ಆನ್ಲೈನ್ ಮೂಲಕ ಪ್ರತಿ ತಿಂಗಳು ಕರೆಂಟ್ ಬಿಲ್ ಪಾವತಿ ಮಾಡುವವರು ಇದ್ದರೆ ಹಾಗೂ ಹೊಸದಾಗಿ ಆನ್ಲೈನ್ ನಲ್ಲಿ ವಿದ್ಯುತ್ ಸಂಪರ್ಕಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವವರು ಇದ್ದರೆ ಹಾಗೂ ಹೆಸರು ಹಾಗೂ ವಿಳಾಸ ಬದಲಾವಣೆ ಹೀಗೆ ಯಾವುದೇ ಆನ್ಲೈನ್ ಸೇವೆಗಳನ್ನು ಪಡೆಯಬೇಕು ಎಂದರೆ ಹತ್ತು ದಿನಗಳ ಕಾಲ ವಿದ್ಯುತ್ ಇಲಾಖೆಗಳ ಆನ್ಲೈನ್ ಸೇವೆ ಲಭ್ಯವಿರುವುದಿಲ್ಲ. ಇದಕ್ಕೆ ಕಾರಣ ಏನು ಹಾಗೂ ಪೂರ್ಣ ವಿವರಗಳನ್ನು ಈ ಲೇಖನದಲ್ಲಿ ಓದಿ.
ಕಾರಣ ಏನು?: ಈ ಬಗ್ಗೆ ಇಂಧನ ಇಲಾಖೆಯು ಪ್ರಕಟಣೆ ಹೊರಡಿಸಿದ್ದು, ಸಾಫ್ಟ್ವೇರ್ ಅಪ್ಡೇಟ್ ಮಾಡಲು 10 ದಿನಗಳ ಕಾಲ ಆನ್ಲೈನ್ ವ್ಯವಸ್ಥೆಗಳು ಬಂದ್ ಆಗಲಿದೆ ಎಂದು ತಿಳಿಸಲಾಗಿದೆ. ತಂತ್ರಾಂಶ ಉನ್ನತೀಕರಣದ ಕಾರಣದಿಂದಾಗಿ ಆನ್ಲೈನ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಇದರಿಂದ ಯಾವುದೇ ರೀತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಥವಾ ವಿದ್ಯುತ್ ಕಡಿತವಾಗಲಿ ಮಾಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೇ ಬರುವ ಮಾರ್ಚ್ 10 ನೇ ತಾರೀಖಿನಿಂದ ಮಾರ್ಚ್ 19 ನೇ ತಾರೀಖಿನ ವರೆಗೆ ಆನ್ಲೈನ್ ವ್ಯವಸ್ಥೆ ಸ್ಥಗಿತ ಮಾಡಲಾಗುತ್ತದೆ. ಮಾರ್ಚ್ 20ರ ನಂತರ ಎಲ್ಲಾ ಆನ್ಲೈನ್ ಸೇವೆಗಳು ಮೊದಲಿನಂತೆಯೇ ಲಭ್ಯವಿರಲಿದೆ ಎಂದು ತಿಳಿಸಿದರು. ಆದರೆ ಈ ಸಂದರ್ಭದಲ್ಲಿ ವಿದ್ಯುತ್ ಮಾಪನ ಬಿಲ್ ನೀಡುವ ಉದ್ಯೋಗಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾವ ಯಾವ ವಿದ್ಯುತ್ ಎಸ್ಕಾಂಗಳಲ್ಲಿ ಈ ವ್ಯತ್ಯಯ ಉಂಟಾಗಲಿದೆ?
ರಾಜ್ಯದ ಐದು ಪ್ರಮುಖ ಎಸ್ಕಾಂಗಳದ ಬೆಸ್ಕಾಂ, ಸೆಸ್ಕ್ , ಮೆಸ್ಕಾಂ, ಜೆಸ್ಕಾಂ ಹಾಗೂ ಹೆಸ್ಕಾಂ ನಲ್ಲಿ ಈ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ದಯಮಾಡಿ ಸಹಕರಿಸಬೇಕು ಎಂಬುದು ಇಲಾಖೆಯು ಕೋರಿದೆ.
ಕೆಳಗಿನ ನಗರಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ಆನ್‌ಲೈನ್ ಸೇವೆಗಳು 10 ದಿನಗಳ ಕಾಲ ಲಭ್ಯವಿರುವುದಿಲ್ಲ.
ಬೆಸ್ಕಾಂ :- ಮುಳುಬಾಗಿಲು, ಶಿಡ್ಲಘಟ್ಟ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಕೆ.ಜಿ.ಎಫ್, ಚಿಂತಾಮಣಿ, ಹೊಸಕೋಟೆ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತಿಪಟೂರು, ಹರಿಹರ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಬಂಗಾರಪೇಟೆ, ಚಳ್ಳಕೆರೆ, ಕುಣಿಗಲ್, ಬೆಂಗಳೂರು, ಹರಪ್ಪನಹಳ್ಳಿ, ಹಿರಿಯೂರು, ಗೌರಿಬಿದನೂರು.
ಮೆಸ್ಕಾಂ: ಶಿವಮೊಗ್ಗ, ಭದ್ರಾವತಿ, ಕಡೂರು, ಮಂಗಳೂರು, ಬಂಟ್ವಾಳ, ತರೀಕೆರೆ, ಉಡುಪಿ, ಶಿಕಾರಿಪುರ, ಸಾಗರ, ಪುತ್ತೂರು ಹಾಗೂ ಚಿಕ್ಕಮಗಳೂರು.
ಜೆಸ್ಕಾಂ: ಕಂಪ್ಲಿ, ಗುಲ್ಬರ್ಗ, ಮಾನವಿ, ಹುಮ್ಮಾಬಾದ್, ಭಾಲ್ಕಿ ಸಿಂಧನೂರು, ಬೀದರ್, ಗಂಗಾವತಿ, ಹೊಸಪೇಟೆ, ಸೇಡಂ, ಶಹಾಬಾದ್, ಬಸವಕಲ್ಯಾಣ, ಶೋರಾಪುರ, ವಾಡಿ, ಅಲನಾಡ್, ಶಹಾಪುರ, ಸಿರಗುಪ್ಪಾ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ.
ಹೆಸ್ಕಾಂ: ಮಹಾಲಿಂಗಪುರ, ಕುಮಟಾ, ರಾಣೆಬೆನ್ನೂರು, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಗದಗ, ಗುಳೇದಗುಡ್ಡ, ಗೋಕಾಕ್, ಬೆಳಗಾವಿ, ಕಾರವಾರ, ಹಾವೇರಿ, ನಿಪ್ಪಾಣಿ, ಜಮಖಂಡಿ, ಇಳಕಲ್, ಬೈಲಹೊಂಗಲ, ಲಕ್ಷ್ಮೀಶ್ವರ, ನರಗುಂದ, ವಿಜಯಪುರ ಪಟ್ಟಣ, ರಾಮದುರ್ಗ, ಚಿಕ್ಕೋಡಿ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸವನೂರು, ಸಿರ್ಸಿ, ಸಿದ್ದಾಪುರ , ರಬಕವಿ-ಬನಹಟ್ಟಿ, ಮುಧೋಳ.
ಸೆಸ್ಕ್: ಅರಸೀಕೆರೆ, ಮೈಸೂರು, ಮಳವಳ್ಳಿ, ಮಡಿಕೇರಿ, ಕೊಳ್ಳೆಗಾಲ, ಚನ್ನರಾಯಪಟ್ಟಣ, ಮಂಡ್ಯ, ಚಾಮರಾಜನಗರ, ಹುಣಸೂರು, ಕೆ ಆರ್ ನಗರ, ಹಾಸನ, ನಂಜನಗೂಡು.
ಈ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಪರಿಣಿತ ತಂತ್ರಜ್ಞರ(IT) ತಂಡ 24/7 ಕಾರ್ಯನಿರ್ವಹಿಸಲಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಎಸ್ಕಾಂ ಶಾಖೆಯನ್ನು ಸಂಪರ್ಕಿಸಿ.
ಇದನ್ನೂ ಓದಿ: ವಿಶೇಷವಾಗಿ ಕಾರು ಪ್ರಿಯರಿಗೆ, ನಿಮ್ಮ ಕಾರಿನಲ್ಲಿ ತಪ್ಪಾಗಿ ಜೋಡಿಸಲಾದ ಚಕ್ರಗಳಿಂದ ಉಂಟಾಗುವ ಡೇಂಜರಸ್ ಸಮಸ್ಯೆಗಳು ಏನು ಗೊತ್ತಾ?
ಇದನ್ನೂ ಓದಿ: ಚೀನಾದ ಕಂಪನಿಯು ಹೊಸ ಕಾರನ್ನು ಬಿಡುಗಡೆ ಮಾಡಿದೆ, ಏನು ವ್ಯತ್ಯಾಸ ಅಂತೀರಾ ನೀವೇ ನೋಡಿ!