ನಿಮಗಿನ್ನು ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ವಾ? ಇದೊಂದು ಕೆಲಸವನ್ನು ತಪ್ಪದೆ ಮಾಡಿ ಹಣ ಬಂದೇ ಬರುತ್ತೆ.

ನಮಸ್ಕಾರ ಸ್ನೇಹಿತರೆ, ಸರ್ಕಾರದ ಹಲವು ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ ಕೂಡ ಒಂದು. ಈ ಯೋಜನೆಯಡಿ ಸರ್ಕಾರ ಪ್ರತಿಯೊಬ್ಬರಿಗೂ ತಲಾ ಹತ್ತು ಕೆಜಿ ಅಕ್ಕಿಯನ್ನು ಕೊಡುವುದಾಗಿ ಘೋಷಿಸಿತ್ತು. ಆದರೆ ಅಕ್ಕಿಯ ಸರಬರಾಜು ಇಲ್ಲದೆ ಇರುವುದರಿಂದ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೂ ಅಕ್ಕಿಯ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿತ್ತು. ಆದರೆ ಇನ್ನೂ ಅದೆಷ್ಟೋ ಜನರಿಗೆ ಅಕ್ಕಿಯ ಹಣವು ಕೂಡ ಬಂದಿಲ್ಲ. ಆ ಕಡೆ ಅಕ್ಕಿಯೂ ಇಲ್ಲ ಈ ಕಡೆ ಅಕ್ಕಿಯ ಹಣವು ಕೂಡ ಇಲ್ಲ ಎನ್ನುವಂತಾಗಿದೆ ಜನರ ಪರಿಸ್ಥಿತಿ.

WhatsApp Group Join Now
Telegram Group Join Now

ಹಲವು ಜನರಿಗೆ ಈಗಾಗಲೇ ಹಣವು ತಲುಪಿದೆ ಇನ್ನೂ ಕೆಲವು ಜನಗಳಿಗೆ ಹಣ ಬಂದಿಲ್ಲ. ಹಲವರು ಸರ್ಕಾರವನ್ನು ಹೊಗಳಿದರೆ ಇನ್ನು ಕೆಲವರು ಸರ್ಕಾರವನ್ನು ಬೈಯುತ್ತಿದ್ದಾರೆ. ಹಾಗಾದರೆ ಯಾರು ಯಾರಿಗೆ ಹಣವು ಬಂದಿದೆ, ಹಣ ಬರದೆ ಇದ್ದವರಿಗೆ ಯಾಕೆ ಬಂದಿಲ್ಲ, ಹಣ ಬಂದಿದೆಯೋ ಇಲ್ವೋ ಅಂತ ಚೆಕ್ ಮಾಡುವುದು ಹೇಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅನ್ನಭಾಗ್ಯ ಯೋಜನೆಯ ಹಣ ಯಾರಿಗೆ ಸಿಗುತ್ತದೆ? ಸಿಗದೇ ಇದ್ದವರಿಗೆ ಇನ್ನು ಯಾಕೆ ಸಿಕ್ಕಿಲ್ಲ?

ಸರ್ಕಾರದ ಹಲವು ಯೋಜನೆಗಳಲ್ಲಿ ಒಂದಾದ ಈ ಅನ್ನಭಾಗ್ಯ ಯೋಜನೆಯ ಹಣ ಕೆಲವರಿಗೆ ಬಂದಿದೆ ಇನ್ನೂ ಕೆಲವರಿಗೆ ಬಂದಿಲ್ಲ. ಹಣ ಬಂದಿಲ್ಲದೆ ಇದ್ದವರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ದಾಖಲಾತಿಗಳು ಎಲ್ಲವೂ ಸರಿಯಾಗಿದ್ದು ಕೂಡ ಹಲವಾರು ಜನರಿಗೆ ಇನ್ನೂ ಹಣವು ಸಿಕ್ಕಿಲ್ಲ. ಮೊದಲು ಸರ್ಕಾರವು 10 ಕೆಜಿ ಅಕ್ಕಿಯನ್ನು ಕೊಡುವುದಾಗಿ ಘೋಷಿಸಿತ್ತು ಆದರೆ ಕಾರಣಾಂತರಗಳಿಂದ ಅಕ್ಕಿಯ ಬದಲು ಹಣವನ್ನು ಕೊಡುವುದಾಗಿ ಹೇಳಿತ್ತು.

ಸುಮಾರು ಮೂರು ತಿಂಗಳಿನಿಂದಲೂ ಸಹ ರೇಷನ್ ಕಾರ್ಡ್ ದಾರರ ಖಾತೆಗಳಿಗೆ ಹಣವು ಜಮಾವಣೆಯಾಗುತ್ತಿತ್ತು. ಕೆಲವರಿಗೆ ಹಣ ಬಂದಿದೆ, ಇನ್ನು ಕೆಲವರಿಗೆ ಹಣ ಬಂದಿಲ್ಲ. ಇದನ್ನರಿತ ಆಹಾರ ಇಲಾಖೆ ಯಾರು ಯಾರು ಫಲಾನುಭವಿಗಳಿದ್ದಾರೆ ಯಾರ್ಯಾರಿಗೆ ಹಣ ತಲುಪಿದೆ ಅಂತ ಅವರ ಹೆಸರನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯಾರ್ಯಾರ ಹೆಸರನ್ನು ಉಲ್ಲೇಖಿಸಲಾಗಿದೆಯೋ ಅಂತವರಿಗೆ ಪ್ರತಿ ತಿಂಗಳು ಅಕ್ಕಿಯ ಹಣ ಬರುತ್ತದೆ. ಉಳಿದವರು ತಮ್ಮ ಬ್ಯಾಂಕ್ ಖಾತೆಯನ್ನು ದಾಖಲಾತಿಗಳನ್ನು ಮತ್ತೊಮ್ಮೆ ಪರೀಕ್ಷಿಸಬೇಕಾಗಿದೆ.

ಅನ್ನಭಾಗ್ಯ ಯೋಜನೆಯ ಹಣ ಎಷ್ಟು ಸಿಗುತ್ತದೆ?

ಮೊದಲು ಅಕ್ಕಿಯನ್ನು ಕೊಡುವುದಾಗಿ ಘೋಷಿಸಿದ ಸರಕಾರ ನಂತರ ಅಕ್ಕಿಯ ಬದಲು ಹಣವನ್ನು ಕೊಡಲು ನಿರ್ಧಾರ ಮಾಡಿದೆ. ಯಾಕೆಂದರೆ ಅಕ್ಕಿಯ ಪೂರೈಕೆ ಬಹಳ ಕಡಿಮೆ ಪ್ರಮಾಣದಲ್ಲಿ ರುವುದರಿಂದ ಸರಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿಯಂತೆ, 5 ಕೆಜಿ ಅಕ್ಕಿಗೆ ಪ್ರತಿಯೊಬ್ಬನಿಗೆ 170 ರೂಪಾಯಿಗಳು. ಒಂದಕ್ಕಿಂತ ಹೆಚ್ಚು ಸದಸ್ಯರಿರುವ ರೇಷನ್ ಕಾರ್ಡ್ ಗಳಲ್ಲಿ 340 ರೂಪಾಯಿಗಳು. ಒಂದು ವೇಳೆ ಒಂದು ಕಂತನ್ನು ಕೂಡ ಪಡೆಯದ ಫಲಾನುಭವಿಗಳು ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಒಮ್ಮೆ ಚೆಕ್ ಮಾಡಿಕೊಳ್ಳಿ. ಆಹಾರ ಇಲಾಖೆಯು ಫಲಾನುಭವಿಗಳಿಗೆ ಒಂದು ಲಿಂಕನ್ನ ಬಿಡುಗಡೆ ಮಾಡಿದೆ ಈ ಲಿಂಕ್ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದು..

ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯದವರು ಚೆಕ್ ಮಾಡಿಕೊಳ್ಳುವುದು ಹೇಗೆ?

ಇಲ್ಲಿ ನಿಮ್ಮ ಹೆಸರು ಇದೆ ಅಂತ ಚೆಕ್ ಮಾಡಿಕೊಳ್ಳಿ. ಆಹಾರ ಇಲಾಖೆಯ ಈ ಲಿಂಕ್ ನ ಮೂಲಕ ನೀವು ನಿಮ್ಮ ಹೆಸರಿದೆಯೋ ಇಲ್ವೋ ಅಂತ ಚೆಕ್ ಮಾಡಿಕೊಳ್ಳಬಹುದು. https://ahara.kar.nic.in/Home/EServices ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನೀವು ಪ್ರತಿ ತಿಂಗಳು ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯಬಹುದಾಗಿದೆ. ಒಂದು ವೇಳೆ ಇದರಲ್ಲಿ ನಿಮ್ಮ ಹೆಸರಿಲ್ಲ ಅಂತಾದರೆ ನಿಮ್ಮ ದಾಖಲಾತಿಗಳನ್ನು ಪುನಹ ಚೆಕ್ ಮಾಡಿಕೊಳ್ಳಿ. ನಿಮ್ಮ ಖಾತೆಯ ಸಂಖ್ಯೆ ಹಾಗೂ ಆಧಾರ ಕಾರ್ಡ್ ಲಿಂಕ್ ಮಾಡಿರುವುದು ಎಲ್ಲವನ್ನು ಸರಿಯಾಗಿ ಪರೀಕ್ಷಿಸಿ, ಸ್ವಲ್ಪ ದಿನ ಕಾಯಿರಿ. ನಿಮ್ಮ ದಾಖಲಾತಿ ಗಳೆಲ್ಲವೂ ಸರಿಯಾಗಿದ್ದರೆ ಖಂಡಿತವಾಗಲೂ ನೀವು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿರುತ್ತೀರಿ. 

ಇದನ್ನೂ ಓದಿ: ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಡಿ ರೂಪಾಯಿ 500 ತಿಂಗಳ ವೇತನ, ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ದಾಖಲಾತಿಗಳು..

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ ಆದರು ನಿಮಗೆ ಯಾಕೆ ಬಂದಿಲ್ಲ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram