Adipurush Trailer Review: ಹೇಗಿದೆ ‘ಆದಿಪುರುಷ್’ ಟ್ರೈಲರ್.? ಟ್ರೈಲರ್ ನೋಡಿ ಪ್ರಭಾಸ್ ಅಭಿಮಾನಿಗಳು ಹೇಳಿದ್ದೇನು?

Adipurush Trailer Review: ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸದ್ದು ಮಾಡುವ ಮೂಲಕ ‘ಆದಿಪುರುಷ್​’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು, ಈಗ ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರವಾಗ್ತಿದ್ದಂತೆ ಇಂದು ಆದಿಪುರುಷ್​’ ಟ್ರೇಲರ್​ ಬಿಡುಗಡೆ ಆಗಿದೆ. ಹೌದು ಸಿನಿಮಾ ಸೆಟರಿದ ದಿನದಿಂದಲೇ ಸಿನಿಮಾ ಬಗೆಗಿನ ನಿರೀಕ್ಷೆಗಳು ಹೆಚ್ಚಾಗಿದ್ವು ಇದೀಗ ಸಿನಿಮಾ ತೆರೆಕಾಣಲು ಸಜ್ಜಾಗಿದ್ದು ಅದಕ್ಕೂ ಮೊದಲ ಸಿನಿಮಾ ಮೇಲಿನ ಕ್ರೇಜ್ ಇನ್ನಷ್ಟು ಹೆಚ್ಚಿಸಲು ಇದೀಗ ಸಿನಿಮಾ ಕುರಿತದ ಕೆಲವೊಂದು ತುಣುಕುಗಳ ಟ್ರೈಲರ್ ಅನ್ನ ಬಿಡುಗಡೆ ಮಾಡಲಾಗಿದೆ. ರಾಮಾಯಣವನ್ನು ಆಧರಿಸಿ ಈ ಸಿನಿಮಾದ ಕಥೆಯನ್ನ ಹೆಣೆಯಲಾಗಿದ್ದು, ಪ್ರಭಾಸ್​, ಕೃತಿ ಸನೋನ್​ ಆದಿ ಪುರುಷ್ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಗಾದ್ರೆ ಆದಿ ಪುರುಷ್ ಟ್ರೈಲರ್ ಹೇಗಿದೆ, ಟ್ರೈಲರ್ ನೋಡಿದವರು ಏನಂದ್ರು, ಚಿತ್ರ ಯಾವಾಗ ತೆರೆಕಾಣುತ್ತೆ ಎಲ್ಲವನ್ನ ನೋಡೋಣ ಬನ್ನಿ.

WhatsApp Group Join Now
Telegram Group Join Now

ಆದಿಪುರುಷ್​’ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ಕೌತುಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ . ರಾಮಾಯಣವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಓಂ ರಾವತ್​ ಅವರು ನಿರ್ದೇಶನ ಮಾಡಿದ್ದಾರೆ. ರಾಮಾಯಣ ಕಥೆಯನ್ನ ಬಳಸಿಕೊಂಡು ಚಿತ್ರವನ್ನ ನಿರ್ಮಿಸಿರೋದ್ರಿಂದ ಅಲ್ದೇ 5 ಭಾಷೆಗಳಲ್ಲಿ ಚಿತ್ರ ರಿಲೀಸ್ ಗೆ ಸಿದ್ದವಾಗಿರೋದು ಚಿತ್ರರಸಿಕರಿಗೆ ಒಂದು ರೀತಿಯ ರಸದೌತಣವೆ ಸರಿ. ಇನ್ನು ಚಿತ್ರದ ಮುಖ್ಯ ಭೂಮಿಕೆಯಲ್ಲಿ ರಾಮನಾಗಿ ಪ್ರಭಾಸ್​ ಪಾತ್ರಕ್ಕೆ ಜೀವ ತುಂಬಿದ್ರೆ, ಸೀತೆಯಾಗಿ ಕೃತಿ ಸನೋನ್​ ಅದ್ಭುತವಾಗಿ ನಟಿಸಿರುವಂತೆ ಕಾಣ್ತಿದೆ. ಇನ್ನು ರಾವಣನಾಗಿ ಸೈಫ್​ ಅಲಿ ಖಾನ್​ ಮೈನವೀರೇಳಿಸುವಂತೆ ನಟಿಸಿದ್ರೆ, ಆಂಜನೇಯನಾಗಿ ದೇವದತ್ತ​ ನಾಗೆ, ಲಕ್ಷ್ಮಣನಾಗಿ ಸನ್ನಿ ಸಿಂಗ್​ ಅಭಿನಯ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಬಹುದು.ಇನ್ನು ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದ್ದು, ಬಿಡುಗಡೆ ಆಗಿರುವ ಚಿತ್ರದ ಟ್ರೇಲರ್​ನಲ್ಲಿ ಅದರ ಅದ್ದೂರಿತನ ಎದ್ದು ಕಾಣಿಸುತ್ತಿದೆ. ಹೀಗಾಗಿ ದೊಡ್ಡ ಪರದೆಯಲ್ಲಿ ‘ಆದಿಪುರುಷ್​’ ಚಿತ್ರವನ್ನು ನೋಡಲು ಫ್ಯಾನ್ಸ್​ ಅಂತೂ ಟ್ರೈಲರ್ ನೋಡಿ ತುದಿಗಳಿನಲ್ಲಿ ಕಾದು ಕುಳಿತಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ಚಿತ್ರದ ಕ್ರೇಜ್ ಅನ್ನ ಹೆಚ್ಚಾಗುವಂತೆ ಮಾಡಿದೆ.

‘ಆದಿಪುರುಷ್’ ಟ್ರೈಲರ್ : https://youtu.be/6tzI5zwigyY

ಇದನ್ನೂ ಓದಿ: ದರ್ಶನ್ ಸರ್ ಫ್ಯಾನ್ ಆಗಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದೆ! ಈಗ ಏನೇ ಆಗಿದ್ರು ಕಾಲನೇ ಪಾಠ ಕಲ್ಸುತ್ತೆ

ಯೂಟ್ಯೂಬ್ ನಲ್ಲಿ ಕಮಾಲ್ ಮಾಡುತ್ತಿರುವ ‘ಆದಿಪುರುಷ್’

ಭೂಷಣ್‌ ಕುಮಾರ್ ಅವರು ‘ಆದಿಪುರುಷ್​’ ಚಿತ್ರವನ್ನು ನಿರ್ಮಾಣ ಮಾಡಿದ್ದು,ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿರುವುದು ಈ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಅಂತ ಹೇಳಬಹುದು. ಎಲ್ಲಾ ಭಾಷೆಯ ಪ್ರೇಕ್ಷರನ್ನ ಮುಟ್ಟುವಲ್ಲಿ ಈ ಚಿತ್ರ ಯಶಸ್ವಿಯಾಗಬಹುದು. ಇನ್ನು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಈಗಾಗ್ಲೇ ಚಿತ್ರ ತೆರೆಕಾಣಲು ಸಜ್ಜಾಗಿದೆ. ಹೌದು ಇದೆ ಜೂನ್​ 16ರಂದು ಆದಿ ಪುರುಷ್ ಸಿನಿಮಾ ಅದ್ದೂರಿಯಾಗಿ ರಿಲೀಸ್​ ಆಗಲು ರೆಡಿಯಾಗ್ತಿದೆ. ಹೀಗಾಗಿ ಇಂದು ಚಿತ್ರದ ಸಣ್ಣ ಝಲಕ್ ಯೌಟ್ಯೂಬ್ ಗಳಲ್ಲಿ ಕಮಾಲ್ ಮಾಡ್ತಿದೆ. ಚಿತ್ರದ ಟ್ರೈಲರ್ ಇಷ್ಟು ಮಟ್ಟದ ಚರ್ಚೆಗೆ ಕಾರಣವಾಗ್ತಿದ್ರೆ, ಚಿತ್ರದ ಅದ್ರಲ್ಲೂ ಫ್ಯಾನ್ ಇಂಡಿಯಾ ಮಟ್ಟದ ಈ ಚಿತ್ರ ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಬಹುದು ಅನ್ನೋದು ಇದೀಗ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ..

ಹೌದು ಟ್ರೈಲರ್ ನೋಡ್ತಾಯಿದ್ರೆ ಸಿನಿಮಾ ಎಷ್ಟು ಅದ್ದೂರಿಯಾಗಿ ನಿರ್ಮಾಣವಾಗಿದೆ ಅನ್ನೋದು ಅರ್ಥವಾಗ್ತಿದೆ. ಸಿನಿಮಾದ ಪ್ರತಿಯೊಂದು ದೃಶ್ಯಗಳ ಚಿತ್ರಕ್ಕೆ ಬಾರಿ ಮೊತ್ತದ ಹಣವನ್ನ ಖರ್ಚು ಮಾಡಲಾಗಿದೆ ಅನ್ನೋದು ಈ ಸಂಬಂಧ ಝಲಕ್ ಇಂದಲೇ ತಿಳಿಯುತ್ತಿದೆ. ಹೌದು ರಾಮನ ಪಾತ್ರಧಾರಿ ಪ್ರಭಾಸ್ ಅವ್ರ ಎಂಟ್ರಿ, ಅವ್ರಿಗಿರೋ ಮೇಕ್ ಓವರ್, ಸೀತೆ, ರಾವಣ, ಲಕ್ಷ್ಮಣ, ಹನುಮಂತ ಸೇರಿದಂತೆ ಪ್ರತಿಯೊಬ್ಬರ ನಟನೆ ಟ್ರೈಲರ್ ನಲ್ಲಿ ಮನ ಮುಟ್ಟುವಂತಿದೆ. ಪ್ರತಿಯೊಬ್ಬ ಪಾತ್ರಧಾರಿಯು ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇನ್ನೊಂದೆಡೆ ರಾಮಾಯಣವನ್ನ ಕಣ್ಮುಂದೆ ತರುವ ಪ್ರಯತ್ನದಲ್ಲಿ ನಿರ್ದೇಶಕರು ಯಶಸ್ವಿಯಾದಂತೆ ತೋರುತ್ತಿದೆ. ಹೌದು ಸಿನಿಮಾಗೆ ಹಾಕಿರುವ ಅದ್ದೂರಿ ಸೆಟ್, ಕಂಪ್ಲೇಟ್ ಮೇಕ್ ಓವರ್ ಎಲ್ಲವು ಕೂಡ ಬಹಳ ದೊಡ್ಡ ಮಟ್ಟದಲ್ಲಿಯೇ ಇದೆ. ಒಟ್ಟಿನಲ್ಲಿ ಆದಿ ಪುರುಷ್ ಸಿನಿಮಾ ಟ್ರೈಲರ್ ನಿಂದಲೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿರೋದಂತೂ ಸುಳ್ಳಲ್ಲ..

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ನಟ ದರ್ಶನ್ ಬರಲಿಲ್ವಾ? ನಟ ರಕ್ಷಕ್ ಆಮಂತ್ರಣ ಕೊಡದಿರಲು ಕಾರಣ ಏನ್ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram