ಯುವಕ ಯುವತಿಯರಿಗೆ ಮತ್ತೊಂದು ಗುಡ್ ನ್ಯೂಸ್; ರಾಷ್ಟ್ರೀಯ ಯುವದಿನದಂದು ಯುವ ನಿಧಿ ಯೋಜನೆ ಜಾರಿ

Yuva nidhi scheme

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆಯ(Yuva nidhi scheme) ಸೌಲಭ್ಯ ದೊರೆಯಲು ಬಾಕಿ ಇದ್ದು ಇದೀಗ ನಿರುದ್ಯೋಗ ಯುವಕ ಯುವತಿಯರಿಗೆ ಅರ್ಜಿ ಸಲ್ಲಿಕೆ ಮಾಡಲು ಕೂಡ ಅವಕಾಶ ನೀಡಲಾಗಿದೆ. ಈ ಯೋಜನೆ ಮೂಲಕ 3,000 ರೂಪಾಯಿ ಮತ್ತು 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ‌. ಇನ್ನು ಉದ್ಯೋಗ ಸಿಗದೇ ಇದ್ದವರು ಈ ಯೋಜನೆಯಡಿ ಮಾಸಿಕ ಹಣ ಪಡೆಯಲು ಅರ್ಹರಾಗಿದ್ದು ಅರ್ಜಿ ಸಲ್ಲಿಸುವ ಫಲಾನುಭವಿಗಳು 2022-23 ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಅಥವಾ ಪದವಿ ಪಾಸಾಗಿದ್ದರೆ ಮಾತ್ರ ನೊಂದಣಿ ಮಾಡಬಹುದು.

WhatsApp Group Join Now
Telegram Group Join Now

ಈಗಾಗಲೇ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಯುಜನರ ಉನ್ನತಿಗಾಗಿ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯೊಂದಿಗೆ ನಿರುದ್ಯೋಗಿಗಳಿಗೆ ಉದ್ಯಮಶೀಲತೆ ಕಲ್ಪಿಸಿ ಉದ್ಯೋಗ ನೀಡುವ ಗುರಿಯನ್ನು ಸಹ ಹೊಂದಿದೆ. ಯುವನಿಧಿ ಯೋಜನೆಯೊಂದಿಗೆ ನೊಂದಣಿ ಮಾಡಿದ ಫಲಾನುಭವಿಗಳಿಗೆ ಉದ್ಯೋಗ ದೊರಕಿಸಿ ಕೊಡುವಂತಹ ಸಂವಹನ ಕೌಶಲ್ಯ ಕೋರ್ಸ್ , ಉದ್ಯಮಶೀಲತೆ ತರಬೇತಿ, ಸ್ವ ಉದ್ಯೋಗ ತರಭೇತಿ ‌ಇತ್ಯಾದಿ ಗಳನ್ನು ಸಹ ನೀಡಲಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವ ಸುದ್ದಿ ತಿಳಿಸಲಾಗಿದ್ದು, ಏನದು ಹೊಸ ವಿಷಯ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೌಶಲ್ಯ ತರಬೇತಿಯಡಿ ಉದ್ಯೋಗ ನೀಡಲು ಹೊಸ ಪ್ಲಾನ್

DIRP ಕರ್ನಾಟಕ ಈ ಕುರಿಟು ಹೊಸ ಮಾಹಿತಿ ಹಂಚಿಕೊಂಡಿದ್ದು, 2023ರಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಡಿ 2 ವರ್ಷಗಳ ವರೆಗೆ ನಿರುದ್ಯೋಗ ಭತ್ಯೆಯನ್ನು ಪಡೆಯಬಹುದಾಗಿದ್ದು, ಅದಕ್ಕಿಂತ ಮೊದಲು ಉತ್ತೀರ್ಣರಾದ ಯುವಕರು ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅವರಿಗೆ ಬೇಕಾದ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಲು ಪೋರ್ಟಲ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ಕೌಶಲಾಭಿವೃದ್ಧಿ , ಜೀವನೋಪಾಯ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಹೌದು ವಿದ್ಯಾಭ್ಯಾಸ ಪಡೆದ ಯುವಕ ಯುವತಿಯರಿಗೆ ಉದ್ಯೋಗ ದೊರಕಲು ತರಭೇತಿ ಸಹ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳವಂತೆ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ನೈಸ್ ಅಕಾಡೆಮಿ ಎಂಬ ತರಭೇತಿ ಕೇಂದ್ರ ಸ್ಥಾಪಿಸಿದ್ದು ಇದರ ವತಿಯಿಂದ ತರಬೇತಿ ನೀಡಲಾಗುತ್ತದೆ. ಇನ್ನು ರಾಜಧಾನಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು ನಂತರದಲ್ಲಿ ವಿಭಾಗ, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ಆರಂಭ ಮಾಡಲಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಹೀಗಾಗಿ ಯುವನಿಧಿ ಯೋಜನೆಯ(Yuva nidhi scheme) ಹಣವನ್ನ ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ಅಂದರೆ ಜನವರಿ 12 ರಂದು ಡಿ.ಬಿ.ಟಿ. ಮೂಲಕ ಅರ್ಜಿ ಸಲ್ಲಿದವರಿಗೆ ನಿರುದ್ಯೋಗ ಭತ್ಯೆ ಹಣ ಜಮೆ ಮಾಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುದಾದರೆ ಫಲಾನುಭವಿಗಳು ಕರ್ನಾಟಕ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಜೊತೆಗೆ ಗ್ರಾಮ ಒನ್ , ಕರ್ನಾಟಕ ಒನ್ ಗಳಲ್ಲೂ ಅರ್ಜಿ ಸಲ್ಲಿಕೆ ಮಾಡುವ ಅವಕಾಶ ಸಹ ಇದೆ. ಇದರ ಜೊತೆಗೆ ನಿರುದ್ಯೋಗ ನಿರ್ಮೂಲನೆ ಮಾಡಲು ಮತ್ತು ಉದ್ಯೋಗ ಸೃಷ್ಟಿ ಮಾಡೋದ್ರ ಜೊತೆಗೆ ಕೌಶಲ್ಯ ತರಬೇತಿಗಳನ್ನ ಕೊಟ್ಟು ಉದ್ಯೋಗ ದೊರಕಿಸಿ ಕೊಡುವ ಗುರಿಯನ್ನ ಸರ್ಕಾರ ಹಾಕಿಕೊಂಡಿದೆ. ಯೋಜನೆ ಅಡಿಯಲ್ಲಿ ಭತ್ಯೆ ಪಡೆಯುವ ಫಲಾನುಭವಿಗಳಿಗೆ ಉದ್ಯಮ ಶೀಲತಾ ತರಬೇತಿ ನೀಡಲು ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ.ನಿರುದ್ಯೋಗಿಗಳಿಗೆ ಹಣ ನೀಡುವುದಷ್ಟೇ ಅಲ್ಲದೆ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ಅವರು ಸಹ ಉದ್ಯಮಿಗಳಾಗಬೇಕು. ಅವರು ಸಹ ತಮ್ಮ ಸ್ವಂತ ಉದ್ಯಮ ಪ್ರಾರಂಬಿಸಿ ನಿರುದ್ಯೋಗಿಗಳಿಗೆ ಅವರು ಉದ್ಯೋಗ ನೀಡುವಂತವರಾಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಈ ಕಾರಣೆಕ್ಕೆ ಸರ್ಕಾರ ಯುವ ನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯಮ ಶೀಲತಾ ತರಬೇತಿ ನೀಡಲು ಮುಂದಾಗಿದೆ.

ಇದನ್ನೂ ಓದಿ: ರಾಜ್ಯದ ರೈತರು ಬರಪರಿಹಾರ ಪಡೆಯಲು ಈ ಕೆಲಸ ಮಾಡಿ; 2ಸಾವಿರ ಬರ ಪರಿಹಾರ ಪಡೆಯಲು ತಪ್ಪದೆ ಹೀಗ್ ಮಾಡಿ