Actress Sithara: ಮುದ್ದು ಮುಖದ ಚೆಲುವೆ ಈಗಲೂ ಹದಿಹರೆಯದ ಚಿರ ಯುವತಿಯಂತೆ ಕಾಣುವ ನಟಿ ಸಿತಾರಾ ಯಾರಿಗೆ ಗೊತ್ತಿಲ್ಲ ಹೇಳಿ ಕನ್ನಡ ಸಿನಿ ಪ್ರೇಕ್ಷಕರಂತೂ ಮರೆಯದ ಸಿನಿಮಾಗಳ ಭಾಗವಾಗಿದ್ದಾರೆ ನಟಿ ಸಿತಾರ. ಮಲೆಯಾಳಂ ಮೂಲದವರಾದರೂ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಭದ್ರ ಸ್ಥಾನ ಗಳಿಸುವಲ್ಲಿ ತಮ್ಮ ಅಚ್ಚು ಕಟ್ಟಾದ ಅಭಿನಯದ ಮೂಲಕ ಯಶಸ್ವಿಯಾದ್ರು. ಇನ್ನು ನಟಿ ಸಿತಾರಾ ಕೇವಲ ಕನ್ನಡವಷ್ಟೆ ಅಲ್ಲ, ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ. ಕೇವಲ ನಟಿಸುವುದು ಮಾತ್ರವಲ್ಲ ಈ ಭಾಷೆಗಳಲ್ಲೂ ಸಹ ಅವರು ಬಹಳ ಖ್ಯಾತ ನಟಿ. ಚಿಕ್ಕವಯಸ್ಸಿನಿಂದಲೂ ತಮ್ಮ ಸಹೋದರಿಯರ ಜೊತೆಗೆ ಚಿತ್ರೀಕರಣವನ್ನು ನೋಡಲು ಸೀತಾರಾ ಹೋಗುತ್ತಿದ್ದರಂತೆ ಹೀಗಾಗಿ ಬಾಲ್ಯದಿಂದಲೇ ಅವರಿಗೆ ಸಿನಿಮಾ ಹಾಗೂ ನಟನೆಯ ಮೇಲೆ ಸಾಕಷ್ಟು ಆಸಕ್ತಿ ಇತ್ತು.
ಮೊದಲ ಬಾರಿಗೆ 1986ರಲ್ಲಿ ಕಾವೇರಿ ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಇದಾದ ಮೇಲೆ ಒಂದಾದ ಮೇಲೊಂದರಂತೆ ನಟಿಸಿದ್ದಾರೆ ಅವರು ಹಲವಾರು ಸ್ಟಾರ್ ನಟರೊಂದಿಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಹಾಲುಂಡ ತವರು ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ಸಿತಾರಾ ಅವರು ಕನ್ನಡದ ಮನೆಮಗಳೇ ಆಗಿಯೇ ಬಿಟ್ಟಿದ್ದಾರೆ. ಆದ್ರೆ ನಾನು ನನ್ನ ಕನಸು ಸೇರಿದಂತೆ 30ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟಿ ಸೀತಾರ 2018ರ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದ್ರೆ ಇದೀಗ ಸೀತಾರ ಪ್ರತ್ಯಕ್ಷಗೊಂಡಿದ್ದಾರೆ. ಹೌದು ಸಿತಾರ ಅವ್ರ ಫೋಟೋಗಳು ಸಖತ್ ವೈರಲ್ ಆಗಿದ್ದು ಕುತೂಹಲ ಕೆರಳಿಸಿವೆ.
ಕನ್ನಡದಲ್ಲಿ ಪ್ರೇಕ್ಷರನ್ನ ಟಿವಿ ಮುಂದೆ ಕುಳಿತು ಅಳುವಂತೆ ಮಾಡುವ ಸಿನಿಮಾಗಳಲ್ಲಿ ಹಾಲುಂಡ ತವರು ಸಿನಿಮಾ ಸಖತ್ ಹಿಟ್ ಆಗಿತ್ತು. ಅಷ್ಟರ ಮಟ್ಟಿಗೆ ಸಿತಾರ ಬಹಳ ನಾಜುಕಾಗಿ ಪಾತ್ರಕ್ಕೆ ಜೀವ ತುಂಬಿ ನಟಿಸಿ ನಮ್ಮ ಕನ್ನಡಿಗರ ಮನೆ ಮಗಳಾಗಿ ತವರಿನ ಸಿರಿಯನ್ನ ಹೇಗೆ ಉಳಿಸಬೇಕು ಅನ್ನೋದನ್ನ ಮನೋಜ್ಞಾವಾಗಿ ನಟಿಸಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ರು. ಹೌದು ಸ್ಯಾಂಡಲ್‌ವುಡ್‌ನಲ್ಲಿ ಹಾಲುಂಡ ತವರು ಚಿತ್ರದ ಮೂಲಕ ಭಾರಿ ಖ್ಯಾತಿ ಗಳಿಸಿದ ದಕ್ಷಿಣ ಭಾರತದ ನಟಿ ಸಿತಾರ 2018ರ ಬಳಿಕ ಪತ್ತೆ ಇರಲಿಲ್ಲ. ಹೌದು ಕನ್ನಡ, ತಮಿಳು, ಮಳೆಯಾಂ ಸಿನಿಮಾಗಳಲ್ಲೂ ಸೀತಾರ ಕಾಣಿಸಿಕೊಂಡಿಲ್ಲ.
ಕೇವಲ ತೆಲುಗು ಚಿತ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರ ಮಾಡಿದ್ದಾರೆ. ಸಣ್ಣ ಪುಟ್ಟ ಪಾತ್ರಗಳನ್ನು ಬಿಟ್ಟರೆ ಸಿತಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇದನ್ನ ನೋಡಿದ ಸಿತಾರ ಅವ್ರ ಸ್ಯಾಂಡಲ್‌ವುಡ್ ಅಭಿಮಾನಿಗಳಂತೂ ಸೀತಾರ ಎಲ್ಲಿ ಹೋಗಿದ್ದಾರೆ ಅಂತ ಕೇಳುತ್ತಿದ್ದರು. ಈ ಬೆನ್ನಲ್ಲೇ ನಟಿ ಸಿತಾರ ಪ್ರತ್ಯಕ್ಷರಾಗಿದ್ದಾರೆ. ಹೌದು ನಟಿ ಸಿತಾರ ಪ್ರಸಿದ್ಧ ಶಬರಿಮಲೆ ಯಾತ್ರೆ ಮಾಡಿದ್ದಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿರುವ ಸಿತಾರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿಕೊಂಡಿದ್ದಾರೆ. ಹೌದು ಇದೀಗ ಈ ಫೋಟೋಗಳು ವೈರಲ್ ಆಗಿವೆ.
ಇದನ್ನೂ ಓದಿ: ರಮ್ಯಾ ವಿರುದ್ಧ ಗೆದ್ದ ಹಾಸ್ಟೆಲ್ ಹುಡುಗರು! ಸಿನಿಮಾ ಬಿಡುಗಡೆಗೆ ಕೋರ್ಟ್ ಅನುಮತಿ
ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಸಿತಾರ
ಮೊಟ್ಟ ಮೊದಲಿಗೆ 1994ರಲ್ಲಿ ಹಾಲುಂಡ ತವರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸಿತಾರ ಮೊದಲ ಚಿತ್ರದಲ್ಲೇ ಸೂಪರ್ ಹಿಟ್ ಆದರ. ಬಳಿಕ ಕರುಳಿನ ಕುಡಿ, ಇಂಡಿಯನ್, ಕಾವ್ಯ, ಬಂಗಾರದ ಕಳಶ, ಬೇಟೆಗಾರ, ಶಿವಲೀಲೆ, ದೀರ್ಘ ಸುಮಂಗಲಿ, ಗಣೇಶನ ಗಲಾಟೆ, ಶ್ರಾವಣ ಸಂಜೆ, ಆಯುಧ, ಅನುರಾಗ ದೇವತೆ, ಹೆತ್ತವಳ ಕೂಗು, ಮುದ್ದಿನ ಅಳಿಯ, ಮನೆ ಮನೆ ರಾಮಾಯಣ, ಬಂಗಾರದ ಮನೆ, ಸ್ತ್ರಿ, ಸಾಂಗ್ಲಿಯಾನಾ ಭಾಗ 3, ಗಣೇಶ ಐ ಲವ್ ಯೂ, ಜಾಕಿ ಚಾನ್, ಪೊಲೀಸ್ ಬೇಟೆ, ಅಮ್ಮಾವ್ರ ಗಂಡ, ಬಯಲು ದೀಪ, ಜೇನು ಗೂಡು, ನಾನು ನನ್ನ ಕನಸು, ಜನ್ಮ, ಮಿ.ಐರಾವತ, ಚಕ್ರವ್ಯೂಹ, ಬೃಹಸ್ಪತಿ, ಬಕಾಸುರ, ಅಮ್ಮಾ ಐ ಲವ್ ಯೂ ಎಂಬ ಕನ್ನಡ ಚಿತ್ರಗಳಿಗೆ ನಟಿ ಸಿತಾರ ಬಣ್ಣ ಹಚ್ಚಿದ್ದಾರೆ. ಇನ್ನು ಸಿತಾರ ಇದೀಗ ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.
ಇದರ ನಡುವೆ ಅಲ್ಲೊಂದು ಇಲ್ಲೊಂದು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ 2021ರ ಬಳಿಕ ಟಿವಿ ಧಾರಾವಾಹಿಯಿಂದಲೂ ಸಿತಾರ ದೂರ ಉಳಿದಿದ್ದಾರೆ. ಹೀಗಾಗಿ ಬಿಡುವಿನ ಸಮಯದಲ್ಲಿರುವ ಸಿತಾರಾ ಶಬರಿಮಲೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಸ್ವಂ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ರಾಮಾಯಾಣ ಮಾಸಾಚರಣೆಯೂ ಶಬರಿಮಲೆಯಲ್ಲಿ ಆರಂಭಗೊಂಡಿದೆ. ಈ ಮಾಸದಲ್ಲಿ ರಾಮಾಯಣ ಪಾರಾಯಣ ನಡೆಯಲಿದೆ. ಅಯ್ಯಪ್ಪ ದರ್ಶನಕ್ಕಾಗಿ ಬಾಗಿಲು ತರೆಯಲಾಗಿದೆ. ಹೀಗಾಗಿ ಅನೇಕ ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದಾರೆ. ಅದರಂತೆ ಸಿತಾರ ಅಯ್ಯಪ್ಪನ ದರ್ಶನ ಪಡೆಯುತ್ತಿರುವ ಫೋಟೋಗಳು ವೈರಲ್ ಆಗಿದೆ. ಇರುಮುಡಿ ಹೊತ್ತು ಸಿತಾರ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಕುಟುಂಬ ಸದಸ್ಯರ ಜೊತೆ ಸಿತಾರ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಕಾರ್ತಿಕಮಾಸದ ಆರಂಭದಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ದೇವಸ್ಥಾನದ ಬಾಗಿಲು ತರೆಯಲಾಗುತ್ತದೆ. ಎರಡು ದಿನಗಳ ಕಾಲ ಶಬರಿಮಲೆಯಲ್ಲಿ ತಂಗಿದ್ದ ಸಿತಾರ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram