ಇವತ್ತಿನ ಲೇಖನದಲ್ಲಿ ಅನ್ನ ಭಾಗ್ಯದ ಹಣದ ಕುರಿತು ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳೋಣ. ಅನ್ನ ಭಾಗ್ಯದ ಹಣ ಬಿಡುಗಡೆಯಾಗಿದೆ. ಕೆಲವರ ಖಾತೆಗೆ ಈ ಅನ್ನಭಾಗ್ಯದ ಹಣವು ಕೂಡ ಜಮಾ ಆಗಿದೆ. ಹಾಗಾದರೆ ನಿಮ್ಮ ಖಾತೆಗೆ ಬಂದಿಲ್ಲ ಅಂತಾದ್ರೆ ಈ ಹಣವನ್ನ ನೀವು ಪಡೆದುಕೊಳ್ಳಲು ಯಾವ ಮಾರ್ಗವನ್ನು ಅನುಸರಿಸಬೇಕು ಹೇಗೆ ಈ ಹಣವನ್ನ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳೋಣ. ಮೊದಲು ರಾಜ್ಯ ಸರ್ಕಾರವು ಅಕ್ಕಿಯನ್ನು ಕೊಡುವುದಾಗಿ ಹೇಳಿಕೆ ನೀಡಿತ್ತು. ಆದರೆ ಅಕ್ಕಿಯ ಸರಬರಾಜು ಕೊರತೆಯಿಂದಾಗಿ ಅಕ್ಕಿಯ ಬದಲು ಹಣವನ್ನ ಕೊಡುವುದಾಗಿ ನಮ್ಮ ರಾಜ್ಯ ಸರ್ಕಾರ ತಿಳಿಸಿದೆ. ಪ್ರತಿಯೊಂದು ಜಿಲ್ಲೆ ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ಹಂತ ಹಂತವಾಗಿ ಹಣವು ವರ್ಗಾವಣೆಯಾಗುವುದು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.
ಹಾಗಾದರೆ ನಿಮ್ಮ ಖಾತೆಗೆ ಎಷ್ಟು ಹಣ ವರ್ಗಾವಣೆ ಆಗಿದೆ ಯಾರ ಯಾರ ಖಾತೆಗಳಿಗೆ ಹಣ ಬಂದಿದೆ ಎಂದು ತಿಳಿಯಲು ಸರ್ಕಾರವು ಒಂದು ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದೆ. ಆ ವೆಬ್ ಸೈಟ್ ಮೂಲಕ ನೀವು ಪೂರ್ತಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಒಂದು ಕೋಟಿ ಕುಟುಂಬಗಳನ್ನ ಸೇರಿ 566 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ. ಎಂದು ಸ್ವತಹ ಆಹಾರ ಸಚಿವ ಮುನಿಯಪ್ಪ ಅವರೇ ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಒಂದು ಪಾಯಿಂಟ್ 28 ಜನರು ರೇಷನ್ ಕಾರ್ಡ್(Ration Card )ಅನ್ನ ಹೊಂದಿದ್ದು, ಒಟ್ಟು ನಾಲ್ಕು ಕೋಟಿಗೂ ಅಧಿಕ ಫಲಾನುಭವಿಗಳು ಇದ್ದಾರೆ ಅದರಲ್ಲಿ ಇಲ್ಲಿಯವರೆಗೆ ಒಂದು ಕೋಟಿಯಷ್ಟು ಕುಟುಂಬಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಣ ಬಿಡುಗಡೆ ಆಗಿದ್ದೇನು ಸರಿ ಆದರೆ ಎಷ್ಟು ಜನರ ಖಾತೆಗೆ ಹಣವು ಬಂದು ತಲುಪಿದೆ ಎನ್ನುವ ಮಾಹಿತಿಯನ್ನು ನಾವು ಲೆಕ್ಕ ಹಾಕುತ್ತಾ ಹೋದರೆ ಒಟ್ಟು 28 ಲಕ್ಷ ಕುಟುಂಬಗಳಲ್ಲಿ ಇಲ್ಲಿಯವರೆಗೆ ಒಂದು ತಿಂಗಳು ಕೂಡ ಯಾರು ರೇಷನನ್ನ ಪಡೆದಿಲ್ಲ.
ಇನ್ನು ಕೆಲವು ಜನರ ಬ್ಯಾಂಕ್ ಖಾತೆಗಳು ತಾತ್ಕಾಲಿಕವಾಗಿ ಬಂದಾಗಿವೆ ಇನ್ನು ಕೆಲವರಿಗೆ ಆಧಾರ ಕಾರ್ಡ್ ಲಿಂಕ್ ಆಗಿಲ್ಲ ಹಾಗಿದ್ದು ಇನ್ನೂ ಹಲವರಲ್ಲಿ ಅವಶ್ಯಕತೆ ಇಲ್ಲದೆ ಇದ್ದರೂ ಕೂಡ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ ಅಂತ ಅವರ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಅವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಆದರೂ ಕೂಡ ಇನ್ನೂ ಕೆಲವರ ಖಾತೆಗೆ ಹಣವು ಬಂದಿಲ್ಲ. ಇದರ ಬಗ್ಗೆ ಮಾಹಿತಿ ಕೂಡ ಸರಿಯಾಗಿ ಸಿಕ್ಕಿಲ್ಲ. ಇನ್ನು ಕೆಲವರ ಎಲ್ಲಾ ಖಾತೆಗಳು ಸರಿಯಾಗಿದ್ದೋ ಮೊಬೈಲ್ ಲಿಂಕ್ ಆಗಿದ್ದು ಎಲ್ಲ ವಿವರಗಳು ಸರಿಯಾಗಿದ್ದರೂ ಕೂಡ ಹಣವು ಬಂದಿಲ್ಲ ಇದು ಎಲ್ಲರನ್ನೂ ಕೂಡ ಆತಂಕಕ್ಕೆ ನೂಕಿದೆ. ಈಗ ನೀವು ಏನು ಮಾಡಬೇಕಿದೆ ಅಂತ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಗೆ ಹೋಗಿ ಬ್ಯಾಂಕ್ ಖಾತೆಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ನಿಮ್ಮಇ -ಕೆವೈಸಿ ಯನ್ನು ಮಾಡಿಸಿ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅನ್ನಭಾಗ್ಯದ ಹಣವನ್ನು ಪಡೆದವರು, ಜಮಾ ಆಗಿದೆಯೇ ಇಲ್ಲವೇ ಎಂಬುದನ್ನ ನಾವು ಈ ರೀತಿಯಲ್ಲಿ ನೋಡಬಹುದು.
ನಿಮ್ಮ ಆಹಾರ ಇಲಾಖೆಯನ್ನ ಒಮ್ಮೆ ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ. ಮೊದಲೇ ತಿಳಿಸಿರುವಂತೆ ನಿಮ್ಮ ಬಿಪಿಎಲ್ ಕಾರ್ಡ್ಗಳಿಗೆ ಬ್ಯಾಂಕ್ ಖಾತೆ ಲಿಂಕ್ ಆಗದೆ ಇದ್ದಲ್ಲಿ ನಿಮಗೆ ಹಣ ಬರುವುದಿಲ್ಲ ಎಂದು ಮೊದಲೇ ರಾಜ್ಯ ಸರ್ಕಾರ ಸೂಚನೆಯನ್ನು ಕೊಟ್ಟಿತ್ತು. ಎಲ್ಲಾ ಡಾಕ್ಯುಮೆಂಟ್ಸ್ ಗಳನ್ನ ಪರಿಶೀಲಿಸಿಕೊಳ್ಳಿ. ಎಲ್ಲವೂ ಸರಿಯಾಗಿದ್ದರೆ ನೀವು ಹಣವನ್ನು ಪಡೆಯಲು ಅರ್ಹರಾಗಿರುತ್ತೇವೆ
ಮೊದಲನೆಯದಾಗಿ ಆಹಾರ ವೆಬ್ಸೈಟ್ ಗಳಿಗೆ ಭೇಟಿ ನೀಡಿ, ಅದರಲ್ಲಿ ಬರುವ ಈ ಸ್ಟೇಟಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಬರುವ ಡಿ ಬಿ ಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಎಲ್ಲ ಜಿಲ್ಲೆಗಳ ಪಟ್ಟಿ ಅಲ್ಲಿ ಬರುತ್ತದೆ. ನಿಮ್ಮ ಜಿಲ್ಲೆ ಯಾವುದು ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಬಿಟಿಸ್ ಸ್ಟೇಟಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನ ಅಲ್ಲಿ ನಮೂದಿಸಬೇಕಾಗುತ್ತದೆ. ಹಣ ಯಾರ ಹೆಸರಿಗೆ ಜಮಾ ಆಗಬೇಕು ಅವರ ಹೆಸರು ರೇಷನ್ ಕಾರ್ಡ್ ನಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ಮೊದಲು ಪರಿಶೀಲಿಸಿಕೊಳ್ಳಿ. ಹೀಗೆ ನೀವು ಯಾರ ಹೆಸರಿಗೆ ಹಣ ಜಮಾ ಆಗಬೇಕು ಅವರಿಗೆ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಬಹುದು.
ಇದನ್ನೂ ಓದಿ: ನಿಜವಾಗ್ತಿದ್ಯ ಕೋಡಿ ಶ್ರೀಗಳು ನುಡಿದ ಭವಿಷ್ಯ; ಇಸ್ರೇಲ್ ಹಾಗೂ ಪ್ಯಾಲೇಸ್ತೇನ್ 2ದೇಶಗಳ ನಡುವಿನ ಯುದ್ಧ ಇದಕ್ಕೆ ಸಾಕ್ಷಿನಾ?
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್; ಬಿಡುಗಡೆ ಆಗಲಿದೆ 2ನೇ ಕಂತಿನ ಹಣ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram