ವಾರದ ಬಳಿಕ ಪತ್ತೆಯಾಯ್ತು ಶರತ್ ಮೃತದೇಹ! ನಿಜಕ್ಕೂ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದಿದ್ದ? ಅಥವಾ ಆಗಿದ್ದು ಬೇರೆನ??

ಇತ್ತೀಚಿಗೆ ಕ್ರೇಜಿ ಫೋಟೊ ವಿಡಿಯೋ ಹುಚ್ಚು ಪ್ರಾಣವನ್ನೇ ಕಾಸಿಯುತ್ತಿದ್ರು ನಮ್ಮ ಜನರು ಮಾತ್ರ ಸಾವಿನ ಜೊತೆಗೆ ಚೆಲ್ಲಾಟವಾಡೋದನ್ನ ಮಾತ್ರ ಬಿಡ್ತಿಲ್ಲ. ಹುಚ್ಚು ಸಾಹಸಗಳು ಹುಚ್ಚು ಪ್ರಯತ್ನಗಳು ಜೀವಕ್ಕೆ ಆಪತ್ತು ತರಬಹುದು ಅನ್ನೋದನ್ನ ಮರೆತಂತೆ ವರ್ತಿಸುತ್ತಾರೆ. ಇಂತದ್ದೇ ಒಂದು ಹುಚ್ಚು ಪ್ರಯತ್ನದಲ್ಲಿ ಯುವಕನೋರ್ವ ಜೀವ ಕಳೆದುಕೊಂಡು ವಾರದ ಬಳಿಕ ಮೃತದೇಹ ಪತ್ತೆಯಾಗಿದೆ. ಹೌದು ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರು ಪಾಲಾಗಿದ್ದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರ ಅರಶಿನಗುಂಡಿಯಲ್ಲಿ ನಡೆದಿತ್ತು.ಅಲ್ದೇ ಯುವಕ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. 

WhatsApp Group Join Now
Telegram Group Join Now

ಹೌದು ಶಿವಮೊಗ್ಗ ಭದ್ರಾವತಿ ಮೂಲದ 23ವರ್ಷದ ಯುವಕ ಶರತ್ ಕುಮಾರ್ ಮೃತಪಟ್ಟ ದುರ್ದೈವಿ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆ ತೆರಳಿದ್ದ ಈ ವೇಳೆ ರಭಸವಾಗಿ ನೀರು ಧುಮ್ಮುಕ್ಕುತ್ತಿರುವ ಅಪಾಯದ ಸ್ಥಳದಲ್ಲಿ ಶರತ್ ನಿಂತಿದ್ದು, ಈ ವೇಳೆ ಆಯತಪ್ಪಿ ಬಿದ್ದ ಶರತ್ ನೀರಿನಲ್ಲಿ ಕೊಚ್ಚಿ ಹೋಗಿದ್ದನು. ಇನ್ನು ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ರು, ಅಲ್ದೇ ಸ್ಥಳಕ್ಕೆ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಯುವಕನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಕೊನೆಗೆ ಬರೋಬ್ಬರಿ ಒಂದು ವಾರದ ಬಳಿಕ ಶರತ್ ಮೃತದೇಹ ಪತ್ತೆಯಾಗಿದೆ.

ಹೌದು ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ಶರತ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಸತತ 1 ವಾರಗಳ ನಿರಂತರ ಶೋಧ ಕಾರ್ಯದ ಬಳಿಕ ನಿನ್ನೆ ಯುವಕನ ಮೃತದೇಹ ಪತ್ತೆಯಾಗಿದೆ. ಇನ್ನು ಭದ್ರಾವತಿ ಮೂಲದ ಈ ಯುವಕ ಶರತ್ ಕುಮಾರ್ ತನ್ನ ಸ್ನೇಹಿತನೊಂದಿಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದ. ಈ ವೇಳೆ ತುಂಬಿ ಹರಿಯುತ್ತಿದ್ದ ನದಿ ಬಳಿ ನಿಂತು ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದು ರಾಜ್ಯಾದ್ಯಂತ ಬಾರಿ ಸುದ್ದಿಯಾಗಿತ್ತು, ಅಲ್ದೇ ಈ ರೀತಿಯ ಹುಚ್ಚು ಪ್ರಯತ್ನಗಳು ಬೇಡ ಅಂತ ವಿಡಿಯೋ ಬಳಸಿಕೊಂಡು ಸಾಕಷ್ಟು ಟ್ರೋಲ್ ಕೂಡ ಆಗಿದ್ವು.

ಇದನ್ನೂ ಓದಿ: ಗೃಹಲಕ್ಷ್ಮೀ ಅರ್ಜಿ ಹಾಕಲು ಇನ್ನೂ ಮುಂದೆ ಯಾವುದೇ ಚಿಂತೆ ಬೇಡ; ಮನೆಯಿಂದಲೇ ಅರ್ಜಿ ಹಾಕಬಹುದು, ಹೇಗೆ ನೋಡಿ?

ಫಾಲ್ಸ್ ನಲ್ಲಿ ಕೊಚ್ಚಿ ಹೋಗಿದ್ದ ಶರತ್ ಶವ ಪತ್ತೆಯಾಗಿದ್ದೆಲ್ಲಿ??

ಸದ್ಯ ಮಂಗಳೂರಿನ ಎಸ್​ಡಿಆರ್​ಎಫ್ ತಂಡದ ಹತ್ತು ಸಿಬ್ಬಂದಿ, ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ, ಜ್ಯೋತಿರಾಜ್ ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಸಹ ಶೋಧ ಕಾರ್ಯ ನಡೆಸಿ, ಅಂತಿಮವಾಗಿ ಬರೋಬ್ಬರಿ ಒಂದು ವಾರದ ಬಳಿಕ ಶರತ್​ ಶವ ಸಿಕ್ಕಿದೆ. ಇನ್ನು ಮೃತದೇಹ ಪತ್ತೆಹಚ್ಚಲು ಮುಳುಗು ತಜ್ಞರು, ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಶೋಧ ಕಾರ್ಯಾಚರಣೆ ನಡೆಸಿದ್ದರು. ನಿರಂತರ ಶೋಧ ಕಾರ್ಯದ ಬಳಿಕ ಮೃತದೇಹ ಪತ್ತೆಯಾಗಿದೆ. ಶರತ್ ಕುಮಾರ್ ಮೃತದೇಹವು ಕೇವಲ 200 ಮೀಟರ್ ಕೆಳಗಡೆ ಬಂಡೆ ಕಲ್ಲಿನ ಒಳಗೆ ಸಿಲುಕಿತ್ತು ಅಂತ ಹೇಳಲಾಗ್ತಿದ್ದು, ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ

ಮೃತ ದೇಹ ಹೊರ ತೆಗೆದ ನಂತರ ಮಗ ಮನೆಗೆ ವಾಪಸ್ ಬರ್ತಾನೆ ಅಂತ ಕಾದಿದ್ದ ಕುಟುಂಬಸ್ಥರ ಆಕ್ರಂದನ ನಿಜಕ್ಕೂ ಕೂಡ ಹೇಳತೀರದು ಕೇವಲ 23ವರ್ಷಕ್ಕೆ ಮಗ ಇನ್ನಿಲ್ಲವಾಗ್ತಾನೆ ಅಂದ್ರೆ ಆ ಹೆತ್ತವರ ಶೋಕ ಯಾರಿಗೂ ಬೇಡ. ಮಗ ವಾಪಸ್ ಬಂದೆ ಬರ್ತಾನೆ ಅಂತ ಬಹಳ ಆಸೆ ಇಟ್ಟು ಕಾದಿದ್ದ ಪೋಷಕರಿಗೆ ಸಿಡಿಲು ಬಡಿದಂತಾಗಿದೆ. ಇನ್ನು ಕೂಡ ಮಗನ ಶವವನ್ನ ನೋಡದ ಅವ್ರ ತಂದೆ ಮಧ್ಯಮಗಳ ಮುಂದೆ ಅಕ್ಷರಶ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ದೇ ನನ್ನ ಮಗನಿಗೆ ಇತರ ವಿಡಿಯೋ ಮಾಡೋ ಹುಚ್ಚೆಲ್ಲ ಇರಲಿಲ್ಲ. ಯಾರೋ ಸ್ನೇಹಿತ ಕರೆದ ಅಂತ ಹೋಗಿ ಇವತ್ತು ಹಿಂಗಾಗೋದ. ಬೆಳಿಗ್ಗೆ ಎದ್ದು ಸ್ನಾನ ಮಾಡಿ ಹೊರಟವನು ವಾಪಾಸ್ ಬರ್ಲೆ ಇಲ್ಲ. ಯಾರೋ ಪ್ರೆಂಡ್ಸ್ ಜೊತೆ ಹೋಗ್ತಿದೀನಿ ಎಲ್ಲಿಗೆ ಅಂತಾನೂ ಗೊತ್ತಿಲ್ಲ ಅಂತ ಹೇಳಿದ್ದ ಬೇಗ ಬಂದುಬಿಡ್ತೀನಿ ಅಂತ ಹೋದೋನು ಮತ್ತೆ ವಾಪಸ್ ಬರ್ಲೆ ಇಲ್ಲ ಅಂತ ಬಿಕ್ಕಿ ಬಿಕ್ಕಿ ಅಳುತ್ತಿದ್ದದ್ದು ನಿಜಕ್ಕೂ ಶೋಚನಿಯ. ಒಟ್ಟಿನಲ್ಲಿ ಸ್ನೇಹಿತರೆ ಈ ರೀತಿಯ ಪ್ರಕರಣಗಳು ಪದೆ ಪದೆ ನಡುತ್ತಿದ್ರು ಆಧುನಿಕ ಭರಾಟೆಗೆ ಸಿಕ್ಕಾಪಟ್ಟೆ ನಮ್ ಜನ ಮಾತ್ರ ಮೊಂಡು ತಾನ ಹುಚ್ಚು ಪ್ರಯತ್ನದಿಂದ ಜೀವ ಕಳೆದುಕೊಳ್ಳೋದು ಮಾತ್ರ ಕಡಿಮೆಯಾಗಿಲ್ಲ.

ಇದನ್ನೂ ಓದಿ: ಎಲ್ಲಾ ಮಹಿಳೆಯರೆ ಗಮನಿಸಿ! ಗೃಹಲಕ್ಷ್ಮೀ 2000 ಹಣ ಈ ದಿನ ಬರುತ್ತೆ!? ತಪ್ಪದೇ ನೋಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram