ಪಿಎಂ ಸೂರ್ಯ ಘರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆಯ ದಿವಸ ಸೂರ್ಯ ನ ಪ್ರಕಾಶಮಾನ ಬೆಳಕು ಎಲ್ಲೆಡೆ ಹರಡಬೇಕು ಎಂಬ ಕನಸಿನಿಂದ ಪ್ರತಿ ಮನೆಗೂ ಸೌರ ಫಲಕ ಅಳವಡಿಸುವ ಬಗ್ಗೆ ಘೋಷಣೆ ಮಾಡಿದ್ದರು. ಇದಕ್ಕೆ ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ನಲ್ಲಿ ಅನುಮೋದನೆ ದೊರಕಿತ್ತು. ಯೋಜನೆಗೆ ಪೋಸ್ಟ್ ಆಫೀಸ್ ನಲ್ಲಿ ಸೋಲಾರ್ ಮೇಲ್ಛಾವಣಿಗೆ ಅರ್ಜಿ ಸಲ್ಲಿಸಬಹುದು.
ಒಂದು ಕೋಟಿ ಮನೆಗಳಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್:- ಸೌರ ಶಕ್ತಿಯ ಉಪಯೋಗ ಉಪಡೆಯುವ ನಿಟ್ಟಿನಲ್ಲಿ ಆರಂಭವಾದ ಈ ಯೋಜನೆಯ ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನ್ನು ಒಂದು ಕೋಟಿ ಮನೆಗಳಿಗೆ ಬೆಳಕು ನೀಡಲು ಸರ್ಕಾರ ಉದ್ದೇಶಿಸಿದೆ. ಯೋಜನೆಯು ಘೋಷಣೆಯಾದ ಸ್ವಲ್ಪ ದಿನಗಳ ಬಳಿಕ ಪೋಸ್ಟ್ office ನಲ್ಲಿ ಕೆಲಸ ಮಾಡುವ ಅಂಚೆ ನೌಕರರು ಯೋಜನೆಯಡಿ ನೋಂದಾಯಿಸಲು ಬಯಸುವ ಕುಟುಂಬಗಳನ್ನು ನೋಂದಾಯಿಸಲು ಆರಂಭಿಸಿದ್ದಾರೆ. ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
5 ಲಕ್ಷ ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಅಳವಡಿಸುವ ಗುರಿ:-
ಕರ್ನಾಟಕ ಪೋಸ್ಟಲ್ ಸರ್ಕಲ್ ನ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಆಗಿರುವ ಎಸ್ ರಾಜೇಂದ್ರ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಮ್ಮ ನೆಟ್‌ವರ್ಕ್‌ನಲ್ಲಿ ಒಂದೆರಡು ದಿನಗಳ ಹಿಂದೆ ನೋಂದಣಿಯನ್ನು ಆರಂಭಿಸಲಾಗಿದೆ ತಿಳಿಸಿದ್ದಾರೆ. ಇಲಾಖೆಯು 5 ಲಕ್ಷ ಮನೆಗಳಲ್ಲಿ ಸೋಲಾರ್ ಮೇಲ್ಛಾವಣಿ ಅಳವಡಿಸುವ ಗುರಿ ಹೊಂದಿದೆ ಹಾಗೂ ಇಲ್ಲಿಯವರೆಗೆ ಸರಿಸುಮಾರು 20,000 ಮನೆಗಳನ್ನು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆಸಕ್ತರು ಅಂಚೆ ಕಛೇರಿಗಳಲ್ಲಿ ಹಾಗೂ ಗ್ರಾಮ ಒನ್, ಬೆಂಗಳೂರು ಓನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈಗಾಗಲೇ ಯೋಜನೆಯ ಸಲುವಾಗಿ ಮನೆ-ಮನೆಗೆ ನಮ್ಮ ಪೋಸ್ಟ್‌ಮೆನ್ ಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಅವರನ್ನು ಸಹ ಸಂಪರ್ಕಿಸಬಹುದು ಎಂದು ತಿಳಿಸಿದರು.
ಆನ್ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?: ಯೋಜನೆಗೆ ಅರ್ಜಿ ಸಲ್ಲಿಸಲು pmsuryaghar.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮುಖಪುಟದಲ್ಲಿ ಕಾಣುವ ಮೇಲ್ಛಾವಣಿ ಸೋಲಾರ್‌ಗಾಗಿ ಅಪ್ಲೈ ಮಾಡಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ರಾಜ್ಯ, ವಿದ್ಯುತ್ ವಿತರಣಾ ಕಂಪನಿ, ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಅರ್ಜಿ ನಮೂನೆಯಲ್ಲಿ ಹಾಕಬೇಕು.
ಇದನ್ನೂ ಓದಿ: ಇನ್ನು ಮುಂದೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವುದು ತುಂಬಾ ಸುಲಭ, ಅದರಲ್ಲೂ ಓಲಾ ಸ್ಕೂಟರ್ ಅಂತೂ ವಿಶೇಷ ರಿಯಾಯಿತಿಯಲ್ಲಿ!
ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲಾತಿಗಳು :-
- ಅಧಿಕೃತ ವಿಳಾಸ ಪುರಾವೆ.
- ಗುರುತಿನ ಚೀಟಿ(ಆಧಾರ್ ಕಾರ್ಡ್)
- ಕುಟುಂಬ ಪಡಿತರ ಚೀಟಿ (ರೇಷನ್ ಕಾರ್ಡ್)
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಪಾಸ್‌ಪೋರ್ಟ್ ಅಳತೆಯ ಚಿತ್ರ
- ವಿದ್ಯುತ್ ಬಿಲ್
ಸೌರ ಫಲಕ ಅಳವಡಿಕೆಯಿಂದ ಏನು ಉಪಯೋಗ?
- ಸೌರ ಫಲಕಗಳು ನಿಮ್ಮ ಮನೆಗೆ ವಿದ್ಯುತ್ ಮಾಡುವುದರಿಂದ, ನಿಮ್ಮ ವಿದ್ಯುತ್ ಬಳಕೆ ಮತ್ತು ತಿಂಗಳಿಂದ ತಿಂಗಳಿಗೆ ಭಾರಿ ಉಳಿತಾಯ ಆಗಲಿದೆ.
- ಕರೆಂಟ್ ಖೋತಾ ಮತ್ತು ಅದರಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
- ಈ ಯೋಜನೆಯು ಉಚಿತ ಸೌರ ಫಲಕಗಳನ್ನು ಒದಗಿಸುವುದರಿಂದ ಮಾಧ್ಯಮ ಮತ್ತು ಬಡ ಕುಟುಂಬಗಳಿಗೆ ಯಾವುದೇ ಹಣಕಾಸಿನ ಹೊರೆ ಇರುವುದಿಲ್ಲ.
- ನಿಮ್ಮ ಮನೆ ಬಳಕೆಗಿಂತ ಹೆಚ್ಚು ವಿದ್ಯುತ್ ಪಡೆದರೆ, ನೀವು ಅದನ್ನು ವಿದ್ಯುತ್ ಮಂಡಳಿಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸಬಹುದು.
ಇದನ್ನೂ ಓದಿ: ವಿಶೇಷವಾದ ಸ್ಟೈಲಿಶ್ ನೋಟದೊಂದಿಗೆ ಈ ಸ್ಕೂಟರ್ ಮಾರುಕಟ್ಟೆಯಲ್ಲಿ ಇತರೆ ಸ್ಕೂಟರ್ನೊಂದಿಗೆ ಸ್ಪರ್ಧಿಸಲಿದೆಯಾ ?