ಚಿತ್ರರಂಗವೆ ಆಗೇ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತೆ. ಸಿನಿರಂಗದಲ್ಲಿ ಅಸ್ಥಿತ್ವ ಉಳಿಸಿಕೊಳ್ಳಬೇಕು ಅಂದ್ರೆ ಮಾನಸಿಕವಾಗಿ ಜೊತೆಗೆ ದೈಹಿಕವಾಗಿಯೂ ಬಹಳ ಫಿಟ್ ಆಗಿರಬೇಕು. ಹೌದು ಸಿನಿಮಾ ಮಂದಿ ಫಿಟ್ ಇದ್ದಷ್ಟು ಮತ್ತು ದೇಹ ಸೌಂದರ್ಯ ಕಾಪಾಡಿಕೊಂಡಷ್ಟು ಚಿತ್ರರಂಗದಲ್ಲಿ ಬಾಳಿಕೆ ಹೆಚ್ಚು, ಅಂದ್ರೆ ಜಾಸ್ತಿ ಸಮಯ ಉಳಿದುಕೊಳ್ಳಬಹುದು ಅಂತ ಹೇಳಬಹುದು. ಹಾಗಾಗಿ ಡಯಟ್, ಫಿಟ್‌ನೆಸ್, ಅದೂ ಇದೂ ಎಂದೆಲ್ಲ ಸಾಕಷ್ಟು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುತ್ತಾರೆ. ದೇಹ ತೂಕ ಹೆಚ್ಚಳ, ಕಡಿಮೆ ಮಾಡಿಕೊಂಡ ಸಾಕಷ್ಟು ಸೆಲೆಬ್ರಿಟಿಗಳು ಉದಾಹರಣೆ ರೀತಿ ನಮ್ಮ ಕಣ್ಣಿಗೆ ಕಾಣಿಸುತ್ತಾರೆ. ಇದೀಗ ಕಿಚ್ಚನ ಬೆಡಗಿ ನಟಿ ರೇಖಾ ಸಹ ಹತ್ತಾರು ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ಹೌದು ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದು, ಕಿರುತೆರೆಯ ಹಲವು ಶೋಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ನಟಿ ರೇಖಾ ವೇದವ್ಯಾಸ್. ಆಗಿಯೇ ಇದೀಗ ತೆಲುಗಿನ ಶೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ಕಾಣಿಸಿಕೊಂಡಿದ್ದೇ ತಡ, ಒಂದು ಕ್ಷಣ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಅವರ ಅವತಾರ ನೋಡಿದ ಮರುಕ್ಷಣವೇ, ರೇಖಾ ಆರೋಗ್ಯವಾಗಿದ್ದಾರಾ? ಎಂಬ ಅನುಮಾನ ಮೂಡುತ್ತದೆ. ಅಂದರೆ, ದೇಹದ ತೂಕವನ್ನು ವಿಪರೀತವಾಗಿ ಕಡಿತಗೊಳಿಸಿದ್ದಾರೆ ರೇಖಾ. ಅದ್ಯಾವ ಮಟ್ಟಿಗೆ ಎಂದರೆ, ನೋಡಿದ ತಕ್ಷಣ ಇವರು ರೇಖಾನಾ? ಎಂಬಷ್ಟರ ಮಟ್ಟಿಗೆ ಬದಲಾಗಿದ್ದಾರೆ. ಹಾಗಾದ್ರೆ ರೇಖಾ ಅವ್ರಿಗೆ ಏನಾಯ್ತು, ಇಷ್ಟರ ಮಟ್ಟಿಗೆ ತೂಕ ಇಳಿಸಿಕೊಂಡಿರೋದ್ರ ಗುಟ್ಟೇನು ಎಲ್ಲವನ್ನ ನೋಡೋಣ ಬನ್ನಿ.
ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್‌ವುಡ್‌ನಲ್ಲಿ ಹುಚ್ಚ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದವರು ನಟಿ ರೇಖಾ ವೇದವ್ಯಾಸ್. ಕಿಚ್ಚ ಸುದೀಪ್ ಅವರ ಜತೆಗೆ ನಾಯಕಿಯಾಗಿ ನಟಿಸುವ ಮೂಲಕ ಮೊದಲ ಸಿನಿಮಾದಲ್ಲಿಯೇ ಎಲ್ಲರಿಂದ ಮೆಚ್ಚುಗೆ ಜತೆಗೆ ಹಲವು ಸಿನಿಮಾಗಳಿಗೆ ಅವಕಾಶಗಳನ್ನೂ ಪಡೆದುಕೊಂಡಿದ್ದರು. ಆ ನಂತರ ಕನ್ನಡದ ಜತೆಗೆ ತೆಲುಗು ಸಿನಿಮಾ ಕ್ಷೇತ್ರವೂ ಇವರನ್ನು ಸೆಳೆಯಿತು. ಅಲ್ಲಿಯೂ ಒಂದಷ್ಟು ಸಿನಿಮಾ ಮಾಡಿದರು. ವರ್ಷಗಳು ಉರುಳಿದಂತೆ, ಸಿನಿಮಾ ಪ್ರಮಾಣ ಕಡಿಮೆಯಾದರೂ, ಬಣ್ಣದ ಲೋಕದ ನಂಟು ಮಾತ್ರ ಅವರನ್ನು ಬಿಡಲಿಲ್ಲ. ಹೀಗಾಗಿ 2001ರಲ್ಲಿ ಬಂದ ಹುಚ್ಚ ಚಿತ್ರದ ಬಳಿಕ, ಚಿತ್ರ, ತುಂಟಾಟ ಸಿನಿಮಾಗಳಲ್ಲಿ ನಟಿಸುತ್ತಲೇ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಬಿಜಿಯಾದರು.
ಅದಾದ ಬಳಿಕ 2006ರಲ್ಲಿ ಬಂದ ಚೆಲ್ಲಾಟ ಸಿನಿಮಾ ಮತ್ತೊಂದು ಬ್ರೇಕ್ ತಂದುಕೊಟ್ಟಿತು. ಹೀಗೆ ಸಾಗಿದ ಅವರ ಸಿನಿಮಾ ಪ್ರಯಾಣ, ಕನ್ನಡದಲ್ಲಿ ಕೊನೆಯದಾಗಿ 2014ರಲ್ಲಿ ಬಂದ ತುಳಸಿ ಚಿತ್ರದಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಈ ವರೆಗೂ ಬೇರೆ ಯಾವ ಸಿನಿಮಾಗಳಲ್ಲಿ ರೇಖಾ ಕಾಣಿಸಿಕೊಂಡಿಲ್ಲ. ಹುಚ್ಚ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೇಖಾ ವೇದವ್ಯಾಸ್, ಸದ್ಯ ಸಿನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಆದ್ರೆ ಆಗಾಗ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ, ಇದೀಗ ಅಚ್ಚರಿಯ ಲುಕ್‌ನಲ್ಲಿ ಪ್ರತ್ಯಕ್ಷರಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅಭಿಮಾನಿಗಳಿಗೆ ರೇಖಾ ಬಗ್ಗೆ ಕಾಡ್ತಿದೆ ಸಾವಿರ ಪ್ರಶ್ನೆ
ಹೌದು ನಟಿ ರೇಖಾ, ಕಳೆದ ಕೆಲ ವರ್ಷಗಳಿಂದ ಸಿನಿಮಾ ಅಂಗಳದಿಂದ ದೂರವೇ ಉಳಿದಿದ್ದಾರೆ. ಈ ನಡುವೆ ಅವರ ದೇಹದ ತೂಕವೂ ಹೆಚ್ಚಾಗಿತ್ತು. ಇನ್ನು ಮಾನಸಿಕವಾಗಿಯೂ ಕೊಂಚ ಬಳಲಿದ್ದರು. ಇದೆಲ್ಲದರಿಂದ ಹೊರಬರಬೇಕೆಂಬ ನಿಟ್ಟಿನಲ್ಲಿ ಡಯಟ್ ಸಹ ಆರಂಭಿಸಿದ್ದರು. ಆದರೆ, ಇದೀಗ ಈ ಮಟ್ಟದಲ್ಲಿ ತೂಕ ಕಳೆದುಕೊಂಡಿದ್ದು ಮಾತ್ರ ಹಲವು ಅನುಮಾನಗಳನ್ನೇ ಮೂಡಿಸಿದೆ. ಹೌದು ತೆಲುಗಿನ ರಿಯಾಲಿಟಿ ಶೋ ಶ್ರೀದೇವಿ ಡ್ರಾಮಾ ಕಂಪನಿಗೆ ಗೆಸ್ಟ್ ಆಗಿ ಬಂದ ರೇಖಾ ಅವರನ್ನು ನೋಡಿದ ಎಷ್ಟೋ ಮಂದಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಶೋನಲ್ಲಿ ಭಾಗವಹಿಸಿದ ಕೆಲವರು, ನಿಮ್ಮನ್ನು ನೋಡಿ ಖುಷಿಯಾಯ್ತು ಜತೆಗೆ ನಿಮ್ಮನ್ನು ಈ ರೀತಿ ನೋಡಿ ಶಾಕ್ ಆಗಿದೆ ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ರೇಖಾ, ಇದೆಲ್ಲ ಘಟಿಸಿದ್ದು ಅನಿರೀಕ್ಷಿತ ಎಂದಿದ್ದಾರೆ. ಸದ್ಯ ಹೊರಬಿದ್ದ ಪ್ರೋಮೋಗೆ ಬಗೆಬಗೆ ಕಾಮೆಂಟ್‌ಗಳು ಹರಿದು ಬಂದಿವೆ. ರೇಖಾ ಅವರು ಆರೋಗ್ಯವಾಗಿದ್ದಾರಾ? ಇಷ್ಟೇಕೆ ಸಣ್ಣಗಾಗಿದ್ದಾರೆ? ಅತಿಯಾದ ಡಯಟ್ ಒಳ್ಳೆಯದಲ್ಲ, ನಿಮ್ಮನ್ನು ಈ ರೀತಿ ನೋಡಲು ಆಗುತ್ತಿಲ್ಲ ಹೀಗೆ ಸಾಕಷ್ಟು ಮಂದಿ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ ಅಸಲಿಗೆ ಆಗಿರೋದೇನು ಅನ್ನೋದ್ರ ಬಗ್ಗೆ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಭಾನುವಾರ ಪ್ರಸಾರವಾಗುವ ಶ್ರೀದೇವಿ ಡ್ರಾಮಾ ಕಂಪನಿ ಶೋನಲ್ಲಿಯೇ ಅವರೇ ಬಹಿರಂಗಪಡಿಸಲಿದ್ದಾರೆ ಹೀಗಾಗಿ ಅಲ್ಲಿಯವರೆಗೂ ಎಲ್ಲರು ಕಾದು ನೋಡಬೇಕಿದೆ.
ಇದನ್ನೂ ಓದಿ: ಹೆಂಡತಿ ಕಾಟಕ್ಕೆ ಮನನೊಂದು ಮೆಟ್ರೋ ಎಂಜಿನಿಯರ್ ಸೂಸೈಡ್; ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?
ಇದನ್ನೂ ಓದಿ: ಸಾರಿಗೆ ಇಲಾಖೆಯಿಂದ ಬಂಪರ್ ಗುಡ್ ನ್ಯೂಸ್; ಖಾಲಿಯಿರುವ 13ಸಾವಿರ ಉದ್ಯೋಗ ನೇಮಕಾತಿಗೆ ಅಧಿಸೂಚನೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram