ಸೇನೆ, ಪೊಲೀಸ್ ಸೇರಿದಂತೆ ಸಮವಸ್ತ್ರ ಸೇವೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ..

ಸಮಾಜ ಕಲ್ಯಾಣ ಇಲಾಖೆ 2023 ಮತ್ತು 2024ನೇ ಸಾಲಿನ ಭಾರತೀಯ ಸೇನೆ ಭದ್ರತಾ ಪಡೆ ಸೇರಿದಂತೆ ಪೊಲೀಸ್ ಸೇವೆ ಹಾಗೂ ಇತರ ಸಮವಸ್ತ್ರ ಸೇವೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ತಯಾರಿ ಸಿದ್ದತೆಯ ಬಗ್ಗೆ ಉಚಿತವಾಗಿ ಎರಡು ತಿಂಗಳಗಳ ಕಾಲ ತರಬೇತಿ ನೀಡುವ ಬಗ್ಗೆ ನಿರ್ಧಾರ ಮಾಡಿದೆ ಈ ಸಮಯದಲ್ಲಿ ಅರ್ಹವಾದ ಅಭ್ಯರ್ಥಿಗಳಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು.

WhatsApp Group Join Now
Telegram Group Join Now

ಅಭ್ಯರ್ಥಿಗಳು ತರಬೇತಿಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಅಭ್ಯರ್ಥಿಗಳ ತರಬೇತಿ ಅವಧಿ ಸೇರಿದಂತೆ ಅಭ್ಯರ್ಥಿಗಳ ವಿದ್ಯಾರ್ಹತೆ ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಯಾವ ವಿಳಾಸಕ್ಕೆ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಅಭ್ಯರ್ಥಿಗೆ ಬೇಕಾದ ವಿದ್ಯಾರ್ಹತೆ:

ಸಮವಸ್ತ್ರ ಸೇವೆಗಳಿಗೆ ವಸತಿಯನ್ನು ಕೊಟ್ಟು 60 ದಿನಗಳ ದೈಹಿಕ ಹಾಗೂ ಬೇಕಾದ ಇತರೆ ತರಬೇತಿಗಳನ್ನು ನೀಡಲಾಗುವುದು. ಅಭ್ಯರ್ಥಿಯು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು 18 ವರ್ಷದಿಂದ 23 ವರ್ಷಗಳ ವರೆಗಿನ ವಯೋಮಿತಿಯನ್ನು ಹೊಂದಿರಬೇಕು. ಹಾಗೂ ಡಿಸೆಂಬರ್ 10ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಇನ್ನು ಅಭ್ಯರ್ಥಿಯ ಆಯ್ಕೆಯ ಬಗ್ಗೆ ಹೆಚ್ಚಿನದಾಗಿ ಹೇಳಬೇಕೆಂದರೆ, 250 ಅಭ್ಯರ್ಥಿಗಳಂತೆ 4 ಬ್ಯಾಚ್ ಗಳಲ್ಲಿ ತರಬೇತಿ ಸಂಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಮತ್ತು ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ತರಬೇತಿ ನೀಡುವ ಸಂಸ್ಥೆಯೇ ಅಭ್ಯರ್ಥಿಗಳ ಆಯ್ಕೆಯನ್ನು ಮಾಡುತ್ತದೆ. ಮೊದಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗುವುದು. ಡಿಸೆಂಬರ್ 10ರ ಒಳಗಾಗಿ ಸಂಜೆ 6 ಗಂಟೆಯ ಒಳಗಡೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ: https://swdservices.karnataka.gov.in ಈ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು

ಅರ್ಜಿಯನ್ನು ಸಲ್ಲಿಸಲು ಕರ್ನಾಟಕದ ನಿವಾಸಿ ಆಗಿರಬೇಕು ಹಾಗೂ ಕಡ್ಡಾಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರಬೇಕು ಹಾಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು ಕುಟುಂಬ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು ಪುರುಷ ಅಭ್ಯರ್ಥಿಯಾದರೆ 162 ರಿಂದ 185 ಸೆಂ.ಮೀ ಎತ್ತರವಿರಬೇಕು ಹಾಗೆ ಮಹಿಳಾ ಅಭ್ಯರ್ಥಿಯಾದಲ್ಲೇ 152 ಸೆಂ.ಮೀ.ಎತ್ತರವನ್ನು ಹೊಂದಿರಬೇಕು. ತೂಕದ ಬಗ್ಗೆ ಹೇಳುವುದಾದರೆ, ಇನ್ನು ಪುರುಷರಾದರೆ 47 ರಿಂದ 78 ಕೆಜಿ ಒಳಗಡೆ ಇರಬೇಕು. ಮಹಿಳೆಯರಾದರೆ 44 ಕೆಜಿ ತೂಕವನ್ನು ಹೊಂದಿರಬೇಕು.

ದೈಹಿಕ ಸಾಮರ್ಥ್ಯ ಪರೀಕ್ಷೆಯ ಷರತ್ತುಗಳು:

ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಸ್ವಂತ ಖರ್ಚಿನಲ್ಲಿ ಬರಬೇಕಾಗುತ್ತದೆ ದೈಹಿಕ ಪರೀಕ್ಷೆಯ ಸಂದರ್ಭದಲ್ಲಿ ಏನೇ ದುರ್ಘಟನೆಯಾದರು ಕೂಡ ಏನೇ ದುರಂತವಾದರೂ ಕೂಡ ತರಬೇತಿ ಸಂಸ್ಥೆ ಹೊಣೆಯಾಗುವುದಿಲ್ಲ ತಮ್ಮ ಇಚ್ಛೆಯಂತೆ ತಮ್ಮ ಧೈರ್ಯದಂತೆ ದೈಹಿಕ ಪರೀಕ್ಷೆಯನ್ನು ಎದುರಿಸಬೇಕು. ಒಂದು ವೇಳೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ದೈಹಿಕ ಪರೀಕ್ಷೆಗೆ ಹಾಜರಾಗದಿದ್ದರೆ ಇಂತಹ ನಿರ್ಲಕ್ಷಕ್ಕೆ ಅಭ್ಯರ್ಥಿಗಳೇ ಹೊಣೆಯಾಗಿರುತ್ತಾರೆ ಹೊರತು ತರಬೇತಿ ಸಂಸ್ಥೆ ಹೊಣೆಯಾಗುವುದಿಲ್ಲ.

ಅಧಿಸೂಚನೆ: ಡೌನ್’ಲೌಡ್ ಮಾಡಿ

ಇದನ್ನೂ ಓದಿ: ಬೆಳೆ ಪರಿಹಾರ ಪಡೆಯಲು ಏನ್ ಮಾಡಬೇಕು? ಯಾವೆಲ್ಲಾ ದಾಖಲೆಗಳು ಬೇಕು?

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಇನ್ನು ಮುಂದೆ ಆಸ್ತಿ ಖರೀದಿ ಮತ್ತಷ್ಟು ಸುಲಭ