ಜೊತೆಗೆ ವಿದೇಶಿ ಟ್ರಿಪ್ ಮಾಡಿದ್ದರು. ಆ ವೇಳೆ ಅವರು ಬಿಕಿನಿ ಧರಿಸಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಭಾರೀ ಸಂಚಲನ ಮೂಡಿಸಿತ್ತು. ಅಲ್ದೇ ಸಾಕಷ್ಟು ಟ್ರೋಲ್ ಗಳಾಗಿ ನಟಿಯನ್ನ ಕಮೆಂಟ್ಸ್ ನಲ್ಲಿಯೇ ಕೆಲವರು ತರಾಟೆಗೆ ತೆಗೆದುಕೊಂಡಿದ್ರು. ಇದೀಗ ನಟಿಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ನೋಡಿ ಸದ್ಯ ಅಭಿಮಾನಿಗಳಂತು ಖುಷಿ ಪಟ್ಟಿದ್ದು, ಇದೀಗ ನಮ್ರತಾ ಅವ್ರನ್ನ ಟ್ರಡಿಷನಲ್ ಲುಕ್ ನಲ್ಲಿ ನೋಡಿ ಎಲ್ಲರು ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ: 35ರ ಮಹಿಳೆ ಜೊತೆ 75ರ ವೃದ್ಧನ ಮದುವೆ; ಮಡದಿಯನ್ನ ಕಳೆದುಕೊಂಡಿದ್ದ ವೃದ್ಧನ ಕೈ ಹಿಡಿದ ಮಹಿಳೆ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram