2023-24 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಸತಿ ಶಾಲೆಗಳಲ್ಲಿ ಬರೋಬ್ಬರಿ 20,000 ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆಯೇ ಪ್ರವೇಶ ಮಾಡಿಕೊಳ್ಳಲಾಗಿತ್ತಿದ್ದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಯಾವ ಯಾವ ಶಾಲೆಗಳಿಗೆ ಪ್ರವೇಶ ನಡೆಯುತ್ತಿದೆ?: ರಾಜ್ಯದ ಒಟ್ಟು 11 ವಸತಿ ಶಾಲೆಗಳಲ್ಲಿ ಈ ವಿಶೇಷ ಸೌಲಭ್ಯ ದೊರೆಯುತ್ತಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ, ಸಂಗೊಳ್ಳಿ ರಾಯಣ್ಣ ವಸತಿ ಶಾಲೆ, ಕವಿರನ್ನ ವಸತಿ ಶಾಲೆ, ಗಾಂಧಿತತ್ವ ವಸತಿ ಶಾಲೆ, ಶ್ರೀ ನಾರಾಯಣ ಗುರು ವಸತಿ ಶಾಲೆಗಳು ಸೇರಿವೆ.
ಪ್ರತಿ ವರುಷ ಪ್ರವೇಶ ಹೇಗೆ?: ಈ ಹಿಂದಿನ ವರುಷಗಳಲ್ಲಿ ರಾಜ್ಯದಾದ್ಯಂತ ಇರುವ 5 ನೇ ತರಗತಿ ಮಕ್ಕಳಿಗೆ ರಾಜ್ಯದ ಯಾವುದೇ ವಸತಿ ಶಾಲೆಗಳಲ್ಲಿ ಆರನೇ ತರಗತಿಗೆ ಅಡ್ಮಿಷನ್ ಬಯಸಿದರೆ ಮೊದಲು ಪ್ರವೇಶ ಪರೀಕ್ಷೆ ನಡೆಸುತ್ತಿದ್ದಾರು. ನಂತರ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಲಭ್ಯ ಸೀಟುಗಳಿಗೆ ಪ್ರವೇಶ ನೀಡುತ್ತಿತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಯಾರಿಗೆ ಈ ವಿಶೇಷ ಸೌಲಭ್ಯ ಸಿಗುತ್ತಿದೆ?: ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಈ ವಿಶೇಷ ಸೌಲಭ್ಯ ಸಿಗುತ್ತಿದೆ.
ಪ್ರವೇಶ ಆರಂಭ ದಿನಾಂಕ :- ಈ ವಿಶೇಷ ಪ್ರವೇಶವು ಇದೆ ಬರುವ ಮೇ 15 2024 ರಿಂದ ಆರಂಭ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಿನವೂ 45 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ಲಾಭ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಉಚಿತ ಪ್ರವೇಶಕ್ಕೆ ನೀಡಬೇಕಾದ ದಾಖಲೆಗಳ ಮಾಹಿತಿ:-
- ಆಧಾರ್ ಸಂಖ್ಯೆ: ಪ್ರವೇಶಾತಿ ಬಯಸುವ ವಿದ್ಯಾರ್ಥಿಯು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲೆಯಾಗಿ ನೀಡಬೇಕು.
- ಪೋಷಕರ ಮೊಬೈಲ್ ಸಂಖ್ಯೆ: ಪ್ರವೇಶ ಪಡೆಯುವ ಸಮಯದಲ್ಲಿ ಅಥವಾ ನಂತರ ಸಂಸ್ಥೆಯು ಸಂಪರ್ಕ ಸಾಧಿಸಲು ಪೋಷಕರೂ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡುವುದು ಅತೀ ಅವಶ್ಯಕ ಆಗಿದೆ.
- ವಿಶೇಷ ವರ್ಗದ ಮೀಸಲಾತಿಗಾಗಿ ಪ್ರಮಾಣ ಪತ್ರ: ವಿದ್ಯಾರ್ಥಿಯು ಯಾವುದೇ ವಿಶೇಷ ವರ್ಗಕ್ಕೆ ಸೇರಿದ್ದರೆ, ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಒದಗಿಸಬೇಕು ಇದು ನಿಮಗೆ ಉಚಿತ ಪ್ರವೇಶ ನೀಡಲು ಸಹಾಯಕ ಆಗುತ್ತದೆ.
- ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ: ವಿಶೇಷ ವರ್ಗಗಳಿಗೆ ಸಂಬಂಧಿಸಿದ ಗುರುತಿನ ಚೀಟಿ ಮತ್ತು ಸರ್ಕಾರದಿಂದ ದೃಢೀಕರಿಸಿ ನೀಡಿರುವ ಪ್ರಮಾಣ ಪತ್ರಗಳನ್ನು ನೀಡಿದರೆ ಉಚಿತ ಪ್ರವೇಶ ಸುಲಭವಾಗಿ ಪಡೆಯಲು ಸಾಧ್ಯ.
- ರಾಜ್ಯ / ಕೇಂದ್ರ ಸರ್ಕಾರದ ಗ್ರೂಪ್ ಎ / ಗ್ರೂಪ್ ಬಿ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಪತ್ರ: ಪೋಷಕರ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರಗಳು ಲಭ್ಯವಿಲ್ಲ ಎಂದಾದರೆ ಅಂತಹ ಪಾಲಕರು ವಿಶೇಷ ಸೂಕ್ತ ದಾಖಲೆಗಳ ಆಧಾರದ ಮೇಲೆ ರಾಜ್ಯ / ಕೇಂದ್ರ ಸರ್ಕಾರದ ಗ್ರೂಪ್ ಎ / ಗ್ರೂಪ್ ಬಿ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಪತ್ರವನ್ನು ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?: ಮೇಲೆ ತಿಳಿಸಿದ ಎಲ್ಲ ದಾಖಲೆ ಮತ್ತು 5 ನೇ ತರಗತಿಯ ಅಂಕಪಟ್ಟಿ ಹಾಗೂ ಮಗುವಿನ ಫೋಟೋ ಜೊತೆಗೆ ನಿಮ್ಮ ಹತ್ತಿರದ ವಸತಿ ಶಾಲೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ಬಹುಬೇಡಿಕೆಯ ಪಾರ್ಲೆ-ಜಿ ಬಿಸ್ಕತ್ ನ ಬೆಲೆ, ಬೇರೆ ಬೇರೆ ದೇಶಗಳಲ್ಲಿ ಎಷ್ಟಿದೆ ಗೊತ್ತಾ? ತುಂಬಾ ದುಬಾರಿ!