Adipurush Day 1 Collection: ಮೊದಲ ದಿನವೇ 100 ಕೋಟಿ ದಾಟಿದ ‘ಆದಿಪುರುಷ್’ ಸಿನಿಮಾ; ಕರ್ನಾಟಕದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

Adipurush Day 1 Collection: ಬಾಲಿವುಡ್‌ನ ಟಾಪ್ ನಿರ್ಮಾಪಕ ಭೂಷಣ್ ಕುಮಾರ್ ಟಿ ಸಿರೀಸ್ ಬ್ಯಾನರ್‌ನಲ್ಲಿ 500 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆದಿ ಪುರುಷ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಹಲವು ಭಾಷೆಗಳಲ್ಲಿ ಅದ್ಧೂರಿಯಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಹೌದು ಜೂನ್ 16ರಂದು ಅಂದ್ರೆ ನಿನ್ನೆ ಆದಿಪುರುಷ್ ಸಿನಿಮಾ ಪ್ರಪಂಚದದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ದೇಶ ವಿದೇಶಗಳಲ್ಲಿ ತನ್ನ ಹವಾ ಸೃಷ್ಟಿಸಿದ್ದು ಎಲ್ಲೆಡೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಈಗಾಗಲೇ ವಿದೇಶಗಳಲ್ಲೂ ಕೂಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಅಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಮುಂಗಡ ಬುಕಿಂಗ್‌ಗಳನ್ನು ಅಂದ್ರೆ ಅಡ್ವಾನ್ಸ್ ಬುಕಿಂಗ್ ಕೂಡ ಬೃಹತ್ ಮಟ್ಟದಲ್ಲಿ ಮಾಡಲಾಗ್ತಿದೆ.

WhatsApp Group Join Now
Telegram Group Join Now

ಈ ಸಿನಿಮಾ ಹಲವು ಭಾಷೆಗಳಲ್ಲಿ ಅದ್ಧೂರಿಯಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಇದು ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು, ಆದಿಪುರುಷ್ ಹವಾ ಜೋರಾಗಿದ್ದು, ದೇಶಾದ್ಯಂತ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದೆ. ಪ್ರಭಾಸ್ ಅಭಿನಯದ ಈ ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆಗಾಗಿ ಎಲ್ಲಾ ಭಾಷೆಗಳ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದರು. ಇನ್ನು ಇದೀಗ ಈ ಬೃಹತ್ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗಿದ್ದು, ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡ್ತಿದ್ದು ಮೊದಲ ದಿನದ ಕಲೆಕ್ಷನ್ ಎಷ್ಟು ಕರ್ನಾಟಕದಲ್ಲಿ ಪ್ರಭಾಸ್ ಹವಾ ಹೇಗಿತ್ತು, ಕಲೆಕ್ಷನ್ ವಿಚಾರದಲ್ಲಿ ಕರ್ನಾಟಕ ದಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಕಿದ್ಯಾ ನೋಡೋಣ ಬನ್ನಿ.

ಇದನ್ನೂ ಓದಿ: ದುಬೈನಲ್ಲಿ ಡಾ. ಬ್ರೋ ಜೊತೆ ಕನ್ನಡದ ನಟರು.. ಅಚಾನಕ್ಕಾಗಿ ಎಲ್ಲರನ್ನು ಒಟ್ಟಿಗೆ ನೋಡಿ ಸೈಕಾದೆ

ಮೊದಲ ದಿನವೇ 100ಕೋಟಿ ದಾಟಿದ ಕಲೆಕ್ಷನ್

ಪ್ರಭಾಸ್ ಶ್ರೀರಾಮನಾಗಿ ಕೃತಿ ಸನೋನ್ ಸೀತೆಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಚಿತ್ರ ರಿಲೀಸ್ ಗು ಮೊದಲೇ ಟ್ರೇಡ್ ಪಂಡಿತರು ಚಿತ್ರವು ಮೊದಲ ದಿನ 90 ರಿಂದ 100 ಕೋಟಿ ಕಲೆಕ್ಷನ್ ಮಾಡುತ್ತೆ ಅಂತ ಭವಿಷ್ಯ ನುಡಿದಿದ್ದರು, ಹೌದು ಅಬ್ಬರದ ಪ್ರಚಾರದಿಂದಾಗಿ ಎಲ್ಲಾ ಕಡೆಗಳಲ್ಲೂ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗಿದ್ವು, ಹೀಗಾಗಿ ಸಿನಿ ಪಂಡಿತರು ಹಾಕಿದ್ದ ಲೆಕ್ಕಾಚಾರ ವರ್ಕೌಟ್ ಆಗಿದ್ದು, ಬೆಳ್ಳಿತೆರೆಯಲ್ಲಿ ರಾಮನಾಗಿ ಪ್ರಭಾಸ್ ಅವರನ್ನು ನೋಡಲು ಜನ ಮುಗಿಬೀಳುತ್ತಿದ್ದು, ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಈಗಾಗಲೇ ದೇಶಾದ್ಯಂತ 4 ಲಕ್ಷ ಮುಂಗಡ ಬುಕ್ಕಿಂಗ್‌ಗಳು ದಾಖಲಾಗಿದ್ದು, ಪ್ರಮುಖವಾಗಿ ಎರಡೂ ತೆಲುಗು ರಾಜ್ಯಗಳಲ್ಲೂ ಚಿತ್ರವು ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಿದೆ. ಅದೇ ರೀತಿ ಹಿಂದಿ ಮಾರುಕಟ್ಟೆಯಲ್ಲಿ ಆದಿಪುರುಷ್ ಬೇಡಿಕೆಯ ಹೆಚ್ಚಾಗಿದ್ದ ಕಾರಣ ಒಟ್ಟಾರೆಯಾಗಿ ನೋಡಿದರೆ ವಿಶ್ವಾದ್ಯಂತ ಮೊದಲ ದಿನಕ್ಕೆ ಆದಿ ಪುರುಷ್ ಸಿನಿಮಾ 140 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ಯಂತೆ.

ಕರ್ನಾಟಕದಲ್ಲೂ ಕಮಾಲ್ ಮಾಡ್ತಿದ್ಯಾ ಪ್ರಭಾಸ್ ಸಿನಿಮಾ!

ಇನ್ನು ಕರ್ನಾಟಕದಲ್ಲೂ ಕೂಡ ಆದಿ ಪುರುಷ್ ಸಿನಿಮಾಗೆ ಬೇಡಿಕೆ ಹೆಚ್ಚಾಗಿದ್ದು, ಎಲ್ಲ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದೂ, ಪ್ರಭಾಸ್ ಅಭಿಮಾನಿಗಳಂತು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಇದರ ಜೊತೆಗೆ ಸಿನಿಮಾ ಪೌರಾಣಿಕ ಹಿನ್ನಲೆಯುಳ್ಳ ಸಿನಿಮಾವಾಗಿರೋದ್ರಿಂದ ಕರ್ನಾಟಕದಲ್ಲಿ ಜನರು ಕುಟುಂಬ ಸಮೇತರಾಗಿ ಹೋಗಿ ಸಿನಿಮಾ ನೋಡ್ತಿರೋದ್ರಿಂದ ನಮ್ಮ ಕರ್ನಾಟಕದಲ್ಲೂ ಆದಿ ಪುರುಷ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಹೌದು ನಮ್ಮ ಕರ್ನಾಟಕದಲ್ಲಿ ಮೊದಲ ದಿನವೇ ಸುಮಾರು 8.57 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಅಫೀಸ್ನಲ್ಲೂ ಧೂಳೆಬ್ಬಿಸುತ್ತಿದೆ.

ಇದನ್ನೂ ಓದಿ: ಗೆಳೆಯನ ಬರ್ತಡೇಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಧ್ರುವ ಸರ್ಜಾ..

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram