ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಆ 5 ಗ್ಯಾರಂಟಿಗಳಲ್ಲಿ, ಅನ್ನಭಾಗ್ಯ ಯೋಜನೆ ಕೂಡ ಒಂದು. ಹೌದು ಚುನಾವಣೆಗೂ ಮುನ್ನವೇ 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಇದೀಗ ಹೇಳಿದಂತೆ 10 ಕೆಜಿ ಕೊಡುವುದಕ್ಕೆ ಸಾಧ್ಯವಾಗದೆ, ಈಗಾಗಲೇ ಕೇಂದ್ರದಿಂದ ಪೂರೈಕೆ ಆಗುವ 5 ಕೆಜಿ ಅಕ್ಕಿ ಹಾಗು ಉಳಿದ ಭರವಸೆಯ 5 ಕೆಜಿ ಅಕ್ಕಿಗೆ ಹಣ ಕೊಡೋದಾಗಿ ಹೇಳಿ ಈಗ ಹಣ ಪಾವತಿ ಮಾಡುತಿತ್ತು. ಹೌದು 5kg ಅಕ್ಕಿಗೆ 170 ರುಪಾಯಿ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುತಿತ್ತು. ಹೌದು ಎಲ್ಲ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿ, ಐದು ಕೆಜಿ ಅಕ್ಕಿ ಬದಲಿಗೆ ಸರ್ಕಾರ ಕೊಳ್ಳುವ ದರ ಪ್ರತಿ ಕೆಜಿಗೆ 34 ರೂಪಾಯಿಯಂತೆ ಒಟ್ಟು 5 ಕೆಜಿ ಅಕ್ಕಿಗೆ 170 ರೂಪಾಯಿ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಇನ್ನು ಕಾರ್ಡ್ನಲ್ಲಿ ಕುಟುಂಬದ ಮುಖ್ಯಸ್ಥರು ಎಂದು ನಿಗದಿಯಾಗಿರುವ ಹೆಸರಿನವರ ಅಕೌಂಟ್ಗೆ ಹಣ ವರ್ಗಾವಣೆ ಮಾಡಲಾಗ್ತಿದ್ದು, ಒಟ್ಟು 1 ಕೋಟಿ 28 ಲಕ್ಷದ 16 ಸಾವಿರದ 253 ಮಂದಿ ಫಲಾನುಭವಿಗಳಲ್ಲಿ ಶೇಕಡ 82ರಷ್ಟು ಮಂದಿ ತಕ್ಷಣ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಅಲ್ದೇ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮಾತ್ರ ಹಣ ವರ್ಗಾವಣೆ ಸುಲಭ ಆಗಲಿದೆ ಅಂತ ಹೇಳಿದ್ದ ರಾಜ್ಯ ಸರ್ಕಾರ ಇದೀಗ ಈ ತಾಲ್ಲೂಕಿನ ಜನರಿಗೆ ನಾವು ಅಕ್ಕಿ ಹಣ ಹಾಕೋಲ್ಲ ಅಂತ ನೇರವಾಗಿ ಹೇಳ್ತಿದ್ದು, ಯಾವಾಗಿನಿಂದ ಈ ಯೋಜನೆ ಜಾರಿ ಮಾತ್ತೆ ಕಾರಣ ಏನು ನೋಡೋಣ ಬನ್ನಿ.
ಇದನ್ನೂ ಓದಿ: ಬಂದೇ ಬಿಡ್ತು ಬಿಗ್ ಬಾಸ್ ಮೊದಲ ಪ್ರೋಮೋ; ಬಿಗ್ ಬಾಸ್ ಸೀಸನ್ 10ಕ್ಕೆ ಮುಹೂರ್ತ ಫಿಕ್ಸ್
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಯೋಜನೆಯ ಹಣ ಯಾರಿಗೆ ಸಿಗುತ್ತೆ ಮತ್ಯಾರಿಗೆ ಸಿಗಲ್ಲ?
ಹೌದು ರಾಜ್ಯದ ಬರ ಪೀಡಿತ ತಾಲೂಕುಗಳಿಗೆ ಹಣದ ಬದಲು 10 ಕೆಜಿ ಅಕ್ಕಿ ನೀಡಲಾಗುವುದು ಅಂತ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಘೋಷಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 114 ಬರ ಪೀಡಿತ ತಾಲ್ಲೂಕುಗಳಲ್ಲಿ ಹತ್ತು ಕೆಜಿ ಅಕ್ಕಿ ಪೂರೈಕೆ ಮಾಡಲಾಗುವುದು. 5 ಕೆ ಜಿ ಅಕ್ಕಿ ಹಾಗೂ ಹಣ ನೀಡಲಾಗಿತ್ತು. ಆದರೆ, ಇದೀಗ ಒಟ್ಟು 10 ಕೆ ಜಿ ಅಕ್ಕಿ ಪೂರೈಕೆ ಮಾಡುತ್ತೇವೆ. ಬರಪೀಡಿತ ತಾಲ್ಲೂಕುಗಳ ಪಟ್ಟಿ ಘೋಷಣೆ ಆಗುತ್ತಿದ್ದಂತೆ ಹತ್ತು ಕೆಜಿ ಅಕ್ಕಿ ಪೂರೈಕೆ ಮಾಡುತ್ತೇವೆ ಅಂತ ಹೇಳಿರುವ ಅವ್ರು ಇನ್ನೊಂದು ವಾರದಲ್ಲಿ ಹತ್ತು ಕೆಜಿ ಅಕ್ಕಿ ಪೂರೈಕೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ಆಂಧ್ರ, ತೆಲಂಗಾಣ ಮತ್ತು ಛತ್ತೀಸ್ಗಢ ದಿಂದ ಅಕ್ಕಿ ಕೊಡಲು ಮುಂದೆ ಬಂದಿದ್ದಾರೆ.
ಹೀಗಾಗಿ ದರ ನಿಗದಿಯ ಚರ್ಚೆ ನಡೆಯುತ್ತಿದೆ. ಇನ್ನೊಂದು ಹತ್ತು ದಿನದಲ್ಲಿ ಎಲ್ಲವೂ ಅಂತಿಮವಾಗಬಹುದು. ಎಫ್‌ಸಿಐ ದರದಲ್ಲೇ ಇಲ್ಲೂ ಅಕ್ಕಿ ಖರೀದಿಸಬೇಕು ಎಂಬ ಲೆಕ್ಕಾಚಾರದಲ್ಲಿ ಚರ್ಚೆ ನಡೆಯುತ್ತಿದೆ ಅಂತ ಹೇಳಿರುವ ಅವ್ರು, ಜುಲೈ ತಿಂಗಳಿನಲ್ಲಿ 97 ಲಕ್ಷ ಕಾರ್ಡ್‌ದಾರರಿಗೆ ಡಿಬಿಟಿ ಮಾಡಿದ್ದೇವೆ. 3.45 ಕೋಟಿ ಜನರಿಗೆ 566 ಕೋಟಿ ರೂಪಾಯಿ ಬೇಕಾಗುತ್ತದೆ. ಆಗಸ್ಟ್ ತಿಂಗಳಲ್ಲಿ 3.69 ಕೋಟಿ ಜನರಿಗೆ 606 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಬ್ಯಾಂಕ್ ಅಕೌಂಟ್ ಇಲ್ಲದ, 21 ಲಕ್ಷ ಜನರಿದ್ದಾರೆ. 2 ಲಕ್ಷ ಜನರಿಗೆ ನಾವೇ ಬ್ಯಾಂಕ್ ಅಕೌಂಟ್ ಮಾಡಿದ್ದೇವೆ. 14 ಲಕ್ಷ ಜನರಿಗೆ ನಾವೇ ಅಕೌಂಟ್ ಮಾಡ್ತಾ ಇದ್ದೇವೆ. ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ ಅಂತ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಇನ್ನು ಬರಗಾಲ ಪಿಡಿತ ಅಂತ ಘೋಷಣೆ ಆಗಿರೋ ತಾಲೂಕುಗಳಲ್ಲಿ ಹಣಕ್ಕಿಂತ ಅಕ್ಕಿಯ ಅವಶ್ಯಕತೆ ಹೆಚ್ಚಾಗಿರುವ ಕಾರಣ ಈ ತಾಲೂಕುಗಳಿಗೆ 5 ಕೆಜಿ ಅಕ್ಕಿಯ ಹಣದ ಬದಲು ಕೇಂದ್ರ ಸರ್ಕಾರ ಕೊಡುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದಲೂ ಕೂಡ 5 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಅಂತ ಇದೀಗ ಕೆಎಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.. ಇನ್ನು ಜಿಲ್ಲೆಗಳಲ್ಲಿ ಕೆಲವೊಂದು ತಾಲೂಕುಗಳು ಬರಗಾಲ ಪೀಡಿತ ತಾಲೂಕುಗಳಾಗಿದ್ದು ಇಲ್ಲಿ ಆಹಾರದ ಅನಿವಾರ್ಯತೆ ಜೊತೆಗೆ ಅವಶ್ಯಕತೆ ಹೆಚ್ಚಿಗೆ ಇರೋದ್ರಿಂದ ಇಲ್ಲಿ ಅಕ್ಕಿಯ ಹಣದ ಬದಲು ಅಕ್ಕಿಯನ್ನು ಕೊಡಲು ತೀರ್ಮಾನವನ್ನು ಮಾಡಿದ್ದು ಈಗಾಗಲೇ ಕೆಲ ರಾಜ್ಯಗಳ ನಾಯಕರ ಜೊತೆ ಮಾತನಾಡಿದ್ದು ಆಂಧ್ರ ತೆಲಂಗಾಣ ಛತ್ತೀಸ್ಗಡ್ ರಾಜ್ಯದಿಂದ ಅಕ್ಕಿಯನ್ನು ತರಲು ತೀರ್ಮಾನಿಸಿದ್ದು ಆ ರಾಜ್ಯದವರು ಕೂಡ ಅಕ್ಕಿಯನ್ನು ಕೊಡಲು ನಿರ್ಧರಿಸಿದ್ದಾರೆ ಹೀಗಾಗಿ ಅಕ್ಕಿಗೆ ಎಷ್ಟು ದರ ಕೊಡಬೇಕೋ ನಿಗದಿಯನ್ನ ಮಾಡಿ, ಇದಾದ ಬಳಿಕ ಬರಗಾಲ ಪೀಡಿತ 116 ತಾಲ್ಲೂಕಿನ ಎಪಿಎಲ್ ಹಾಗೂ ಅಂತ್ಯದ ರೇಷನ್ ಕಾರ್ಡ್ ದಾರ ಕುಟುಂಬಕ್ಕೆ 5 ಕೆಜಿ ಅಕ್ಕಿಯ ಹಣದ ಬದಲು 5 ಕೆಜಿ ಅಕ್ಕಿಯನ್ನು ಕೊಡಲು ತೀರ್ಮಾನವನ್ನು ಮಾಡಲಾಗಿದೆ ಅಂತ ತಿಳಿಸಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆ ಪ್ರಾರಂಭವಾದಾಗ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದ ಅಜ್ಜಿ; ಅನುಬಂಧ ಅವಾರ್ಡ್ ನಲ್ಲಿ ಸಿಎಂ ಮುಂದೆ ಸಂಗವ್ವ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram