ಅಯೋಧ್ಯೆ ಈಗ ಭಾರತದ ಶ್ರದ್ಧಾ ಕೇಂದ್ರವಾಗಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠೆ 22- ಜನವರಿ -2024 ರಂದು ಮೋದಿ ಅವರ ನೇತೃತ್ವದಲ್ಲಿ ನಡೆದಿದೆ. ಕೋಟ್ಯಂತರ ಭಕ್ತರು ರಾಮಲಲ್ಲಾ ನ ಪ್ರಾಣ ಪ್ರತಿಷ್ಠೆಯನ್ನು ಟಿ ವಿ ಯಲ್ಲಿ ನೋಡಿ ಕಣ್ತುಂಬಿ ಕೊಂಡಿದ್ದಾರೆ. ಅದರಂತೆಯೇ ರಾಮನ ನೋಡಲು ಅಯೋಧ್ಯೆಗೆ ನಾಲ್ಕು ದಿನದ ಮೊದಲೇ ಅಯೋಧ್ಯೆಯಲ್ಲಿ ಭಕ್ತರ ದಂಡು ಸೇರಿತ್ತು. ಜನವರಿ 22 ರಂದು 12.30 ಗಂಟೆಗೆ ಪ್ರಾಣ ಪ್ರತಿಷ್ಠೆ ಆದ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮಂಗಳವಾರ ದ ಕಾಣಿಕೆ ಹಣ:- ಸೋಮವಾರ ಪ್ರತಿಷ್ಟಾಪನೆ ಆಗಿದೆ ಮರುದಿನ ಅಂದರೆ 23 ನೇ ತಾರೀಖು ಅಯೋಧ್ಯೆಗೆ 5,00,000(5ಲಕ್ಷ) ಭಕ್ತರು ರಾಮನ ದರ್ಶನ ಪಡೆದಿದ್ದಾರೆ. ಮೊದಲನೇ ದಿನದ ಕಾಣಿಕೆಯ ಹಣವೂ(ಆನ್ಲೈನ್ ಪೇಮೆಂಟ್ ಮತ್ತು ನಗದು ರೂಪದ ಒಟ್ಟು ಹಣ ) 3,17,00,000(3.17 ಕೋಟಿ) ರೂಪಾಯಿ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ರಾಮ ಮಂದಿರದಲ್ಲಿ ಏಷ್ಟು ದೇಣಿಗೆ ಕೌಂಟರ್ ಇರಿಸಿದ್ದಾರೆ?: ರಾಮ ಮಂದಿರಕ್ಕೆ ಪ್ರತಿ ದಿನ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿದ್ದಾರೆ. ಭಕ್ತಾದಿಗಳ ಸಂಖ್ಯೆ ಹೆಚ್ಚು ಆದಂತೆ ಕಾಣಿಕೆ ಡಬ್ಬಗಳ ಸಂಖ್ಯೆಯೂ ಅಧಿಕವಾಗಿ ಇರಬೇಕು. ಆ ಕಾರಣದಿಂದ ಕಾಣಿಕೆ ರೂಪದಲ್ಲಿ ಅಥವಾ ದೇಣಿಗೆಯ ರೂಪದಲ್ಲಿ ಹಣ ನೀಡುವವರಿಗೆ ಒಟ್ಟು 10 ಕೌಂಟರ್ ಗಳು ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬುಧವಾರ ಅಯೋಧ್ಯೆಗೆ ಬಂದಿರುವ ಭಕ್ತರ ಸಂಖ್ಯೆ:- ಜನವರಿ 24 ನೇ ತಾರೀಖು ಬುಧವಾರದಂದು 2,50,000 ಕ್ಕು ಹೆಚ್ಚು ಭಕ್ತರು ಅಯೋಧ್ಯೆ ದೇವಸ್ಥಾನಕ್ಕೆ ಬಂದು ರಾಮನ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ರೈಲ್ವೆ ನಿಲ್ದಾಣದಿಂದ ಅಯ್ಯೋಧ್ಯೆಗೆ ತೆರಳುವ ರೈಲುಗಳ ವಿವರ ಇಲ್ಲಿದೆ ನೋಡಿ
ಕಾಣಿಕೆಯ ಹಣವನ್ನು ಏಷ್ಟು ದಿನಕ್ಕೊಮ್ಮೆ ಲೆಕ್ಕ ಹಾಕುತ್ತದೆ ಟ್ರಸ್ಟ್?
ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಮತ್ತು ಕಾಣಿಕೆಯ ಹಣವೂ ಹೆಚ್ಚಾಗಿರುವುದರಿಂದ ಕಾಣಿಕೆಯ ಹಣವನ್ನು ವಾರದಲ್ಲಿ ಒಂದು ದಿನ ಲೆಕ್ಕ ಹಾಕಲು ರಾಮ ಮಂದಿರ ಟ್ರಸ್ಟ್ ನಿರ್ಧರಿಸಿದೆ . ಅಂದರೆ ಪ್ರತಿ ಸೋಮವಾರ ಟ್ರಸ್ಟ್ ಕಾಣಿಕೆಯ ಹಣವನ್ನು ಲೆಕ್ಕ ಹಾಕುತ್ತದೆ.
ದೇವಾಲಯ ತೆರೆಯುವ ಮತ್ತು ಮುಚ್ಚುವ ಸಮಯ:- ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ದೇವಾಲಯದ ಸಮಯವನ್ನು ವಿಸ್ತರಿಸಿದೆ. ಈ ಹಿಂದೆ ದೇವಾಲಯದ ಸಮಯ ಬೆಳಗ್ಗೆ 7 ಗಂಟೆಯಿಂದ ರಿಂದ 11.30 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ರಿಂದ 7 ಗಂಟೆಯ ರವರೆಗೆ ಎಂದು ತಿಳಿಸಿತ್ತು. ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಈಗ ಬೆಳಿಗ್ಗೆ 6 ಗಂಟೆಯಿಂದ ರಿಂದ ರಾತ್ರಿ 10 ಗಂಟೆಯವರೆಗೆ ರವರೆಗೆ ದೇವಸ್ಥಾನ ತೆರೆದಿರಲಿದೆ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ.
ವಿಐಪಿಗಳಿಗೆ ಯೋಗಿ ಆದಿತ್ಯನಾಥ್ ಅವರು ನೀಡಿದ ಸಲಹೆ ಏನು?: ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಇದೆ ದೇವಾಲಯದಲ್ಲಿ ಎಲ್ಲಿ ನೋಡಿದರೂ ಜನ ಇದ್ದಾರೆ. ಸಾಮಾನ್ಯ ಜನರ ಜೊತೆಗೆ ಬರುವ ವಿಐಪಿಗಳ ಬಗ್ಗೆ ಗಮನ ಹರಿಸಬೇಕು. ಈ ಕಾರಣದಿಂದ ವಿಐಪಿಗಳಿಗೆ ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಬಗ್ಗೆ ಕಾಳಜಿ ಇಟ್ಟುಕೊಂಡು ಹಾಗೂ ಸೆಕ್ಯೂರಿಟಿ ದೃಷ್ಟಿಯಿಂದ ವಿಐಪಿಗಳು ಅಯೋಧ್ಯೆಗೆ ಬರುವ ಒಂದು ವಾರದ ಮೊದಲು ರಾಮ ಮಂದಿರ ಟ್ರಸ್ಟ್ ಗೆ ಅಥವಾ ಉತ್ತರ ಪ್ರದೇಶ ಸರ್ಕಾರಕ್ಕೆ ಮಾಹಿತಿ ನೀಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Oppo Reno 11 5G, 5000 mAh ಬ್ಯಾಟರಿಯೊಂದಿಗೆ ಅದೂ 6,000 ರೂ.ರಿಯಾಯಿತಿಯಲ್ಲಿ