ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗ ಅರಸುತ್ತಿದ್ದರೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದು. ತಿಂಗಳಿಗೆ 15 ರಿಂದ 30 ಸಾವಿರ ಸಂಬಳ ಪಡೆಯಬಹುದು. ಹಾಗಾದರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಸಾಮಾನ್ಯ ಅರ್ಹತೆಗಳು ಏನು ಎಂಬ ಮಾಹಿತಿಯನ್ನು ಪಡೆಯಿರಿ.
ಉದ್ಯೋಗದ ಬಗ್ಗೆ ಪೂರ್ಣ ಮಾಹಿತಿ: ಪಿಯುಸಿ ಮುಗಿಸಿದವರು ಆಯುಷ್ಮಾನ್ ಮಿತ್ರ ಎಂಬ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಈ ಉದ್ಯೋಗದಲ್ಲಿ ಅಭ್ಯರ್ಥಿಗಳು ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ಕುಟುಂಬಕ್ಕೆ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವಲ್ಲಿ ಸಹಕಾರ ಮಾಡುವುದು ಮತ್ತು ಆಯುಷ್ಮಾನ್ ಕಾರ್ಡ್ ಬಗ್ಗೆ ಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಯುಷ್ಮಾನ್ ಮಿತ್ರ ಯೋಜನೆಯ ಮೂಲ ಉದ್ದೇಶವೇನು?
ಪಿಯುಸಿ ಮುಗಿಸಿದ ನಿರುದ್ಯೋಗಿ ಯುವಕರಿಗೆ ಸ್ಥಳೀಯವಾಗಿ ಉತ್ತಮ ಸಂಬಳದ ಉದ್ಯೋಗ ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಆಯುಷ್ಮಾನ್ ಕಾರ್ಡ್ ಬಗ್ಗೆ ಪೂರ್ಣ ಮಾಹಿತಿ ನೀಡುವಲ್ಲಿ ಇದು ಸಹಕಾರಿ ಆಗಲಿದೆ. ಈ ಉದ್ಯೋಗವೂ ಸರ್ಕಾರಿ ಉದ್ಯೋಗ ಆಗಿರುವುದರಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಬಳದ ಜೊತೆಗೆ ಗ್ಯಾರೆಂಟಿ ಉದ್ಯೋಗ ದೊರೆತಂತೆ ಆಗುತ್ತದೆ. ಆಯುಷ್ಮಾನ್ ಕಾರ್ಡ್ ಬಗ್ಗೆ ಪೂರ್ಣ ಮಾಹಿತಿಗೆ ನೀಡುವಲ್ಲಿ ಆಯುಷ್ಮಾನ್ ಮಿತ್ರ ಸಹಾಯ ಮಾಡಲಿದೆ.
ಅರ್ಹತೆಗಳು:-
- ಆಯುಷ್ಮಾನ್ ಮಿತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು.
- 18 ವರ್ಷಕ್ಕೂ ಮೇಲ್ಪಟ್ಟವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಸೆಕೆಂಡ್ ಪಿಯುಸಿಯಲ್ಲಿ ತೇರ್ಗಡೆ ಹೊಂದಿರಬೇಕು.
- ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
- ಅಭ್ಯರ್ಥಿಯು ಕಡ್ಡಾಯವಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಬಗ್ಗೆ ಜ್ಞಾನ ಹೊಂದಿರಬೇಕು.
- ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಅರ್ಜಿ ಸಲ್ಲಿಸಲು ಎಲ್ಲಾ ದಾಖಲೆಗಳನ್ನು ನೀಡುವುದು ಅವಶ್ಯಕ.
- ಅಭ್ಯರ್ಥಿಯು ಸಂವಹನ ಕೌಶಲ್ಯವನ್ನು ಹೊಂದಿರಬೇಕು.
ಆಯುಷ್ಮಾನ್ ಮಿತ್ರ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಲೇಬೇಕಾದ ದಾಖಲೆಗಳು: ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, PAN ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೂಲ ನಿವಾಸ ಪ್ರಮಾಣಪತ್ರ, ಪಿಯುಸಿ ಮರ್ಕ್ಸ್ಕ್ ಕಾರ್ಡ್, ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲಿದೆ ಸರ್ಕಾರ
ಅರ್ಜಿ ಸಲ್ಲಿಸುವುದು ಹೇಗೆ?
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಆಯುಷ್ಮಾನ್ ಮಿತ್ರ ಅರ್ಜಿ ನಮೂನೆ ಎಂಬ ಆಪ್ಷನ್ ಕ್ಲಿಕ್ ಮಾಡಿ. ನಂತರ, ನಿಮ್ಮ ನೋಂದಣಿ ಮಾಡಬೇಕು. ನೋಂದಣಿಯ ನಂತರ, ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು. ನಂತರ ನಿಮ್ಮ ಹೆಸರು ವಿಳಾಸ ಆಧಾರ್ ಸಂಖ್ಯೆ ಮೊಬೈಲ್ ನಂಬರ್, ನಿಮ್ಮ ವಿದ್ಯಾರ್ಹತೆ ಮಾಹಿತಿಯನ್ನು ಫಿಲ್ ಮಾಡಿ ಅರ್ಜಿ ಸಲ್ಲಿಸಬೇಕು.
ಆಯುಷ್ಮಾನ್ ಕಾರ್ಡ್ ಪ್ರಯೋಜನಗಳು:- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್ ನೀಡುತ್ತದೆ. ಈ ಕಾರ್ಡ್ ನಿಂದ ಜನರು 50,000 ರೂಪಾಯಿಗಳ ವರೆಗೆ ಆರೋಗ್ಯ ಸೇವೆ ಪಡೆಯಬಹುದು. ಆಯುಷ್ಮಾನ್ ಕಾರ್ಡ್ ತಯಾರಿಸುವ ವಿತರಿಸುವ ಕಾರ್ಯವನ್ನು ಆಯುಷ್ಮಾನ್ ಮಿತ್ರ ಮತ್ತು ಕಾಮನ್‌ವೆಲ್ತ್ ಸೇವಾ ಕೇಂದ್ರ ಮಾಡುತ್ತಿದೆ.
ಇದನ್ನೂ ಓದಿ: ಐದು ಬಗೆಯ ನಗದು ವ್ಯವಹಾರಗಳಿಗೆ ಆದಾಯ ತೆರಿಗೆ ಇಂದ ಬರುತ್ತದೆ ನೋಟಿಸ್.