ತಾಯಿಯಾಗುತ್ತಿರುವ ಖುಷಿಯಲ್ಲಿ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್; ಅದ್ದೂರಿ ಸೀಮಂತ ಹೇಗಿತ್ತು? ಯಾರೆಲ್ಲ ಬಂದಿದ್ರು ಗೊತ್ತಾ

ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ತೇಜಸ್ವಿನಿ ಅವರು ಕಳೆದ ವರ್ಷ ಮದುವೆಯಾಗಿದ್ದರು. 2022ರ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ತೇಜಸ್ವಿನಿ, ಫಣಿ ವರ್ಮ ಅವರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ನಟ ದರ್ಶನ್, ಜಯರಾಮ್ ಕಾರ್ತಿಕ್, ನಟಿ ಆಶಿತಾ ಚಂದ್ರಪ್ಪ, ನಟಿ ಕಾರುಣ್ಯ ರಾಮ್, ‘ನೆನಪಿರಲಿ’ ಪ್ರೇಮ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯಾತಿಗಣ್ಯರು ಈ ಮದುವೆಗೆ ಆಗಮಿಸಿ ನವಜೋಡಿಗೆ ಶುಭಾಶಯ ತಿಳಿಸಿದ್ದರು. ಇನ್ನು ಕನ್ನಡದ ಕೆಲ ಧಾರಾವಾಹಿಗಳಲ್ಲಿಯೂ ತೇಜಸ್ವಿನಿ ನಟಿಸಿದ್ದಾರೆ. ಕೊನೆಯದಾಗಿ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಲಾವಣ್ಯಾ ಎನ್ನುವ ನೆಗೆಟಿವ್ ಪಾತ್ರದಲ್ಲಿ ಅವರು ನಟಿಸಿದ್ದರು. ಈ ಧಾರಾವಾಹಿಯಲ್ಲಿ ಕೌಸ್ತುಭ ಮಣಿ ನಾಯಕಿಯಾಗಿದ್ದು, ಅಭಿನವ್ ವಿಶ್ವನಾಥನ್ ನಾಯಕನಾಗಿದ್ದರು. ಸಿಹಿಕಹಿ ಚಂದ್ರು ಕೂಡ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ನಟಿಸಿದ್ದ ತೇಜಸ್ವಿನಿ ಪ್ರಕಾಶ್ ಅವರು ತಾಯಿಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ಇನ್ನು ತೇಜಸ್ವಿನಿ ಹಾಗೂ ಫಣಿ ವರ್ಮ ದಂಪತಿಗೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಶುಭಾಶಯ ತಿಳಿಸಿದ್ದರು. ಇದೀಗ ಈ ನಟಿಗೆ ಸೀಮಂತ ಶಾಸ್ತ್ರ ನೆರವೇರಿದ್ದು, ಕಾರ್ಯಕ್ರಮದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಹೌದು ತೇಜಸ್ವಿನಿ ಪ್ರಕಾಶ್ ಅವರು ಕನ್ನಡ ಕಿರುತೆರೆ, ಬೆಳ್ಳಿತೆರೆಯಲ್ಲಿ ಸಕ್ರಿಯವಾಗಿದ್ದ ಈ ನಟಿ ಮಾಡೆಲ್ ಕೂಡ ಹೌದು. ಇನ್ನು 2008ರಲ್ಲಿ ತೆರೆಕಂಡಿದ್ದ ನಟ ದರ್ಶನ್, ನವ್ಯಾ ನಾಯರ್ ನಟನೆಯ ಗಜ ಚಿತ್ರದಲ್ಲಿ ನಟಿಸಿದ್ದರು. ಡಾ ವಿಷ್ಣುವರ್ಧನ್ ಜೊತೆಗೆ ಮಾತಾಡ್ ಮಾತಾಡು ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಅರಮನೆ ಮುಂತಾದ ಸಿನಿಮಾಗಳಿಗೆ ಅವರು ಬಣ್ಣ ಹಚ್ಚಿದ್ದಾರೆ. ಮದುವೆಯ ನಂತರ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡ ಇವ್ರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಗಂಡನ ಜೊತೆಗಿನ ಫೋಟೋ, ರೀಲ್ಸ್ ಮಾಡಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದ್ರೆ ಅವರು ಗಂಡ ಏನು ಮಾಡುತ್ತಾರೆ? ಎಲ್ಲಿಯವರು ಎನ್ನೋದನ್ನೂ ಎಲ್ಲಿಯೂ ಹೇಳಿಕೊಂಡಿಲ್ಲ. ವೈಯಕ್ತಿಕ ವಿಷಯವನ್ನು ಅವರು ತುಂಬ ಖಾಸಗಿಯಾಗಿ ಇಟ್ಟಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ದಸರಾಗೆ ಹೋಗುವ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್, ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ಕೊಡಲಾಗುತ್ತಿದೆ.

ಸೀಮಂತ ಶಾಸ್ತ್ರದ ಫೋಟೋಗಳನ್ನ ಹಂಚಿಕೊಂಡು ನಟಿ ಹೇಳಿದ್ದೇನು ಗೊತ್ತಾ?

ಇನ್ನು ಕಳೆದ ವರ್ಷ ಮದುವೆಯಾದ ನಟಿ ಕೆಳ ತಿಂಗಳುಗಳ ಬಳಿಕ ತಾಯಿಯಗ್ತಿರುವ ವಿಷಯ ಹಂಚಿಕೊಂಡಿದ್ರು. ಅದಾದ ನಂತರ ನಟಿ ತೇಜಸ್ವಿನಿ ಗೌಡ ಅವರು ಬೇಬಿ ಬಂಪ್ ಫೋಟೋಸ್ ಶೇರ್ ಮಾಡಿದ್ದರು. ಪತಿ ಹಾಗೂ ಗೆಳತಿಯರೊಂದಿಗೆ ಸಪರೇಟ್ ಆಗಿ ಮ್ಯಾಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ನಟಿ ವೈಟ್ ಕಲರ್ ಗೌನ್ ಧರಿಸಿಕೊಂಡಿದ್ದು ಗೆಳೆತಿಯರ ಜೊತೆ ಫುಲ್ ಸ್ಮೈಲ್​ನಲ್ಲಿ ಪೋಸ್ ಕೊಟ್ಟಿದ್ದಾರೆ. ಸಿಂಪಲ್ ವೈಟ್ ಇಯರಿಂಗ್ಸ್ ಹಾಗೂ ಸಿಂಪಲ್ ಆಗಿದ್ದ ಸರವನ್ನು ತೇಜಸ್ವಿನಿ ಧರಿಸಿದ್ದರು. ಗೆಳತಿಯರೆಲ್ಲ ತೇಜಸ್ವಿನಿ ಅಕ್ಕ-ಪಕ್ಕದಲ್ಲಿ ನಿಂತುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು. ಕಲರ್​ಫುಲ್ ಡ್ರೆಸ್ ಧರಿಸಿಕೊಂಡು ತೇಜಸ್ವಿನಿ ಪ್ರಕಾಶ್ ಅವರ ಬೇಬಿ ಬಂಪ್ ಅನ್ನು ಸಂಭ್ರಮದಿಂದ ಆಚರಿಸಿದ್ದರು.ಈ ಒಂದು ಫೋಟೋದಲ್ಲಿ ತೇಜಸ್ವಿನಿ ಪ್ರಕಾಶ್ ಅವರು ಎಕ್ಸೈಟಿಂಗ್ ಆಗಿ ಕಾಣಿಸಿಕೊಂಡಿದ್ರು. ಗೆಳತಿಯರೂ ಫುಲ್ ಹ್ಯಾಪಿ ಹ್ಯಾಪಿ ಮೂಡ್​ನಲ್ಲಿ ಪೋಸ್ ಕೊಟ್ಟಿದ್ದರು. ಇದಲ್ಲದೆ ನಟಿ ಪತಿಯ ಜೊತೆಗೂ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಕಂಪ್ಲೀಟ್ ವೈಟ್ & ವೈಟ್​ನಲ್ಲಿ ಈ ಹೋಡಿ ಪೋಸ್ ಕೊಟ್ಟಿದ್ದು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ರು ಈ ಫೋಟೋಗಳು ಬಹಳ ವೈರಲ್ ಆಗಿದ್ವು.

ಹೌದು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ತೇಜಸ್ವಿನಿ ಅವ್ರಿಗೆ ಸೀಮಂತ ಶಾಸ್ತ್ರ ಮಾಡಲಾಗಿದೆ. ಇನ್ನು ಕಳೆದ ಎರಡು ಕೆಲ ದಿನಗಳಿಂದ ಒಂದಾದ ಮೇಲೊಂದು ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಲಿರುವ ನಟಿ ತೇಜಸ್ವಿನಿ ಇದೀಗ, ಸೀಮಂತ ಕಾರ್ಯವನ್ನೂ ನೆರವೇರಿಸಿಕೊಂಡಿದ್ದಾರೆ. ಸೀಮಂತ ಶಾಸ್ತ್ರದ ಸುಂದರ ಕ್ಷಣದ ಫೋಟೋಗಳನ್ನ ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹಿನ್ನೆಲೆಯಲ್ಲಿ ಪ್ರಗ್ನೆನ್ಸಿ ಫೋಟೋಶೂಟ್‌ ಮೂಲಕ ಇದೀಗ ಗಮನ ಸೆಳೆದಿದ್ದಾರೆ. ಇನ್ನು ಕಳೆದ ತಿಂಗಳು ಈ ವಿಚಾರವನ್ನು ತೇಜಸ್ವಿನಿ ಖಚಿತ ಪಡಿಸಿದ್ದರು.

ಇದೀಗ ಸೀಮಂತ ಶಾಸ್ತ್ರದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತೇಜಸ್ವಿನಿ ಪ್ರಕಾಶ್‌ ಜತೆಗೆ ಪತಿ ಫಣಿವರ್ಮ ಸಹ ಹಳದಿ ಬಣ್ಣದ ಡ್ರೆಸ್ ನಲ್ಲಿ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆದಿದೆ. ಇನ್ನು ಸೀಮಂತ ಕಾರ್ಯಕ್ರಮ ಮಾಡುವುದು ನಮ್ಮ ಪ್ರೆಗ್ನೆನ್ಸಿ ಮತ್ತು ಮದರ್‌ಹುಡ್ ಬ್ಯೂಟಿಫುಲ್ ಜರ್ನಿಯನ್ನು ಎಂಜಾಯ್ ಮಾಡಲು ಹಾಗೂ ಮಗು ಮತ್ತು ತಾಯಿ ಆರೋಗ್ಯವಾಗಿರಲಿ ಅಂತ ಆಶೀರ್ವಾದ ಮಾಡಲು ಅಂತ ತೇಜಸ್ವಿನಿ ಬರೆದುಕೊಂಡಿದ್ದಾರೆ. ಇನ್ನು ಪೋಸ್ಟ ನೋಡುತ್ತಿದ್ದಂತೆ ಅಭಿಮಾನಿಗಳು ಹೆಣ್ಣಾಗಲಿ ಗಂಡಾಗಲಿ ಒಟ್ಟಾರೆ ಮಗು ಆರೋಗ್ಯವಾಗಿರಲಿ ಕಾಮೆಂಟ್ ಮೂಲಕ ವಿಶ್ ಮಾಡಿದ್ದಾರೆ. ಅಲ್ಲದೆ ಗುಡ್ ನ್ಯೂಸ್ ಕೊಡುವ ದಿನ ಯಾವತ್ತು ಎಂದು ಪ್ರಶ್ನಿಸಿದ್ದು, ನಟಿಯ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್‌ ಮೂಲಕ ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ PPF ಖಾತೆಯನ್ನು ಹೇಗೆ ತೆರೆಯುವುದು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram