Electric Vehicle: ಈಗ ಪೆಟ್ರೋಲ್ ಗಾಡಿಗಳಿಗೆ ಪೈಪೋಟಿ ಕೊಡಲು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಕಾರ್ ಗಳು ಬಂದಿವೆ. ಇಂಧನ ಉಳಿತಾಯ ಮಾಡಲು ಸಹಾಯ ಆಗುವ ಎಲೆಕ್ಟ್ರಿಕ್ ವಾಹನವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಹಾಗೆಯೇ 100 ರೂಪಾಯಿ ಗಡಿ ದಾಟಿರುವ ಪೆಟ್ರೋಲ್ ಬೆಲೆಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್ ವಾಹನವು ಸೂಕ್ತ. ಯಾವುದೇ ವಾಹನವನ್ನು ಕೊಂಡುಕೊಳ್ಳುವಾಗ ತೆರಿಗೆಯ ರೂಪದಲ್ಲಿ ಹಣವನ್ನು ಕಟ್ಟಬೇಕು. ಆದರೆ ಈಗ ಹೊಸದಾಗಿ ಎಲೆಕ್ಟ್ರಿಕ್ ವಾಹನ ತೆಗೆದುಕೊಳ್ಳುವವರಿಗೆ ತೆರಿಗೆ ಹಣವನ್ನು ರಿಯಾಯಿತಿ ದರದಲ್ಲಿ ಸರ್ಕಾರ ನೀಡುತ್ತದೆ. ಈ ಬಗ್ಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರು ಮಾತನಾಡಿ ಹೊಸ ಎಲೆಕ್ಟ್ರಿಕ್ ವಾಹನಗಳ ಕೊಂಡುಕೊಳ್ಳುವವರು ತಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿದರೆ 1,000 ರೂಪಾಯಿ ಯಿಂದ 40,000 ರೂಪಾಯಿಗಳ ವರೆಗೆ ತೆರಿಗೆಯಲ್ಲಿ ರಿಯಾಯಿತಿ ಇದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೈಕ್ ಎಕ್ಸ್ಚೇಂಜ್ ಮಾಡಿದರೆ ಏಷ್ಟು ತೆರಿಗೆ ರಿಯಾಯಿತಿ ಸಿಗುತ್ತದೆ?
- ಎರಡು ಚಕ್ರದ ವಾಹನಗಳಿಗೆ (bike) 1,000 ರೂಪಾಯಿ ಯಿಂದ 5,000 ರೂಪಾಯಿಗಳ ವರೆಗೆ ರಿಯಾಯಿತಿ ಸಿಗುತ್ತದೆ.
- 1 ಲಕ್ಷ ಮೌಲ್ಯದ ಗಾಡಿಗೆ 1,000 ರೂಪಾಯಿ ರಿಯಾಯಿತಿ ಇದೆ.
- 2 ಲಕ್ಷ ಮೌಲ್ಯದ ಗಾಡಿಗಳಿಗೆ 2,000 ರೂಪಾಯಿ ರಿಯಾಯಿತಿ ದರ ನಿಗದಿ ಮಾಡಿದ್ದಾರೆ.
- 4 ರಿಂದ 5 ಲಕ್ಷ ಮೊತ್ತದ ಗಾಡಿಗೆ 5,000 ರೂಪಾಯಿ ರಿಯಾಯಿತಿ ಸಿಗುತ್ತದೆ.
ಕಾರ್ ಎಕ್ಸ್ಚೇಂಜ್ ಮಾಡಿದರೆ ಸಿಗುವ ರಿಯಾಯಿತಿ ದರ:-
- 5 ಲಕ್ಷ ರೂಪಾಯಿಗಳ ವರೆಗಿನ ಎಲೆಕ್ಟ್ರಿಕ್ ಕಾರ್ ಗಳಿಗೆ 10,000 ರೂಪಾಯಿ ತೆರಿಗೆ ವಿನಾಯಿತಿ ಸಿಗುತ್ತದೆ.
- 5 ಲಕ್ಷದಿಂದ 10 ಲಕ್ಷದ ವರೆಗಿನ ಕಾರ್ ಗೆ 20,000 ದ ವರೆಗೆ ಡಿಸ್ಕೌಂಟ್ ಸಿಗುತ್ತದೆ.
- 10 ಲಕ್ಷದಿಂದ ರಿಂದ 15 ಲಕ್ಷ ರೂಪಾಯಿ ಕಾರ್ ಗಳಿಗೆ 30,000 ರೂಪಾಯಿ.
- 15 ರಿಂದ 20 ಲಕ್ಷ ರೂಪಾಯಿ ಕಾರ್ ಗೆ 40,000 ರೂಪಾಯಿ.
- 20 ಲಕ್ಷಕ್ಕಿಂತ ಹೆಚ್ಚಿನ ದರದ ಕಾರ್ ಗಳಿಗೆ ರಿಯಾಯಿತಿ ರೂಪಾಯಿ 50,000 ರಿಯಾಯಿತಿ ದರ ಸಿಗುತ್ತದೆ.
ಎಲೆಕ್ಟ್ರಿಕ್ ವಾಹನ ಇಂದಿನ ಸ್ಮಾರ್ಟ್ ಯುಗದಲ್ಲಿ ಒಂದು ನೂತನ ಪ್ರಯೋಗವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಬೈಕ್ ಮತ್ತು ಕಾರ್ ಲಭ್ಯವಿದೆ. ಆದರೆ ಯಾವ ಕಂಪನಿಯ ವಾಹನಕ್ಕೆ ಏಷ್ಟು ದರ ಎನ್ನುವ ಗೊಂದಲ ನಿಮಗೆ ಇದ್ದರೆ ಕೆಲವು ಕಂಪನಿಗಳ ಬೈಕ್ ದರಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
OLA S1 Pro ದರವು 1,47,328 ಇದು 195 ಕಿಲೋಮೀಟರ್ ರೈಡಿಂಗ್ ರೇಂಜ್ ಹೊಂದಿದೆ. 6.30 ಗಂಟೆಗಳ ವರೆಗೆ ಬ್ಯಾಟರಿಯನ್ನು ಚಾರ್ಜ್ ಮಾಡಬೇಕು. Ather 450X ಇದರ ಬೆಲೆ 1,37,769 ರೂಪಾಯಿಗಳು ಇದು 111 ಕಿಲೋಮೀಟರ್ ರೈಡಿಂಗ್ ರೇಂಜ್ ಹೊಂದಿದೆ. 8 ಗಂಟೆಗೂ ಅಧಿಕ ಸಮಯ ಬ್ಯಾಟರಿ ಚಾರ್ಜ್ ಮಾಡಬೇಕು. Bajaj Chetak ಇದರ ಬೆಲೆ 1,17,285 ರೂಪಾಯಿ. ಇದು 4.30 ಗಂಟೆಗಳಲ್ಲಿ ಚಾರ್ಜ್ ಫುಲ್ ಆಗುತ್ತದೆ. ಇದು 113 ಕಿಲೋಮೀಟರ್ ರೈಡಿಂಗ್ ರೇಂಜ್ ಹೊಂದಿದೆ. OLA S1 X ದರ ಕೇವಲ 89,828 ರೂಪಾಯಿಗಳು. 7 ಗಂಟೆ 40 ನಿಮಿಷಗಳ ಕಾಲ ಚಾರ್ಜ್ ಆಗಲು ಟೈಮ್ ಬೇಕು. ರೈಡಿಂಗ್ ರೇಂಜ್ 151 ಕಿಲೋಮೀಟರ್.
ಇದನ್ನೂ ಓದಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ರೈಲ್ವೆ ನಿಲ್ದಾಣದಿಂದ ಅಯ್ಯೋಧ್ಯೆಗೆ ತೆರಳುವ ರೈಲುಗಳ ವಿವರ ಇಲ್ಲಿದೆ ನೋಡಿ
ಇದನ್ನೂ ಓದಿ: Oppo Reno 11 5G, 5000 mAh ಬ್ಯಾಟರಿಯೊಂದಿಗೆ ಅದೂ 6,000 ರೂ.ರಿಯಾಯಿತಿಯಲ್ಲಿ