ರೈತರಿಗೆ ಸರಕಾರದಿಂದ ಬಂತು ಗುಡ್ ನ್ಯೂಸ್; ಜಮೀನಿನ ಸಕ್ರಮ ವಿಚಾರವಾಗಿ ಪ್ರತಿಯೊಂದು ತಾಲೂಕುಗಳಲ್ಲಿಯೂ “ಬಗರ್ ಹುಕುಂ” ಸಮಿತಿಯ ರಚನೆ ಆಗಲಿದೆ

ಇತ್ತೀಚಿನ ದಿನಗಳಲ್ಲಿ ಜಮೀನಿನ ವಿಚಾರದಲ್ಲಿ ಬಹಳಷ್ಟು ಅಕ್ರಮಗಳು ಕಂಡುಬರುತ್ತವೆ ಸರಕಾರದ ಜಮೀನಿನಲ್ಲಿ ಸಾಗುವಳಿ ನಡೆಸಿ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವಂತಹ ಒಂದು ಪ್ರಯತ್ನ ನಡೆಯುತ್ತಿದೆ. ಇದನ್ನು ತಡೆಗಟ್ಟುವ ಹಾಗೆ ಪ್ರತಿಯೊಂದು ತಾಲೂಕುಗಳಲ್ಲಿ ‘ಬಗರ್ ಹುಕುಂ’ ಸಮಿತಿಯನ್ನು ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಸ್ಪಷ್ಟಿಕರಿಸಿದ್ದಾರೆ ಹಾಗೂ ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಸಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಜಮೀನಿನ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹಾಗಾದರೆ “ಬಗರ್ ಹುಕುಂ” ಎಂದರೇನು?

ಬಗರ್ ಹುಕುಂ ಎಂದರೆ without permision ಎನ್ನುವ ಅರ್ಥವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ನಿಮಗೆ ಹೇಳುವುದಾದರೆ ಸರ್ಕಾರದ ಜಮೀನಿನಲ್ಲಿ ಸಾಗುವಳಿ ಮಾಡುವಂಥದ್ದು, ಅಂದರೆ ಸಾಗುವಳಿದಾರರ ಮಾಲೀಕತ್ವದಲ್ಲಿ ಈ ಜಮೀನು ಇರುವುದಿಲ್ಲ. ಈ ಜಮೀನು ಸರ್ಕಾರದ ಹೆಸರಿನಲ್ಲಿ ಇರುತ್ತದೆ ಸರಕಾರದ permision ಇಲ್ಲದೇನೆ ಸರ್ಕಾರದ ಜಮೀನನ್ನು ಸಾಗುವಳಿ ಮಾಡುವ ಒಂದು ಕ್ರಮಕ್ಕೆ ಬಗರ್ ಹುಕುಂ ಎಂದು ಹೇಳಲಾಗುತ್ತದೆ. ಕೃಷ್ಣೇಗೌಡ ಅವರು ಮಂಗಳವಾರದಂದು ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಕಾಯುತ್ತಿದ್ದ ರೈತರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ ಮೊನ್ನೆ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೃಷ್ಣೆಗೌಡ ಅವರು ಈ ರೀತಿಯಾಗಿ ಹೇಳಿದ್ದಾರೆ,

ಬಗರ್ ಹುಕುಂ ಜಮೀನನ್ನು ಸಕ್ರಮ ಮಾಡುವುದಕ್ಕೆ 9.29 ಲಕ್ಷ ಅರ್ಜಿಗಳು ಬಂದಿದ್ದು, ಈ ಅರ್ಜಿಯನ್ನು ಪರಿಶೀಲನೆ ನಡೆಸಿದಾಗ ಹಲವು ಅರ್ಜಿಗಳು ಅಕ್ರಮ ಎಂದು ಗೊತ್ತಾಗಿದೆ. ಒಬ್ಬರೇ 25 ರಿಂದ 30 ಅರ್ಜಿಗಳನ್ನು ಹಾಕಿರುವುದಾಗಲಿ ಅಥವಾ ಸಾಗುವಳಿ ಮಾಡದೇನೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವಂತಹ ಒಂದು ಪ್ರಯತ್ನ ನಡೆಯುತ್ತಿದೆ ಈ ರೀತಿಯ ಅಕ್ರಮಗಳು ಕಂಡು ಬಂದಿದ್ದು ಇದರ ತನಿಖೆಗಾಗಿ ಬಗರ್ ಹುಕುಂ ಕೇಂದ್ರಗಳನ್ನು ಪ್ರತಿ ತಾಲೂಕುಗಳಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಸುಮಾರು 50 ಪ್ರಸ್ತಾವನೆಗಳು ಬಂದಿದ್ದು, ಇದರ ತನಿಖೆಗಾಗಿ ಪ್ರತಿಯೊಂದು ತಾಲೂಕುಗಳಲ್ಲಿ ಕೂಡ ಬಗರ್ ಹುಕುಂ ಕೇಂದ್ರಗಳನ್ನ ಸ್ಥಾಪಿಸುವುದಾಗಿ ಮೊನ್ನೆ ನಡೆದ ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಕೃಷ್ಣೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಇದರನ್ನು ತನಿಖೆ ಮಾಡಿ ಯಾವುದು ಅಕ್ರಮ ಹಾಗೂ ಯಾವುದು ಸಕ್ರಮ ಎಂದು ತಿಳಿದುಕೊಂಡು ಇನ್ನು ಕೆಲವೇ ಏಳರಿಂದ ಎಂಟು ತಿಂಗಳುಗಳಲ್ಲಿ ಇದಕ್ಕೆ ಸೂಕ್ತವಾದ ಪರಿಹಾರ ದೊರೆಯುವುದು ಎಂತಲೂ ಕೂಡ ಹೇಳಿದ್ದಾರೆ ಇತ್ತೀಚೆಗೆ ಇಂತಹ ಅಕ್ರಮಗಳು ಹಲವಾರು ಕಂಡುಬರುತ್ತಿದ್ದು ಇದನ್ನು ತಡೆಯಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ ಇಂತಹ ಅಕ್ರಮದಿಂದ ಪರಿಸರಕ್ಕೂ ಕೂಡ ಹಾನಿ ಉಂಟಾಗುತ್ತದೆ ಹಾಗೂ ಅರಣ್ಯ ನಾಶ ಉಂಟಾಗುತ್ತದೆ.

ಇದನ್ನೂ ಓದಿ: UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಮಾಡಿಸಲು ಸುವರ್ಣಾವಕಾಶ; ಪಡಿತರ ಚೀಟಿ ಯಲ್ಲಿನ ತಿದ್ದುಪಡಿಗೆ 2 ದಿನದ ಕಾಲವಾಕಾಶ

ಓದಿ: ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದ ಪತ್ನಿಗೆ ಕಾನೂನಿನ ಪ್ರಕಾರ ಗಂಡನ ಪಿಂಚಣಿ ಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗೆ ಜಾಯಿನ್ ಆಗಿ: Click Here To Join Telegram