ಇ-ಶ್ರಮ ಕಾರ್ಡ್ ಎಂದರೆ ದೇಶದ ತುಂಬೆಲ್ಲ ಇರುವ ಅಸಂಘಟಿತ ಕಾರ್ಮಿಕರ ಪೂರ್ವ ವಿವರ ಹೊಂದಿರುವ ಕಾರ್ಡ್ ಆಗಿದೆ. ಭಾರತ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇ-ಶ್ರಮ್ ಕಾರ್ಡ್ ನಿಂದ ಅಸಂಘಟಿತ ವಲಯದ ಕಾರ್ಮಿಕರು ವಿವಿಧ ಪ್ರಯೋಜನಗಳನ್ನು ಒದಗಿಸಲು ಭಾರತ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಹಿಂದೆ ಈ ಯೋಜನೆಯ ಗರಿಷ್ಠ ವಯಸ್ಸಿನ ಮಿತಿ 59 ಆಗಿತ್ತು ಈಗ ರಾಜ್ಯ ಸರ್ಕಾರವು ಅದನ್ನು 70 ವರ್ಷದ ವರೆಗೆ ವಿಸ್ತರಿಸಲಾಗಿದೆ ಎಂದು ಸೋತೋಷ್ ಲಾರ್ಡ್ ತಿಳಿಸಿದ್ದಾರೆ.
ಅಸಂಘಟಿತ ಕಾರ್ಮಿಕರ ಭದ್ರತೆಯ ಸಲುವಾಗಿ 12 ಸಂಖ್ಯೆಗಳ ಗುರುತಿನ ವರ್ಕ್ ಇದಾಗಿದ್ದು ಇದರಲ್ಲಿ ಕಾರ್ಮಿಕನ ಹೆಸರು, ಕಾರ್ಮಿಕನ ವಯಸ್ಸು ಹಾಗೂ ಲಿಂಗ, ಮಾಡುತ್ತಿರುವ ಉದ್ಯೋಗದ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು, ಕೃಷಿ ಕಾರ್ಮಿಕರು , ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಮಾಡುವವರು, ಆಟೋ ಮತ್ತು ಬಸ್ ಚಾಲಕರು, ಬಟ್ಟೆ ಹೋಲೆಯುವವರು ಕಾರ್ಮಿಕರು, ಬೀದಿಯಲ್ಲಿ ಹಣ್ಣು ತರಕಾರಿ ಮಾರುವ ವ್ಯಾಪಾರಿಗಳು 379 ವರ್ಗಗಳ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇ-ಶ್ರಮ ಗುರುತಿನ ಕಾರ್ಡ್ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು: ಆಧಾರ್ ಕಾರ್ಡ್ ಹಾಗೂ ಆಧಾರ್ ಗೆ ಜೋಡಿಸಲಾದ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆ ವಿವರ ಹಾಗೂ ಕೆಲಸ ಮಾಡುವ ವಿಭಾಗದ ಬಗ್ಗೆ ಮಾಹಿತಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ 9000 ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ
ಇ-ಶ್ರಮ ಗುರುತಿನ ಕಾರ್ಡ್ ಪಡೆಯುವುದು ಹೇಗೆ?
- ಇ-ಶ್ರಮ ಅಧಿಕೃತ ವೆಬ್ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ ಹೋಗಿ.
- ಆಧಾರ್ ಕಾರ್ಡ್ ಗೆ ನೀಡಿದ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಹಾಕಬೇಕು ಮತ್ತು ‘send OTP’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಹಾಕಿದ ನಂತರ validity ಬಟನ್ ಒತ್ತಿ.
- ಹೆಸರು, ಲಿಂಗ, ವಯಸ್ಸು, ಹಾಗೂ ವಿಳಾಸವನ್ನು ಹಾಕಿ.
- ವಿದ್ಯಾರ್ಥಿಯ ಬಗ್ಗೆ ಮಾಹಿತಿಯನ್ನು ನಮೂದಿಸಿ.
- ಕೆಲಸದ ವಿವರಗಳನ್ನು ಭರ್ತಿ ಮಾಡಿ
- ಬ್ಯಾಂಕ್ ಖಾತೆಯ ವಿವರವನ್ನು ಭರ್ತಿ ಮಾಡಿ.
- ಒಮ್ಮೆ ಎಲ್ಲಾ ಮಾಹಿತಿಯನ್ನು ಪರಿಶೀಲನೆ ಮಾಡಿ ಓಕೆ ಬಟನ್ ಕ್ಲಿಕ್ ಮಾಡಿ.
ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು:-
ಇ-ಶ್ರಮ್ ಕಾರ್ಡ್ ಹೊಂದಿರುವ ಕಾರ್ಮಿಕರು ರಿಟೈರ್ಮೆಂಟ್ ಪಡೆದ ನಂತರ 3,000 ರೂಪಾಯಿ ಪಿಂಚಣಿ ಹಣವನ್ನು ಪಡೆಯುತ್ತಾರೆ. 2 ಲಕ್ಷ ರೂಪಾಯಿ ಮರಣ ವಿಮೆ ಸಿಗುತ್ತದೆ. ಮತ್ತು ಭಾಗಶಃ ಅಂಗವಿಕಲತೆಯ ಸಂದರ್ಭದಲ್ಲಿ ರೂ.1 ಲಕ್ಷದ ಆರ್ಥಿಕ ನೆರವು ಪಡೆಯುತ್ತಾರೆ. ಯಾವುದೇ ರೀತಿಯ ಅಪಾಯ ಆದಲ್ಲಿ ಅಥವಾ ಕೋವಿಡ್-19 ಅಂತಹ ಸಾಂಕ್ರಾಮಿಕ ರೋಗ ಉಂಟಾದಾಗ ಕಾರ್ಮಿಕರು ಸರ್ಕಾರದಿಂದ ಸಹಾಯ ಪಡೆಯಲು ಅನುಕೂಲ ಆಗಲಿದೆ.
ಇದನ್ನೂ ಓದಿ: ಜನಸಾಮಾನ್ಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ, ಇನ್ನು ಮುಂದೆ ಅಕ್ಕಿ ಮತ್ತು ಗೋಧಿಯನ್ನು ಬಹಳ ರಿಯಾಯಿತಿಯಲ್ಲಿ ಪಡೆಯಬಹುದು