ಸ್ವಂತ ಉದ್ಯಮ ಆರಂಭಿಸುವ ಮಹಿಳೆಯರಿಗೆ ಸರ್ಕಾರ ನೀಡುತ್ತಿದೆ ಸಿಹಿ ಸುದ್ದಿ.

Entrepreneurship Training

ಮಹಿಳೆಯರು ಸ್ವಂತ ಉದ್ಯಮ ಮಾಡಲು ಅವರಿಗೆ ತರಬೇತಿಯ ಕೊರತೆ ಆಗುತ್ತದೆ. ಸ್ವಂತವಾಗಿ ಉದ್ಯಮ ಮಾಡಲು ಹಣದ ಕೊರತೆ ಜೊತೆಗೆ ಅವರಿಗೆ ಉದ್ಯಮ ಮಾಡಲು ಹಲವಾರು ರೀತಿಯ ಮಾಹಿತಿಗಳ ಕೊರತೆ ಇರುವುದರಿಂದ ಅವರಿಗೆ ಅನುಕೂಲವಾಗಲು ಸರ್ಕಾರ ತರಬೇತಿ ನೀಡಲು ಮುಂದಾಗಿದೆ. ಆದರಿಂದ ಸರ್ಕಾರ ಮಹಿಳೆಯರ ಸ್ವಂತ ಉದ್ಯಮಕ್ಕೆ ತರಬೇತಿ ನೀಡಬೇಕು ಎಂದು ಉದ್ಯಮಶೀಲತಾ ತರಬೇತಿಗೆ ಅರ್ಜಿ ಆಹ್ವಾನ ಮಾಡಿದೆ. ಇದು ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ಮಹಿಳೆಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ (social welfare department) ಈ ತರಬೇತಿ ನಡೆಯುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಅರ್ಜಿ ಸಲ್ಲಿಸಲು ಇರುವ ಮಾನದಂಡಗಳು

  • ಪರಿಶಿಷ್ಟ ಜಾತಿಯ ಮಹಿಳೆಯಾಗಿರಬೇಕು.
  • ಅಧಿಕೃತ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
  • ಅರ್ಜಿದಾರರ ವಯಸ್ಸು 21 ರಿಂದ 45 ಆಗಿರಬೇಕು.
  • ಸ್ವಂತ ಉದ್ಯಮ ಮಾಡಲು ಆಸಕ್ತಿ ಇರಬೇಕು.

ಅರ್ಜಿ ಸಲ್ಲಿಸಲು ನೀಡಬೇಕಾಗಿರುವ ದಾಖಲೆಗಳು:-

  • ಆಧಾರ್ ಕಾರ್ಡ್.
  • ಜಾತಿ ಪ್ರಮಾಣಪತ್ರ.
  • ಎಸೆಸೆಲ್ಸಿ (sslc) , ಪಿಯುಸಿ(puc), ಹಾಗೂ ಡಿಗ್ರೀ(degree ) ಸರ್ಟಿಫಿಕೇಟ್(certificates) ಗಳು.
  • ಪಾಸ್ ಪೋರ್ಟ್ ಸೈಜ್ ಫೋಟೋ ( passport size photo).
  • ಸ್ವಂತ ಉದ್ದಿಮೆ ಮಾಡುವ ಬಗ್ಗೆ ಮಾಹಿತಿ.
  • ಅರ್ಜಿದಾರ ಕರ್ನಾಟಕದ ಮೂಲ ನಿವಾಸಿ ಆಗಿರಬೇಕು.

ತರಬೇತಿಯಲ್ಲಿ ಇರುವ ನಿಯಮಗಳು:-

  • 5 ರಿಂದ 6 ತಿಂಗಳು ಕಡ್ಡಾಯವಾಗಿ ಯಾವುದೇ ರಜೆ ಪಡೆಯದೆಯೆ ತರಬೇತಿಯಲ್ಲಿ ಭಾಗವಹಿಸಬೇಕು.
  • ತರಬೇತಿ ಕೇಂದ್ರಕ್ಕೆ ಬಂದು ಕ್ಲಾಸ್ ಅಟೆಂಡ್ (class attend) ಆಗಬೇಕು. ಯಾವುದೇ ರೀತಿಯ ಆನ್ಲೈನ್ ಕ್ಲಾಸ್ (online class) ಇರುವುದಿಲ್ಲ.
  • ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆಯು ತರಬೇತಿ ಕೇಂದ್ರದಿಂದ ನೀಡಿರುತ್ತಾರೆ.
  • ತರಬೇತಿ ಪೂರ್ಣಗೊಂಡ ಬಳಿಕ ನಡೆಸುವ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಪ್ರಮಾಣಪತ್ರ ನೀಡುತ್ತಾರೆ.
  • ತರಬೇತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗುತ್ತದೆ.
  • merit list ಆಧಾರದ ಮೇಲೆ 50 ಜನರನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ತರಬೇತಿಯನ್ನು ಪಡೆದರೆ ಆಗುವ ಉಪಯೋಗಗಳು:-

  • ಮಹಿಳೆಯರ ಸಬಲೀಕರಣ ಆಗಲಿದೆ.
  • ಪ್ರಮಾಣಪತ್ರ ಸಿಗುತ್ತದೆ ಅದರಿಂದ ಉದ್ಯಮ ಮಾಡಲು ಅನುಕೂಲ.
  • 10,000 ಶಿಷ್ಯವೇತನ ಸಿಗುವುದರಿಂದ ಆರ್ಥಿಕವಾಗಿ ಸಹಾಯವಾಗಲಿದೆ.
  • ಉದ್ಯಮ ಮಾಡುವ ಕನಸು ಕಾಣುತ್ತಾ ಇರುವ ಮಹಿಳೆಯರ ಪಾಲಿಗೆ ಆಶಾಕಿರಣ.
  • ಹಿಂದುಳಿದ ಜಾತಿಯ ಹೆಣ್ಣುಮಕ್ಕಳನ್ನು ಮುನ್ನೆಲೆಗೆ ತರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಹೇಗಿದೆ? ಚಿನ್ನ ಖರೀದಿ ಮಾಡುವವರು ಈ ಸುದ್ದಿಯನ್ನು ಓದಲೇಬೇಕು. 

ಅರ್ಜಿ ಸಲ್ಲಿಸುವ ವಿಧಾನ:-

  • ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ಗೆ ಹೋಗಿ.
  • ಇತ್ತೀಚಿನ ಸುದ್ದಿಗಳು ಎಂಬಲ್ಲಿ ಹೋದರೆ ಅಲ್ಲಿ ನಿಮಗೆ ಉದ್ಯೋಗ ತರಬೇತಿಗೆ ಆಹ್ವಾನ ಎಂಬ ಆಯ್ಕೆ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿ.
  • ನೀವು ಪರಿಶಿಷ್ಟ ಜಾತಿಗೆ ಸೇರಿದ ಪದವಿದರಾರೆ ಎಂಬ ಪ್ರಶ್ನೆ ಕೇಳುತ್ತದೆ . ಅಲ್ಲಿ yes ಎಂದು ಕ್ಲಿಕ್ ಮಾಡಿ.
  • ಅಲ್ಲಿ ನಿಮಗೆ ಅಪ್ಲಿಕೇಶನ್ ಫಾರ್ಮ್ ಸಿಗುತ್ತದೆ ಅದನ್ನು ಭರ್ತಿ ಮಾಡಿ.
  • ಅಪ್ಲಿಕೇಶನ್ ಹಾಕಲು ಇರುವ ಸಮಯ:- 17-01-2024 ರಿಂದ 31-01-2024 ಸಂಜೆ 5.00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 1,999 ರ ಬಹುರಿಯಾಯಿತಿಯೊಂದಿಗೆ One plus Nord CE 3, ಎಲ್ಲಾ ವಿಶೇಷತೆಗಳನ್ನು ಕೇವಲ ಒಂದೇ ಫೋನ್ನಲ್ಲಿ ಪಡೆಯಿರಿ.

ಇದನ್ನೂ ಓದಿ: 2025 ರ ವೇಳೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊತ್ತು ಬರಲಿದೆ Tata Altroz EV, ಅದೂ ನೀವು ಬಯಸಿದ ಸೌಲಭ್ಯಗಳೊಂದಿಗೆ