ಅಭಿ ಭಾವಿ ಪತ್ನಿ ಮನೆಯಲ್ಲಿ ಶುರುವಾಗಿದೆ ಮದುವೆ ರಂಗು- ಶುರುವಾಯ್ತು ಅರಿಶಿಣ ಶಾಸ್ತ್ರ, ಅವಿವಾ ಫುಲ್ ಮಿಂಚಿಂಗ್

ಸ್ಯಾಂಡಲ್​ವುಡ್​​ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವ್ರ ಸುಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವಿವಾಹಕ್ಕೆ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದೆ. ಹೌದು ವಧು ಹಾಗೂ ವರ ಇಬ್ಬರ ಮನೆಯಲ್ಲಿಯೂ ಕೂಡ ಸಂಭ್ರಮ ಜೋರಾಗಿದ್ದು, ಮದುವೆಯ ವಾತಾವರಣ ಕಳೆಗಟ್ಟಿದೆ. ಹೌದು ಇಬ್ಬರ ಮನೆಯಲ್ಲಿಯೂ ಅರಿಶಿನ ಶಾಸ್ತ್ರಕ್ಕೆ ವಿಭಿನ್ನವಾಗಿ ಡೇಕೋರೇಷನ್ ಮಾಡಲಾಗಿದ್ದು, ಮದುವೆಯ ಸಂಭ್ರಮದಲ್ಲಿ ನಟ ಅಭಿಷೇಕ್ ಹಾಗೂ ಮಾಡೆಲ್ ಅವಿವಾ ಇದ್ದಾರೆ. ಹೌದು ಈಗಾಗ್ಲೇ ಎರಡು ಮನೆಯಲ್ಲಿ ನಡೆದಿರುವ ಅರಿಶಿಣ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು ಫುಲ್ ವೈರಲ್ ಆಗಿದ್ದು, ಅಂಬಿ ಪುತ್ರ ಮದುವೆಗೆ ಕ್ಷಣಗಣನೆ ಆರಂಭವಾಗಿದೆ.

WhatsApp Group Join Now
Telegram Group Join Now

ಹೌದು ಈಗಾಗ್ಲೇ ನಿಮ್ಮೆಲ್ಲರಿಗೂ ಗೊತ್ತಿರುವಂತೆ ರೆಬಲ್ ಪುತ್ರನ ಅರಿಶಿಣ ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳು ಫುಲ್ ವೈರೆಲ್ ಆಗಿತ್ತು. ಶುದ್ಧ ಬಿಳಿಯ ಬಣ್ಣದ ಉಡುಗೆಯಲ್ಲಿ ಪಕ್ಕ ದೇಶೀ ಗೌಡರ ಸ್ಟೈಲ್ ನಲ್ಲಿ ಅಭಿಷೇಕ್ ಮಿಂಚುತ್ತ ಫೋಟೋ ಹಾಗೂ ವಿಡಿಯೋಗಳಿಗೆ ಫೋಸ್ ಕೊಟ್ಟಿದ್ರು. ಅದರಂತೆ ಸುಮಲತಾ ಅಂಬರೀಶ್ ಅವ್ರ ಮನೆಯನ್ನ ಕೂಡ ಭರ್ಜರಿಯಾಗಿ ಅಲಂಕರಿಸಿದ್ದು, ಅರಿಶಿಣ ಶಾಸ್ತ್ರಕ್ಕೆ ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ವಿಭಿನ್ನ ಅಲಂಕಾರದ ಮಧ್ಯೆ ಗೌಡ್ರ ಮನೆಯ ಕುಡಿಯನ್ನ ನೋಡೋದೇ ದೊಡ್ಡ ಸಂಭ್ರಮ ಮದುವೆ ನೋಡಲು ಕಾಯುತ್ತಿದ್ದೇವೆ ಅಂತ ಅಭಿಮಾನಿಗಳು ಫುಲ್ ಖುಷಿ ಪಟ್ಟಿದ್ರು.

ಇದನ್ನೂ ಓದಿ: ಅಂಬಿ ಮನೆಯಲ್ಲಿ ಅಭಿ ಮದುವೆ ಸಂಭ್ರಮ, ಅರಿಶಿಣ ಶಾಸ್ತ್ರದಲ್ಲಿ ಅಂಬಿ ಪುತ್ರನ ಮಸ್ತ್ ಲುಕ್ ಹೇಗಿತ್ತು ಗೊತ್ತಾ

ಅವಿವಾ ಬಿದ್ದಪ್ಪ ಮನೆಯಲ್ಲೂ ಸಡಗರ ಸಂಭ್ರಮ

ಅದರಂತೆ ಅವಿವಾ ಮನೆಯಲ್ಲಿಯೂ ಕೂಡ ಮದುವೆಯ ಸಿದ್ಧತೆಗಳು ನಡೆಯುತ್ತಿದ್ದೂ, ಮದುವೆಗೂ ಮುನ್ನದ ಶಾಸ್ತ್ರಗಳಿಗೆ ಅಲ್ಲಿಯೂ ಕೂಡ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅಲ್ಲದೇ ಅವಿವಾ ಅವ್ರ ಮನೆಯಲ್ಲಿಯೂ ಇಂದೇ ಅರಿಶಿಣ ಶಾಸ್ತ್ರ ನಡೆದಿದ್ದು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ. ಹೌದು ಗೋಲ್ಡ್ ಹಾಗೂ ಅರಿಶಿಣ ಮಿಶ್ರಿತ ಉಡುಗೆಯಲ್ಲಿ ಅವಿವಾ ಫುಲ್ ಮಿಂಚುತ್ತಿದ್ದಾರೆ. ಹೌದು ಅವಿವಾ ಅರಿಶಿಣ ಶಾಸ್ತ್ರಕ್ಕೆ ಬಂದ ಸ್ನೇಹಿತೆಯೊಬ್ಬರು ಅವಿವಾ ಮನೆಯಲ್ಲಿ ಅರಿಶಿಣ ಶಾಸ್ತ್ರಕ್ಕೆ ಮಾಡಿಕೊಂಡಿರುವ ಸಿದ್ಧತೆ ಮತ್ತು ಅಲಂಕಾರ ಮತ್ತು ಅರಿಶಿಣ ಶಾಸ್ತ್ರಕ್ಕೆ ತುಂಬಾ ಕ್ಯೂಟ್ ಆಗಿ ರೆಡಿಯಾಗಿರುವ ಅವಿವಾ ಅವ್ರ ವಿಡಿಯೋವನ್ನ ಮಾಡಿದ್ದು ಇದೀಗ ಅ ವಿಡಿಯೋ ಸಿಕ್ಕಾಪಟ್ಟೆ ವೈರೆಲ್ ಆಗ್ತಿದೆ. ಹೌದು ಅವಿವಾ ಮನೆಯಲ್ಲಿಯೂ ಎಲ್ಲ ಶಾಸ್ತ್ರಗಳು ಕೂಡ ಶುರುವಾಗಿದ್ದು, ಇದೀಗ ಅರಿಶಿಣ ಶಾಸ್ತ್ರಕ್ಕೆ ವಿಭಿನ್ನವಾಗಿ ಅಲಂಕಾರ ಮಾಡಿ, ಆ ಅಲಂಕಾರದ ಮಧ್ಯೆ ಸಿಂಹಾಸನವೇರಿದ ರಾಣಿಯಂತೆ ಅವಿವಾ ಫುಲ್ ಮಿಂಚುತ್ತಿದ್ದಾರೆ.

ಇನ್ನು ಜೂನ್​ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5 ಮಾಣಿಕ್ಯ-ಚಾಮರ ವಜ್ರದಲ್ಲಿ 9.30 ರಿಂದ 10.30ರ ಸಮಯದಲ್ಲಿ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಹೌದು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ವಿವಾಹ ಅದ್ದೂರಿಯಾಗಿ ನಡೆಯಲಿದ್ದು, ಇನ್ನು ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮಂಡ್ಯದಲ್ಲೂ ಅದ್ದೂರಿ ಬಾಡೂಟ ವ್ಯವಸ್ಥೆ ಹಾಗೂ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಒಟ್ಟಿನಲ್ಲಿ ಅಂಬಿ ಪುತ್ರನ ಮದುವೆಗೆ ಕೌಂಟ್‌ಡೌನ್ ಶುರುವಾಗಿದ್ದು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಜನರ ಮಧ್ಯೆ ಇದ್ದು ಕೆಲಸ ಮಾಡ್ತಿದ್ರು ಟೀಕೆ ಟಿಪ್ಪಣಿ, ಆರಂಭದ ಪ್ರಚಾರದ ಗಿಮಿಕ್, ಎಡವಿ ಬೀಳ್ತ್ಯಾ ಹುಷಾರ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram