BPL ಕಾರ್ಡ್ ದಾರರಿಗೆ ತಿದ್ದುಪಡಿ ನೀಡಿದ ಬಳಿಕ ಇದೀಗ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಲು ಸಿದ್ಧತೆ ನಡೆಸಿದೆ. ವಯೋವೃದ್ಧರು ತಮ್ಮ ವ್ಯಾಪ್ತಿಯಲ್ಲಿ ಪಡಿತರ ಪಡೆಯಲು ಹರಸಾಹಸ ಪಡುತ್ತಿರುವದನ್ನು ಗಮನಿಸಿ 90 ವರ್ಷ ದಾಟಿದವರ ಮನೆ ಬಾಗಿಲಿಗೆ ಆಹಾರ ಧಾನ್ಯ ಪೂರೈಸಲು ಈ ಯೋಜನೆ ಹಾಕಿಕೊಂಡಿದೆ. ಇವರಿಗಾಗಿಯೇ ಅನ್ನ ಸುವಿಧಾ ಆಪ್ ಅಭಿವೃದ್ಧಿಪಡಿಸಿದ್ದು, ನವೆಂಬರ್‌ನಲ್ಲಿ ಅಧಿಕೃತವಾಗಿ ಈ ಯೋಜನೆ ಜಾರಿಗೊಳ್ಳುವ ಸಾಧ್ಯತೆ ಇದೆ. ಹೌದು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಈಗಾಗಲೇ ಹಣ ವರ್ಗಾವಣೆಯನ್ನು ಆರಂಭಿಸಿದೆ. ಜುಲೈ 10, 2023 ರಿಂದ 5 ಕೆಜಿ ಅಕ್ಕಿ ಬದಲಾಗಿ ಹಣವನ್ನು ವರ್ಗಾಯಿಸುತ್ತಿದೆ. ಅನ್ನ ಭಾಗ್ಯ ಯೋಜನೆಯಡಿ, ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಗಳ ನಗದು ಪಾವತಿಸಲು ನಿರ್ಧರಿಸಿದೆ. ಆದ್ರೆ ಉಳಿದ 5ಕೆಜಿ ಅಕ್ಕಿ ಪಡೆಯಲು ನ್ಯಾಯಾಬೆಲೆ ಅಂಗಡಿಗೆ ಜನಸಾಮಾನ್ಯರು ಹೋಗಲೇಬೇಕು. ಅದರಲ್ಲೂ ವಯಸ್ಸಾದವರಿಗೆ, ದೈಹಿಕವಾಗಿ ಗಟ್ಟಿಯಿಲ್ಲದವರು ಕೆಲವೊಮ್ಮೆ ಪರದಾಡುವ ಪರಿಸ್ಥಿತಿ ಇದೆ.
ಹೀಗಾಗಿ ರಾಜ್ಯದಲ್ಲಿ ಈ ರೀತಿ ನ್ಯಾಯಬೆಲೆ ಅಂಗಡಿಗೆ ಹೋಗಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿರುವ 8 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಪ್ರಯೋಗಾತ್ಮಕವಾಗಿ 700 ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲಾಗಿದೆ. ಇನ್ನು ಯೋಜನೆಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ನವೆಂಬರ್ ನಿಂದ ಅಧಿಕೃತವಾಗಿ ಯೋಜನೆ ಜಾರಿಯಾಗಲಿದ್ದು, ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅನ್ನ ಸುವಿಧಾ ಆ್ಯಪ್‌ನಲ್ಲಿ ಫಲಾನುಭವಿ ಕೊಟ್ಟಿರುವ ಮನೆಯ ವಿಳಾಸಕ್ಕೆ ಜಿಪಿಎಸ್ ಮೂಲಕ ಮಾರ್ಗ ಸೂಚಿಸಲಾಗುತ್ತದೆ. ಹೀಗಾಗಿ ಸುಲಭವಾಗಿ ಪಡಿತರ ವಿತರಣೆ ಅನುಕೂಲವಾಗಲಿದೆ ಅಂತ ಮೂಲಗಳು ತಿಳಿಸಿವೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಅನ್ನ ಸುವಿಧಾ ಹೆಸರಿನಲ್ಲಿ ಹೊಸ ಯೋಜನೆ ಆರಂಭ
ಹೌದು ಉಚಿತ ಅಕ್ಕಿ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಅಂತ್ಯೋದಯ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ ನೀಡಲಾಗುತ್ತದೆ. ಆದರೆ ಅಕ್ಕಿಯನ್ನು ಕೂಡಾ ಮನೆಗೆ ಕಳುಹಿಸಲಾಗುತ್ತದೆ ಅಂತ ಇದೀಗ ಸಚಿವ ಕೆ. ಎಚ್ ಮುನಿಯಪ್ಪ ತಿಳಿಸಿದ್ದಾರೆ. ಇನ್ನು 90 ವರ್ಷ ಮತ್ತು ಮೇಲ್ಪಟ್ಟ ಫಲಾನುಭವಿಗಳಿಗೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. ಅನ್ನ ಸುವಿಧ ಯೋಜನೆ(Anna Suvidha Scheme) ಮೂಲಕ ವಯಸ್ಸಾದವರಿಗೆ ಶೀಘ್ರದಲ್ಲೇ ಅವರ ಮನೆ ಬಾಗಿಲಿಗೆ ಅನ್ನ ಭಾಗ್ಯದ ಅಡಿಯಲ್ಲಿ ಅಕ್ಕಿ ವಿತರಣೆಯನ್ನು ಮಾಡಲಾಗುತ್ತದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ.
ಇನ್ನು ಇದರಿಂದ ರೇಷನ್ ವಿತರಣೆ ನಂತರ ಫಲಾನುಭವಿಯ ರೇಷನ್ ಕಾರ್ಡ್(Ration Card) ಸಂಖ್ಯೆ, ಯಾವಾಗ ರೇಷನ್ ವಿತರಣೆಯಾಗಿದೆ, ಎಷ್ಟು ಗಂಟೆ, ಯಾವಾಗ ಯಾರು ಪರಿಶೀಲಿಸಿದ್ದಾರೆ ಮುಂತಾದ ಮಾಹಿತಿಯು ಇಲಾಖೆಗೆ ಲಭ್ಯವಾಗಲಿದೆ. ಅಲ್ದೇ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 90 ವರ್ಷ ಮೇಲ್ಪಟ್ಟ ಮತ್ತು ಕಾರ್ಡ್‌ನಲ್ಲಿ ಒಬ್ಬರೇ ಸದಸ್ಯರಿದ್ದು ಅಂಗಡಿಗೆ ಬಂದು ಪಡಿತರ ಪಡೆಯಲು ಸಾಧ್ಯವಿಲ್ಲದವರು ಇದ್ದಾರೆ ಎಂಬ ವಿವರ ಅನ್ನ ಸುವಿಧ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಅಂತಹವರಿಗೆ ನ್ಯಾಯಬೆಲೆ ಅಂಗಡಿಯ ಮಾಲಿಕರು ಬಿಪಿಎಲ್ ಫಲಾನುಭವಿಯಾದ ಆಸಹಾಯಕರಿಗೆ ಇಲ್ಲವೇ ವೃದ್ಧರಿಗೆ ಪಡಿತರವನ್ನು ಪ್ಯಾಕ್ ಮಾಡಿ ಕೊಡಬೇಕು. ಅಲ್ಲದೇ ತಾವು ಪಡಿತರ ಹಂಚಿಕೆ ಮಾಡಿರುವ ಬಗ್ಗೆ ಫೋಟೋ ತೆಗೆದು ಮಾಹಿತಿ ಸಮೇತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು ಅಂತ ಹೇಳಲಾಗಿದ್ಯಂತೆ
ಹೊಸ ಯೋಜನೆಯ ಕುರಿತು ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿಯನ್ನ ತಿಳಿಸಿದ್ದು, ಪಡಿತರವನ್ನು ಮನೆಗೆ ತಲುಪಿಸಲು ಬಯಸುವವರು ಸೌಲಭ್ಯವನ್ನು ಪಡೆದು ಆನ್‌ಲೈನ್‌ನಲ್ಲಿ ನೋಂದಾಯಿಸಲು ತಿಳಿಸಲಾಗಿದೆ ಎಂದಿದ್ದಾರೆ. ಅಲ್ದೇ ನಮ್ಮ ಡೇಟಾ ಪ್ರಕಾರ ಸುಮಾರು 80,000 ವೃದ್ಧ ಫಲಾನುಭವಿಗಳು ಸೌಲಭ್ಯಕ್ಕೆ ಅರ್ಹರಾಗಿದ್ದಾರೆ, ಈಗ 90 ವರ್ಷ ಮೇಲ್ಪಟ್ಟ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತಲುಪಲು ಸಾಧ್ಯವಾಗದೆ ಈ ಯೋಜನೆಯ ಅಕ್ಕಿಯಿಂದ ವಂಚಿತರಾಗದಂತೆ ಮನೆ ಬಾಗಿಲಿಗೆ ಅಕ್ಕಿಯನ್ನು ತಲುಪಿಸಲು ನಾವು ಮುಂದಾಗಿದ್ದೇವೆ. ಅಗತ್ಯವಿದ್ದರೆ, ದೈಹಿಕ ವಿಕಲಚೇತನರಂತಹ ಇತರ ಫಲಾನುಭವಿಗಳಿಗೂ ಈ ಯೋಜನೆ ವಿಸ್ತರಿಸಲಾಗುತ್ತದೆ. ಅಂತವರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡಲು ಆಹಾರ ಇಲಾಖೆಯಿಂದ ಹೊಸ ಆಪ್ ಅನ್ನು ಅಭಿವೃದ್ದಿಪಡಿಸುತ್ತಿದೆ.
ಈ ಆಪ್ ನ ಮೂಲಕ ನವೆಂಬರ್‌ನಿಂದ 90 ವರ್ಷ ಮೇಲ್ಪಟ್ಟವರು ಮನೆ ಬಾಗಿಲಲ್ಲಿಯೇ ಪಡಿತರನ್ನು ಪಡೆಯಬಹುದಾಗಿದೆ ಅಂತ ವಿವರಿಸಿದ್ದಾರೆ. ಇನ್ನು ಆಹಾರ ಇಲಾಖೆಯಿಂದ ಹೊಸ ಆಪ್ ಅನ್ನು ಅಭಿವೃದ್ದಿಪಡಿಸಿದ್ದು, ಈ ಆಪ್ ನ ಮೂಲಕ ನವೆಂಬರ್‌ನಿಂದ 90 ವರ್ಷ ಮೇಲ್ಪಟ್ಟವರು ಮನೆ ಬಾಗಿಲಲ್ಲಿಯೇ ಪಡಿತರನ್ನು ಪಡೆಯಬಹುದಾಗಿದೆ. ಆದರೆ ಪ್ರತಿ ಮನೆಗೆ 50 ರೂಪಾಯಿ ಡೆಲಿವರಿ ಶುಲ್ಕದ ನಿಗಧಿ ಮಾಡಲಾಗಿದೆ ಅಂತ ಹೇಳಲಾಗಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಮಿಷನ್ ನೀಡುವ ಉದ್ದೇಶದಿಂದ ಶುಲ್ಕ ನಿಗದಿ ಮಾಡಲು ಸರ್ಕಾರ ಮುಂದಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೇ.
ಇದನ್ನೂ ಓದಿ: ಇನ್ನುಂದೆ ಪ್ರತಿ ತಿಂಗಳು ಯಾವ ದಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಗೊತ್ತಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram