Rashmika Mandanna: ಕನ್ನಡದ ಕಿರಿಕ್ ಪಾರ್ಟಿ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿ, ನಂತರ ಗುಡ್‌ಬೈ ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಮಿಷನ್ ಮಜ್ನು ಅವರ ಎರಡನೇ ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಗ್ರಾಂಡ್ ಎಂಟ್ರಿ ಕೊಟ್ರು. ಇದೀಗ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಅಮಿತಾಭ್ ಬಚ್ಚನ್, ಸಿದ್ಧಾರ್ಥ್ ಮಲ್ಹೋತ್ರ ಮತ್ತು ರಣಬೀರ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಬೆಡಗಿ ರಶ್ಮಿಕಾ ಮಂದಣ್ಣ, ಇದೀಗ ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗ್ತಿದೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಸದ್ಯ ದೇಶದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು.
ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಿಂದ ನ್ಯಾಷನಲ್ ಕ್ರಶ್ ಎಂಬ ಖ್ಯಾತಿ ಪಡೆದಿದ್ದಾರೆ. ರಶ್ಮಿಕಾ ಅವರು ಪ್ರಸ್ತುತ ಎರಡು ದೊಡ್ಡ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಜೊತೆ ಅನಿಮಲ್ ಮತ್ತು ಅಲ್ಲು ಅರ್ಜುನ್ ಜೊತೆ ಪುಷ್ಪಾ 2 ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಈ ಎರಡೂ ಚಿತ್ರಗಳು ಸೂಪರ್ ಹೈ ಬಜೆಟ್‌ನಲ್ಲಿ ತಯಾರಾಗುತ್ತಿವೆ. ಇನ್ನು ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಇವ್ರ ಸಂಭಾವನೆಯು ಕೂಡ ದೊಡ್ಡ ಮಟ್ಟದಲ್ಲಿಯೇ ಇದೆ. ಹೀಗಾಗಿ ರಶ್ಮಿಕಾ ಮಂದಣ್ಣ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಂಭಾವನೆ ಕಡಿಮೆ ಅಂತ ಹೇಳಿ ನಮ್ಮ ಚಿತ್ರರಂಗವನ್ನ ತೊರೆದು ಹಣಕ್ಕೆ ಆಸೆ ಬಿದಿದ್ದಕ್ಕೆ ಇದೀಗ ನಂಬಿದವರಿಂದಲೇ ಸರಿಯಾಗಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಹೌದು ಅತೀ ಹೆಚ್ಚಿನ ಸಂಭಾವನೆ ಪಡೆಯೋದ್ರಾ ಜೊತೆಗೆ ತನ್ನ ಬೇಡಿಕೆ ಹೆಚ್ಚಿಸಿಕೊಂಡಿರುವ ಈ ನಟಿ ಇದೀಗ ಕೋಟಿಯ ಅಸುಪಾಸಿನಲ್ಲಿ ಟೋಪಿ ಬಿದ್ದಿದೆ.
ಎಷ್ಟೇ ಬ್ಯುಸಿಯಾಗಿದ್ರು ಕೂಡ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳ ಜೊತೆ ರಶ್ಮಿಕಾ ಮಂದಣ್ಣ ಸಂಪರ್ಕದಲ್ಲಿರುತ್ತಾರೆ. ಹೌದು ರಶ್ಮಿಕಾ ತಮ್ಮ ಏರ್‌ಪೋರ್ಟ್ ಲುಕ್, ಟ್ರಿಪ್ ಸೇರಿದಂತೆ ಸಾಕಷ್ಟು ಕ್ರೇಜಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಈ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದು ಸಹಜ ಬಿಡಿ ಆದರೆ ಇದೀಗ ರಶ್ಮಿಕಾ ಮಂದಣ್ಣ ಉಂಡೆ ನಾಮ ಹಾಕಿಸಿಕೊಂಡು ಮತ್ತೆ ದುರದೃಷ್ಟಕರ ಘಟನೆಯೊಂದರಿಂದ ರಶ್ಮಿಕಾ ಸುದ್ದಿಯಲ್ಲಿದ್ದಾರೆ. ಹೌದು ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಸಂಭಾವನೆ ಕೂಡಾ ದುಬಾರಿಯೇ. ಹೀಗಾಗಿ ರಶ್ಮಿಕಾ ದುಬಾರಿ ಸಂಭಾವನೆ ಪಡೆಯುವ ನಟಿಯರ ಲಿಸ್ಟ್ ನಲ್ಲಿದ್ದಾರೆ. ಇದೆಲ್ಲಾ ಹಳೆ ವಿಷಯ ಬಿಡಿ ಆದ್ರಿಗ ಹೊಸ ವಿಷಯ ಏನ್ ಗೊತ್ತಾ, ರಶ್ಮಿಕಾಗೆ ಅವರ ಮ್ಯಾನೇಜರ್ ಸುಮಾರು 80 ಲಕ್ಷ ರೂ.ಗಳಷ್ಟು ವಂಚನೆ ಮಾಡಿದ್ದರಿಬ ಸುದ್ದಿ ಸಾಕಷ್ಟು ಸೌಂಡ್ ಮಾಡ್ತಿದೆ.
ಇದನ್ನೂ ಓದಿ: ಕನ್ನಡದ ಖ್ಯಾತ ಕಿರುತೆರೆ ನಟಿಯೊಂದಿಗೆ ಯೂಟ್ಯೂಬರ್ ಚಂದನ್ ಗೌಡ ಎಂಗೇಜ್ಮೆಂಟ್
ಇನ್ನು ಆಗಬೇಕಿತ್ತು ಇಂಥವರಿಗೆ ಅಂತ ಒಂದಷ್ಟು ಜನ ಶಾಪ..
ಹೌದು ರಶ್ಮಿಕಾರ ಜಾಹೀರಾತು ಒಪ್ಪಂದಗಳು, ಸಿನಿಮಾಗಳ ಸಂಭಾವನೆಗಳನ್ನು ನಿಭಾಯಿಸುತ್ತಿದ್ದ ಮ್ಯಾನೇಜರ್ ರಶ್ಮಿಕಾಗೇ ತಿಳಿಯದಂತೆ ಅವರಿಗೆ ನೀಡಬೇಕಾಗಿದ್ದ 80 ಲಕ್ಷ ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ ಅಂತ ಹೇಳಲಾಗುತ್ತಿದ್ದೂ, ತನ್ನ ಆಪ್ತನ ಅಂದ್ರೆ ತಾನು ನಂಬಿದ ಮ್ಯಾನೇಜರ್ ಮಾಡಿದ ವಂಚನೆ ತಿಳಿಯುತ್ತಿದ್ದಂತೇ ರಶ್ಮಿಕಾ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಅಂತಲೂ ಹೇಳಲಾಗ್ತಿದೆ. ಇನ್ನು ಇದೀಗ ಹೊಸ ಮ್ಯಾನೇಜರ್ ನೇಮಕ ಮಾಡಿಕೊಂಡಿರುವ ರಶ್ಮಿಕಾ ಹಳೆಯ ಮ್ಯಾನೇಜರ್ ನಿಂದ ಪಂಗನಾಮ ಹಾಕಿಸಿಕೊಂಡಿದ್ದಾರೆ. ಹೌದು ಬಹಳ ದಿನಗಳಿಂದ ರಶ್ಮಿಕಾ ಜೊತೆ ಕೆಲಸ ಮಾಡ್ತಿದ್ದ ಈ ಮ್ಯಾನೇಜರ್ ಅವರಿಗೆ ತಿಳಿಯದಂತೆ ಹಣ ನುಂಗಿದ್ದಾನೆ ಎನ್ನಲಾಗ್ತಿಡೇ ಅಷ್ಟೇ ಆದರೆ ಈ ವಿಚಾರವಾಗಿ ರಶ್ಮಿಕಾ ಮಂದಣ್ಣ ಇದುವರೆಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟನೆ ನೀಡಿಲ್ಲ.
ಇನ್ನು ಈ ವಿಚಾರವಾಗಿ ರಶ್ಮಿಕಾ ಮಂದಣ್ಣ(Rashmika Mandanna) ಯಾವುದೇ ಸ್ಪಷ್ಟನೆಯನ್ನು ಕೊಟ್ಟಿಲ್ಲ. ಅಥವಾ ಈ ವಿಚಾರದಲ್ಲಿ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೂ ಕೂಡ ಒಂದಷ್ಟು ಜನ ರಶ್ಮಿಕ ಮಂದಣ್ಣನಿಗೆ ಇದಲ್ಲ ಆಗಬೇಕಿತ್ತು, ನಮ್ಮ ಕನ್ನಡ ಇಂಡಸ್ಟ್ರಿಯನ್ನ ತೊರೆದು ಹೋಗಿದ್ದ ರಶ್ಮಿಕಗೆ ಆ ಮ್ಯಾನೇಜರ್ ಸರಿಯಾಗಿ ಮಾಡಿದ್ದಾನೆ, ಇನ್ನೊಂದಷ್ಟು ಹಣವನ್ನ ಪೀಕಬೇಕಾಗಿತ್ತು ಇವಳಿಗೆ ಆಗ ಬುದ್ಧಿ ಬರುತ್ತಿತ್ತು ಅಂತೆಲ್ಲ ಒಂದಷ್ಟು ಜನ ಕಮೆಂಟ್ ಮಾಡ್ತಿದ್ರೆ, ಇನ್ನೊಂದಷ್ಟು ಜನ ಅಂದ್ರೆ ರಶ್ಮಿಕ ಮಂದಣ್ಣ ಅವರ ಅಭಿಮಾನಿಗಳು ಅಯ್ಯೋ ಆ ರೀತಿ ಆಗೋಯ್ತಾ? ನೀವು ಸ್ವಲ್ಪ ಹುಷಾರಾಗಿರಬಹುದಾಗಿತ್ತಲ್ವಾ? ಈ ರೀತಿ ಮೋಸ ಮಾಡೋರು ಯಾವಾಗಲೂ ಇದ್ದೇ ಇರ್ತಾರೆ, ಆದ್ರೆ ಜೊತೆಗಿದ್ದವರೆ ನಿಮಗೆ ಮೋಸ ಮಾಡಿದ್ದು ತುಂಬಾ ನೋವಾಗಿದೆ ಅಂತ ತಮ್ಮ ಅಭಿಮಾನಿಗಳು ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ. ಆದ್ರೂ ಕೂಡ ನಮ್ಮ ಕನ್ನಡ ಇಂಡಸ್ಟ್ರಿಯನ್ನ ಬಿಟ್ಟು ಹೋಗಿದ್ದ ರಶ್ಮಿಕಾಗೆ ಹೀಗೆ ಆಗಬೇಕು ಅಂತ ಒಂದಷ್ಟು ಜನ ಹೇಳ್ತಿದ್ದಾರೆ. ಕಾರಣ ಕನ್ನಡ ಇಂಡಸ್ಟ್ರಿ ರಶ್ಮಿಕಾ ಮಂದಣ್ಣಗೆ ಒಂದು ರೀತಿಯ ಫ್ಲ್ಯಾಟ್ ಫಾರ್ಮ್ ಇದ್ದಂತೆ. ಹೀಗಾಗಿ ಹಣದ ಆಸೆಗೆ ನಮ್ಮ ಕನ್ನಡ ಇಂಡಸ್ಟ್ರಿಯನ್ನು ಬಿಟ್ಟು ಹೋದ ರಶ್ಮಿಕಾ ಮಂದಣ್ಣನಿಗೆ ಸರಿಯಾಗಿ ಆಗಿದೆ ಅಂತ ಕೆಲವರು ಖುಷಿಪಡುತ್ತಾ ಇದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ಡಾ. ಬ್ರೋ ಜೊತೆ ಕನ್ನಡದ ನಟರು.. ಅಚಾನಕ್ಕಾಗಿ ಎಲ್ಲರನ್ನು ಒಟ್ಟಿಗೆ ನೋಡಿ ಸೈಕಾದೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram