ಗೃಹಲಕ್ಷ್ಮಿ ಖಾತೆಯ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಲ್ಲಿ 4,000 ರೂಪಾಯಿ ಹಣ ಜಮಾ ಆಗಿದೆ.

Gruhalakshmi Yojana Amount

ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ನೀಡುವ ಸಹಾಯಧನ ಯೋಜನೆ ಆಗಿದ್ದು. ಲಕ್ಷಾಂತರ ಫಲಾನುಭವಿಗಳು ಈ ಸಹಾಯಧನದ ಪ್ರಯೋಜನವನ್ನು ಪಡೆಯುತ್ತಾ ಇದ್ದಾರೆ. ಪ್ರತೀ ತಿಂಗಳು ಪ್ರತಿಯೊಬ್ಬ ಮನೆಯ ಹಿರಿಯ ಮಹಿಳೆಯ ಖಾತೆಗೆ 2,000 ರೂಪಾಯಿ ಹಣ ಬರುತ್ತಿದ್ದು ಈಗ ಚುನಾವಣೆಯ ಹೊಸ್ತಿಲಲ್ಲಿ 4,000 ರೂಪಾಯಿ ಬಂದಿದೆ. ಹಾಗಾದರೆ ಯಾಕೆ 4,000 ರೂಪಾಯಿ.ಹಣ ಬಂತು ಎಂಬ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

4,000 ಹಣ ಜಮಾ ಆಗಿದ್ದು ಏಕೆ?

ಗೃಹಲಕ್ಷ್ಮಿ ಯೋಜನೆಯು ಆರಂಭವಾದಾಗಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ಮೊದಲು ಅಥವಾ ಎರಡನೇ ವಾರದಲ್ಲಿ ಯೋಜನೆಯ ಅರ್ಧದಷ್ಟು ಮಹಿಳೆಯರ ಖಾತೆಗಳಿಗೆ ಹಣ ಜಮಾ ಆಗುತ್ತಿತ್ತು. ಅದರಂತೆಯೇ ಈಗ ಏಪ್ರಿಲ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಮೊದಲ ವಾರದಲ್ಲಿ ಜಮಾ ಆಗಿದೆ. ಅದರ ಜೊತೆಗೆ ಏಪ್ರಿಲ್ 20 ರ ನಂತರ ಮತ್ತೊಮ್ಮೆ 2,000 ರೂಪಾಯಿ ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿದೆ. ಅಲ್ಲಿಗೆ ಒಂದೇ ತಿಂಗಳಲ್ಲಿ 4,000 ಹಣ ಒಬ್ಬ ಫಲಾನುಭವಿಯ ಖಾತೆಗೆ ಜಮಾ ಆಗಿದೆ. ಏಪ್ರಿಲ್ 26 ಹಾಗೂ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯ ಸಲುವಾಗಿ ಮುಂದಿನ ತಿಂಗಳ ಗೃಹಲಕ್ಷ್ಮಿ ಖಾತೆಯ ಹಣ ಯಾವಾಗ ಜಮಾ ಆಗುವುದು ಎಂಬ ಮಾಹಿತಿಯನ್ನು ಸಚಿವರು ನೀಡಿರಲಿಲ್ಲ. ಆದರೆ ಈಗ ಯಾವುದೇ ಮಾಹಿತಿ ಇಲ್ಲದೆ ಹಣ ಜಮಾ ಆಗಿರುವುದು ಎಲೆಕ್ಷನ್ ಗಿಮಿಕ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಲಾಖೆಯು ಈ ಆರೋಪವನ್ನು ತಳ್ಳಿಹಾಕಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

5 ದಿನ ಮೊದಲು ಖಾತೆಗೆ ಹಣ ಜಮಾ ಆಗಿದೆ:- ಮೇ 1 ನೇ ತಾರೀಖಿಗೆ ಇನ್ನು 5 ದಿನ ಬಾಕಿ ಇದೆ. ಆದರೆ ಸಮಯಕ್ಕೂ ಮೊದಲೇ ಹಣ ಜಮಾ ಆಗಿದೆ. ಮಹಿಳೆಯರಿಗೆ ಏಪ್ರಿಲ್ ತಿಂಗಳು ಡಬಲ್ ಖುಷಿ ಸಿಕ್ಕಿದಂತೆ ಆಗಿದೆ. 

ಗೃಹಲಕ್ಷ್ಮಿ ಖಾತೆಯ ಹಣ ಇನ್ನು ಬಾರದೆ ಇದ್ದರೆ ಹೀಗೆ ಮಾಡಿ:-

ಆಧಾರ್ ಸಿಡಿಂಗ್:- ಗೃಹಲಕ್ಷ್ಮಿ ಖಾತೆಗೆ ಅರ್ಜಿ ಸಲ್ಲಿಸಿದ ಹಲವು ಮಹಿಳೆಯರಿಗೆ ಇನ್ನು ಸಹ ಒಂದು ಕಂತಿನ ಹಣವೂ ಬರಲಿಲ್ಲ. ಅಂತಹ ಮಹಿಳೆಯರು ಬ್ಯಾಂಕ್ ಗೆ ತೆರಳಿ ಆಧಾರ್ ಸೇಡಿಂಗ್ ಮಾಡಿಸಬೇಕು. ಬ್ಯಾಂಕ್ ಗೆ ತೆರಳಿ ಆಧಾರ್ ಸಿಡಿಂಗ್ ಮಾಡಿಸಿದ ಮೇಲೆ ನಿಮಗೆ ಗೃಹಲಕ್ಷ್ಮಿ ಹಣವೂ ಜಮಾ ಆಗುತ್ತದೆ.

ಇ ಕೆ ವೈ ಸಿ:- ನಿಮ್ಮ ಬ್ಯಾಂಕ್ ಅಕೌಂಟ್ ಗೆ ಇ ಕೆ ವೈ ಸಿ ಮಾಡಿಸದೆ ಇದ್ದರೂ ಸಹ ಯೋಜನೆಯ ಹಣ ಬರುವುದಿಲ್ಲ. ಅದಕ್ಕಾಗಿ ಈಗಲೇ ನೀವು ಬ್ಯಾಂಕ್ ಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಇ ಕೆ ವೈ ಸಿ ಮಾಡಿಸಬೇಕು.

ಮೇಲಿನ ಎರಡು ಹಂತಗಳನ್ನು ಅನುಸರಿಸಿ ನಂತರ ನಿಮ್ಮ ನ್ಯಾಯಬೆಲೆ ಅಂಗಡಿಗೆ ಇ ಕೆ ವೈ ಸಿ ಅಪ್ಡೇಟ್ ಮಾಡಿಸಬೇಕು ನಂತರ ಇ ಕೆ ವೈ ಸಿ ದೃಢೀಕರಣವನ್ನು ಆಶಾ ಕಾರ್ಯಕರ್ತೆಯರ ಬಳಿ ನೀಡಿದರೆ ನಿಮಗೆ ಸಹಾಯಧನ ಸಿಗುತ್ತದೆ. ಆಶಾ ಕಾರ್ಯಕರ್ತರಿಗೆ ಸಹಾಯ ಧನ ನೀಡುವಂತೆ ಇಲಾಖೆಯು ಅಧಿಸೂಚನೆ ನೀಡಿದೆ.

ಇದನ್ನೂ ಓದಿ: SSLC ಫಲಿತಾಂಶದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. 

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯೊಂದಿಗೆ ಪ್ರತಿ ತಿಂಗಳು ರೂ 20,500 ಪಡೆಯಿರಿ!