ಹೊಸ ಪಡಿತರ ಮಾಡಿಸಿಕೊಳ್ಳಬೇಕು ಅಂದುಕೊಂಡಿದ್ದವರಿಗೆ ಶಾಕ್; ಪಡಿತರ ಚೀಟಿ ಸಿಗುತ್ತೆ ಅಂದುಕೊಂಡಿದ್ದವರಿಗೆ ಇದ್ಯಾ ಗುಡ್ ನ್ಯೂಸ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೆ ಬಂದಿದ್ದು ಜನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಹರಸಾಹಸ ಪಡ್ತಿದ್ದಾರೆ ಅಂತಲೇ ಹೇಳಬಹುದು. ಹೌದು ರಾಜ್ಯ ಸರ್ಕಾರ ಘೋಷಿಸಿದ್ದ ಪಂಚ ಗ್ಯಾರೆಂಟಿಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ರೇಷನ್‌ ಕಾರ್ಡ್‌ ಹೊಂದಿರಬೇಕಿದೆ. ಈಗಾಗಲೇ ರೇಷನ್‌ ಕಾರ್ಡ್‌ ಹೊಂದಿರುವವರು 2,000ರೂ. ಗಳ ಪ್ರಯೋಜನ ಪಡೆಯುತ್ತಿದ್ದಾರೆ. ಹೌದು, ರೇಷನ್‌ ಕಾರ್ಡ್‌ ಇದ್ದವರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲ ಆಗುತ್ತದೆ. ಅನ್ನಭಾಗ್ಯ ಯೋಜನೆಗೆ ಬಿಪಿಎಲ್‌ ಕಾರ್ಡ್‌ ಬೇಕು ಹಾಗೂ ಗೃಹಲಕ್ಷ್ಮಿ ಯೋಜನೆ ಪಡೆಯಲು ಸಹ ರೇಷನ್‌ ಕಾರ್ಡ್‌ ಅಗತ್ಯ. ಹೀಗಾಗಿ ಈಗಾಗಲೇ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸಿದವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಬೇಕು ಅಂದುಕೊಂಡವರು, ತಿದ್ದುಪಡಿ ಮಾಡಬೇಕು ಅಂದುಕೊಂಡವರಿಗೆ ಸದ್ಯಕ್ಕೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಬರುವಂತೆ ಕಾಣುತ್ತಿಲ್ಲ.

WhatsApp Group Join Now
Telegram Group Join Now

ಹೌದು ಮುಖ್ಯವಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಪರಿಣಾಮ ರೇಷನ್ ಕಾರ್ಡ್​ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ರೇಷನ್ ಕಾರ್ಡ್ ಪಡೆದುಕೊಂಡರೆ ಸುಲಭವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಆಗಬಹುದು ಅಂತ ಜನರು ರೇಷನ್ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಕಾದು ಕುಳಿತಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಇಲಾಖೆ ಸದ್ಯಕ್ಕೆ ಹೊಸ ರೇಷನ್​ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾದ್ರೆ ಕಾರಣ ಏನು?ಯಾಕೆ? ಮತ್ತೆ ಯಾವಾಗ ಅರ್ಜಿ ಹಾಕಲು ಅನುಮತಿ ಕೊಡ್ತಾರೆ ನೋಡೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳಿಂದ ಹೈರಾಣಾಗ್ತಿದ್ದಾರಾ ರೇಷನ್ ಕಾರ್ಡುದಾರರು

ಹೌದು, ರೇಷನ್‌ ಕಾರ್ಡ್‌(Ration Card) ಇದ್ದವರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲ ಆಗುತ್ತದೆ. ಅನ್ನಭಾಗ್ಯ ಯೋಜನೆಗೆ ಬಿಪಿಎಲ್‌ ಕಾರ್ಡ್‌ ಬೇಕು ಹಾಗೂ ಗೃಹಲಕ್ಷ್ಮಿ ಯೋಜನೆ ಪಡೆಯಲು ಸಹ ರೇಷನ್‌ ಕಾರ್ಡ್‌ ಅಗತ್ಯ. ಹೀಗಾಗಿ ಈಗಾಗಲೇ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸಿದವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದುಕೊಂಡವರಿಗೆ ಸದ್ಯದಲೇ ಸಿಹಿ ಸುದ್ದಿ ಸಿಗುತ್ತೆ ಅಂತ ಕಾಯ್ತಿದ್ರೆ ಸರ್ಕಾರ ಅಂತವರಿಗೆ ಬ್ಯಾಡ್ ನ್ಯೂಸ್ ಕೊಟ್ಟಿದೆ ಅಂತಲೇ ಹೇಳಬಹುದು. ಹೌದು ಈಗಾಗಲೇ ರೇಷನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲೇ ರೇಷನ್‌ ಕಾರ್ಡ್ ದೊರೆಯಲಿದ್ದು, ಹಳೆ ಅರ್ಜಿ ಪ್ರಕ್ರಿಯೆ, ವಿಲೇವಾರಿ ಮುಗಿದ ಬಳಿಕ ಹೊಸ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈಗಾಗಲೇ 75% ಪರಿಶೀಲನೆ ಮುಗಿದಿದ್ದು, ಈ ಪ್ರಕ್ರಿಯೆ ಮುಗಿಯುತ್ತಿದಂತೆ ಅರ್ಹರಿಗೆ ಕಾರ್ಡ್‌ ವಿತರಣೆ ಮಾಡಲಾಗುತ್ತದೆ. ಆ ನಂತರ ಸರ್ಕಾರದ ಒಪ್ಪಿಗೆ ಪಡೆದು ಹೊಸ ರೇಷನ್‌ ಕಾರ್ಡ್‌ಗು ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಅಂತ ಆಹಾರ ಇಲಾಖೆ ಹೇಳಿತ್ತು.

ಆದ್ರೆ ಇದೀಗ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬಳಿಕ ಎಪಿಎಲ್​ ಹಾಗೂ ಬಿಪಿಎಲ್ ಕಾರ್ಡ್​​ಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಆದರೆ ಸದ್ಯಕ್ಕೆ ರೇಷನ್​ ಕಾರ್ಡ್​​ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಜನರಿಗೆ ಇಲಾಖೆ ಬ್ಯಾಡ್​ ನ್ಯೂಸ್ ಕೊಟ್ಟಿದೆ. ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದ ವೇಳೆ ಅವರಿಗೆ ಜನರಲ್ಲಿ ಹೆಚ್ಚು ಖ್ಯಾತಿ ತಂದು ಕೊಟ್ಟ ಯೋಜನೆ ಅಂತ ಎಂದರೇ ಅನ್ನಭಾಗ್ಯ. ಸಿದ್ದರಾಮಯ್ಯ ಅವರಿಗೆ ಬಡವರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಕೊಡಬೇಕು ಎಂಬ ಕನಸು ಹೊಂದಿದ್ದರು, ಅಧಿಕಾರಕ್ಕೆ ಬಂದ ಬಳಿಕ ಅದನ್ನು ನನಸು ಮಾಡಿ ಬಡವರಿಗೆ ಅಕ್ಕಿ ವಿತರಣೆ ಮಾಡುವ ಕಾರ್ಯ ಮಾಡಿದ್ದರು. ಎರಡನೇ ಬಾರಿಗೆ ಸಿಎಂ ಆದ ಬಳಿಕ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಗ್ಯಾರಂಟಿ ಯೋಜನೆಯನ್ನು ಮೊದಲು ಜಾರಿ ಮಾಡೋದಾಗಿ ಘೋಷಣೆ ಮಾಡಿದ್ದರು. ಆದರೆ ಅಕ್ಕಿ ಸಿಗದ ಕಾರಣ ಹಣವನ್ನೇ ಫಲಾನುಭವಿಗಳ ಖಾತೆ ಜಮಾ ಮಾಡ್ತಿದ್ದಾರೆ. ಈ ಮಧ್ಯೆ ರೇಷನ್ ಕಾರ್ಡ್ ಬೇಕು ಅನ್ನೋರ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ ಎನ್ನಬಹುದು.

ಹೌದು ಕಳೆದ ಎರಡು ತಿಂಗಳಿನಲ್ಲಿ ಒಂದು ವಾರ, ಎರಡು ದಿನ ಕಾಲ ವಿಭಾಗವಾರು ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಅಲ್ಲದೇ ಈಗಾಗಲೇ ಪಡೆದಿರುವ ಕಾರ್ಡ್​ಗಳಲ್ಲಿ ಬದಲಾವಣೆಗೂ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದೆ. ಈ ಹಿಂದೆ ಪೇಂಡಿಂಗ್ ಉಳಿದುಕೊಂಡಿದ್ದ ಅರ್ಜಿಗಳು ಕೂಡ ಇದೆ. ಅವುಗಳನ್ನು ವಿಲೇವಾರಿ ಮಾಡಬೇಕಿದೆ. ಈ ಅರ್ಜಿಗಳ ವಿಲೇವಾರಿ ಬಳಿಕ ಹೊಸ ಅರ್ಜಿಗಳ ಕರೆಯುವ ಅಥವಾ ತಿದ್ದುಪಡಿಗೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದೆ. ಆದರೆ, ಹೊಸ ಬಿಪಿಎಲ್ ಕಾರ್ಡ್​ ವಿತರಣೆ ಮಾಡಿದರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಹೆಚ್ಚಳ ಆಗ್ತಾರೆ, ಆದರೆ ಎಪಿಎಲ್ ಕಾರ್ಡ್​ ಆದರೂ ನೀಡಬಹುದು ಅಲ್ವಾ ಎಂಬ ಜನರ ಪ್ರಶ್ನೆಗೆ ಆಹಾರ ಇಲಾಖೆ ಯಾವುದೇ ಪ್ರತಿಕ್ರಿಯೆಯನ್ನ ನೀಡಲ್ಲ.

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್

ಆಡಳಿತಾತ್ಮಕ ಕಾರಣಗಳನ್ನು ನೀಡಿ ಹೊಸ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಸದ್ಯಕ್ಕೆ ಅನುಮತಿ ನೀಡಲು ಅವಕಾಶವಿಲ್ಲ ಎಂದಷ್ಟೇ ಇಲಾಖೆ ತಿಳಿಸಿದೆ. ಆರೋಗ್ಯ ಕಾರಣಕ್ಕಾಗಿ ತುರ್ತು ಬಿಪಿಎಲ್​ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದ ಜನರಿಗೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದವರಿಗೆ ಒಂದು ಗುಡ್​ನ್ಯೂಸ್ ಇದ್ದು, ನೀವು ಸಲ್ಲಿಕೆ ಮಾಡುವ ಅರ್ಜಿಗಳು ಶೀಘ್ರವೇ ವಿಲೇವಾರಿ ಆಗಲಿದೆ ಅಂತ ತಿಳಿಸಿದೆ. ಆದ್ರೆ ಸಾಧ್ಯಕ್ಕಂತು ರೇಷನ್ ಕಾರ್ಡ್ ಪಡೆಯಬೇಕು ಅಂದುಕೊಂಡಿದ್ದವರ ಆಸೆ ಕನಸಾಗಿಯೇ ಉಳಿಯಲಿದೆ ಅನ್ನೋದಂತೂ ಸತ್ಯ. ಮುಂದಿನ ದಿನಗಳಲ್ಲಿ ಯಾವಾಗ ಆಹಾರ ಇಲಾಖೆ ಹೊಸ ಕಾರ್ಡ್ ಮಾಡಿಸಿಕೊಡಲು ಅಸ್ತು ಅನ್ನುತ್ತೋ ಕಾದು ನೋಡಬೇಕು.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಇದನ್ನೂ ಓದಿ: ಉಚಿತ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಅಹ್ವಾನ; ಮೊರಾರ್ಜಿ ದೇಸಾಯಿ ಸೇರಿದಂತೆ 10ಕ್ಕು ಹೆಚ್ಚು ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಿ

ಇದನ್ನೂ ಓದಿ: ಡಿಸೆಂಬರ್ 11 ರಿಂದ ನಂದಿ ಹಿಲ್ಸ್ ಗೆ ಸಂಚರಿಸಲಿದೆ ಎಲೆಕ್ಟ್ರಿಕ್ ರೈಲು, ಇನ್ನೂ ಮುಂದೆ ನಂದಿ ಬೆಟ್ಟಕ್ಕೆ ಹೋಗುವುದು ತುಂಬಾ ಸುಲಭ