ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ವರ್ಷಕ್ಕೆ 5 ಲಕ್ಷ ರೂಪಾಯಿ ಗಳ ವರೆಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಒಂದೂವರೆ ಲಕ್ಷದ ವರೆಗೆ ಸರ್ಕಾರ ಪಾವತಿ ಮಾಡುತ್ತದೆ. 1650 ವಿವಿಧ ಚಿಕಿತ್ಸೆಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯು ಲಭ್ಯ ಇರುತ್ತದೆ. ಎಮರ್ಜೆನ್ಸಿ ಸಂದರ್ಭಗಳಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಪಡೆಯಬಹುದು.
ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವವರಿಗೆ ಸಿಗುವ ಸೌಲಭ್ಯಗಳು:- ಉಚಿತವಾಗಿ ಪಿವಿಸಿ ಮಾದರಿಯ ಹೆಲ್ತ್ ಕಾರ್ಡ್ ವಿತರಿಸಲಾಗುತ್ತದೆ. ಭಾರತದ ಯಾವುದೇ ಸ್ಥಳದಲ್ಲಿ ಇದ್ದರೂ ಎಮರ್ಜೆನ್ಸಿ ಟ್ರೀಟ್ಮೆಂಟ್ ಪಡೆಯಬಹುದು. ಆಪರೇಷನ್ ಅಂತಹ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಆನ್ಲೈನ್ ಮೂಲಕ ರೆಫರಲ್ ಮಾಡುವ ಅವಕಾಶ ಇರುತ್ತದೆ. ಆಸ್ಪತ್ರೆಗೆ ದಾಖಲಾದ ನಂತರ 15 ದಿನಗಳವರೆಗಿನ ಖರ್ಚನ್ನು ಭಾರತ ಸರ್ಕಾರ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಇರುವ ಮಾನದಂಡಗಳು:- ಅರ್ಜಿದಾರರ ವಾರ್ಷಿಕ ಆದಾಯವು 2,50,000 ರೂಪಾಯಿಗಳಿಗಿಂತ ಕಡಿಮೆ ಇರಬೇಕು. ನೀವು SC ಅಥವಾ ST ಆಗಿದ್ದರೆ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು. ಶಾಶ್ವತ ನಿವಾಸವನ್ನು ಹೊಂದಿಲ್ಲದಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅಪ್ಲಿಕೇಶನ್ ಹಾಕುವಾಗ ಆಧಾರ್ ಕಾರ್ಡ್, ವಿಳಾಸ, ಆದಾಯ ಪ್ರಮಾಣಪತ್ರ, ಪಾಸ್ಪೋರ್ಟ್ ಭಾವಚಿತ್ರ ಮತ್ತು ಜಾತಿ ಪ್ರಮಾಣ ಪತ್ರವನ್ನು ನೀಡಬೇಕು. ಹಾಗೂ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ನೀವು ಅಂಗವಿಕಲ ಅಥವಾ ಹಿರಿಯ ನಾಗರಿಕ ಆಗಿದ್ದರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಸರ್ಕಾರಿ ನೌಕರ ಅಥವಾ ಆರ್ಥಿಕವಾಗಿ ಹಿಂದುಳಿದವರು ಆಗಿದ್ದರೆ ಅಧಿಕೃತ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ಇದನ್ನೂ ಓದಿ: ಯಾವುದೇ ಕ್ಯಾಬ್ ಬುಕ್ ಮಾಡಿದರೂ ಒಂದೇ ದರ! ಓಲಾ ಉಬರ್ ಒಂದೇ ರೀತಿಯ ದರವನ್ನು ನಿಗದಿ ಮಾಡಿದ ರಾಜ್ಯ ಸರ್ಕಾರ
ಆಯುಷ್ಮಾನ್ ಭಾರತ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ನೀಡಿ ಆಯುಷ್ಮಾನ್ ಕಾರ್ಡ್ ಪಡೆಯಬಹುದು. ಇಲ್ಲವೇ ನಿಮ್ಮ ಮೊಬೈಲ್ ನಿಂದ ಸಹ ನೀವು ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ :-
ಇಲಾಖೆಯ ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ ತೆರಳಿ, ವೆಬ್ ಸೈಟ್ ಮುಖಪುಟದಲ್ಲಿ ಕಾಣುವ ಎಂಬ pmjay ಗೆ ಅರ್ಜಿ ಸಲ್ಲಿಸಿ ಎಂಬ ಆಪ್ಷನ್ ಆಯ್ಕೆ ಮಾಡಿ, ನಂತರ ನಿಮ್ಮ ಹೆಸರು ವಿಳಾಸ ಆಧಾರ್ ಕಾರ್ಡ್ ನಂಬರ್ ಹಾಗೂ ನಿಮ್ಮ ಆಧಾರ್ ಕಾರ್ಡ್ ಗೆ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆ ಭರ್ತಿ ಮಾಡಿ ನಂತರ ಮೊಬೈಲ್ ಸಂಖ್ಯೆಗೆ ಗೆ ಬಂದ OTP ನಮೂದಿಸಿ. ನಿಮ್ಮ ಕುಟುಂಬ ಸದಸ್ಯರ ವಿವರಗಳನ್ನು ಭರ್ತಿ ಮಾಡಿ. ನಂತರ ನಿಮ್ಮ ಆಧಾರ್ ಕಾರ್ಡ್, ನಿಮ್ಮ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ನೀವು ಅರ್ಜಿ ಸಲ್ಲಿಸಿದ ನಂತರ ಉಲ್ಲೇಖ ಸಂಖ್ಯೆ ನಿಮಗೆ ಸಿಗುತ್ತದೆ. ನಿಮ್ಮ ಕಾರ್ಡ್ ಸ್ಥಿತಿಯನ್ನು ತಿಳಿಯಲು ಈ ಉಲ್ಲೇಖ ಸಂಖ್ಯೆ ಅಗತ್ಯ. ನೋಂದಾಯಿತ ಆಸ್ಪತ್ರೆಗಳ ಮಾಹಿತಿಯನ್ನು ಪಡೆಯಲು 1800 425 8330 ಗೆ ಫೋನ್ ಮಾಡಬಹುದು.
ಇದನ್ನೂ ಓದಿ: KSRTC ಅಶ್ವಮೇಧ ಕ್ಲಾಸಿಕ್ ಎಕ್ಸ್ ಪ್ರೆಸ್ ಬಸ್ ನ ವಿಶೇಷತೆಗಳು ಏನು?