ಪಿಯುಸಿ, ನೀಟ್ ಮತ್ತು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ..

free coaching for PUC, NEET and CET exam

ಪಿಯುಸಿ ಮುಗಿದ ನಂತರ ಎಂಜಿನಿಯರಿಂಗ್, MBBS ಉನ್ನತ ಶಿಕ್ಷಣಕ್ಕೆ ಹೋಗಬೇಕು ಎಂದರೆ ನೀಟ್ ಮತ್ತು ಸಿಇಟಿ ಪರೀಕ್ಷೆ ಬರೆಯಬೇಕು. ಪರೀಕ್ಷೆಗಳು ಬಹಳ ಕಠಿಣವಾಗಿ ಇರುವುದರಿಂದ ಕೋಚಿಂಗ್ ಪಡೆಯಬೇಕಾಗುತ್ತದೆ. ಆದರೆ ಕೋಚಿಂಗ್ ಪಡೆಯಲು ಕೋಚಿಂಗ್ ಸೆಂಟರ್ ಗಳು ಸಾವಿರಾರು ರೂಪಾಯಿಗಳ ಫೀಸ್ ಡಿಮಾಂಡ್ ಮಾಡುತ್ತಾರೆ. ಎಲ್ಲರಿಗೂ ಅಷ್ಟೊಂದು ಹಣವನ್ನು ಕೊಟ್ಟು ಮಕ್ಕಳಿಗೆ ಕೋಚಿಂಗ್ ಕಲಿಸಲು ಆಗುವುದಿಲ್ಲ. ಆದ್ದರಿಂದ ಈಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಉಚಿತವಾಗಿ ಕೋಚಿಂಗ್ ನೀಡುವುದಾಗಿ ತಿಳಿಸಿದೆ.

WhatsApp Group Join Now
Telegram Group Join Now

ಉಚಿತ ಕೋಚಿಂಗ್ ನೀಡುವ ಸ್ಥಳದ ಬಗ್ಗೆ ಮಾಹಿತಿ:- ಉಚಿತ ಕೋಚಿಂಗ್ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಹಿಳಾ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಶಶಿಕಲಾ ಜೆ ಅವರು ಮೈಸೂರಿನ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಕಛೇರಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ವರೆಗೆ ತರಬೇತಿಯು ನಡೆಯುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ದೃಷ್ಠಿಯಿಂದ ಈ ಉಚಿತ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. 30 ದಿನಗಳ ಶಿಬಿರಕ್ಕೆ ಆಸಕ್ತ ವಿದ್ಯಾರ್ಥಿಗಳು ಹಾಜರಾಗಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಉಚಿತ ತರಬೇತಿಯನ್ನು ಮೈಸೂರಿನ ವಿಜಯ ವಿಠಲ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಿಮ್ಮ ಹೆಸರಲ್ಲಿ ಬುಕಿಂಗ್ ಮಾಡಿದ ಟಿಕೆಟ್ ಅನ್ನು ಈಗ ನಿಮ್ಮ ಕುಟುಂಬದ ಸದಸ್ಯ ರಿಗೆ ವರ್ಗಾವಣೆ ಮಾಡಬಹುದು..

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಆಸಕ್ತ ವಿದ್ಯಾರ್ಥಿಗಳು ನೇರವಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ಕರ್ನಾಟಕದ ಯಾವುದೇ ಜಿಲ್ಲೆಯ ವಿದ್ಯಾರ್ಥಿಗಳು ಈ ಉಚಿತ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದು.

ಈ ಯೋಜನೆಯ ಉಪಯೋಗ ಏನು?: ಸಾವಿರಾರು ರೂಪಾಯಿ ಕೊಟ್ಟು ಕೋಚಿಂಗ್ ಕಲಿಸಲು ಆಗದ ಪಾಲಕರಿಗೆ ಇದು ಉಪಯೋಗ ಆಗುತ್ತದೆ. ಉನ್ನತ ಶಿಕ್ಷಣ ದ ಕನಸು ಕಂಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಮೈಸೂರಿನ ಸುತ್ತ ಮುತ್ತಲಿನ ಭಾಗದ ಜನರಿಗೆ ಇದರಿಂದ ಇನ್ನಷ್ಟು ಉಪಯೋಗ ಆಗುತ್ತದೆ. 2023-24 ನೇ ಪಿಯುಸಿ ಪರೀಕ್ಷೆ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದ್ದು , ಪಿಯುಸಿ ಪರೀಕ್ಷೆಯ ಜೊತೆಗೆ ಮುಂದಿನ ಶಿಕ್ಷಣದ ಬಗ್ಗೆ ಆಲೋಚನೆ ಮಾಡುವ ವಿದ್ಯಾರ್ಥಿಗಳಿಗೆ ಇದು ಉತ್ತಮವಾಗಿದೆ.

ಆದರೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರಿಂದ ನೀವು ಹೆಚ್ಚಿನ ಮಾಹಿತಿ ಯನ್ನು ಪಡೆಯಲು ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಇರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಿ ಇಲ್ಲವೇ . ದೂರವಾಣಿ ಸಂಖ್ಯೆ 0821-2515944 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಅಥವಾ ನಿಮ್ಮ ಹತ್ತಿರದ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಶಾಖೆಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಯುವನಿಧಿ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ ನೋಡಿ

ಇದನ್ನೂ ಓದಿ: ಅವಶ್ಯಕತೆ ಗಳಿಗೆ ಮಿತಿಮೀರಿದ ವೈಶಿಷ್ಟ್ಯ ಗಳನ್ನು ಹೊಂದಿರುವ ಈ ಬೈಕ್ ಗಳು ಯಾವುವು ಎಂದು ನೋಡಿ, ಇದರ ಬೆಲೆಯೂ ಕೂಡ ಕೈಗೆಟಕುವ ದರ ದಲ್ಲಿ