ಆಶ್ರಯ ಯೋಜನೆಯ ಫ್ರೀ ಸೈಟ್ ಫಲಾನುಭವಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ 572 ಎಕರೆ ಜಾಗವನ್ನು ಗುರುತಿಸಿದೆ.

Ashraya Yojana Karnataka

ನಿರಾಶ್ರಿತರಿಗೆ ಮನೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಈಗಾಗಲೇ ಸೈಟ್ ನೀಡಲು ಜಾಗವನ್ನು ಸರಕಾರ ನಿಗದಿ ಪಡಿಸಿ ಇನ್ನೇನು ಫಲಾನುಭವಿಗಳಿಗೆ ಜಾಗವನ್ನು ನೀಡುವುದು ಮಾತ್ರ ಬಾಕಿ ಇದೆ. ಎಲ್ಲ ಸಮುದಾಯದ ಜನರನ್ನು ಮುನ್ನೆಲೆಗೆ ತರಬೇಕೆಂದು ಸರ್ಕಾರಗಳು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇವೆ. ಬಡವರಿಗೆ ಉಚಿತ ಅಕ್ಕಿ , ಉಚಿತ ಶಿಕ್ಷಣ, ಸರಕಾರಿ ನೌಕರಿಗಳ್ಳಲ್ಲಿ ಮೀಸಲಾತಿ ಹೀಗೆ ಹತ್ತು ಹಲವು ಯೋಜನೆಗಳು ಬಡವರ ಪಾಲಿಗೆ ವರವಾಗಿದೆ. ಅದರಂತೆಯೇ ಈಗ ಸರಿಯಾದ ಮನೆ ಇಲ್ಲದೆಯೇ ಚಿಕ್ಕ ಪುಟ್ಟ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವವರಿಗೆ ಮೂಲಭೂತ ಸೌಕರ್ಯ ಸಿಗಬೇಕು ಎಂಬ ಉದ್ದೇಶದಿಂದ ಆಶ್ರಯ ಯೋಜನೆಯಲ್ಲಿ ನಿವೇಶನಗಳನ್ನು ನೀಡಲು ಸರಕಾರ ಆಲೋಚನೆ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಸೈಟ್ ನೀಡುತ್ತಿರುವ ಸ್ಥಳದ ಬಗ್ಗೆ ಮಾಹಿತಿ :-  ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ 527 ಎಕರೆ ಪ್ರದೇಶವನ್ನು ಈಗಾಗಲೇ ಸರಕಾರವು ಮನೆ ಕಟ್ಟಲು ಯೋಗ್ಯವಾದ ಜಾಗವನ್ನು ನಿಗದಿ ಮಾಡಿ ಬಡವರಿಗೆ ಹಂಚಲು ನಿರ್ಧರಿಸಿದೆ.

ಅರ್ಜಿ ಆಹ್ವಾನ ಪ್ರಕ್ರಿಯೆ ಹೇಗೆ?

ರಾಜೀವ್‌ಗಾಂಧಿ ವಸತಿ ನಿಗಮ ಮಂಡಳಿ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಆಹ್ವಾನ ಮಾಡಿದ್ದಾರೆ. ನೀವು ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ನೀವು ಅರ್ಜಿ ಆಹ್ವಾನ ಮಾಡಬಹುದು. ಅರ್ಜಿಯನ್ನು ಗ್ರಾಮ ಪಂಚಾಯಿತಿಗಳು ಪರಿಶೀಲಿಸಿ ನಿಮ್ಮ ದಾಖಲೆಗಳನ್ನು ನಿಗಮಕ್ಕೆ ಕಳುಹಿಸಲಾಗುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಯೋಜನೆಯು ಪೂರ್ಣ ಆಗದೆ ಇರಲು ಇರುವ ಕಾರಣಗಳು :-

  • ಗ್ರಾಮ ಪಂಚಾಯಿತಿಗಳಿಂದ ಸರಿಯಾದ ಮಾಹಿತಿ ದೊರಕದೆ ಇರುವುದು.
  • ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆದರೆ ಕಾರ್ಯ ಮತ್ತೆ ಸ್ಥಗಿತಗೊಂಡು ಮುಂದಿನ ಜೂನ್ ವರೆಗೆ ಅರ್ಜಿಯ ಪ್ರಕ್ರಿಯೆ ಹಾಗೆಯೇ ಉಳಿಯುತ್ತದೆ.
  • ಗ್ರಾಮ ಪಂಚಾಯಿತಿ ಗಳಲ್ಲಿ ಇಂಟರ್ನೆಟ್ ಸಮಸ್ಯೆ ಇಂದ ಅರ್ಜಿಯ ಪರಿಶೀಲನೆ ಸಾಧ್ಯ ಆಗದೆ ಇರುವುದು.

ಯಾವ ಯಾವ ಸ್ಥಳಗಳ ಭೂಮಿಯನ್ನು ಸರಕಾರ ಗುರುತಿಸಿದೆ :- ರಾಜ್ಯದ ಹಲವು ತಾಲೂಕುಗಳಲ್ಲಿ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ. 

  1. ದೇವನಹಳ್ಳಿ ಯಲ್ಲಿ 62.14 ಎಕರೆ ಭೂಮಿ.
  2. ದೊಡ್ಡಬಳ್ಳಾಪುರದಲ್ಲಿ 93.39 ಎಕರೆ ಭೂಮಿ.
  3. ಹೊಸಕೋಟೆಯಲ್ಲಿ 324.20 ಎಕರೆ ಭೂಮಿ.
  4. ನೆಲಮಂಗಲದಲ್ಲಿ 46.37 ಎಕರೆ ಭೂಮಿ.

ಅಪ್ಲಿಕೇಶನ್ ಹಾಕುವಾಗ ಏನೆಲ್ಲಾ ಮಾಹಿತಿಯನ್ನು ನೀಡಬೇಕು ? :-

  • ಯಾವುದೇ ಭೂಮಿಯನ್ನು ಹೊಂದಿರಬಾರದು.
  • ನಿಮ್ಮ ಹೆಸರಿನಲ್ಲಿ ಯಾವುದೇ ಮನೆಯೂ ಇಲ್ಲ ಎಂಬ ಬಗ್ಗೆ ಸರಿಯಾದ ದಾಖಲೆ ನೀಡಬೇಕು.
  • ಪಾಸ್ಪೋರ್ಟ್ ಸೈಜ್ ಫೋಟೋ ಎರಡು.
  • ಜಾತಿ ಪ್ರಮಾಣ ಮಾತ್ರ.
  • ಆದಾಯ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್ ಹಾಗೂ ರೇಶನ್ ಕಾರ್ಡ್ (adhar card and ration card).
  • ನೀವು ಈಗ ಇರುವ ಬಾಡಿಗೆ ಮನೆಯ ಬಗ್ಗೆ ಮಾಹಿತಿ ಮತ್ತು ಫೋಟೋ.
  • ಹಿರಿಯ ನಾಗರಿಕ ಅಥವಾ ಮಾಜಿ ಸೈನಿಕ ಆಗಿದ್ದರೆ ಅದರ ಬಗ್ಗೆ ನಿಖರವಾದ ದಾಖಲೆ.
  • ವಿಚ್ಛೇದಿತ ಮಹಿಳೆ ಆಗಿದ್ದರೆ ಅದರ ಬಗ್ಗೆ ಸರಿಯಾದ ದಾಖಲೆಗಳನ್ನು ನೀಡಬೇಕು.
  • ನಿರಾಶ್ರಿತ ಎಂಬ ಬಗ್ಗೆ ಇರುವ ದಾಖಲೆ.

ಇದನ್ನೂ ಓದಿ: ಅನ್ನದಾತರಿಗೆ ಶುಭ ಸುದ್ದಿ , ರೈತರಿಗೆ ಮೋದಿ ಸರಕಾರ ನೀಡುತ್ತಿದ್ದೆ ಹೊಸದೊಂದು ಯೋಜನೆ ! 

ಇದನ್ನೂ ಓದಿ: ಪಿಎಂ ಜನ್ ಮನ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ; 1 ಲಕ್ಷ ಫಲಾನುಭವಿಗಳಿಗೆ ಹಣ ಜಮಾ