ಮುಂಬರುವ ಜೂನ್‌ ತಿಂಗಳಿಂದ APL ಪಡಿತರ ಚೀಟಿ ವಿತರಣೆಗೆ ಮರುಚಾಲನೆ ದೊರೆಯಲಿದೆ

Apl Ration Card Application

ಬಹಳ ದಿನಗಳಿಂದ ಎಪಿಎಲ್ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನ ಮಾಡುವ ಬಗ್ಗೆ ರಾಜ್ಯಸರ್ಕಾರ ಹೇಳುತ್ತಲೇ ಇತ್ತು . ಆದರೆ ಈಗಾಗಲೇ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಆಗದ ಕಾರಣದಿಂದ ಹೊಸ ಪಡಿತರ ಚೀಟಿ ಗೆ ಅರ್ಜಿ ಹಾಕಲು ರಾಜ್ಯ ಸರ್ಕಾರ ಆನ್ಲೈನ್ ಪೋರ್ಟಲ್ ಓಪನ್ ಮಾಡಿರಲಿಲ್ಲ. ಈಗ ಲೋಕಸಭಾ ಚುನಾವಣೆಯ ನಂತರ ಮತ್ತೆ ಎಪಿಎಲ್ ಪಡಿತರ ಚೀಟಿ ವಿತರಣೆಗೆ ಮರುಚಾಲನೆ ದೊರೆಯುತ್ತಿದೆ.

WhatsApp Group Join Now
Telegram Group Join Now

ಕಳೆದ ಒಂದು ವರೆ ವರುಷದಿಂದ ಎಪಿಎಲ್ ಕಾರ್ಡ್ ವಿತರಣೆ ಸ್ಥಗಿತ ಆಗಿತ್ತು: ಕಳೆದ ಒಂದು ವರೆ ವರ್ಷಗಳಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕಾರ್ಡ್ ವಿತರಣೆ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ಕುಟುಂಬಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರ ಆನ್ಲೈನ್ ಪೋರ್ಟಲ್ ಸ್ಥಗಿತ ಗೊಳಿಸಿತ್ತು. ಜನರ ಸಮಸ್ಯೆ ಅರಿತು ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜೂನ್ ಮೊದಲ ವಾರದಿಂದ ಹೊಸದಾಗಿ ಅರ್ಜಿ ಆಹ್ವಾನ ಮಾಡುವವರಿಗೆ ಪೋರ್ಟಲ್ ತೆರೆಯುವುದಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾಕೆ ಒಂದು ವರೆ ವರ್ಷದಿಂದ ಕಾರ್ಡ್ ವಿತರಣೆ ಆಗಲಿಲ್ಲ?

2023 ರ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಅದಕ್ಕೂ ಸ್ವಲ್ಪ ತಿಂಗಳುಗಳ ಹಿಂದೆ ಚುನಾವಣಾ ತಯಾರಿಕೆ ಮಾಡಿಕೊಳ್ಳಲು ಪಡಿತರ ಚೀಟಿ ವಿತರಣೆ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ಕೆಲಸವನ್ನು ಸ್ಥಗಿತ ಗೊಳಿಸಲಾಗಿತ್ತು. ಚುನಾವಣೆಯ ಬಳಿಕ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯೂ ಮುಗಿದಿತ್ತು. ಬಂದಿರುವ ಕಾಂಗ್ರೆಸ್ ಸರ್ಕಾರ ಮತ್ತೆ ಪಡಿತರ ಚೀಟಿ ವಿತರಣೆ ಬಗ್ಗೆ ಅಷ್ಟೇನೂ ಗಮನ ಹರಿಸಲಿಲ್ಲ. ಈಗ ಜನರ ಬೇಡಿಕೆಯ ಮೇರೆಗೆ ಮತ್ತೆ ಅರ್ಜಿ ಆಹ್ವಾನಿಸಲು ಮುಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್ ಸರ್ಕಾರ ಆನ್ಲೈನ್ ಪೋರ್ಟಲ್ ಬಿಡುಗಡೆ ಮಾಡದೆ ಇರಲು ಕಾರಣವೇನು?: ವಿಧಾನ ಸಭಾ ಚುನಾವಣೆಗೂ ಮುಂಚೆ ಕಾಂಗ್ರೆಸ್ ಸರ್ಕಾರ ಜನರಿಗೆ 5 ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿಗೆ ಬರಲಿ ಕಡ್ಡಾಯವಾಗಿ ರೇಷನ್ ಕಾರ್ಡ್ ನೀಡಬೇಕು ಎಂಬ ಅರಿವು ಸರ್ಕಾರಕ್ಕೆ ತಿಳಿದಿತ್ತು. ರಾಜ್ಯ ಸರ್ಕಾರದ ಲಾಭ ಪಡೆಯಲು ಜನರು ಹೊಸದಾಗಿ ಅರ್ಜಿ ಸಲ್ಲಿಸುತ್ತಾರೆ ಎಂಬುದನ್ನು ತಿಳಿದು ಅರ್ಜಿ ಆಹ್ವಾನಕ್ಕೆ ಪೋರ್ಟಲ್ ಓಪನ್ ಮಾಡಲಿಲ್ಲ.

ಸರ್ವರ್ ಸಮಸ್ಯೆ ಎಂದು ಹೇಳುತ್ತಿದೆ ಇಲಾಖೆ :- 2023-24 ನೇ ಸಾಲಿನಲ್ಲಿ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಸಾಕಷ್ಟು ಬಾರಿ ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ ಅರ್ಜಿ ಸಲ್ಲಿಸಲು ಸರ್ವರ್‌ ಸಮಸ್ಯೆಯಿಂದ ಫಲಾನುಭವಿಗಳಿಗೆ ತಿದ್ದುಪಡಿಗೆ ಅವಕಾಶ ಆಗಲಿಲ್ಲ ಎಂಬ ಬಗ್ಗೆ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಫೋರ್ಸ್ ಗೂರ್ಖಾ; 7 ಸೀಟರ್ ಸೌಲಭ್ಯದೊಂದಿಗೆ, ಇದರ ಬೆಲೆ ಎಷ್ಟು ಗೊತ್ತಾ?

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ https://nfsa.gov.in/portal/apply_ration_card ಗೆ ಭೇಟಿನೀಡಬೇಕು. ನಂತರ ಮುಖಪುಟದಲ್ಲಿ ಕಾಣುವ ಇ ಸೇವೆ ಎಂಬ ಬಟನ್ ಕ್ಲಿಕ್ ಮಾಡಬೇಕು ನಂತರ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ ಎಂಬ ಆಪ್ಷನ್ ಆಯ್ಕೆ ಮಾಡ್ಬೇಕು. ನಿಮ್ಮ ಕುಟುಂಬದ ಆದಾಯದ ಮೇಲೆ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಅರ್ಜಿಯಲ್ಲಿ ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ವಿವರ ಅವರ ವಯಸ್ಸು ಹಾಗೂ ಮನೆ ಯಜಮಾನಿಯ ವಿವರ ಎಲ್ಲವನ್ನೂ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: ಮೊಬೈಲ್ ನಲ್ಲಿ ವೋಟರ್ ಸ್ಲಿಪ್ ಪಡೆಯುವುದು ಹೇಗೆ?