Adipurush Public Review: ಆದಿಪುರುಷ್ ಸಿನಿಮಾ ರಿಲೀಸ್, ಪ್ರೇಕ್ಷಕರು ಏನ್ ಹೇಳುದ್ರು? ರಾಮನಾಗಿ ಪ್ರಭಾಸ್ ಅವ್ರನ್ನ ಅಭಿಮಾನಿಗಳು ಮೆಚ್ಚಿಕೊಂಡ್ರ?

Adipurush Public Review: ಆದಿಪುರುಷ್ ಟ್ರೇಲರ್ ಹಾಗೂ ಹಾಡುಗಳನ್ನು ಮೂಲಕ ಭಾರಿ ನಿರೀಕ್ಷೆಯನ್ನು ಮೂಡಿಸಿದ್ದ ಸಿನಿಮಾ. ಈ ಮೊದಲು ಟೀಸರ್ ಮೂಲಕ ಟ್ರೋಲ್ ಆಗಿದ್ದರು ಕೂಡ ನಂತರ ಟ್ರೈಲರ್ ಮತ್ತು ಹಾಡುಗಳನ್ನ ಎಲ್ಲರು ಮೆಚ್ಚಿಕೊಂಡಿದ್ರು. ಅಲ್ಲದೇ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆ ಇಂದು ನಿಜವಾಗಿದ್ದು, ಸದ್ಯ ಸಿನಿಮಾ ಇಂದು ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ. ಹೌದು ರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ, ಸೀತೆಯ ಪಾತ್ರದಲ್ಲಿ ಕೃತಿ ಸನೊನ್ ಮಿಂಚಿದ್ದಾರೆ. ಇನ್ನೂ ರಾವಣನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಓಂ ರಾವುತ್ ಸಾರಥ್ಯದಲ್ಲಿ ಬಂದಿರುವ ಆದಿಪುರುಷ್ ಸಿನಿಮಾಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಮೊದಲ ಶೋ ನೋಡಿ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಹೌದು ಕೆಲವರು ಸಿನಿಮಾ ನೋಡಿ ಇಷ್ಟಪಟ್ಟರೆ ಇನ್ನೂ ಕೆಲವರು ನಿರೀಕ್ಷೆಯಂತೆ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಹಾಗಿದ್ರೆ ಸಿನಿಮಾ ಹೇಗಿದೆ? ಅಭಿಮಾನಿಗಳು ಹೇಳಿದ್ದೇನು? ಅಭಿಮಾನಿಗಳು ಬಹಳಷ್ಟು ಮೆಚ್ಚಿಕೊಂಡ ಪಾತ್ರ ಯಾವುದು? ಅದರ ಬಗ್ಗೆ ಪ್ರೇಕ್ಷಕರು ಹೇಳಿದ್ದೇನು ನೋಡೋಣ ಬನ್ನಿ.

WhatsApp Group Join Now
Telegram Group Join Now

ಹೌದು ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಆದಿಪುರುಷ್ ಫಸ್ಟ್ ಶೋ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಸಿನಿಮಾದಲ್ಲಿ ಹೊಸತೇನು ಇಲ್ಲ ಅಂತ ಹೇಳಲಾಗ್ತಿದ್ದು, ಶ್ರೀರಾಮನು ವನವಾಸಕ್ಕೆ ಹೊರಡುವ ಸನ್ನಿವೇಶದಿಂದ ಶುರುವಾಗುವ ‘ಆದಿಪುರುಷ್​’ ಚಿತ್ರದ ಕಥೆ, ರಾವಣನ ಸಂಹಾರದಲ್ಲಿ ಅಂತ್ಯವಾಗುತ್ತದೆ. ಇದರ ನಡುವೆ ಬರುವ ಎಲ್ಲ ಪ್ರಮುಖ ಸನ್ನಿವೇಶಗಳನ್ನು ತೆರೆಗೆ ತರಲು ಪ್ರಯತ್ನಿಸಲಾಗಿದೆ. ಶೂರ್ಪನಕಿಯ ಮೂಗನ್ನು ಲಕ್ಷ್ಮಣ ಕೊಯ್ದಿದ್ದು, ಸೀತೆಯನ್ನು ರಾವಣ ಅಪಹರಿಸಿದ್ದು, ರಾಮನನ್ನು ಶಬರಿ ಭೇಟಿ ಆಗಿದ್ದು, ವಾಲಿ-ಸುಗ್ರೀವರ ಯುದ್ಧ, ರಾಮಸೇತು ನಿರ್ಮಾಣ, ಆಂಜನೇಯ ಲಂಕಾ ದಹನ ಮಾಡಿದ್ದು, ಯುದ್ಧದಲ್ಲಿ ಲಕ್ಷ್ಮಣ ಗಾಯಗೊಂಡಿದ್ದು, ಸಂಜೀವಿನಿಗಾಗಿ ಹನುಮಂತನು ಪರ್ವತವನ್ನೇ ಹೊತ್ತು ತಂದಿದ್ದು, ರಾಮ-ರಾವಣನ ನಡುವಿನ ಯುದ್ಧ ನಡೆದಿದ್ದು, ಸೀತೆಯನ್ನು ರಾಮ ಮರಳಿ ಪಡೆದಿದ್ದು ಸೇರಿದಂತೆ ಅನೇಕ ಸನ್ನಿವೇಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಎಲ್ಲ ದೃಶ್ಯವನ್ನು ಮೇಲ್ಮಟ್ಟದಲ್ಲೇ ತೋರಿಸಲಾಗಿದೆಯೇ ಹೊರತು ಯಾವುದರಲ್ಲೂ ಆಳವಾದ ವಿವರಣೆಗಳು ದಕ್ಕುವುದಿಲ್ಲ. ಅಂದ್ರೆ ಪಾತ್ರದ ಒಳ ಹೊಕ್ಕು ಯಾರು ಅಭಿನಯಿಸಿಲ್ಲ, ಎಲ್ಲವನ್ನ ಗ್ರಾಫಿಕ್ ಮೂಲಕವೇ ಮಾಡಿಸಲಾಗಿದೆ. ಆದರೆ ಹನುಮಂತನ ಪಾತ್ರ ಮಾತ್ರ ಸೂಪರ್ ಅನ್ನುತ್ತಿದ್ದಾರೆ.

ಇದನ್ನೂ ಓದಿ: ಗೆಳೆಯನ ಬರ್ತಡೇಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಧ್ರುವ ಸರ್ಜಾ..

ಮೊದಲ ದಿನ ಸಿನಿಮಾ ನೋಡಿ ಅಭಿಮಾನಿಗಳು ಹೇಳಿದ್ದೇನು?

ಹೌದು ರಾಮನ ಪಾತ್ರದಲ್ಲಿ ಪ್ರಭಾಸ್​ ಗಮನ ಸೆಳೆಯುವಂತಹ ಅಭಿನಯವನ್ನೇನು ಮಾಡಿಲ್ಲ, ಅಂದ್ರೆ ಸಿನಿಮಾದ ಶೀರ್ಷಿಕೆ ಆದಿಪುರುಷ್​ ಎಂದಿದ್ದರೂ ಕೂಡ ರಾಮನ ಪಾತ್ರವನ್ನು ಸಮರ್ಥವಾಗಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದಂತಿಲ್ಲ, ಜೊತೆಗೆ ರಾಮನ ಪಾತ್ರದಲ್ಲಿ ಪ್ರಭಾಸ್ ಅಷ್ಟು ಹೈಲೆಟ್ ಆಗಿಲ್ಲ ಅನ್ನೋದು ಅವ್ರ ಅಭಿಮಾನಿಗಳ ಮಾತು. ಇನ್ನು ಸೀತೆ ಪಾತ್ರದಲ್ಲಿರುವ ಕೃತಿ ಸನೋನ್​ ಅವರಿಗೆ ಅಷ್ಟೋ ಇಷ್ಟೋ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ ಅಷ್ಟೇ. ಎಲ್ಲೋ ಕೆಲವೊಮ್ಮೆ ಅತಿಥಿ ಪಾತ್ರದಂತೆ ಬಂದು ಹೋಗುವಂತೆ ಭಾಷವಾಗುತ್ತದೆ. ಆದ್ರೆ ಆಂಜನೇಯನ ಪಾತ್ರ ಮಾಡಿರುವ ದೇವದತ್ತ ನಾಗೆ ಅವರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು, ಪ್ರತಿಯೊಬ್ಬರೂ ಕೂಡ ಆಂಜನೇಯನ ಪಾತ್ರದ ಬಗ್ಗೆಯೇ ಒಳ್ಳೆಯ ಅಭಿಪ್ರಾಯ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ರಾವಣನಾಗಿ ಸೈಫ್​ ಅಲಿ ಖಾನ್​ ಅವರು ಬೇರೆಯದೇ ಮ್ಯಾನರಿಸಂ ಮೂಲಕ ಆರ್ಭಟಿಸಿದ್ದಾರೆ. ಇದನ್ನ ಹೊರತು ಪಡಿಸಿದ್ರೆ, ಸಿನಿಮಾ ತುಂಬಾ ಗ್ರಾಫಿಕ್ಸ್ ಮಾಯವಾಗಿ ಮಾಡಲಾಗಿದ್ದು ಯಾವುದೊ ವಿಡಿಯೋ ಗೇಮ್ ನೋಡಿದಂತಾಗುತ್ತೆ ಅನ್ನೋದು ಅಭಿಮಾನಿಗಳ ಮಾತು. ಒಟ್ಟಿನಲ್ಲಿ ಒಮ್ಮೆ ನೋಡೋದ್ರಲ್ಲಿ ಫ್ಯಾಮಿಲಿ ಅಂದ್ರಲ್ಲೂ ಮಕ್ಕಳಿಗೆ ಸಿನಿಮಾ ತೋರಿಸೋದು ಬಹಳ ಒಳ್ಳೆಯದು ಅನ್ನೋದು ಸಾಕಷ್ಟು ಜನರ ಅಭಿಪ್ರಾಯ.

ಇದನ್ನೂ ಓದಿ: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram