ಕಾಂಗ್ರೆಸ್ ಪಕ್ಷ ಅನ್ನ ಭಾಗ್ಯ ಯೋಜನೆ(Anna Bhagya Scheme) ಜಾರಿ ಮಾಡಿ ಕುಟುಂಬದ ಪ್ರತಿ ಸದಸ್ಯರಿಗೂ ತಲಾ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಕೊಟ್ಟಿದ್ದು ಆದರೆ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಿತ್ತು ಅದರಂತೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೂ 170 ರೂಪಾಯಿ ಹಣ ಕೊಡಲಾಗುತ್ತಿತ್ತು. ಅದ್ರೆ ಅದ್ರ ನಂತರ ಬರಪೀಡಿತ ಜಿಲ್ಲೆಗಳು ಘೋಷಣೆಯಾದ ನಂತರ ಹಣದ ಬದಲು ಅಕ್ಕಿಯನ್ನೇ ನೀಡಲು ಸರ್ಕಾರ ಚಿಂತನೆ ನಡೆಸಿ ಬರಪೀಡಿತ ತಾಲೂಕುಗಳಿಗೆ ಅಕ್ಕಿಯನ್ನ ನೀಡುತಿತ್ತು. ಹೌದು ಬಿಪಿಎಲ್(BPL) ರೇಷನ್ ಕಾರ್ಡ್(Ration Card) ಮತ್ತು ಅಂತ್ಯೋದಯ ರೇಷನ್ ಕಾಡಿರುವ ಕರ್ನಾಟಕ ರಾಜ್ಯದ ಎಲ್ಲ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ ಇಲ್ಲ ಹಣ ನೀಡುತ್ತಾ ಬಂದಿದೆ. ಅದ್ರೆ ಈಗ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ ಯಾವಾಗ ಅಂತ ಫಲಾನುಭವಿಗಳು ಕೇಳ್ತಿದ್ದಾರೆ.
ಹೌದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸೆಪ್ಟೆಂಬರ್ ಮಾಹಿತಿ ಅನ್ವಯವಾಗುವಂತೆ ಪಡಿತರ ಧಾನ್ಯ ವನ್ನು ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 21 ಕೆಜಿ ಅಕ್ಕಿ ಮತ್ತು ರಾಗಿ 14 ಕೆ ಜಿ ಪ್ರತಿ ಕಾರ್ಡ್ ಗೆ ಆದ್ಯತೆ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಮೂರು ಕೆಜಿ ಅಕ್ಕಿ ಮತ್ತು ಪ್ರತಿ ಸದಸ್ಯನಿಗೆ ಎರಡು ಕೆಜಿ ರಾಗಿ ಉಚಿತವಾಗಿ ವಿತರಿಸ ಲಾಗುತ್ತದೆ. ಹಾಗೂ ಪ್ರತಿ ಕೆಜಿ ಗೆ ಹದಿನೈದು ರೂಪಾಯಿ ನಂತೆ ಒಪ್ಪಿಗೆ ನೀಡಿದ ಎಪಿಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ ಐದು ಕೆಜಿ ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ವರಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗ್ತಿದೆ. ಇಲ್ಲದಿದ್ದರೆ ಅಕ್ಕಿಗೆ ತಗಲುವ ಹಣವನ್ನ ನೀಡುತ್ತಿದೆ. ಈಗಿರುವ ಸೆಪ್ಟೆಂಬರ್ ತಿಂಗಳು ಮುಗಿಯುತ್ತ ಬಂದರು ಇನ್ನು ಅಕ್ಕಿ ಹಣ ಬಂದಿಲ್ಲ ಹೀಗಾಗಿ ಹಣ ಯಾವಾಗ ಬರುತ್ತೆ ಅನ್ನೋದು ಎಲ್ಲರ ಪ್ರಶ್ನೆ.
ಇದನ್ನೂ ಓದಿ: ಇಂದು ರಾಜ್ಯದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಬೆಲೆ ಎಷ್ಟಿದೆ?
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಎಲ್ಲರಿಗೂ ಒಂದೇ ಸಮಯಕ್ಕೆ ಹಣ ಬರಲ್ಲ ಯಾಕೆ ಗೊತ್ತಾ?
ಕರ್ನಾಟಕ ಸರ್ಕಾರ ಉಚಿತವಾಗಿ ಐದು ಕೆಜಿ ಅಕ್ಕಿ ಕೊಡುವ ಭರವಸೆ ನೀಡಿದ್ದು ಆದರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬೇಕಾಗಿರುವಷ್ಟು ಅಕ್ಕಿಯನ್ನು ಒದಗಿಸಲು ಯಾವ ರಾಜ್ಯವು ಕೂಡ ಮುಂದಾಗಿಲ್ಲ. ಒಂದು ವೇಳೆ ಅಕ್ಕಿ ಕೊಡುವುದಾದರೂ ರಾಜ್ಯ ಸರ್ಕಾರ ನೀಡಲು ಸಿದ್ದರಿರುವುದಕ್ಕಿಂತ ಹೆಚ್ಚಿನ ಹಣ ಕೇಳುತ್ತಿದ್ದಾರೆ. ಇದರಿಂದಾಗಿ 1.40 ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತಿ ತಿಂಗಳು ಒದಗಿಸುವುದು ಸುಲಭದ ಮಾತಲ್ಲ. ಈ ಕಾರಣಕ್ಕಾಗಿ ಸರ್ಕಾರ ಸರ್ವೆ ಒಂದನ್ನು ನಡೆಸುತ್ತಿದ್ದು ಜನರಿಂದಲೇ ಅಭಿಪ್ರಾಯವನ್ನು ಸಂಗ್ರಹಿಸುತ್ತಿದೆ. ನಿಮಗೆ ಅಕ್ಕಿ ಬೇಕೋ ಅಥವಾ ಹಣ ಕೊಡುವುದನ್ನು ಮುಂದುವರಿಸಬೇಕೋ ಎನ್ನುವ ಅಭಿಪ್ರಾಯವನ್ನು ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ಹೋಗಿ ಜನರಿಂದಲೇ ಸಂಗ್ರಹಿಸುದ್ದಾರೆ.
ಹೌದು, ಉಚಿತ ಅಕ್ಕಿ ಅಥವಾ ಹಣ ಎನ್ನುವುದು ಈಗ ಜನರೇ ನಿರ್ಧಾರ ಮಾಡಬೇಕಾಗಿದೆ ಒಂದು ವೇಳೆ ಹಣ ಕೊಡುವುದನ್ನೇ ಮುಂದುವರೆಸಿ ಎಂದರೆ ಅಕ್ಕಿಯ ಬದಲು ಪ್ರತಿ ತಿಂಗಳು 34 ರೂಪಾಯಿಗಳಂತೆ ಹಣ ಕೊಡುವುದನ್ನು ಸರ್ಕಾರ ಮುಂದುವರೆಸಬಹುದು. ಇನ್ನು ಕಳೆದ ಎರಡು ತಿಂಗಳಿನಲ್ಲಿ ಹಣ ಸಿಕ್ಕವರಿಗೆ ಸೆಪ್ಟೆಂಬರ್ ತಿಂಗಳಿನ ಹಣ ಬಿಡುಗಡೆ ಆದರು ಈ ತಾಲೂಕುಗಳಿಗೆ ಮಾತ್ರ ಹಣ ಸಿಗುತ್ತಿಲ್ಲ. ಹಣದ ಬದಲು ಅಕ್ಕಿಯನ್ನು ಕೊಡಲಾಗುತ್ತದೆ. ಹೌದು, ಸರ್ಕಾರ 195 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಗುರುತಿಸಿದೆ. ಇದರಲ್ಲಿ 161 ತಾಲೂಕುಗಳು ತೀವ್ರ ಬರಬೀಡಿತ ಹಾಗೂ 34 ತಾಲೂಕುಗಳನ್ನು ಸಾಮಾನ್ಯ ಬರಪೀಡಿತ ತಾಲೂಕು ಎಂದು ಗುರುತಿಸಲಾಗಿದೆ. ಈ ತಾಲೂಕುಗಳಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ಸೇರಿಸಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡಲು ನಿರ್ಧಾರ ಮಾಡಿದೆ.
ಇನ್ನು ಈಗಾಗಲೇ ಸಾಕಷ್ಟು ಜನ ಅಕ್ಕಿ ಬೇಡ ಹಣವೇ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಆದರೆ ಹಲವರು ರಾಜ್ಯ ಸರ್ಕಾರದ 5 ಕೆಜಿ ಅಕ್ಕಿಯ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿ ಅಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟರೆ ಹೆಚ್ಚು ಅನುಕೂಲ ಎಂಬುದಾಗಿಯೂ ಕೂಡ ಅಭಿಪ್ರಾಯ ಸೂಚಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ಅಕ್ಕಿ ಹಣವನ್ನು ನೀಡಲು ಮುಂದಾಗಿದ್ದು ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣ ಈಗಾಗಲೇ ಬಿಡುಗಡೆಯಾಗಿದ್ದು ಇದೇ ತಿಂಗಳ 25ನೇ ತಾರೀಖಿನಿಂದ ಫಲಾನುಭವಿಗಳ ಖಾತೆಗೆ ಅಕ್ಕಿಯ ಹಣ ಬಿಡುಗಡೆ ಆಗುತ್ತೆ ಅಂತ ಹೇಳಲಾಗುತ್ತಿದೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವೆಲ್ಲ ತೊಡಕುಗಳು ಆಗಿದ್ಯೋ ಅಂದ್ರೆ ಎಲ್ಲರಿಗೂ ಕೂಡ ಒಂದೇ ಸಮಯದಲ್ಲಿ ಹಣ ಬಿಡುಗಡೆ ಆಗ್ತಾ ಇಲ್ಲ ಅದೇ ರೀತಿ ಈ ಅಕ್ಕಿ ಯೋಜನೆಯಲ್ಲೂ ಕೂಡ ಅದೇ ರೀತಿ ಆಗುವ ಸಾಧ್ಯತೆಗಳು ಇದೆ ಅಂತ ಹೇಳಲಾಗುತ್ತಿದೆ. ಹೀಗಾಗಿ ಎಲ್ಲರಿಗೂ ಕೂಡ ಈ ಸೆಪ್ಟೆಂಬರ್ 25ನೇ ತಾರೀಕೇ ಹಣ ಬರುತ್ತೆ ಅಂತ ಹೇಳಿಕೆ ಬರೋದಿಲ್ಲ. ಮುಂದಿನ ತಿಂಗಳ 15ನೇ ತಾರೀಖಿನವರೆಗೂ ಸ್ವಲ್ಪ ಸ್ವಲ್ಪ ಜನರ ಖಾತೆಗೆ ಹಣ ವರ್ಗಾವಣೆ ಯಾಗುತ್ತೆ ಹೀಗಾಗಿ ಸೆಪ್ಟೆಂಬರ್ ತಿಂಗಳ ಹಣ ಎಲ್ಲರಿಗೂ ಬರುತ್ತೆ ಆದರೆ ಒಂದೇ ದಿನ ಬರೋದಿಲ್ಲ ಎಲ್ಲರೂ ತಾಳ್ಮೆಯಿಂದ ಕಾಯಬೇಕು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram