Amruthadhare Serial Cast: ಅಮೃತಧಾರೆ ಧಾರಾವಾಹಿಯ ನಟ ನಟಿಯರ ನಿಜವಾದ ಹೆಸರು..

Amruthadhare Serial Cast: ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿದ್ದು. ಇನ್ನು ಹಲವಾರು ಹೊಸ ಹೊಸ ಧಾರವಾಹಿಗಳು ಸೇರ್ಪಡೆ ಆಗುತ್ತಿವೆ. ಇನ್ನು ಸ್ವಲ್ಪ ದಿನಗಳ ಹಿಂದೆ ಎಷ್ಟೇ ಭೂಮಿಗೆ ಬಂದ ಭಗವಂತ ಸೀರಿಯಲ್ ಸೇರ್ಪಡೆ ಆಗಿತ್ತು. ಈಗ ಹೊಸ ಧಾರವಾಹಿಗಳ ಲಿಸ್ಟ್ ಗೆ ಅಮೃತದಾರೆ ಸೀರಿಯಲ್ ಕೂಡ ಸೇರ್ಪಡೆ ಯಾಗಿದೆ. ಈ ಸೀರಿಯಲ್ ಸೋಮವಾರದಿಂದ ಅಂದರೆ ನೆನ್ನೆ ಯಿಂದ ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಗೆ ಪ್ರಸಾರ ಶುರು ಮಾಡಿದೆ. ಈ ಸೀರಿಯಲ್ ಒಂದು ರೀತಿಯಲ್ಲಿ ಸೆಲೆಬ್ರಿಟಿಗಳ ಸೀರಿಯಲ್ ಅಂತಾನೆ ಹೇಳಬಹುದು. ಹೌದು ಈ ಸೀರಿಯಲ್ ನಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಹೆಚ್ಚು ನಟ ನಟಿಯರು ಈಗಾಗಲೇ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ಕಲಾವಿದರೆ ಆಗಿದ್ದಾರೆ. ಇನ್ನು ಈ ಸೀರಿಯಲ್ ನ ಪ್ರೋಮೋ ಗಳಿಗೆ ಹೆಚ್ಚು ಜನಮನ್ನಣೆ ಸಿಕ್ಕಿತ್ತು. ಇವತ್ತಿಗೆ ಈ ಸೀರಿಯಲ್ ನ ಎರೆಡು ಎಪಿಸೋಡ್ ಮೂಡಿಬಂದಿದ್ದು ಸಾಕಷ್ಟು ಜನಕ್ಕೆ ಇಷ್ಟ ಆಗಿದೆ ಅಂತಾನೆ ಹೇಳಬಹುದು. ಇನ್ನೂ ಅಮೃತಧಾರೆ ಪ್ರಸಾರವಾಗುವುದಕ್ಕಿಂತ ಮೊದಲು 7 ಗಂಟೆಗೆ ಹಿಟ್ಲರ್ ಕಲ್ಯಾಣ ಸೀರಿಯಲ್ ಪ್ರಸಾರವಾಗುತ್ತಿತ್ತು. ಆದರೆ ಅಮೃತಧಾರೆ ಪ್ರಸಾರ ಶುರು ಮಾಡಿದ ನಂತರ ಹಿಟ್ಲರ್ ಕಲ್ಯಾಣ ಸೀರಿಯಲ್ 6:30ಕ್ಕೆ ಪ್ರಸಾರವಾಗುತ್ತಿದೆ. ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಹೆಚ್ಚು ಟಿ ಆರ್ ಪಿ ಪಡೆಯುವ ಸೀರಿಯಲ್ ಗಳೇ ಪ್ರಸಾರವಾಗುತ್ತಿದ್ದು . ಇನ್ನು ಈ ಲಿಸ್ಟ್ ಗೆ ಅಮೃತಧಾರೆ ಸೀರಿಯಲ್ ಕೂಡ ಸೇರ್ಪಡೆ ಆಗುತ್ತಾ ಎಂದು ಕಾದು ನೋಡಬೇಕು. ಇನ್ನೂ ಅಮೃತಧಾರೆ ಸೀರಿಯಲ್ ನ ಕೆಲವು ನಟ ನಟಿಯರ ಪಾತ್ರದ ಹೆಸರು ಮತ್ತು ನಿಜವಾದ ಹೆಸರು ಇವೆರಡನ್ನು ನೋಡೋಣ ಬನ್ನಿ. ಮುಂದೆ ಓದಿ,

WhatsApp Group Join Now
Telegram Group Join Now

ಇದನ್ನೂ ಓದಿ: ಛಾಯಾಸಿಂಗ್ ಕನ್ನಡ ಸಿನಿರಂಗದಿಂದ ದೂರ ಉಳಿಯಲು ನಿರ್ದೇಶಕರೊಬ್ಬರು ಹಿಯಾಳಿಸಿದ್ದೆ ಕಾರಣವಂತೆ! ಇವರ ಪತಿ ಕೂಡ ಸ್ಟಾರ್ ನಟ..

ಅಮೃತಧಾರೆ ಕಲಾವಿದರ ನಿಜವಾದ ಹೆಸರು

ಪಾತ್ರದ ಹೆಸರು ನಿಜವಾದ ಹೆಸರು
ಭೂಮಿಕ ಛಾಯಾ ಸಿಂಗ್
ಗೌತಮ್ ರಾಜೇಶ್ ನಟರಂಗ
ಮಂದಾಕಿನಿ ಚಿತ್ರ ಶೆಣೈ
ಜೈದೇವ್ ರಣವ್
ಜೀವಾ ಶಶಿ ಹೆಗಡೆ
ಮಹಿಮಾ ಸಾರ ಅಣ್ಣಯ್ಯ
ಶಕುಂತಲಾ ವನಿತ ವಾಸು
ಸದಾಶಿವ ಸಿಹಿ ಕಹಿ ಚಂದ್ರು
ಅಪರ್ಣ ಸ್ವಾತಿ

 

ಇದನ್ನೂ ಓದಿ: ನಟ ರಾಜೇಶ್ ನಟರಂಗ ಹೆಂಡತಿ ಮತ್ತು ಮಗಳು ಯಾರು ಹೇಗಿದ್ದಾರೆ? ಮಗಳು ಕೂಡ ಫೇಮಸ್ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram